ಶಾಸನ ಪರಿವೀಕ್ಷಣೆ

ವಿಕಿಪೀಡಿಯ ಇಂದ
Jump to navigation Jump to search


Icono aviso borrar.png
ಈ ಪುಟವನ್ನು ಅಳಿಸುವಿಕೆಗಾಗಿ ಗುರುತುಮಾಡಲ್ಪಟ್ಟಿದೆ. ನಿಮಗೆ ಈ ಲೇಖನವನ್ನು ಅಳಿಸುವುದರ ಬಗ್ಗೆ ವಿರೋಧವಿದ್ದಲ್ಲಿ ವಿಕಿಪೀಡಿಯ:ಅಳಿಸುವಿಕೆಗೆ ಹಾಕಲಾಗಿರುವ ಲೇಖನಗಳು ಪುಟದಲ್ಲಿ ತಿಳಿಸಿ.
ಅಳಿಸುವಿಕೆಗೆ ಗುರುತು ಮಾಡಲು ಕಾರಣ: ತನ್ನ ಪುಸ್ತಕದ ಬಗ್ಗೆ ತಾನೇ ಬರೆದುಕೊಂಡ ಜಾಹೀರಾತು ಮಾದರಿಯ ಲೇಖನ


ಶಾಸನ ಪರಿವೀಕ್ಷಣೆ - ಶಾಸನಗಳ ಆಧಾರವಾಗಿಟ್ಟುಕೊಂಡು ರಚಿಸಿರುವ ಸಂಶೋಧನಾ ಕೃತಿ.

ಮಂಡ್ಯ ಜಿಲ್ಲೆ, ರಾಮನಗರ ಜಿಲ್ಲೆ ಹಾಗೂ ಹಾಸನ ಜಿಲ್ಲೆಗಳಲ್ಲಿ ಕ್ಷೇತ್ರ ಕಾರ್ಯ ನಡೆಸಿ ತಿಳಿದುಬಂದಿರುವ ಹೊಸ ಹೊಸ ಮಾಹಿತಿಗಳಿವೆ.ಶಾಸನಗಳು ಕೇವಲ ಇತಿಹಾಸದ ಅಧ್ಯಯನಕ್ಕೆ ಮಾತ್ರ ಸಂಬಂಧ ಪಟ್ಟಿರುವ ವಿಷಯ ಎಂಬ ಮನಸ್ಥಿತಿ ಇಲ್ಲಿಯವರೆಗೂ ಬೆಳೆದುಬಂದಿದೆ. ಆದರೆ ಶಾಸನಗಳು ಪ್ರಾದೇಶಿಕ ಸಂಸ್ಕೃತಿಯ ಜೊತೆಗೆ ತಳಕು ಹಾಕಿಕೊಂಡಿವೆ. ಹೀಗಾಗಿ ಸಾಮಾಜಿಕ ಹಾಗೂ ಸಾಂಸ್ಕೃತಿಕ ದೃಷ್ಟಿಕೋನದಿಂದ ಶಾಸನಗಳ ಅಧ್ಯಯನ ನಡೆಯಬೇಕಿದೆ. ಅಂತಹ ಅಧ್ಯಯನಕ್ಕೆ ಪ್ರಸ್ತುತ ಕೃತಿ ಸ್ಪೂರ್ತಿದಾಯಕವಾಗಿದೆ. ಪ್ರಸ್ತುತ ಕೃತಿಯಲ್ಲಿ ಐತಿಹಾಸಿಕ, ಸಾಮಾಜಿಕ, ಸಾಂಸ್ಕೃತಿಕ ಆಯಾಮಗಳೊಂದಿಗೆ ಭಾಷಾ ವಿಜ್ಞಾನದ ಅಂತರ್ ಶಿಸ್ತಿಯ ಅಧ್ಯಯನವೂ ನಡೆದಿದೆ.

