ಶೋಭನಾ ನರಸಿಂಹನ್

ವಿಕಿಪೀಡಿಯ ಇಂದ
Jump to navigation Jump to search
ಶೋಭನಾ ನರಸಿಂಹನ್
Shobhana Narasimhan.jpg
ವಾಸ
ರಾಷ್ಟ್ರೀಯತೆಭಾರತೀಯರು
ಕಾರ್ಯಕ್ಷೇತ್ರಗಳುಕಂಪ್ಯೂಟೇಶನಲ್ ನ್ಯಾನೊಸೈನ್ಸ್
ಸಂಸ್ಥೆಗಳುಜವಾಹರಲಾಲ್ ನೆಹರು ಸೆಂಟರ್ ಫಾರ್ ಅಡ್ವಾನ್ಸ್ಡ್ ಸೈಂಟಿಫಿಕ್ ರಿಸರ್ಚ್
ಅಭ್ಯಸಿಸಿದ ಸಂಸ್ಥೆಹಾರ್ವರ್ಡ್ ವಿಶ್ವವಿದ್ಯಾಲಯ, ಇಂಡಿಯನ್ ಇನ್ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ ಬಾಂಬೆ, ಸೇಂಟ್ ಜೇವಿಯರ್ಸ್ ಕಾಲೇಜು, ಮುಂಬೈ
ಡಾಕ್ಟರೆಟ್ ಸಲಹೆಗಾರರುಡೇವಿಡ್ ವಾಂಡರ್ಬಿಲ್ಟ್
ಗಮನಾರ್ಹ ಪ್ರಶಸ್ತಿಗಳುಶ್ರೀ ಶಕ್ತಿ ಸಮ್ಮನ್ ವಿಜ್ಞಾನ ಪ್ರಶಸ್ತಿ, ೨೦೧೦, ಕರ್ನಾಟಕ ಸರ್ಕಾರದ ಕಲ್ಪನಾ ಚಾವ್ಲಾ ಮಹಿಳಾ ವಿಜ್ಞಾನಿ ಪ್ರಶಸ್ತಿ, ೨೦೧೦

ಶೋಭಾನ ನರಸಿಂಹನ್ ಅವರು ಭಾರತದ ಬೆಂಗಳೂರಿನಲ್ಲಿರುವ ಜವಾಹರಲಾಲ್ ನೆಹರು ಸೆಂಟರ್ ಫಾರ್ ಅಡ್ವಾನ್ಸ್ಡ್ ಸೈಂಟಿಫಿಕ್ ರಿಸರ್ಚ್‌ನಲ್ಲಿ ಸೈದ್ಧಾಂತಿಕ ವಿಜ್ಞಾನದ ಪ್ರಾಧ್ಯಾಪಕರಾಗಿದ್ದಾರೆ. ಇವರ ಆಸಕ್ತಿಯ ಮುಖ್ಯ ಕ್ಷೇತ್ರವೆಂದರೆ ಕಂಪ್ಯೂಟೇಶನಲ್ ನ್ಯಾನೊಸೈನ್ಸ್. ಆಯಾಮದ ಇಳಿಕೆ ಮತ್ತು ಗಾತ್ರವನ್ನು ಕಡಿಮೆ ಮಾಡುವುದು ವಸ್ತುಗಳ ಗುಣಲಕ್ಷಣಗಳ ಮೇಲೆ ಹೇಗೆ ಪರಿಣಾಮ ಬೀರುತ್ತದೆ ಎಂಬುದನ್ನು ಅವರ ಸಂಶೋಧನೆಯು ಪರಿಶೀಲಿಸುತ್ತದೆ. [೧] ಅವರು ಭಾರತದ ರಾಷ್ಟ್ರೀಯ ಅಕಾಡೆಮಿ ಆಫ್ ಸೈನ್ಸಸ್‌ನ ಫೆಲ್ಲೋ ಆಗಿದ್ದಾರೆ. [೨]

ಶಿಕ್ಷಣ ಮತ್ತು ವೃತ್ತಿ[ಬದಲಾಯಿಸಿ]

ಇವರು ೧೯೮೩ ರಲ್ಲಿ ಮುಂಬೈನ ಸೇಂಟ್ ಕ್ಸೇವಿಯರ್ಸ್ ಕಾಲೇಜಿನಿಂದ ಭೌತಶಾಸ್ತ್ರದಲ್ಲಿ ಬಿ. ಎಸ್‌ಸಿ ಅಧ್ಯಯನ ಮಾಡಿದರು ಮತ್ತು ೧೯೮೫ ರಲ್ಲಿ ಐಐಟಿ ಬಾಂಬೆಯಿಂದ ಭೌತಶಾಸ್ತ್ರದಲ್ಲಿ ಎಂ. ಎಸ್‌ಸಿ ಮಾಡಿದರು.

