ಶಶಿ ಪಂಜ
| ಶಶಿ ಪಂಜ | |
|---|---|
| ಹಾಲಿ | |
| ಅಧಿಕಾರ ಸ್ವೀಕಾರ ೧೦ ಮೇ ೨೦೨೧ | |
| ರಾಜ್ಯಪಾಲ | ಜಗದೀಪ್ ಧನಕರ್ ಲಾ.ಗಣೇಶ (ಹೆಚ್ಚುವರಿ ಶುಲ್ಕ) ಸಿ.ವಿ.ಆನಂದ ಬೋಸ್ |
| ಮುಖ್ಯಮಂತ್ರಿ | ಮಮತಾ ಬ್ಯಾನರ್ಜಿ |
| ಇಲಾಖೆ | * ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಮತ್ತು ಸಮಾಜ ಕಲ್ಯಾಣ ಇಲಾಖೆ |
| ಅಧಿಕಾರ ಅವಧಿ ೨೦೧೬ – ೨೦೨೧ | |
| ರಾಜ್ಯಪಾಲ | ಕೇಸರಿ ನಾಥ್ ತ್ರಿಪಾಠಿ ಜಗದೀಪ್ ಧನಕರ್ |
| ಇಲಾಖೆ | *ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಮತ್ತು ಸಮಾಜ ಕಲ್ಯಾಣ |
| ಮುಖ್ಯಮಂತ್ರಿ | ಮಮತಾ ಬ್ಯಾನರ್ಜಿ |
| ಪೂರ್ವಾಧಿಕಾರಿ | ಸಾಬಿತ್ರಿ ಮಿತ್ರ |
| ಉತ್ತರಾಧಿಕಾರಿ | ಸ್ವತಃ (ಕ್ಯಾಬಿನೆಟ್ ಮಂತ್ರಿಯಾಗಿ) |
ಪಶ್ಚಿಮ ಬಂಗಾಳ ವಿಧಾನಸಭೆ ಸದಸ್ಯ
| |
| ಹಾಲಿ | |
| ಅಧಿಕಾರ ಸ್ವೀಕಾರ ೨೦೧೧ | |
| ಪೂರ್ವಾಧಿಕಾರಿ | ಜಿಬನ್ ಪ್ರಕಾಶ್ ಸಹಾ |
| ಮತಕ್ಷೇತ್ರ | ಶ್ಯಾಂಪುಕುರ್ |
| ವೈಯಕ್ತಿಕ ಮಾಹಿತಿ | |
| ಜನನ | 4 October 1962 ಕಲ್ಕತ್ತಾ (ಈಗ ಕೋಲ್ಕತ್ತಾ), ಪಶ್ಚಿಮ ಬಂಗಾಳ |
| ರಾಜಕೀಯ ಪಕ್ಷ | ಅಖಿಲ ಭಾರತ ತೃಣಮೂಲ ಕಾಂಗ್ರೆಸ್ |
| ಸಂಗಾತಿ(ಗಳು) | ಪ್ರಸೂನ್ ಕುಮಾರ್ ಪಂಜ |
| ಮಕ್ಕಳು | ಪೂಜಾ ಮತ್ತು ನಮ್ರತಾ |
| ವಾಸಸ್ಥಾನ | ೨೫೦ ಚಿತ್ತರಂಜನ್ ಅವೆನ್ಯೂ, ಕಲ್ಕತ್ತಾ-೭೦೦೦೦೬ |
| ಅಭ್ಯಸಿಸಿದ ವಿದ್ಯಾಪೀಠ | ಆರ್. ಜಿ. ಕರ್ ವೈದ್ಯಕೀಯ ಕಾಲೇಜು ಮತ್ತು ಆಸ್ಪತ್ರೆ |
ಶಶಿ ಪಂಜ ಇವರು ವೈದ್ಯೆ ಮತ್ತು ರಾಜಕಾರಣಿಯಾಗಿದ್ದು, ಪ್ರಸ್ತುತ ಪಶ್ಚಿಮ ಬಂಗಾಳ ಸರ್ಕಾರದ ಕೈಗಾರಿಕೆಗಳು, ವಾಣಿಜ್ಯ, ಉದ್ಯಮಗಳು ಹಾಗೂ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಮತ್ತು ಸಮಾಜ ಕಲ್ಯಾಣ ಇಲಾಖೆಯ ಕ್ಯಾಬಿನೆಟ್ ಸಚಿವರಾಗಿ ಸೇವೆ ಸಲ್ಲಿಸುತ್ತಿದ್ದಾರೆ.
