ಸಿರ್ಸಿ ಶ್ರೀ ಮಾರಿಕಾಂಬಾ ದೇವಸ್ಥಾನ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
(ಶ್ರೀ ಮಾರಿಕಾಂಬಾ ದೇವಾಲಯ ಇಂದ ಪುನರ್ನಿರ್ದೇಶಿತ)
Jump to navigation Jump to search
ಸಿರ್ಸಿ ಶ್ರೀ ಮಾರಿಕಾಂಬಾ ದೇವಸ್ಥಾನ
ಸಿರ್ಸಿ ಶ್ರೀ ಮಾರಿಕಾಂಬಾ ದೇವಸ್ಥಾನ
ಸಿರ್ಸಿ ಶ್ರೀ ಮಾರಿಕಾಂಬಾ ದೇವಸ್ಥಾನ
ಮಾರಿಗುಡಿ
ಭೂಗೋಳ
ಕಕ್ಷೆಗಳು14°36′43″N 74°50′22″E / 14.6119484°N 74.8395170°E / 14.6119484; 74.8395170Coordinates: 14°36′43″N 74°50′22″E / 14.6119484°N 74.8395170°E / 14.6119484; 74.8395170
ದೇಶಭಾರತ
ರಾಜ್ಯಕರ್ನಾಟಕ
ಸ್ಥಳಸಿರ್ಸಿ
ಇತಿಹಾಸ ಮತ್ತು ಆಡಳಿತ
ದೇವಳದ ಆಡಳಿತ ಮಂಡಳಿಧರ್ಮದರ್ಶಿ ಮಂಡಳಿ

ಸ್ಥಳ ಮತ್ತು ವೈಶಿಷ್ಟ[ಬದಲಾಯಿಸಿ]

ಶ್ರೀ ಮಾರಿಕಾಂಬಾ ದೇವಸ್ಥಾನವು ಕರ್ನಾಟಕದ ಪ್ರಸಿದ್ಧ ಹಿಂದೂ ದೇವಾಲಯಗಳಲ್ಲಿ ಒಂದು. ಮಲೆನಾಡ ಹೆಬ್ಬಾಗಿಲು ಸಿರ್ಸಿ ತಾಲೂಕಿನಲ್ಲಿ, ಸಿರ್ಸಿಯಿಂದ ಬನವಾಸಿಗೆ ಹೋಗುವ ರಸ್ತೆಯ ಬಲಭಾಗದಲ್ಲಿ ಈ ದೇವಾಲಯವಿದೆ. ಈ ದೇವಾಲಯದ ಪ್ರವೇಶದ್ವಾರದ ಎರಡೂ ಕಡೆಗಳಲ್ಲಿ ದೊಡ್ಡದಾದ ಆನೆಗಳ ಶಿಲ್ಪಗಳಿವೆ. ದೇವಾಲಯದ ಒಳ ಪ್ರವೇಶಿಸುತ್ತಿದ್ದಂತೆಯೇ ವಿಶಾಲವಾದ ಸಭಾಭವನವಿದೆ. ಸಭಾಭವನದ ಗೋಡೆಗಳ ಮೇಲೆ ವರ್ಣ‍ರಂಜಿತ ಚಿತ್ರಗಳು ರಾರಾಜಿಸುತ್ತಿವೆ. ಅಲ್ಲಿನ ಪ್ರಶಾಂತ ವಾತಾವರಣ ಮನಸ್ಸನ್ನು ಮುದಗೊಳಿಸುವಂತಿದೆ. ಹಾಗೆಯೇ ಮುಂದೆ ಸಾಗಿದಾಗ ಗೋಚರಿಸುವುದೇ ದೇವಿಯ ಗರ್ಭಗುಡಿ.[೧]

