ವಿಷಯಕ್ಕೆ ಹೋಗು

ಶ್ರೀಪಾದ ಹೆಗ್ಡೆ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

 

ಶ್ರೀಪಾದ ಹೆಗ್ಡೆ
Hegde performing in Bangalore, Karnataka, India.
ಹಿನ್ನೆಲೆ ಮಾಹಿತಿ
ಸಂಗೀತ ಶೈಲಿIndian classical music
ವೃತ್ತಿComposer, vocalist
ಸಕ್ರಿಯ ವರ್ಷಗಳು1957–present

ಪಂಡಿತ್ ಶ್ರೀಪಾದ ಹೆಗಡೆ ( Kannada: ಶ್ರೀಪಾದ ಹೆಗಡೆ ) ಉತ್ತರ ಕನ್ನಡ ಜಿಲ್ಲೆಯ ಕಂಪ್ಲಿಯ ಒಬ್ಬ ಭಾರತೀಯ ಸಂಗೀತ ಸಂಯೋಜಕ ಮತ್ತು ಹಿಂದೂಸ್ತಾನಿ ಶಾಸ್ತ್ರೀಯ ಗಾಯಕ (ಜನನ ೧ ಜನವರಿ ೧೯೫೭). ಅವರು ೧೯೮೭ ರಿಂದ ಧಾರವಾಡದ ಆಲ್ ಇಂಡಿಯಾ ರೇಡಿಯೋದ ಸಿಬ್ಬಂದಿಯಾಗಿದ್ದಾರೆ.

ಆರಂಭಿಕ ಜೀವನ

[ಬದಲಾಯಿಸಿ]

ಹೆಗ್ಡೆ ಯಕ್ಷಗಾನ ಪರಂಪರೆಯ ಹಿನ್ನೆಲೆಯ ಕುಟುಂಬದಲ್ಲಿ ಜನಿಸಿದರು ಮತ್ತು ಚಿಕ್ಕ ವಯಸ್ಸಿನಲ್ಲಿಯೇ ಸಂಗೀತದತ್ತ ಆಕರ್ಷಿತರಾದರು. ಅವರು ತಮ್ಮ ಹದಿಹರೆಯದ ವಯಸ್ಸಿನಲ್ಲಿ ಪಂಡಿತ್ ಗಣಪತಿ ಭಟ್ ಅವರ ಅಡಿಯಲ್ಲಿ ಹಿಂದೂಸ್ತಾನಿ ಸಂಗೀತದಲ್ಲಿ ತರಬೇತಿ ಪಡೆಯಲು ಪ್ರಾರಂಭಿಸಿದರು. ೧೯೮೨ರಲ್ಲಿ, ಹೆಗ್ಡೆ ತಮ್ಮನ್ನು ಸಂಪೂರ್ಣವಾಗಿ ಸಂಗೀತಕ್ಕೆ ಅರ್ಪಿಸಿಕೊಳ್ಳಲು ಧಾರವಾಡಕ್ಕೆ ತೆರಳಿದರು. ಕಿರಾಣಾ ಘರಾನಾ ಗಾಯಕರಾದ ಪಂಡಿತ್ ಬಸವರಾಜ ರಾಜಗುರು ಅವರು ಒಂದು ದಶಕದ ಕಾಲ ಹೆಗ್ಡೆ ಅವರಿಗೆ ಮಾರ್ಗದರ್ಶನ ನೀಡಿದರು.

ವೃತ್ತಿಜೀವನ

[ಬದಲಾಯಿಸಿ]

ಹೆಗ್ಡೆ ಅವರು ಗ್ವಾಲಿಯರ್ ಘರಾನಾ ಮತ್ತು ಕಿರಾನಾ ಘರಾನಾ ಎರಡರ ಸೂಕ್ಷ್ಮ ವ್ಯತ್ಯಾಸಗಳನ್ನು ಒಳಗೊಂಡು ತಮ್ಮದೇ ಶೈಲಿಯನ್ನು ಅಭಿವೃದ್ಧಿಪಡಿಸಿದರು. ಅವರ ಮಾರ್ಗದರ್ಶಕರಂತೆ,ಹೆಗ್ದೆ ಅವರು ವೈವಿಧ್ಯಮಯ ಮತ್ತು ಇತರ ಘರಾನಗಳ ಸೌಂದರ್ಯದ ಸೂಕ್ಷ್ಮತೆಗಳನ್ನು ತಮ್ಮ ಶೈಲಿಯಲ್ಲಿ ಬೆರೆಸುತ್ತಾರೆ.

