ಶ್ರೀ ವೈದ್ಯನಾಥೇಶ್ವರ ಸ್ವಾಮಿ

ವಿಕಿಪೀಡಿಯ ಇಂದ
Jump to navigation Jump to search

ಶ್ರೀ ವೈದ್ಯನಾಥೇಶ್ವರ ಸ್ವಾಮಿ ದೇವಸ್ಥಾನ ಅರೆಯೂರು ಗ್ರಾಮದಲ್ಲಿದೆ ಶ್ರೀ ವೈದ್ಯನಾಥೇಶ್ವರ ಸ್ವಾಮಿ ದೇವಸ್ಥಾನವು ಪೌರಣಿಕ ಇತಿಹಾಸವುಳ್ಳ ಪುರಾತನ ದೇವಸ್ಥಾನ

ಒಂದು ಸಾವಿರ ವರ್ಷ ಇತಿಹಾಸವಿರುವ ದೇವಸ್ಥಾನವನ್ನು ಚೋಳ ವಂಶದ ಅರಸರು ಕಟ್ಟಿಸಿರಬಹುದೆಂದು ಅಂದಾಜಿಸಲಾಗಿದೆ

ಶ್ರೀ ವೈದ್ಯನಾಥೇಶ್ವರ ಸ್ವಾಮಿಯ ಸನ್ನಿಧಿಯಲ್ಲಿ ಕ್ಯಾನ್ಸಾರ್, ಅಸ್ತಮಾ, ಸಕ್ಕರೆ, ಬಂಜೆತನ ನಿವಾರಣೆ, ಕುಷ್ಟರೋಗಗಳಾದಿ ಸರ್ವರೋಗಗಳು ವಾಸಿಯಾಗುತ್ತವೆ

ಶ್ರೀ ಕ್ಷೇತ್ರದಲ್ಲಿ ಪ್ರತಿದಿನ 10 ಗಂಟೆಗೆ ರುದ್ರಾಭಿಷೇಕ, 12 ಗಂಟೆಗೆ ವಿಶೇಷ ಪೂಜೆ ಇದ್ದು ಭಕ್ತಾಧಿಗಳಿಗೆ ಮುಂಜಾನೆ 5 ಗಂಟೆಯಿಂದ ರಾತ್ರಿ 8ರ ವರೆಗೆ ದರ್ಶನವಿದೆ

ಭಕ್ತಾಧಿಗಳಿಗೆ ಶ್ರೀ ಕ್ಷೇತ್ರದಲ್ಲಿ ಪ್ರತಿದಿನ ಮಧ್ಯಾನ ಅನ್ನ ದಾಸೋಹ ವ್ಯವಸ್ಥೆ ಇದೆ

ಶ್ರೀ ಕ್ಷೇತ್ರಕ್ಕೆ ತುಮಕೂರುನಗರದಿಂದ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮದಿಂದ ಪ್ರತಿ ಅರ್ಧ ಗಂಟೆಗೆ ಬಸ್ ವ್ಯವಸ್ಥೆ ಇದೆ

ಶ್ರೀ ಕ್ಷೇತ್ರದಲ್ಲಿ ಅಮಾವಾಸ್ಯೆ, ಪೂರ್ಣಿಮಾ, ಹಬ್ಬ ಹರಿದಿನಗಳಲ್ಲಿ ವಿಶೇಷ ಅಲಂಕಾರ, ವಿಶೇಷ ಪೂಜಾದಿಗಳು ಜರುಗುತ್ತವೆ

ಶಿವರಾತ್ರಿಯಲ್ಲಿ 11ದಿನ ಜಾತ್ರೆ ನಡೆಯುತ್ತದೆ ಶಿವರಾತ್ರಿಯಂದು ನಡೆಯುವ ರಥೋತ್ಸವಕ್ಕೆ ಲಕ್ಷಾಂತರ ಮಂದಿ ಭಕ್ತಾಧಿಗಳು ಭಾಗವಹಿಸುತ್ತಾರೆ ಜಾತ್ರೆಯ ಕೊನೆ ದಿನ ತೆಪ್ಪೋತ್ಸವ ಬಲು ವೈಭವದಿಂದ ನಡೆಯುತ್ತದೆ

ಕಡೇ ಕಾರ್ತೀಕ ಮಾಸದಂದು ನಡೆಯುವ ಲಕ್ಷ ದೀಪೋತ್ಸವ ಲಕ್ಷಾಂತರ ಭಕ್ತರ ಸಮ್ಮುಖದಲ್ಲಿ ಭರ್ಜರಿಯಾಗಿ ಜರುಗುತ್ತದೆ ಆ ದೀಪಗಳ ನೋಟ ನೋಡಲು ಬಲು ಸೋಗಸಾಗಿರುತ್ತದೆ