ಶಶಿಕುಮಾರ್

ವಿಕಿಪೀಡಿಯ ಇಂದ
Jump to navigation Jump to search
shashikumar
Native name
Shashikumar
ಜನನ
ಬೆಂಗಳೂರು, ಕರ್ನಾಟಕ
ರಾಷ್ಟ್ರೀಯತೆಭಾರತೀಯ
Other namesಸುಪ್ರೀಂ ಹೀರೋ
ವೃತ್ತಿನಟ, ಲೋಕಸಭಾ ಸದಸ್ಯ
ಸಂಗಾತಿಶ್ರೀಮತಿ ಸರಸ್ವತಿ

ಶಶಿಕುಮಾರ್ ಅವರು ಕರ್ನಾಟಕದ ನಟ ಮತ್ತು ರಾಜಕಾರಣಿ. ಅವರ ಅನೇಕ ಚಿತ್ರಗಳು ವಾಣಿಜ್ಯಕವಾಗಿ ಯಶಸ್ವಿವಾಗಿವೆ. ಅವರನ್ನು ಕನ್ನಡ ಚಿತ್ರೋದ್ಯಮದಲ್ಲಿ ೧೯೯೦ ರ ದಶಕದ ಪ್ರಮುಖ ನಟರಲ್ಲಿ ಒಬ್ಬರು ಎಂದು ಪರಿಗಣಿಸಲಾಗುತ್ತದೆ. ಅವರು ತಮ್ಮ ವಿಶಿಷ್ಟ ನೃತ್ಯ ಕೌಶಲಕ್ಕೆ ಹೆಸರಾಗಿದ್ದಾರೆ. ಕನ್ನಡವಷ್ಟೇ ಅಲ್ಲದೆ ಅವರು ತಮಿಳು, ತೆಲುಗು ಮತ್ತು ಹಿಂದಿ ಭಾಷೆಯ ಚಲನಚಿತ್ರಗಳಲ್ಲಿ ನಟಿಸಿದ್ದಾರೆ.[೧]

ಆರಂಭಿಕ ಜೀವನ ಮತ್ತು ವೃತ್ತಿಜೀವನ[ಬದಲಾಯಿಸಿ]

ಮೊದಲಿಗೆ ಶಶಿಕುಮಾರ್ ಎನ್ಐಐಟಿ ಸಂಸ್ಥೆಯಲ್ಲಿ ಕೆಲಸವನ್ನು ಮಾಡುತ್ತಿದ್ದರು. ಅವರ ಮೊದಲ ಚಿತ್ರವಾದ ಯುದ್ಧಕಾಂಡ 1989 ರಲ್ಲಿ ಬಿಡುಗಡೆಯಾಯಿತು. ಅದರಲ್ಲಿ ವಿ. ರವಿಚಂದ್ರನ್ ಮತ್ತು ಪೂನಮ್ ದಿಲ್ಲೋನ್ ನಟಿಸಿದ್ದರು . ನಂತರ ಅವರು ಬಾ ನನ್ನ ಪ್ರೀತಿಸು,ಗಂಧರ್ವ ಮತ್ತು [ಕೊಲ್ಲೂರ ಕಾಳ]] ದಂತಹ ಕೆಲವು ಅಯಶಸ್ವಿ ಚಿತ್ರಗಳಲ್ಲಿ ನಟಿಸಿದರು. ೧೯೯೦ ರ ರಾಣಿ ಮಹಾರಾಣಿ ಚಿತ್ರವು ಅವರನ್ನು ಯಶಸ್ವಿ ತಾರೆಯನ್ನಾಗಿಸಿತು. ನಂತರ ಅವರು ಅತ್ಯಂತ ಬೇಡಿಕೆಯ ತಾರೆಗಳಲ್ಲಿ ಒಬ್ಬರಾದರು. ಶಶಿಕುಮಾರ್ ಮತ್ತು ಮಾಲಾಶ್ರೀ ಜೋಡಿಯು ಕನ್ನಡ ಚಲನಚಿತ್ರಗಳಲ್ಲಿ ಸಾರ್ವಕಾಲಿಕ ಶ್ರೇಷ್ಠ ಜೋಡಿ ಎಂದು ಹೆಸರಾಗಿದೆ. ಇತರ ನಟಿಯರಾದ ಸುಧಾರಾಣಿ, ತಾರಾ ಮತ್ತು ಶ್ರುತಿ ಇವರುಗಳು ನಾಯಕಿಯರಾಗಿ ಅನೇಕ ಚಿತ್ರಗಳಲ್ಲಿ ಅವರೊಂದಿಗೆ ಅಭಿನಯಿಸಿದ್ದಾರೆ.[೨] ಅವರು ಅನೇಕ ತಮಿಳು ಮತ್ತು ತೆಲುಗು ಚಿತ್ರಗಳಲ್ಲಿಯೂ ನಟಿಸಿದ್ದಾರೆ. ರಜನಿಕಾಂತ್ ಅಭಿನಯದ ಬಾಷಾ ಚಲನಚಿತ್ರವು ಅವುಗಳಲ್ಲಿ ಪ್ರಮುಖವಾಗಿದೆ.