ಭಕ್ತರ ಇಷ್ಟಾರ್ಥಗಳನ್ನು ಈಡೇರಿಸುವ ಸರ್ವಾಲಂಕೃತ ಭೂಷಿತಳಾದ ಶ್ರೀ ಮಾರಿಕಾಂಬಾ ದೇವಿಯ ವಿಗ್ರಹ, ದೇವಾಲಯದ ಸೌಂದರ್ಯ, ಘಂಟೆ-ಜಾಗಟೆಗಳ ಸದ್ದಿಗೆ ಪ್ರತಿಯೊಬ್ಬ ಭಕ್ತನ ಮನಸ್ಸು ಭಕ್ತಿಯಿಂದ ಮೈಪುಳಕಗೊಳ್ಳುತ್ತದೆ. ೧೬೮೮ರಲ್ಲಿ ಶ್ರೀ ಮಾರಿಕಾಂಬಾ ದೇವಿಯ ದೇವಸ್ಥಾನವನ್ನು ನಿರ್ಮಿಸಲಾಯಿತು. ಈ ದೇವಾಲಯದ ಅರ್ಚಕರು ವಿಶ್ವಕರ್ಮ ಜಾತಿಗೆ ಸೇರಿದವರಾಗಿದ್ದಾರೆ. ಈ ಮಾರಿಕಾಂಬಾ ದೇವಿಯು ದುರ್ಗಾದೇವಿಯ ಇನ್ನೊಂದು ಅವತಾರ. ಕರ್ನಾಟಕದ ಎಲ್ಲಾ ಮಾರಿಯಮ್ಮಗಳ ಹಿರಿಯ ಸಹೋದರಿಯಾದ ಈ ದೇವಿಯ ದೇವಾಲಯವನ್ನು 'ದೊಡ್ಡಮ್ಮನ ದೇವಸ್ಥಾನ' ಎಂದು ಕೂಡಾ ಕರೆಯುತ್ತಾರೆ.[೨] ಪ್ರತಿ ಎರಡು ವರ್ಷಗಳಿಗೊಮ್ಮೆ ಸರ್ವತ್ರ ಸುಭಿಕ್ಷಾರ್ಥವಾಗಿ ಧಾರ್ಮಿಕ ಪರಂಪರೆಯಂತೆ ಪೂಜಾ-ಉತ್ಸವಗಳಿಂದೊಡಗೂಡಿದ ಶ್ರೀ ಮಾರಿಕಾಂಬಾ ಜಾತ್ರೆಯನ್ನು ಅತೀವಿಜ್ರಂಭಣೆಯಿಂದ ನಡೆಸಲಾಗುತ್ತದೆ. ಇದು ಭಾರತದಲ್ಲಿಯೇ ಅತೀದೊಡ್ಡ ಜಾತ್ರೆ. ಒಂಬತ್ತು ದಿನಗಳ ಕಾಲ ನಡೆಯುತ್ತದೆ. ಈ ಜಾತ್ರೆಗೆ ದೇಶದ ಮೂಲೆ ಮೂಲೆಗಳಿಂದ ಭಕ್ತಸಾಗರ ಹರಿದು ಬರುತ್ತದೆ. ಅನೇಕಾನೇಕ ಮನರಂಜನಾ ಕಾರ್ಯಕ್ರಮಗಳು ಜಾನಪದ ಕಲೆಗಳ ಪ್ರದರ್ಶನಗಳು, ರಸ್ತೆಯ ಬದಿಗಳಲ್ಲಿ ಬಗೆ ಬಗೆಯ ಅಂಗಡಿ ಮುಗ್ಗಟ್ಟುಗಳು, ಝಗ ಝಗಿಸುವ ದೀಪದ ಅಲಂಕಾರಗಳು ಜಾತ್ರೆಯ ಸೊಬಗನ್ನು ಹೆಚ್ಚಿಸುತ್ತವೆ. ಮೊದಲು ಜಾತ್ರೆಯ ಸಂದರ್ಭದಲ್ಲಿ ಕೋಣನ ಬಲಿಕೊಡುವ ಪದತಿಯು ಜಾರಿಯಲ್ಲಿತ್ತು.[೩]

ದೇವಾಲಯಕ್ಕೆ ಗಾಂಧೀಜಿ ಭೇಟಿ[ಬದಲಾಯಿಸಿ]

೧೯೩೩ರ ವೇಳೆ ಮಹಾತ್ಮಗಾಂಧಿ ಸಿರ್ಸಿಯ ಮಾರಿಕಾಂಬಾ ದೇವಸ್ಥಾನಕ್ಕೆ ಭೇಟಿ ನೀಡಿದ್ದರು ಎಂಬ ಉಲ್ಲೇಖ ಕೂಡಾ ಇದೆ. ತದ ನಂತರ ಗಾಂಧೀಜಿಯವರ ಅನುಯಾಯಿಗಳು ಜನಸಾಮಾನ್ಯರಿಗೆ ಅಹಿಂಸಾ ತತ್ವಗಳನ್ನು ಭೋಧಿಸಿ ಅವರ ಮೂಢ ನಂಬಿಕೆಗಳನ್ನು ತೊಡೆದು ಹಾಕಿ ಹಿಂಸಾತ್ಮಕವಾದ ಈ ಪ್ರಾಣಿಬಲಿಯನ್ನು ತಡೆಗಟ್ಟುವಲ್ಲಿ ಯಶಸ್ವಿಯಾದರು ಎಂದು ಹೇಳಲಾಗುತ್ತದೆ. ಒಟ್ಟಿನಲ್ಲಿ ಈಗ ಜಾತ್ರೆಯ ಸಂದರ್ಭದಲ್ಲಿ ಕೋಣನ ಬಲಿಕೊಡುವ ಪದ್ದತಿಯನ್ನು ನಿಷೇಧಿಸಲಾಗಿದೆ. ಶ್ರೀ ಮಾರಿಕಾಂಬಾ ದೇವಿಯ ದೇವಾಲಯದ ಸುತ್ತಲು ಗೋಡೆಗಳ ಮೇಲೆ ಹಿಂದಿನ ಕಾಲದ ಸುಂದರ ವರ್ಣಚಿತ್ರಗಳು, ರಾಮಾಯಣ ಮಹಾಭಾರತದ ಘಟನೆಗಳನ್ನು ವರ್ಣಿಸುವ ಚಿತ್ರಗಳು, ಶಿರಸಿಯ ಜಾತ್ರೆ, ಜಾತ್ರೆಯ ಸೊಬಗು ಪ್ರತಿಯೊಬ್ಬರ ಮನಸಿನಲ್ಲಿಯೂ ಅಚ್ಛಳಿಯದೇ ಉಳಿಯುವಂತದ್ದಾಗಿದೆ. ಒಟ್ಟಿನಲ್ಲಿ ಇಲ್ಲಿನ ಸೊಬಗು ಸೌಂದರ್ಯ ವರ್ಣಿಸಲಸಾಧ್ಯವಾದದ್ದಾಗಿದೆ.

ಹೊರಗಿನ ಸಂಪರ್ಕಗಳು[ಬದಲಾಯಿಸಿ]


ಉಲ್ಲೇಖಗಳು[ಬದಲಾಯಿಸಿ]

  1. "ಶ್ರೀ ಮಾರಿಕಾಂಬಾ (ಸಿರ್ಸಿ)".
  2. "ದುರ್ಗಾ ಪೂಜೆ".
  3. "ಮಾರಿಕಾಂಬಾ ಜಾತ್ರೆ".