ಶ್ರೀ ಅರವಿಂದ

ವಿಕಿಪೀಡಿಯ ಇಂದ
ಇಲ್ಲಿಗೆ ಹೋಗು: ಸಂಚರಣೆ, ಹುಡುಕು


Icono aviso borrar.png
ಈ ಪುಟವನ್ನು ಅಳಿಸುವಿಕೆಗಾಗಿ ಗುರುತುಮಾಡಲ್ಪಟ್ಟಿದೆ. ನಿಮಗೆ ಈ ಲೇಖನವನ್ನು ಅಳಿಸುವುದರ ಬಗ್ಗೆ ವಿರೋಧವಿದ್ದಲ್ಲಿ ವಿಕಿಪೀಡಿಯ:ಅಳಿಸುವಿಕೆಗೆ ಹಾಕಲಾಗಿರುವ ಲೇಖನಗಳು ಪುಟದಲ್ಲಿ ತಿಳಿಸಿ.
ಅಳಿಸುವಿಕೆಗೆ ಗುರುತು ಮಾಡಲು ಕಾರಣ: ಅರವಿಂದ ಘೋಷ್
ಶ್ರೀ ಅರವಿಂದರು
ಪುದುಚೇರಿಯಲ್ಲಿ ಶ್ರೀ ಅರವಿಂದರು
ಜನ್ಮ (1872-08-15)ಆಗಸ್ಟ್ 15, 1872ಪದವಿನ್ಯಾಸ ದೋಷ: ಗುರುತಿಸಲಾಗದ ವಿರಾಮ ಚಿಹ್ನೆ"�".
ಜನ್ಮ ಸ್ಥಳ ಕಲಕತ್ತ
ಜನ್ಮ ನಾಮ ಒರೊಬಿಂದೋ ಅಕ್ರಾಯ್ಡ್ ಘೋಷ್
ಮರಣ 5 ಡಿಸೆಂಬರ್ 1950(1950-12-05) (aged 78)ಪದವಿನ್ಯಾಸ ದೋಷ: ಗುರುತಿಸಲಾಗದ ವಿರಾಮ ಚಿಹ್ನೆ"�".
ಮರಣ ಸ್ಥಳ ಶ್ರೀ ಅರವಿಂದ ಆಶ್ರಮ, ಪುದುಚೇರಿ
ತತ್ತ್ವಶಾಸ್ತ್ರ ಅತೀತ ಮಾನಸ ಯೋಗ
ಉಕ್ತಿ ಪ್ರಕೃತಿಯು ಪಶುವೆಂಬ ಜೀವಂತ ಪ್ರಯೋಗಾಲಯದಲ್ಲಿ ಮಾನವನನ್ನು ಸೃಷ್ಟಿಸಿದೆಯೆನ್ನುವರು. ಚಿಂತಿಸುವ ಮತ್ತು ಜೀವಿಸುವ ಮಾನವನೆಂಬ ಪ್ರಯೋಗಾಲಯದಲ್ಲಿ ... ಪ್ರಕೃತಿಯು ಅತಿಮಾನವನನ್ನು, ದೇವತೆಯನ್ನು ಸೃಷ್ಟಿಸಲು ವ್ಯವಸಾಯ ನಡೆಸುತ್ತಿರಬಹುದು
rahmenlos

ಶ್ರೀ ಅರವಿಂದ (শ্রী অরবিন্দ : ಶ್ರೀ ಒರೊಬಿಂದೋ) (ಆಗಸ್ಟ್ ೧೫, ೧೮೭೨ - ಡಿಸೆಂಬರ್ ೫, ೧೯೫೦) ಭಾರತದ ಸ್ವಾತಂತ್ರ್ಯ ಚಳುವಳಿಯ ಹೋರಾಟಗಾರ, ತತ್ವಜ್ಞಾನಿ, ಹಾಗು ಯೋಗಿಯಾಗಿದ್ದವರು.