ಇವರು ೧೯೯೧ ರಲ್ಲಿ ಹಾರ್ವರ್ಡ್ ವಿಶ್ವವಿದ್ಯಾಲಯದಿಂದ ಸೈದ್ಧಾಂತಿಕ ಭೌತಶಾಸ್ತ್ರದಲ್ಲಿ ಪಿಎಚ್‌ಡಿ ಪದವಿ ಪಡೆದರು.[೩] ತರುವಾಯ, ಅವರು ಅಮೇರಿಕದ ಬ್ರೂಕ್‌ಹೇವನ್ ನ್ಯಾಷನಲ್ ಲ್ಯಾಬೊರೇಟರಿಯಲ್ಲಿ ಮತ್ತು ಜರ್ಮನಿಯ ಬರ್ಲಿನ್‌ನಲ್ಲಿರುವ ಮ್ಯಾಕ್ಸ್ ಪ್ಲ್ಯಾಂಕ್ ಸೊಸೈಟಿಯ ಫ್ರಿಟ್ಜ್-ಹೇಬರ್-ಇನ್‌ಸ್ಟಿಟ್ಯೂಟ್‌ನಲ್ಲಿ ತಮ್ಮ ಪೋಸ್ಟ್‌ಡಾಕ್ಟರಲ್ ಸಂಶೋಧನೆ ಮಾಡಿದರು. ಅವರು ೧೯೯೬ ರಲ್ಲಿ ಭಾರತದ ಬೆಂಗಳೂರಿನ ಜವಾಹರಲಾಲ್ ನೆಹರು ಸೆಂಟರ್ ಫಾರ್ ಅಡ್ವಾನ್ಸ್ಡ್ ಸೈಂಟಿಫಿಕ್ ರಿಸರ್ಚ್‌ನ ಸೈದ್ಧಾಂತಿಕ ವಿಜ್ಞಾನ ಘಟಕಕ್ಕೆ ಸೇರಿದರು.[೪] ಇವರು ಈ ಹಿಂದೆ ಸೈದ್ಧಾಂತಿಕ ವಿಜ್ಞಾನ ಘಟಕದ ಅಧ್ಯಕ್ಷರಾಗಿದ್ದರು ಮತ್ತು ಜೆಎನ್‌ಸಿಎಎಸ್‌ಆರ್‌ನಲ್ಲಿ ಶೈಕ್ಷಣಿಕ ವ್ಯವಹಾರಗಳ ಡೀನ್ ಆಗಿದ್ದರು.

