ಶ್ರೀ ಗಂಧದಗುಡಿ (ಕನ್ನಡ ಧಾರಾವಾಹಿ 2025)
ಶ್ರೀ ಗಂಧದಗುಡಿ ಪ್ರಸ್ತುತ ಕಲರ್ಸ್ ಕನ್ನಡದಲ್ಲಿ ಪ್ರಸಾರವಾಗುತ್ತಿರುವ ಭಾರತೀಯ ಕನ್ನಡ ಭಾಷೆಯ ದೈನಂದಿನ ಧಾರಾವಾಹಿ ಆಗಿದೆ. ಈ ಧಾರಾವಾಹಿಯ ಮೊದಲ ಸಂಚಿಕೆಯು 2025ರ ಅಕ್ಟೋಬರ್ 6ಕ್ಕೆ ರಾತ್ರಿ 8 ಗಂಟೆಗೆ ಪ್ರಸಾರವಾಯಿತು [೧]. ತಾರಾಂಗಣದಲ್ಲಿ ಶಿಶಿರ್ ಶಾಸ್ತ್ರಿ, ಭವಿಷ್, ಸಂಜನಾ ಬುರ್ಲಿ, ಕರಿಸುಬ್ಬು, ಅಶ್ವಥ್ ನೀನಾಸಂ, ಜಯಂತ್, ಗಗನ್ ದೀಪ್ ಮುಂತಾದವರಿದ್ದಾರೆ. ಕಥಾ ಕ್ರಿಯೇಷನ್ಸ್ ಬ್ಯಾನರ್‌ನಲ್ಲಿ ಪರೀಕ್ಷಿತ್ ಎಂ ಎಸ್ ಮತ್ತು ಪ್ರದೀಪ್ ಆಜ್ರಿ ನಿರ್ಮಾಣ ಮಾಡುತ್ತಿದ್ದಾರೆ. ಪ್ರಕಾಶ್ ಮುಚ್ಚಳಗುಡ್ಡ ಈ ಧಾರಾವಾಹಿಯನ್ನು ನಿರ್ದೇಶನ ಮಾಡುತ್ತಿದ್ದಾರೆ [೨].
| ಶ್ರೀ ಗಂಧದಗುಡಿ (ಕನ್ನಡ ಧಾರಾವಾಹಿ 2025) | |
|---|---|
| ಶೈಲಿ | ದೈನಂದಿನ ಧಾರಾವಾಹಿ |
| ನಿರ್ದೇಶಕರು | ಪ್ರಕಾಶ್ ಮುಚ್ಚಳಗುಡ್ಡ |
| ದೇಶ | ಭಾರತ |
| ಭಾಷೆ(ಗಳು) | ಕನ್ನಡ |
| ನಿರ್ಮಾಣ | |
| ನಿರ್ಮಾಪಕ(ರು) | ಪರೀಕ್ಷಿತ್ ಎಂ ಎಸ್, ಪ್ರದೀಪ್ ಆಜ್ರಿ |
| ಸಮಯ | 22 ನಿಮಿಷಗಳು |
| ನಿರ್ಮಾಣ ಸಂಸ್ಥೆ(ಗಳು) | ಕಥಾ ಕ್ರಿಯಷನ್ಸ್ |
| ಪ್ರಸಾರಣೆ | |
| ಮೂಲ ವಾಹಿನಿ | ಕಲರ್ಸ್ ಕನ್ನಡ |
| ಮೂಲ ಪ್ರಸಾರಣಾ ಸಮಯ | 6 ಅಕ್ಟೋಬರ್ 2025 – ಪ್ರಸ್ತುತ |
ಕಥಾವಸ್ತು
[ಬದಲಾಯಿಸಿ]ಗಂಡು ಮಕ್ಕಳೇ ಇರುವ ಮನೆಗೆ ಹೆಣ್ಣೊಂದು ಸೊಸೆಯಾಗಿ ಬಂದಾಗ ಮನೆಯ ಹೇಗೆ ಬದಲಾಗುತ್ತದೆ. ಊರ ಜನರ ದೃಷ್ಟಿ ಮತ್ತು ಅಭಿಪ್ರಾಯ ಹೇಗೆ ಬದಲಾವಣೆಗೊಳ್ಳುತ್ತದೆ ಎಂಬುವುದು ಕಥಾವಸ್ತು ಆಗಿದೆ.