ಖಯಾಲ್ ಗಾಯನದಲ್ಲಿ ಅವರು ವಿಶಿಷ್ಟ ಪ್ರತಿಭೆಯಾಗಿದ್ದರೂ, ಅವರು ಲಘು ಶಾಸ್ತ್ರೀಯ ತುಣುಕುಗಳನ್ನು ಹಾಡುವುದರಲ್ಲಿಯೂ ಅಷ್ಟೇ ನಿಪುಣರು. ಅವರ ಸಂಗೀತ ಕಚೇರಿಗಳು ಅಖಿಲ ಭಾರತ ಆಕಾಶವಾಣಿ. ಧಾರವಾಡದಿಂದ ನಿಯಮಿತವಾಗಿ ಪ್ರಸಾರವಾಗುತ್ತವೆ. ಅವರು ಭಾನುವಾರ ರಾತ್ರಿ ಪ್ರಸಾರವಾಗುವ ಅಖಿಲ ಭಾರತ ಆಕಾಶವಾಣಿ ಸಂಗೀತ ಕಚೇರಿಯಲ್ಲಿ ಕಾಣಿಸಿಕೊಂಡಿದ್ದಾರೆ.

ಹೆಗ್ಗಡೆಯವರು ಅಲ್ಲಾದಿಯಾಖಾನ್ ಪುಣ್ಯ ಸಮರೋಹ ಮುಂಬಯಿ, ಕರ್ನಾಟಕ ಸಂಘ ಮುಂಬಯಿ, ದೀನನಾಥ್ ಮಂಗೇಶ್ಕರ್ ಪುಣ್ಯತಿಥಿ ಗೋವಾ, ಮುಗುಬಾಯಿ ಕುರ್ಡಿಕರ ಪುಣ್ಯತಿಥಿ ಗೋವಾ, ದಸರಾ ಮಹೋತ್ಸವ ಮೈಸೂರು, ಸಿತಾರ್ ರತ್ನ ಸಂಗೀತೋತ್ಸವ ಧಾರವಾಡ, ಆರ್ಟ್ ಸರ್ಕಲ್ ಗೋಲ್ಡನ್ ಜುಬಿಲಿ ಸಮ್ಮೇಳನ ಹುಬ್ಬಳ್ಳಿ, ಧಾರವಾಡ ಉತ್ಸವ, ಕುಂದಗೋಳ ಉತ್ಸವ್, ಪುರಂದರೋತ್ಸವ ಹಂಪಿ, ಹಿಂದೂಸ್ತಾನಿ ಕಲಾಕಾರ ಮಂಡಳಿ ಬೆಂಗಳೂರು, ರಾಜಗುರು ಸಂಗೀತ ಪ್ರತಿಷ್ಟಾನ, ಬೆಂಗಳೂರು ಪುಟ್ಟರಾಜ ಗವಾಯಿ ಜಯಂತ್ಯುತ್ಸವ ಬೆಂಗಳೂರು.ಸೇರಿದಂತೆ ಹಲವಾರು ಸಂಗೀತ ಕಛೇರಿಗಳನ್ನು ಆಯೋಜಿಸಿದ್ದಾರೆ.

ಸಂಯೋಜಕ

[ಬದಲಾಯಿಸಿ]

ಹೆಗ್ಗಡೆಯವರು "ಶ್ರುತಿ ಸಂಜೀವಿನಿ", "ದಿವ್ಯ ಸನ್ನಿದಿ", "ಪ್ರೇಮ ಸಂಗಮ", ಮತ್ತು ಲಘು ಸಂಗೀತದಲ್ಲಿ "ವಚನ ವೈಭವ" ಮುಂತಾದ ರಚನೆಗಳಿಗೆ ಹೆಸರುವಾಸಿಯಾಗಿದ್ದಾರೆ. ಅವರು , ಪರಂಪರಾ ಮತ್ತು ರಾಗಶ್ರೀ ಎಂಬ ಶಾಸ್ತ್ರೀಯ ಸಂಗೀತದ ಸಿಡಿ ಬಿಡುಗಡೆ ಮಾಡಿದ್ದಾರೆ.