ನರಸಿಂಹನ್ ನವೀನ ಬೋಧನಾ ವಿಧಾನಗಳಲ್ಲಿ ಬಲವಾದ ಆಸಕ್ತಿಯನ್ನು ಹೊಂದಿದ್ದಾರೆ ಮತ್ತು ಹಲವಾರು ದೇಶಗಳಲ್ಲಿ ಅನೇಕ ಸಂವಾದಾತ್ಮಕ ಕಾರ್ಯಾಗಾರಗಳನ್ನು ಆಯೋಜಿಸಿದ್ದಾರೆ ಮತ್ತು ಭಾಗವಹಿಸಿದ್ದಾರೆ. [೫] ವಿಜ್ಞಾನ ಕ್ಷೇತ್ರದಲ್ಲಿ ಮಹಿಳೆಯರ ಭಾಗವಹಿಸುವಿಕೆಯನ್ನು ಪ್ರೋತ್ಸಾಹಿಸಿಹಿಸುವುದರಲ್ಲಿ ಇವರು ಉತ್ಸುಕರಾಗಿದ್ದಾರೆ. ಅವರು ಭಾರತ ಸರ್ಕಾರದ ವಿಜ್ಞಾನದಲ್ಲಿ ಮಹಿಳೆಯರ ಸ್ಥಾಯಿ ಸಮಿತಿಯ ಸದಸ್ಯರಾಗಿದ್ದಾರೆ ಮತ್ತು ಈ ಹಿಂದೆ ಭಾರತೀಯ ಅಕಾಡೆಮಿ ಆಫ್ ಸೈನ್ಸಸ್‌ನ ಮಹಿಳಾ ವಿಜ್ಞಾನ ಉಪಕ್ರಮದ ಸಮಿತಿಯ ಸದಸ್ಯರಾಗಿದ್ದರು [೬] ಮತ್ತು ಮಹಿಳೆಯರಿಗಾಗಿ ಹಲವಾರು ವೃತ್ತಿ ಅಭಿವೃದ್ಧಿ ಕಾರ್ಯಾಗಾರಗಳನ್ನು ಸಹ ಆಯೋಜಿಸಿದ್ದಾರೆ. ಇಟಲಿಯ ಟ್ರಿಸ್ಟೆಯಲ್ಲಿರುವ ಸೈದ್ಧಾಂತಿಕ ಭೌತಶಾಸ್ತ್ರದ ಅಂತರರಾಷ್ಟ್ರೀಯ ಕೇಂದ್ರದಲ್ಲಿ ಭೌತಶಾಸ್ತ್ರ[೭] ಮತ್ತು ರುವಾಂಡಾದ ಕಿಗಾಲಿಯಲ್ಲಿರುವ ಈಸ್ಟ್ ಆಫ್ರಿಕನ್ ಇನ್ಸ್ಟಿಟ್ಯೂಟ್ ಫಾರ್ ಫಂಡಮೆಂಟಲ್ ರಿಸರ್ಚ್ನಲ್ಲಿ ಸಹಾ ಕಾರ್ಯಾಗಾರಗಳನ್ನು ಆಯೋಜಿಸಿದ್ದಾರೆ. [೮]

ಪ್ರಶಸ್ತಿ ಮತ್ತು ಮನ್ನಣೆಗಳು[ಬದಲಾಯಿಸಿ]

ನರಸಿಂಹನ್ ಅವರು ೨೦೧೧ ರಲ್ಲಿ ಭಾರತದ ರಾಷ್ಟ್ರೀಯ ಅಕಾಡೆಮಿ ಆಫ್ ಸೈನ್ಸಸ್‌ನ ಫೆಲ್ಲೋ ಆದರು. ಅವರು ೨೦೧೦ರಲ್ಲಿ ಶ್ರೀ ಶಕ್ತಿ ಸಮ್ಮನ್ ವಿಜ್ಞಾನ ಪ್ರಶಸ್ತಿ ಪಡೆದಿದ್ದಾರೆ [೯] ಮತ್ತು ೨೦೧೦ ರಲ್ಲಿ ಕರ್ನಾಟಕ ಸರ್ಕಾರದ ಕಲ್ಪನಾ ಚಾವ್ಲಾ ಮಹಿಳಾ ವಿಜ್ಞಾನಿ ಪ್ರಶಸ್ತಿಯನ್ನೂ ಪಡೆದರು. [೧೦]

ಉಲ್ಲೇಖಗಳು[ಬದಲಾಯಿಸಿ]

  1. "Shobhana Narasimhan: Research Interests". Retrieved 30 October 2015.
  2. "Fellows, National Academy of Sciences, India". National Academy of Sciences, India. Retrieved 30 October 2015.
  3. "Harvard PhD Theses in Physics: 1971-1999". Harvard PhD Theses in Physics: 1971-1999. Retrieved 30 October 2015.
  4. "Faculty, Theoretical Sciences Unit, JNCASR". JNCASR. Retrieved 30 October 2015.
  5. "Shobhana Narasimhan". JNCASR. Retrieved 30 October 2015.
  6. "Panel Members, Women in Science, IAS". Indian Academy of Sciences. Retrieved 30 October 2015.
  7. "Career Development Workshop for Women in Physics at ICTP". International Centre for Theoretical Physics. Retrieved 30 October 2015.
  8. https://eaifr.ictp.it/events/women-in-science/
  9. "Stree Shakti". Stree Shakti. Retrieved 30 October 2015.
  10. "Scientists, engineers get awards". The Hindu. The Hindu. Retrieved 30 October 2015.