ಸಾರಾಂಶ
[ಬದಲಾಯಿಸಿ]ನಟ ಡಾ. ರಾಜಕುಮಾರ್ ಅವರ ದೊಡ್ಡ ಅಭಿಮಾನಿಯಾಗಿರೋ ಅಪ್ಪ ನಟರಾಜ ತನ್ನ ಮಕ್ಕಳಿಗೆ ಮುತ್ತುರಾಜ, ಸತ್ಯ ಹರಿಶ್ಚಂದ್ರ, ಕಂಠೀರವ, ಮಯೂರ ಎಂದು ಹೆಸರು ಇಡುತ್ತಾನೆ. ಈ ನಾಲ್ಕು ಗಂಡು ಮಕ್ಕಳು ನಾಲ್ಕು ದಿಕ್ಕುಗಳಂತೆ. ಒಬ್ಬೊಬ್ರದ್ದು ಒಂದೊಂದು ಹಾದಿಯಾಗಿರುತ್ತದೆ. ತಂದೆ ನಟರಾಜ ಕುಡುಕನಾಗಿದ್ದು, ಬೇಜವಾಬ್ದಾರಿಯ ಮನುಷ್ಯನಾಗಿರುತ್ತಾನೆ. ನಟರಾಜ ಸಂಪಾದಿಸಿರೋದು ಕೆಟ್ಟ ಹೆಸರು ಮಾತ್ರವಾಗಿರುತ್ತದೆ. ತಂದೆಯಿಂದ ಮನೆಯ ಮಕ್ಕಳಿಗೂ ಕೆಟ್ಟ ಹೆಸರು ಬಂದಿರುತ್ತದೆ. ಇಂಥ ಮನೆಗೆ ಯಾವ ಹೆಣ್ಣೂ ಬರೋಕೆ ಸಾಧ್ಯವಿಲ್ಲ, ಬಂದರೂ ಬದುಕೋಕೆ ಅಸಾಧ್ಯ ಅಂತ ಊರಿನ ಜನ ಮಾತಾನಾಡುತ್ತಿರುತ್ತಾರೆ.
ಈ ಮನೆಗೆ ಹುಡುಗಿಯೊಬ್ಬಳು ಬರ್ತಾಳೆ. ಅವಳು ಯಾಕೆ ಬರ್ತಾಳೆ? ಯಾವ ಕಾರಣಕ್ಕೆ? ಬಂದ ಮೇಲೆ ಅದೇ ಮನೆಯಲ್ಲಿ ಯಾಕೆ ಉಳೀತಾಳೆ? ಉಳಿದ ಮೇಲೆ ಯಾವ ಕಾರಣಕ್ಕಾಗಿ ಆ ಮನೆಯನ್ನ ಸರಿ ಮಾಡ್ತಾಳೆ? ಹೇಗೆ ಸರಿ ಮಾಡ್ತಾಳೆ?. ಒಂದು ಹೆಣ್ಣು ಮನೆಗೆ ಬಂದಾಗ ಅಲ್ಲಿ ಆ ಮನೆಗೆ ತಾಯಿ, ತಂಗಿ, ಅಕ್ಕ, ಅತ್ತಿಗೆ, ಸೊಸೆ, ಮಡದಿಯೊಬ್ಬಳು ಸಿಗ್ತಾಳೆ.
ಸೋದರ ನಂಟು ಹೀಗೆ ಮುಂದುವರೆಯುತ್ತದೆಯೋ ಇಲ್ಲವೋ ಎಂಬುವುದನ್ನು ಕ್ತಥೆ ಮುಂದುವರೆದಂತೆ ಕಾಣಬಹುದು.
ಪ್ರಸಾರ
[ಬದಲಾಯಿಸಿ]ಈ ಧಾರಾವಾಹಿಯ ಮೊದಲ ಸಂಚಿಕೆಯು 2025ರ ಅಕ್ಟೋಬರ್ 6ಕ್ಕೆ ರಾತ್ರಿ 8 ಗಂಟೆಗೆ ಪ್ರಸಾರವಾಯಿತು. ಪ್ರಸ್ತುತ ಪತ್ರಿದಿನ ರಾತ್ರಿ 8:30ಗೆ ಕಲರ್ಸ್ ಕನ್ನಡದಲ್ಲಿ ಪ್ರಸಾರವಾಗುತ್ತಿದೆ.
ಕಲಾವಿದರು
[ಬದಲಾಯಿಸಿ]ಮುಖ್ಯ ಕಲಾವಿದರ ಪಾತ್ರಗಳು
[ಬದಲಾಯಿಸಿ]- ನಾಲ್ವರು ಗಂಡು ಮಕ್ಕಳು
- ಶಿಶಿರ್ ಶಾಸ್ತ್ರಿ [೩]: ಮುತ್ತುರಾಜ್ ಆಲಿಯಾಸ್ ಮುತ್ತು ಪಾತ್ರದಲ್ಲಿ.