ಜೀವನ[ಬದಲಾಯಿಸಿ]

ಕಲಕತ್ತೆಯಲ್ಲಿ ಶ್ರೀ ಅರವಿಂದರು ಕೃಷ್ಣಧನ ಘೋಷ್ ಮತ್ತು ಸ್ವರ್ಣಲತಾ ದೇವಿಯರಿಗೆ ತೃತೀಯ ಪುತ್ರನಾಗಿ ಜನಿಸಿದರು. ಆಂಗ್ಲೇಯರಿಂದ ಪ್ರಭಾವಿತರಾದ ಅವರ ತಂದೆಯು ಅವರಿಗೆ "ಒರೊಬಿಂದೋ ಅಕ್ರಾಯ್ಡ್ ಘೋಷ್" ಎಂಬ ಜನ್ಮನಾಮವನ್ನು ಕೊಟ್ಟರು. ಅಲ್ಲದೆ, ಭಾರತೀಯರ ಅಥವಾ ಭಾರತದ ಪ್ರಭಾವ ತಮ್ಮ ಮಕ್ಕಳ ಮೇಲೆ ಬೀಳಬಾರದೆಂಬ ಉದ್ದೇಶದಿಂದ ಅವರನ್ನು ಇಂಗ್ಲೆಂಡಿಗೆ ರವಾನಿಸಿದರು. ಇಂಗ್ಲೆಂಡಿನಲ್ಲಿಯೇ ೧೩ ವರ್ಷ ಕಳೆದ ಅರವಿಂದರು, ಪಾಶ್ಚಾತ್ಯ ಸಂಸ್ಕೃತಿ, ಚರಿತ್ರೆ, ಸಾಹಿತ್ಯಗಳನ್ನು ಅಭ್ಯಸಿಸಿ ಪಾಂಡಿತ್ಯವನ್ನು ಪಡೆದು ಕೊಂಡರು. ಹಾಗೆಯೇ, ಅನೇಕ ಯೂರೋಪೀಯ ಭಾಷೆಗಳಲ್ಲಿಯೂ ಪ್ರವೀಣರಾದರು: ಇಂಗ್ಲಿಷ್, ಫ್ರೆಂಚ್, ಲ್ಯಾಟಿನ್, ಗ್ರೀಕ್, ಇಟಾಲಿಯನ್, ಜರ್ಮನ್ ಅವರಿಗೆ ತಿಳಿದಿದ್ದ ಕೆಲವು ಭಾಷೆಗಳು. ಅವರು ಐ.ಸಿ.ಎಸ್ ಪರೀಕ್ಷೆಯಲ್ಲಿ ಉತ್ತೀರ್ಣರಾದರೂ, ಕುದುರೆ ಸವಾರಿಯನ್ನು ತೆಗೆದು ಕೊಳ್ಳದೆ ತಮ್ಮನ್ನು ಅನರ್ಹಗೊಳಿಸಿಕೊಂಡರು. ೧೮೯೩ರಲ್ಲಿ ಅವರು ಭಾರತಕ್ಕೆ ವಾಪಸು ಬಂದು ಬರೋಡದ ಮಹಾರಾಜರ ಆಸ್ಥಾನದಲ್ಲಿ ಕೆಲಸವನ್ನು ಪಡೆದು ಕೊಂಡರು. ಬರೋಡದಲ್ಲಿದ್ದ ಅವಧಿಯಲ್ಲಿ ಅವರು ಭಾರತದ ಸಂಸ್ಕೃತಿ, ಚರಿತ್ರೆ, ಮತ್ತು ಸಾಹಿತ್ಯಗಳನ್ನು ಅಧ್ಯಯನ ಮಾಡಿದರು ಮತ್ತು ಭಾರತೀಯ ಭಾಷೆಗಳಲ್ಲಿಯೂ (ಬಂಗಾಳಿ, ಸಂಸ್ಕೃತ, ಹಿಂದಿ, ಮರಾಠಿ, ಗುಜರಾತಿ, ತಮಿಳು) ಪ್ರಭುತ್ವವನ್ನು