ಸಂತ ಜೋಸೆಫ್ ಆಂಗ್ಲ ಮಾಧ್ಯಮ ಪ್ರೌಢಶಾಲೆ, ಸುಳ್ಯ
ಗೋಚರ
ಈ ಲೇಖನದಿಂದ ಬೇರೆ ಯಾವುದೇ ಲೇಖನಕ್ಕೆ ಬಾಹ್ಯ ಸಂಪರ್ಕ ಹೊಂದಿಲ್ಲ. |
ಇದು ಸುಳ್ಯ ನಗರದಲ್ಲಿದೆ. ಇದು ಸುಳ್ಯದ ಸಂತ ಬ್ರಿಜಿದ್ ಇಗರ್ಜಿಯ ಆವರಣದಲ್ಲಿದ್ದು ಪೂರ್ವ ಪ್ರಾಥಮಿಕದಿಂದ ಹಿಡಿದು ಎಸ್ ಎಸ್ ಎಲ್ ಸಿ ವರೆಗಿನ ವಿದ್ಯಾಭ್ಯಾಸವನ್ನು ನೀಡುತ್ತಿದೆ. ಇಲ್ಲಿ ಪ್ರಸ್ತುತ ಸುಮಾರು ೯೦೦ ವಿದ್ಯಾರ್ಥಿಗಳು ವ್ಯಾಸಂಗ ಮಾಡುತ್ತಿದ್ದಾರೆ. ಇದೇ ಆವರಣದಲ್ಲಿ ಸಂತ ಬ್ರಿಜಿದ್ ಕನ್ನಡ ಮಾಧ್ಯಮ ಪ್ರಾಥಮಿಕ ಶಾಲೆಯೂ ಇದೆ.ಈ ಶಾಲೆಯು ಕ್ಯಾಥೋಲಿಕ್ ಬೋರ್ಡ್ ಆಫ್ ಎಜುಕೇಶನ್ ನ ಆಡಳಿತಕ್ಕೆ ಒಳಪಟ್ಟಿದೆ. ಇದು ೨೦೦೦ದಲ್ಲಿ ಸ್ಥಾಪನೆಗೊಂಡಿತು.ಇಲ್ಲಿ ಪ್ರಸ್ತುತ ೨೮ ಶಿಕ್ಷಕರು ಸೇವೆ ಸಲ್ಲಿಸುತ್ತಿದ್ದು ೨೦೦೯-೧೦ನೇ ಸಾಲಿಗೆ ೧೦ನೇ ತರಗತಿಯ ಮೊದಲ ತಂಡ ಶೇ. ೧೦೦ ಫಲಿತಾಂಶ ದಾಖಲಿಸಿದೆ. ಪ್ರಸ್ತುತ ಭಗಿನಿ ಬಿನೋಮ ಇವರು ಪ್ರೌಢಶಾಲಾ ವಿಭಾಗದ ಹಾಗೂ ಭಗಿನಿ ಶೈಬಾ ಇವರು ಪ್ರಾಥಮಿಕ ಶಾಲಾ ವಿಭಾಗದ ಮುಖ್ಯಸ್ಥರಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ.
ಈ ಲೇಖನ ಒಂದು ಚುಟುಕು. ಇದರ ಬಗ್ಗೆ ಹೆಚ್ಚಿನ ಮಾಹಿತಿ ತಿಳಿದಿದ್ದಲ್ಲಿ, ನೀವು ಈ ವಿಷಯವನ್ನು ವಿಸ್ತರಿಸಿ ಕನ್ನಡ ವಿಕಿಪೀಡಿಯ ಯೋಜನೆಯನ್ನು ಉತ್ತಮಗೊಳಿಸುವಲ್ಲಿ ಸಹಕರಿಸಬಹುದು. |