ಅಪಘಾತ ಮತ್ತು ವೃತ್ತಿಜೀವನದ ಮೇಲೆ ಅದರ ಪರಿಣಾಮ[ಬದಲಾಯಿಸಿ]

ಶಶಿಕುಮಾರ್ ಅವರನ್ನು ಸಮರ್ಥ, ಯೋಗ್ಯ ಹಾಗೂ ಸುಂದರವಾಗಿರುವ ಕೆಲವೇ ನಾಯಕನಟರಲ್ಲೊಬ್ಬರು ಎಂದು ಪರಿಗಣಿಸಲಾದ ಸಮಯದಲ್ಲಿ, ಅವರು ದುರದೃಷ್ಟಕರವಾದ ವಾಹನ ಅಪಘಾತವೊಂದಕ್ಕೆ ಒಳಗಾದರು. ಅವರು ಅನೇಕ ಶಸ್ತ್ರಚಿಕಿತ್ಸೆಗಳಿಗೆ ಒಳಗಾಗಬೇಕಾಗಿ ಬಂದು ಮುಂದೆ ದೊಡ್ಡ ಬ್ಯಾನರ್ ನ ಪ್ರಮುಖ ಪಾತ್ರಗಳಿಗೆ ಅವರನ್ನು ಪರಿಗಣಿಸಲಿಲ್ಲ. ಇದು ಅವರು ರಾಜಕೀಯಕ್ಕೆ ಧುಮುಕುವಂತೆ ಮಾಡಿತು. ಒಂದು ಸುದೀರ್ಘ ಸಮಯದ ನಂತರ, ಅವರು ಚಿತ್ರರಂಗಕ್ಕೆ ಮರಳಿ ಬಂದು ಯಜಮಾನ, ಹಬ್ಬ ಮತ್ತು ಯಾರಿಗೆ ಸಾಲುತ್ತೆ ಸಂಬಳ ರೀತಿಯ ಬಹುತಾರಾ ಚಿತ್ರಗಳಲ್ಲಿನ ಪೋಷಕ ಪಾತ್ರಗಳನ್ನು ನಿರ್ವಹಿಸಿದ್ದಾರೆ.


ರಾಜಕೀಯ ಜೀವನ[ಬದಲಾಯಿಸಿ]

ಅವರು ಚಿತ್ರದುರ್ಗ ಸಂಸತ್ ಕ್ಷೇತ್ರದಿಂದ ಸ್ಪರ್ದಿಸಿ ಯಶಸ್ವಿಯಾಗಿ ಸಂಸತ್ ಸದಸ್ಯರಾದರು.

ಆಯ್ದ ಚಲನಚಿತ್ರಗಳ ಪಟ್ಟಿ[ಬದಲಾಯಿಸಿ]

Year Film Notes
1988 ಚಿರಂಜೀವಿ ಸುಧಾಕರ ಖಳನಾಗಿ ಪ್ರವೇಶ
1989 ಯ್ಯುದ್ಧಕಾಂಡ
1990 ಮೃತ್ಯುಂಜಯ
1990 ರಾಣಿ ಮಹಾರಾಣಿ
1991 ಇಬ್ಬರು ಹೆಂಡಿರ ಮುದ್ದಿನ ಪೋಲೀಸ್
1991 ರೆಡಿಮೇಡ್ ಗಂಡ
1992 ಕನಸಿನ ರಾಣಿ
1992 ಶಾಂಭವಿ
1992 ಎದುರ್ಮನೆ ಗಂಡ ಪಕ್ಕದ್ಮನೆ ಹೆಂಡತಿ
1993 ಮುದ್ದಿನ ಮಾವ
1994 ಮುತ್ತಣ್ಣ
1994 ಸಮ್ಮಿಲನ'
1994 ಕುಂತಿಪುತ್ರ
1995 ಬಾಷಾ ತಮಿಳು ಚಿತ್ರ
1995 ತುಂಬಿದ ಮನೆ
1999 ಖಳನಾಯಕ
1999 ಸ್ನೇಹಲೋಕ
1999 ಕೂಲಿರಾಜ
2000 ಯಾರಿಗೆ ಸಾಲುತ್ತೆ ಸಂಬಳ
2000 ಯಜಮಾನ
2001 ಬಹಳ ಚೆನ್ನಾಗಿದೆ
2002 ಬಾನಲ್ಲು ನೀನೆ ಭುವಿಯಲ್ಲು ನೀನೆ
2004 ಸಾಹುಕಾರ
2007 ಶೃಂಗಾರಂ ತಮಿಳು ಚಿತ್ರ
2007 ಮಾಸ್ತಿ"
2008 ಸ್ಲಂ ಬಾಲ
2010 ಲಿಫ್ಟ್ ಕೊಡ್ಲಾ
2010 ನಾರದ ವಿಜಯ'
2010 ರಾಮೇಗೌಡ Vs ಕೃಷ್ಣರೆಡ್ಡಿ
2011 ಶ್ರೀ ನಾಗಶಕ್ತಿ
2011 ಟೇಕ್ ಇಟ್ ಈಝಿ
2012 ಸಂಗೊಳ್ಳಿ ರಾಯಣ್ಣ
2013 ಗಲಾಟೆ
2013 ವಿರಾಟ್ ತಯಾರಿಕೆಯ ಕೊನೆ ಹಂತದಲ್ಲಿದೆ
2013 ವಿಘ್ನ ಚಿತ್ರೀಕರಣ ನಡೆದಿದೆ
2013 ನಾ ಮಹಾಬುದ್ಧಿವಂತ ಘೋಷಿಸಲಾಗಿದೆ-

ಉಲ್ಲೇಖಗಳು[ಬದಲಾಯಿಸಿ]