- ಭವಿಷ್ : ಸತ್ಯ ಹರಿಶ್ಚಂದ್ರ ಆಲಿಯಾಸ್ ಹರಿ ಪಾತ್ರದಲ್ಲಿ, ಚಂದನಾ ಗಂಡನಾಗಿ.
- ಜಯಂತ್: ಕಂಠೀವ ಆಲಿಯಾಸ್ ಕಂಠೀ ಪಾತ್ರದಲ್ಲಿ
- ಗಗನ್ ದೀಪ್: ಮಯೂರ ಪಾತ್ರದಲ್ಲಿ
- ನಾಲ್ವರು ಗಂಡು ಮಕ್ಕಳ ಜೋಡಿ
- ದೃಷ್ಟಿ ನಾಯಕ್ [೪] : ಮಹಿಮ ಪಾತ್ರದಲ್ಲಿ
- ಸ್ನೇಹ ಮಂಜುನಾಥ್ [೫]: ಚಂದನಾ ಪಾತ್ರದಲ್ಲಿ (ಪಾತ್ರಧಾರಿ ಬದಲಾವಣೆ ನಂತರ), ಹರಿ ಹೆಂಡತಿಯಾಗಿ,
- ಸಂಜನಾ ಬುರ್ಲಿ [೬] : (ಪಾತ್ರಧಾರಿ ಬದಲಾವಣೆ ಮೊದಲು)
- ಮಧುರಾ: ವೈಭವಿ ಪಾತ್ರದಲ್ಲಿ
ಸಹಾಯಕ ಕಲಾವಿದರ ಪಾತ್ರಗಳು
[ಬದಲಾಯಿಸಿ]- ಭುವನ ಮುರಳಿ: ಭಾರತಿ ಪಾತ್ರದಲ್ಲಿ
- ಪರೀಕ್ಷಿತ್ ಎಂ ಎಸ್: ಚಂದನಾ ಅಣ್ಣನ ಪಾತ್ರದಲ್ಲಿ
- ಕರಿಸುಬ್ಬು: ನಟರಾಜ ಪಾತ್ರದಲ್ಲಿ, ನಾಲ್ವರು ಗಂಡು ಮಕ್ಕಳ ತಂದೆಯಾಗಿ.
- ಅಶ್ವಥ್ ನೀನಾಸಂ: ಚಂದನಾ ಅಪ್ಪನ ಪಾತ್ರದಲ್ಲಿ
- ಸಾರಿಕಾ ಮ್ಯಾಥಿವ್: ಭಾರತಿ ಅಮ್ಮನಾಗಿ
ರೂಪಾಂತಾರಗಳು
[ಬದಲಾಯಿಸಿ]| ಭಾಷೆ(ಗಳು) | ಶೀರ್ಷಿಕೆ | ಮೂಲಬಿಡುಗಡೆ | ವಾಹಿನಿ(ಗಳು) | ಕೊನೆಯ ಪ್ರಸಾರ | ಟಿಫ್ಫಣಿಗಳು | Ref. |
|---|---|---|---|---|---|---|
| ತಮಿಳು | ಅಯ್ಯನರ್ ಥುನೈ அய்யனார் துணை |
27 ಜನವರಿ2025 | ಸ್ಟಾರ್ ವಿಜಯ | ಪ್ರಸ್ರಾರವಾಗುತ್ತಿದೆ | ಮೂಲ | |
| ಕನ್ನಡ | ಶ್ರೀ ಗಂಧದಗುಡಿ | 6 ಅಕ್ಟೋಬರ್ 2025 | ಕಲರ್ಸ್ ಕನ್ನಡ | ರೀಮೇಕ್ | [೭] | |
| ಮಲಯಾಳಂ | ಕಟ್ಟಥೆ ಕಿಲಿಕ್ಕೊಡು കാറ്റത്തെ കിളിക്കൂട് |
10 ನವೆಂಬರ್ 2025 | ಏಷ್ಯಾನೆಟ್ | [೮] | ||
| ತೆಲುಗು | ಪೊದರಿಲ್ಲು పొదరిల్లు |
8 ಡಿಸೆಂಬರ್ 2025 | ಸ್ಟಾರ್ ಮಾ | [೯] | ||
| ಮರಾಠಿ | ಬಾಯಿ ತುಝಾ ಆಶೀರ್ವಾದ್ बाई तुझा आशीर्वाद |
27 ಏಪ್ರಿಲ್ 2026 | ಸ್ಟಾರ್ ಪ್ರವಾಹ್ | [೧೦] | ||
| ಹಿಂದಿ | ಬರೆಲಿ ಕೇ ಬಚ್ಚನ್ बरेली के बच्चन |
ಪ್ರಸಾರವಾಗಬೇಕು | ಕಲರ್ಸ್ ಟಿವಿ | [೧೧][೧೨] |
ಉಲ್ಲೇಖಗಳು
[ಬದಲಾಯಿಸಿ]- ↑ "ಹೊಸ ಕಥೆ, ಹೊಸ ತಿರುವು! Colors Kannada ನಲ್ಲಿ 'ಶ್ರೀ ಗಂಧದ ಗುಡಿ'". 29 ಸೆಪ್ಟ್ಂಬರ್ 2025. ಚಿತ್ರ ನ್ಯೂಸ್.