ಅವರು ತಮ್ಮ ವೃತ್ತಿಜೀವನದ ಅವಧಿಯಲ್ಲಿ ಅನೇಕ ಪುರಸ್ಕಾರಗಳನ್ನು ಪಡೆದರು, ಅವುಗಳಲ್ಲಿ "ಮೇಘ ಮೇದಿನಿ" ಎಂಬ ಸಂಗೀತ ರೂಪಕದ ಸಂಯೋಜನೆಗಾಗಿ AIR ರಾಷ್ಟ್ರೀಯ ಮಟ್ಟದಲ್ಲಿ ಪ್ರಥಮ ಸ್ಥಾನ ಮತ್ತು "ಗರುಡಾಮೃತ" ಸಂಯೋಜನೆಗಾಗಿ ರಾಜ್ಯ ಮಟ್ಟದಲ್ಲಿ ಪ್ರಥಮ ಸ್ಥಾನ ಪಡೆದಿರುವುದು ಸೇರಿವೆ. []

ಶಿಕ್ಷಕ

[ಬದಲಾಯಿಸಿ]

ಹೆಗ್ಡೆಯವರು ಬೋಧನೆಯ ಉದಾತ್ತ ಸಂಪ್ರದಾಯವನ್ನು ಅನುಸರಿಸಿದವರು. ಆದುದರಿಂದ ಅವರನ್ನು ಗುರುಗಳೆಂದು ಪರಿಗಣಿಸಲಾಗುತ್ತದೆ. ಅವರು ಕರ್ನಾಟಕ ಸಂಗೀತ ನೃತ್ಯ ಅಕಾಡೆಮಿಯ ಮೂಲಕ ಸಂಗೀತದ ಕುರಿತು ಅನೇಕ ಕಾರ್ಯಾಗಾರಗಳನ್ನು ಆಯೊಜಿಸಿದ್ದಾರೆ ಮತ್ತು ಹಲವಾರು ಉಪನ್ಯಾಸಗಳನ್ನು ನೀಡಿದ್ದಾರೆ.

ಗುರುತಿಸುವಿಕೆ

[ಬದಲಾಯಿಸಿ]

ಹೆಗ್ಡೆಯವರು ಅನೇಕ ಗೌರವಗಳು ಮತ್ತು ಪ್ರಶಸ್ತಿಗಳಿಗೆ ಭಾಜನರಾಗಿದ್ದಾರೆ:

ಇವುಗಳಲ್ಲಿ,

  • ಕರ್ನಾಟಕ ಸಂಗೀತ ನೃತ್ಯ ಅಕಾಡೆಮಿ ಮತ್ತು ಕನ್ನಡ ಮತ್ತು ಸಂಸ್ಕೃತಿ ಇಲಾಖೆಯಿಂದ ಕರ್ನಾಟಕ ಕಲಾಶ್ರಿ
  • ಬೆಂಗಳೂರಿನ ಆರ್ಯಭಟ ಸಾಂಸ್ಕೃತಿಕ ಸಂಸ್ಥೆಯಿಂದ ಆರ್ಯಭಟ
  • ರಾಗರತ್ನ
  • ಚಂದ್ರಹಾಸ
  • ಗಾನ್ ಗೋವಿಂದ್
  • ಗಾನ ಗಂಧರ್ವ ಪ್ರಮುಖವಾದವುಗಳು.

ಉಲ್ಲೇಖಗಳು

[ಬದಲಾಯಿಸಿ]
  1. AIR (2011-06-30). "megha medini". The Hindu. Archived from the original on 2011-07-20.

ಮೂಲಗಳು

[ಬದಲಾಯಿಸಿ]

ಬಾಹ್ಯ ಕೊಂಡಿಗಳು

[ಬದಲಾಯಿಸಿ]