ಆರಂಭಿಕ ಜೀವನ
[ಬದಲಾಯಿಸಿ]ಶಶಿ ಪಂಜರವರು ಆಂಧ್ರಪ್ರದೇಶದ ತೆನಾಲಿ ಮೂಲದ ತೆಲುಗು ಕುಟುಂಬದಲ್ಲಿ ಜನಿಸಿದರು. ಅವರ ತಂದೆ ಪಿಳ್ಳಲಮರಿ ಟಿ ಕೃಷ್ಣಯ್ಯ ಹಿಂದೂಸ್ತಾನ್ ಮೋಟಾರ್ಸ್ಛ್‌ನಲ್ಲಿ ಮುಖ್ಯ ಕೈಗಾರಿಕಾ ಎಂಜಿನಿಯರ್ ಆಗಿದ್ದರು ಮತ್ತು ಹಿಂದ್‌ಮೋಟರ್ ಪಟ್ಟಣದಲ್ಲಿ ನೆಲೆಸಿದ್ದರು. ಅವರು ಕೋಲ್ಕತ್ತಾದ ಆರ್.ಜಿ.ಕಾರ್ ವೈದ್ಯಕೀಯ ಕಾಲೇಜು ಮತ್ತು ಆಸ್ಪತ್ರೆಯಿಂದ ಅಲ್ಟ್ರಾಸೌಂಡ್ ಮತ್ತು ಬಂಜೆತನ ಅಭ್ಯಾಸದಲ್ಲಿ ಪರಿಣತಿಯೊಂದಿಗೆ ಎಂಬಿಬಿಎಸ್ ಮಾಡಿದರು. ಅವರು ಹಿರಿಯ ರಾಜಕಾರಣಿಯಾದ ಅಜಿತ್ ಕುಮಾರ್ ಪಂಜ ಅವರ ಪುತ್ರ ಪ್ರಸೂನ್ ಕುಮಾರ್ ಪಂಜ ಅವರನ್ನು ವಿವಾಹವಾದರು.[೧][೨][೩]
ರಾಜಕೀಯ ಜೀವನ
[ಬದಲಾಯಿಸಿ]ಪಂಜರವರು ೨೦೧೦ ರಲ್ಲಿ, ಕೋಲ್ಕತಾ ಮುನ್ಸಿಪಲ್ ಕಾರ್ಪೊರೇಶನ್‌ನ ಕೌನ್ಸಿಲರ್ ಆಗಿ ಆಯ್ಕೆಯಾದರು ಮತ್ತು ಶಿಕ್ಷಣದ ಉಸ್ತುವಾರಿ ಮೇಯರ್ ಕೌನ್ಸಿಲ್‌ನ ಸದಸ್ಯರಾಗಿ ನೇಮಕಗೊಂಡರು.[೪]
ಅವರು ೨೦೧೧ ರಲ್ಲಿ, ಶ್ಯಾಮ್ಪುಕುರ್ (ವಿಧಾನಸಭಾ ಕ್ಷೇತ್ರ)ನಿಂದ ಪಶ್ಚಿಮ ಬಂಗಾಳ ರಾಜ್ಯ ವಿಧಾನಸಭೆಗೆ ಆಯ್ಕೆಯಾದರು. ೨೦೧೬ ಮತ್ತು ೨೦೨೧ ರಲ್ಲಿ ಅದೇ ಕ್ಷೇತ್ರದಿಂದ ಮರು ಆಯ್ಕೆಯಾದರು.[೫]
ಡಿಸೆಂಬರ್ ೨೦೧೩ ರಲ್ಲಿ, ಅವರನ್ನು ಪಶ್ಚಿಮ ಬಂಗಾಳದ ಮಂತ್ರಿಮಂಡಲಕ್ಕೆ ರಾಜ್ಯ ಸಚಿವರಾಗಿ ಸೇರಿಸಿಕೊಳ್ಳಲಾಯಿತು ಮತ್ತು ಮಹಿಳಾ ಮತ್ತು ಮಕ್ಕಳ ಕಲ್ಯಾಣ ಸಚಿವಾಲಯದ ಸ್ವತಂತ್ರ ಉಸ್ತುವಾರಿಯನ್ನು ನೀಡಲಾಯಿತು.[೬] ಮೇ ೨೦೧೪ ರಲ್ಲಿ, ಅವರಿಗೆ ಸಮಾಜ ಕಲ್ಯಾಣ ಇಲಾಖೆಯ ಹೆಚ್ಚುವರಿ ಜವಾಬ್ದಾರಿಯನ್ನು ನೀಡಲಾಯಿತು.[೭]
೨೦೨೧ ರಲ್ಲಿ, ಅವರು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಮತ್ತು ಸಮಾಜ ಕಲ್ಯಾಣ ಇಲಾಖೆಯೊಂದಿಗೆ ಮಮತಾ ಬ್ಯಾನರ್ಜಿ ಅವರ ನಾಯಕತ್ವದಲ್ಲಿ ಪಶ್ಚಿಮ ಬಂಗಾಳ ರಾಜ್ಯದ ೨೧ ನೇ ಮಂತ್ರಿಮಂಡಲದ ಭಾಗವಾಗಿ ಕ್ಯಾಬಿನೆಟ್ ಸಚಿವರಾಗಿ ಪ್ರಮಾಣ ವಚನವನ್ನು ಸ್ವೀಕರಿಸಿದರು.
ಉಲ್ಲೇಖಗಳು
[ಬದಲಾಯಿಸಿ]- ↑ "Sashi Panja:HM's own girl". Drishtikon, 17 May 2011. 16 May 2011. Retrieved 17 July 2014.
- ↑ "Election Watch Reporter". My neta. Retrieved 17 July 2014.
- ↑ "লোকসভার নিরিখে এগিয়ে BJP, খেলা ঘোরাতে পারবেন অজিত পাঁজার পুত্রবধূ?".
- ↑ "Know Your MLA". The Telegraph. 17 May 2011. Archived from the original on 25 July 2014. Retrieved 17 July 2014.
- ↑ "General Elections, India, 2011, to the Legislative Assembly of West Bengal" (PDF). Constituency-wise Data. Election Commission. Retrieved 17 July 2014.
- ↑ "Three new ministers take oath at Raj Bhavan, state cabinet reshuffled". All India Trinamool Congress, 26 December 2013. Archived from the original on 26 ಜುಲೈ 2014. Retrieved 17 July 2014.
- ↑ "Bratya shifted to tourism, Partha new education minister, Mitra to see IT also". The Statesman. 28 May 2014. Archived from the original on 27 July 2014.