ಶ್ರೀ ಲಕ್ಷೀದೇವಿ ದೇವಸ್ಥಾನ ಕೆರೆಸಂತೆ ಕಡೂರು ತಾ ಚಿಕ್ಕಮಗಳೂರು ಜಿ

ವಿಕಿಪೀಡಿಯ ಇಂದ
Jump to navigation Jump to search


ಕೆರೆಸಂತೆ ಶ್ರೀ ಮಹಾಲಕ್ಷ್ಮೀ ಲಕ್ಕಮ್ಮ ದೇವಿ ದೇವಸ್ಥಾನ. ಕೆರೆಸಂತೆ ಕಡೂರ್ ತಾ ಚಿಕ್ಕಮಗಳೂರು ಜಿಲ್ಲೆ.

  • ಶ್ರೀ ಮಹಾಲಕ್ಷ್ಮೀ ಲಕ್ಕಮ್ಮ ನವರ ಕಾರ್ತೀಕ ದೀಪೋತ್ಸವ ಮತ್ತು ಜಾತ್ರಾಮಹೋತ್ಸವವು ಮಾರ್ಗಶಿರ ಮಾಸದ ಹುಣ್ಣಿಮೆ ಯ ದಿನ ನಡೆಯುತ್ತದೆ.
  • ಭೂಲೋಕ ದಲ್ಲಿ ಲಕ್ಷ್ಮಿ ದೇವಿಯ ಪದಾಸ್ಪರ್ಶ ವಾದ ಕ್ಷೇತ್ರ ಗಳಲ್ಲಿ ಇದು ಕೂಡ ಒಂದು.
  • ಹೊಯ್ಸಳ ದೊರೆ ವಿಷ್ಣುವರ್ಧನನು 1117 ನೇ ಇಸವಿಯಲ್ಲಿ ಹೇವಿಳಂಬಿ ನಾಮ ಸಂವತ್ಸರದ ಚೈತ್ರ ಶುದ್ಧ ಬಿದಿಗೆ ಯಂದು ಈ ದೇವಾಲಯ ವನ್ನು ಕಟ್ಟಿಸಿದ್ದಾರೆ.

ಅಮ್ಮನವರು ಗಡಿಗೆ ಲಕ್ಕಮ್ಮ, ಹರಿವೆ ಕೆರೆಸಂತೆ ಲಕ್ಕಮ್ಮ,ಆನಂದ ಲಕ್ಕಮ್ಮ . ಕೆರೆಯಗಳಮ್ಮ. ಮಹಾಲಕ್ಷ್ಮೀ ದೇವಿ ಹೀಗೆ ನಾನಾ ಹೆಸರುಗಳಿಂದ ಪೂಜಿಸಲ್ಪಡುತ್ತಿದ್ದಾರೆ.

  • ಸಾವಿರಾರು ಹಾಲುಮತ ಮತ್ತು ಅನೇಕ ಸಮುದಾಯದವರಿಗೆ ದೇವಿಯು ಮನೆದೇವತೆ ಯಾಗಿ ಪೂಜಿಸಲ್ಪಡುತ್ತಿದ್ದಾರೆ.

ಈ ಕ್ಷೇತ್ರ ವು ರಾಜ್ಯದ ನಾನಾ ಪ್ರದೇಶ ಗಳಲ್ಲಿವಕ್ಕಲು ಗಳನ್ನು ಹೊಂದಿದೆ. ಶ್ರಾವಣ ಮಾಸದಲ್ಲಿ ವಿಶೇಷ ಪೂಜಾಕೈಂಕರ್ಯಗಳು ಶ್ರೀ ದೇವಿಗೆ ನಡೆಯುತ್ತವೆ. ಕೆರೆಸಂತೆ ಲಕ್ಕಮ್ಮ ನವರ ದೊಡ್ಡ ಜಾತ್ರೆ ವಿಶೇಷ ವಾದ ಜಾತ್ರೆ ಯಾಗಿದೆ. ಅನೇಕ ವಕ್ಕಲು ಗಳು ತಮ್ಮ ತಮ್ಮ ಊರುಗಳಲ್ಲಿ ಕೆರೆಸಂತೆ ಲಕ್ಕಮ್ಮನವರ ದೇವಾಲಯ ವನ್ನು ಕಟ್ಟಿ ಪೂಜಿಸುತ್ತಿದ್ದಾರೆ. ಕೆರೆಸಂತೆ ಯು ಲಕ್ಕಮ್ಮದೇವಿಯ ಮೂಲಸ್ಥಾನ ವಾಗಿದ್ದು .ಶ್ರೀ ದೇವಿಯ ಶಕ್ತಿ ಪೀಠ ವಾಗಿದೆ.