ಸಂಪಾದಿಸಿದರು. ಈ ಸಮಯದಲ್ಲಿಯೇ ಅವರು ಕ್ರಾಂತಿಕಾರಿ ಚಟುವಟಿಕೆಗಳನ್ನು ಪ್ರಾರಂಭಿಸಿ ೧೯೦೬ರಲ್ಲಿ (ಬಂಗಾಳದ ವಿಭಜನೆಯ ನಂತರ) ರಾಜಕೀಯದಲ್ಲಿ ಸಕ್ರಿಯ ಪಾತ್ರವಹಿಸಲು ಬರೋಡದಲ್ಲಿನ ತಮ್ಮ ಪದಕ್ಕೆ ರಾಜೀನಾಮೆಯಿತ್ತು ಕಲಕತ್ತೆಗೆ ಬಂದು ನೆಲೆಸಿದರು. ಅಲ್ಲಿ ಅವರು ಸಕ್ರಿಯವಾಗಿ ರಾಜಕೀಯದಲ್ಲಿ ಕಾಲಿಟ್ಟು ಬಂದೇ ಮಾತರಂ ಎಂಬ ಪತ್ರಿಕೆಯ ಸಂಪಾದಕತ್ವವನ್ನು ವಹಿಸಿಕೊಂಡರು. ಈ ನಡುವೆಯೇ, ೧೯೦೬ರಲ್ಲಿ, ಯೋಗವೂ ಕೂಡ ಭಾರತದ ಸ್ವಾತಂತ್ರ್ಯ ಸಾಧನೆಗೆ ಶಕ್ತಿಶಾಲಿ ಸಹಾಯಕವಾಗ ಬಹುದೆಂದು ಚಿಂತಿಸಿ ವಿಷ್ಣು ಭಾಸ್ಕರ ಲೇಲೆ ಎಂಬ ಯೋಗಿಯನ್ನು ಸಂಧಿಸಿದರು: ಈ ಯೋಗಿಯು ತಿಳಿಸಿಕೊಟ್ಟ ಕೆಲವು ವಿಧಾನಗಳನ್ನು ಅನುಸರಿಸಿ ನಿರ್ಗುಣ ಬ್ರಹ್ಮದ ಸಾಕ್ಷಾತ್ಕಾರವನ್ನು ಪಡೆದುಕೊಂಡರೆಂದು ಶ್ರೀ ಅರವಿಂದರು ಹೇಳಿದರು. ಅದೇ ವರ್ಷ, ಅವರು ಅಲೀಪುರದ ವಿಸ್ಫೋಟದ ಪ್ರಕರಣದಲ್ಲಿ ಬಂಧಿತರಾಗಿ, ಒಂದು ವರ್ಷದ ನಡೆದ ವಿಚಾರಣೆಯ ಕಾಲವನ್ನು ಅಲೀಪುರದ ಸೆರೆಯಲ್ಲಿ ಕಳೆದರು: ಈ ಕಾಲದಲ್ಲಿಯೇ ಅವರು ಸಗುಣ ಬ್ರಹ್ಮದ ಸಾಕ್ಷಾತ್ಕಾರವನ್ನು ಪಡೆದುಕೊಂಡರೆಂದು ಹೇಳಿರುವರು. ೧೯೦೯ರಲ್ಲಿ ಖುಲಾಸೆಯಾಗಿ ಇವರ ಬಿಡುಗಡೆಯಾಯಿತು. ಆನಂತರ, ತಮ್ಮ ಅಂತರಾತ್ಮದ ಆದೇಶವನ್ನು ಅನುಸರಿಸಿ ೧೯೧೦ರಲ್ಲಿ ಪುದುಚೇರಿಗೆ ಬಂದು ನೆಲೆಸಿದರು ಮತ್ತು ತಮ್ಮ ಶೇಷಾಯುಷ್ಯವನ್ನು ಅಲ್ಲಿಯೇ ಯೋಗ ಸಾಧನೆಯಲ್ಲಿ ಕಳೆದರು.