ಯಾವುದೇ ಪ್ರದೇಶದ ಇತಿಹಾಸವನ್ನು ತಿಳಿಯಲು ಆ ಪ್ರದೇಶದ ಬರಹದ ದಾಖಲೆಗಳು ಮುಖ್ಯವಾಗುತ್ತವೆ. ಶಾಸನಗಳನ್ನು ಆಧರಿಸದೆ ಮಾಡುವ ಇತಿಹಾಸದ ಯಾವುದೇ ಅಧ್ಯಯನವು ಸಮಗ್ರ ಎನಿಸುವುದಿಲ್ಲ. ಶಾಸನಗಳಷ್ಟೇ ಮುಖ್ಯ ಆಕರಗಳಲ್ಲವಾದರೂ, ಅವು ಪ್ರಮುಖ ಆಕರಗಳು. ಕವಿರಾಜಮಾರ್ಗಪೂರ್ವ ಕನ್ನಡದ ಬಗ್ಗೆ ತಿಳಿಯಲು ನಮಗಿರುವ ಸಾಧನಗಳೆಂದರೆ ಶಾಸನಗಳು ಮಾತ್ರ.ಇತಿಹಾಸವೆಂದರೆ ರಾಜರ ಕಥೆಗಳು ಮಾತ್ರವಲ್ಲ. ಜನಸಾಮಾನ್ಯರನ್ನು ಹೊರತುಪಡಿಸಿದ ಇತಿಹಾಸ ಇತಿಹಾಸವೇ ಅಲ್ಲ ಎಂಬ ತಿಳಿವಳಿಕೆ ಬಹಳ ಜನರಿಗೆ ಇತ್ತಾದರೂ, ಅಂದಿನ ಅಗತ್ಯಗಳಿಗೆ ತಕ್ಕಂತೆ ರಾಜಕೀಯ ಇತಿಹಾಸದ ಅಧ್ಯಯನಕ್ಕೆ ಆದ್ಯತೆ ನೀಡಿದ್ದರ ಫಲವಾಗಿ ದೀರ್ಘಕಾಲ ಅದೇ ಪದ್ಧತಿ ಮುಂದುವರಿಯಿತು. ಅಧ್ಯಯನಕ್ಕೆ ಸಿದ್ಧಮಾದರಿಯನ್ನು ಎಲ್ಲರೂ ಒಪ್ಪಿಕೊಂಡು, ಅದೇ ದಿಕ್ಕಿನಲ್ಲಿ ಅಧ್ಯಯನಗಳನ್ನು ಮುಂದುವರಿಸಿದರು. ಇದರಿಂದ ರಾಜವಂಶಗಳನ್ನು ಕುರಿತ ಇತಿಹಾಸ ಲಭ್ಯವಾಯಿತು.

ಈ ಸಂದರ್ಭದಲ್ಲಿ ಕೆಲವು ವಿದ್ವಾಂಸರು ಸಾಹಿತ್ಯ ಚರಿತ್ರೆಯ ಬೇರೆಬೇರೆ ಆಯಾಮಗಳನ್ನು ಕುರಿತು ಅಭ್ಯಾಸ ನಡೆಸಿದ್ದರು. ಅವರ ಅಧ್ಯಯನದಲ್ಲಿ ಶಾಸನಗಳು ನೆರವಿಗೆ ಬರುತ್ತಿದ್ದುದನ್ನು ಗಂಭೀರವಾಗಿ ಗಮನಿಸಿದ ಕೆಲವು ವಿದ್ವಾಂಸರು ನಾಡಿನ ಸಾಂಸ್ಕೃತಿಕ ಇತಿಹಾಸವನ್ನೂ ತಿಳಿಯುವ ಪ್ರಯತ್ನ ಮಾಡಿದರು. ಅಂತಹ ಪ್ರಯತ್ನಗಳ ಫಲವಾಗಿ ಸಿದ್ಧವಾದದ್ದು ಡಾ. ಎಂ. ಚಿದಾನಂದ ಮೂರ್ತಿ ಅವರ `ಕನ್ನಡ ಶಾಸನಗಳ ಸಾಂಸ್ಕೃತಿಕ ಅಧ್ಯಯನ'.

ಇದು ಕನ್ನಡ ಸಂಶೋಧನೆಯ ದಿಕ್ಕನ್ನು ಬದಲಾಯಿಸಿತು. ಶಾಸನಗಳಲ್ಲಿ ವೀರರ, ಮಹಿಳೆಯರ, ನೋವು-ನಲಿವು, ದುಃಖ-ದುಮ್ಮೋನಗಳಿರುವುದನ್ನು ಅವರು ಗುರುತಿಸಿದರು. ಒಂದು ಕಾಲದ ಧಾರ್ಮಿಕ, ಸಾಮಾಜಿಕ, ಆರ್ಥಿಕ ಮತ್ತು ಆಡಳಿತ ವ್ಯವಸ್ಥೆಯನ್ನು ಶಾಸನಗಳು ದಾಖಲಿಸಿರುವ ಪರಿ ಕುತೂಹಲವನ್ನು ಕೆರಳಿಸುತ್ತದೆ. ದೇವಾಲಯಗಳು ಸಮಾಜದ ಅವಿಭಾಜ್ಯ ಅಂಗಗಳಾಗಿ ನಿರ್ವಹಿಸಿದ ಕಾರ್ಯವಿಧಾನ, ದೇವಾಲಯಗಳ ಮೂಲಕ ಕಲೆಗೆ ದೊರೆತ ಪ್ರೋತ್ಸಾಹ ಇತ್ಯಾದಿಗಳೆಲ್ಲದರ ವಿಚಾರಗಳನ್ನು ಸಮಗ್ರವಾಗಿ ತಿಳಿದರೆ ಮಾತ್ರ ನಾಡಿನ ಸಂಸ್ಕೃತಿಯ ದರ್ಶನವಾಗುತ್ತದೆ.


thumb|center