- ↑ "ಬರ್ತಿದೆ 'ಶ್ರೀ ಗಂಧದ ಗುಡಿ': ಈ ಧಾರಾವಾಹಿಯ ಕಥೆ ಏನು? ಯಾರೆಲ್ಲಾ ನಟಿಸುತ್ತಿದ್ದಾರೆ?". 29 ಸೆಪ್ಟ್ಂಬರ್ 2025. ವಿಜಯ ಕರ್ನಾಟಕ.
- ↑ "'ಬಿಗ್ ಬಾಸ್' ಶಿಶಿರ್! 'ಶ್ರೀ ಗಂಧದಗುಡಿ' ಸೀರಿಯಲ್‌ನ ಮುತ್ತುರಾಜ ಇವರೇ ಕಣ್ರೀ!". 5 ಆಗಸ್ಟ್ 2025. ವಿಜಯ ಕರ್ನಾಟಕ.
- ↑ "ಶ್ರೀ ಗಂಧದಗುಡಿ: ಮುತ್ತು ಬಾಳಿಗೆ ನಾಯಕಿಯಾಗಿ ಎಂಟ್ರಿಕೊಟ್ಟ 'Miss Uttar Kannada' ದೃಷ್ಟಿ ನಾಯಕ್". 30 ಮಾರ್ಚ್ 2026, 2026. ಅಸಿಸ್ಟೆಂಟ್ ನ್ಯೂಸ್ ಕನ್ನಡ.
- ↑ "ಸಂಜನಾ ಬುರ್ಲಿ ಬದಲಿಗೆ ಬಂದ ಸ್ನೇಹ ಮಂಜುನಾಥ್: 'ಶ್ರೀಗಂಧದ ಗುಡಿ' ಧಾರಾವಾಹಿಯ ಹೊಸ ನಾಯಕಿ ಮಾಹಿತಿ". 15 ಮಾರ್ಚ್ 2026. ವಿಜಯ ಕರ್ನಾಟಕ.
- ↑ "'ಶ್ರೀ ಗಂಧದಗುಡಿ' ಧಾರಾವಾಹಿಯಿಂದ ಹೊರ ನಡೆದ ಸಂಜನಾ ಬುರ್ಲಿ; ಮುಂದೇನು?". 13ಮಾರ್ಚ್ 2026. ಟಿವಿ9 ಕನ್ನಡ.
- ↑ "Ayyanar Thunai Remakes in Other Languages – Baai Tujha Ashirvad , Shree Gandhadagudi, Podarillu, Kattathe Kilikkoodu".
- ↑ "Kattathe Kilikkodu Serial Asianet Starts from 10 November and Telecast Everyday at 8:00 PM".
- ↑ "Ayyanar Thunai: தெலுங்கில் ரீமேக் செய்யப்படும் அய்யனார் துணை... ஹீரோவாக நடிக்க போகும் தமிழ் நடிகர் யார் தெரியுமா?".
- ↑ "मालिकेच्या प्रोमोशनसाठी अनोखा प्रयोग ! दांगट कुटूंबाने चक्क आंब्यांनी केली एकुलत्या एक सुनेची तुला". Esakal. 17 April 2026.
- ↑ "'Bareilly Ke Bacchan' promo out: A quirky take on family dysfunction set in Bareilly". The Times of India. 18 April 2026.
- ↑ "அய்யனார் துணை சீரியல் ரசிகர்களுக்கு வந்த சூப்பர் குட் நியூஸ்... சீரியலுக்கு இவ்வளவு மவுசா?". cineulagam.com. 17 April 2026.
ಬಾಹ್ಯಕೊಂಡಿಗಳು
[ಬದಲಾಯಿಸಿ]- ಶ್ರೀ ಗಂಧದಗುಡಿ @ ಜಿಯೋ ಹಾಟ್ಸ್ಟಾರ್ ನಲ್ಲಿ ವೀಕ್ಷಣೆ ಮಾಡಬಹುದು