ಯೋಗ[ಬದಲಾಯಿಸಿ]

ಶ್ರೀ ಅರವಿಂದರು ಅತೀತ ಮಾನಸ ಯೋಗದ ಪ್ರವರ್ತಕರು. ಈ ಕೆಲಸದಲ್ಲಿ ಅವರ ಸಹಕಾರ್ಯಕಾರಿಯಾದವರು ಮೀರಾ ಅಲ್ಫಾಸ ರವರು (ಇವರನ್ನು ಶ್ರೀ ಅರವಿಂದಾಶ್ರಮದ ಶ್ರೀ ಮಾತೆಯವರೆಂದೂ ಕರೆಯುವ ಪ್ರತೀತಿ). ಇವರೂ ಕೂಡ ಶ್ರೀ ಅರವಿಂದರಂತೆಯೇ ಸ್ವತಂತ್ರವಾಗಿ ಸಾಕ್ಷಾತ್ಕಾರಗಳನ್ನು ಪಡೆದು ಕೊಂಡಿದ್ದು, ಅತೀತ ಮಾನಸ ಯೋಗವು ಪೃಥ್ವಿಯ ಮುಂದಿನ ವಿಕಸವನ್ನು ತ್ವರಿತಗೊಳಿಸುದೆಂದು ಪ್ರತಿಪಾದಿಸಿದರು. ಶ್ರೀ ಅರವಿಂದರು ಪ್ರಕೃತಿಯ ವಿಕಸನವು ಅಧ್ಯಾತ್ಮಿಕ ದೃಷ್ಟಿಕೋನದಿಂದ ಪ್ರಜ್ಙೆಯ ವಿಕಸನವೆಂದೂ, ಭೌತಿಕ, ಪ್ರಾಣ, ಮತ್ತು ಮನಸ್ಸುಗಳು ಕ್ರಮವತ್ತಾಗಿ ಜಡಜಗತ್ತು, ಸಸ್ಯ ಮತ್ತು ಪಶುಗಳು, ಮತ್ತು ಮನುಷ್ಯನಲ್ಲಿ ಅಭಿವ್ಯಕ್ತಿಯನ್ನು ಪಡೆದುಕೊಂಡಿತೆಂದೂ, ಮುಂದಿನ ವಿಕಸನವು ಮನಸ್ಸನ್ನು ಮೀರಿಸಿದ ಪ್ರಜ್ಙೆಯ ಸ್ಥಿತಿಯ ಅಭಿವ್ಯಕ್ತಿಯೆಂದು ಹೇಳುವರು. ಪೌರ್ವಾತ್ಯ ಮತ್ತು ಪಾಶ್ಚಿಮಾತ್ಯ ಅಧ್ಯಾತ್ಮಿಕ ಪರಂಪರೆಗಳು ಸೂಚಿಸುವಂತೆ, ಮನಸ್ಸಿನಾಚೆಯ ಅತಿ ಪ್ರಜ್ಙೆಯಲ್ಲಿಯೇ ಸಂತೃಪ್ತರಾಗಿ, ಭೌತಿಕ ಜಗತ್ತಿಗೆ ಈ ಅನ್ವೇಷಣೆಯ ಗೆಲುವುಗಳನ್ನು ಕೆಳ ತರದೆ ಅತೀತದಲ್ಲಿ ಲೀನವಾಗಿಹೋಗುವುದು ತರವಲ್ಲದ್ದೆಂದೂ, ಅತಿಪ್ರಜ್ಙೆಯ ಪ್ರಾಪ್ತಿಗಳನ್ನು ಮಾನಸಿಕ, ಪ್ರಾಣಿಕ ಮತ್ತು ಭೌತಿಕಗಳಿಗೆ ಇಳಿಸಬೇಕೆಂದೂ, ಈ ರೀತಿ ನವೀನ ಜೀವಜಾತಿಯನ್ನು, ಅತಿಮಾನವತೆಯನ್ನು ಅಭಿವ್ಯಕ್ತಗೊಳಿಸಬೇಕೆಂದು ಅಭಿಪ್ರಾಯ ಪಡುವರು.

ವಾಙ್ಮಯ[ಬದಲಾಯಿಸಿ]

ಶ್ರೀ ಅರವಿಂದರ ಸಮಗ್ರ ವಾಙ್ಮಯವನ್ನು ಶ್ರೀ ಅರವಿಂದಾಶ್ರಮವು ವು ೩೫ ಸಂಪುಟಗಳಲ್ಲಿ ಪ್ರಕಟಿಸಿದೆ. ಅವರ ಕೆಲವು ಕೃತಿಗಳೆಂದರೆ:

  • ದಿವ್ಯ ಜೀವನ: ಶ್ರೀ ಅರವಿಂದರ ಪ್ರಮುಖ ತತ್ತ್ವಶಾಸ್ತ್ರ ಕೃತಿ. ಈ ಗ್ರಂಥವು ವಿಶ್ಲೇಷಿಸುವ ಕೆಲವು ವಿಷಯಗಳನ್ನು ಮುಂದೆ ಕೊಟ್ಟಿದೆ: ವಿಕಸನ, ವಿಶ್ವ ಅಭಿವ್ಯಕ್ತಿಯ ಹಲವು ಸ್ತರಗಳು, ಅತೀತ ಮಾನಸ ವಿಕಸನದ ಸಾಧ್ಯತೆಗಳು, ಸನ್ನಿವೇಶಗಳು, ಸೃಷ್ಟಿ-ಸ್ಥಿತಿ-ಲಯ, ಇತ್ಯಾದಿ
  • ಯೋಗ ಸಮನ್ವಯ - ತಮ್ಮ ಮತ್ತು ಇತರ ಯೋಗಗಳ ವಿಷಯವಾಗಿ ಬರೆದ ಕೃತಿ. ಇತರ ಯೋಗಗಳು ತಮ್ಮ ಯೋಗಕ್ಕೆ ಹೇಗೆ ಪೂರಕ-ಸಾಧಕಗಳಾಗ ಬಹುದೆಂಬುದರ ಮೇಲೆ ಒತ್ತು ಕೊಟ್ಟಿರುವರು.
  • ಮಾನವ ಚಕ್ರ - ಶ್ರೀ ಅರವಿಂದರ ಸಾಮಾಜಿಕ ಮತ್ತು ರಾಜನೀತಿ ವಿಷಯಕ ವಿಶ್ಲೇಷಣೆಗಳು
  • ವೇದ ರಹಸ್ಯ, ಅಗ್ನಿ ಸೂತ್ರಗಳು - ಶ್ರೀ ಅರವಿಂದರ ವೇದಾರ್ಥ ನಿರೂಪಣೆಯ ಪ್ರಯತ್ನ. ಇವರು ವೇದಗಳನ್ನು ತಮ್ಮ ಅನುಭವಗಳ ಬೆಳಕಿನಲ್ಲಿ ಈ ಗ್ರಂಥಗಳನ್ನು ಹೇಗೆ ಅರ್ಥೈಸಬಹುದೆಂದು ಚರ್ಚಿಸುವರು. ಅಗ್ನಿ ಸೂತ್ರಗಳು ಎಂಬ ಗ್ರಂಥ ಅವರ ಈ ವಿಧಾನದ ನಿದರ್ಶನಗಳು
  • ಸಾವಿತ್ರಿ - ಶ್ರೀ ಅರವಿಂದರ ಮಹಾಕಾವ್ಯ.
  • ಯೋಗ ದಾಖಲೆಗಳು - ಶ್ರೀ ಅರವಿಂದರು ೧೯೦೯ರಿಂದ ೧೯೨೭ರ ವರೆಗೆ ದಾಖಲಿಸಿದ್ದ ತಮ್ಮ ಯೋಗ ಸಾಧನಾ ವಿಷಯಕ ಟಿಪ್ಪಣಿಗಳು
  • ಯೋಗ ಪತ್ರಗಳು - ಶ್ರೀ ಅರವಿಂದರು ಬರೆದ ಪತ್ರಗಳನ್ನು ಹಲವು ಸಂಪುಟಗಳಲ್ಲಿ ಬೇರೆ ಬೇರೆ ಶೀರ್ಷಿಕೆಗಳಡೆ ವಿಂಗಡಿಸಲಾಗಿದೆ

ಪ್ರಭಾವ[ಬದಲಾಯಿಸಿ]

ಪಂಡಿತ ಮದನ ಮೋಹನ ಮೌಲವೀಯ, ಸುಭಾಸಚಂದ್ರ ಭೋಸ್, ರವೀಂದ್ರ ನಾಥ್ ಠಾಕೂರ್ ಇತ್ತ್ಯಾದಿ ಮಹಾನ್ ವ್ಯಕ್ತಿಗಳು ಶ್ರೀ ಅರವಿಂದರ ಪ್ರಭಾವಕ್ಕೆ ಒಳಗಾದರು. ದ.ರಾ.ಬೇಂದ್ರೆ, ಕುವೆಂಪು, ಮಧುರ ಚೆನ್ನರು, ಶಂ.ಬಾ.ಜೋಶಿ, ಸ.ಸ,ಮಾಳವಾಡ, ಶಾಂತಾದೇವಿ ಮಾಳವಾಡ, ಮುಂತಾದ ಮಹಾನ್ ಕನ್ನಡಿಗರೂ ಕೂಡ ಇವರ ಕೃತಿಗಳಿಂದ ಪ್ರಭಾವಿತರಾದರು.