ಶಕುಂತಲದೇವಿ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
Shakuntala Devi
Born(೧೯೨೯-೧೧-೦೪)೪ ನವೆಂಬರ್ ೧೯೨೯
DiedApril 21, 2013(2013-04-21) (aged 83)
ಬೆಂಗಳೂರು, Karnataka, India
Cause of deathRespiratory and cardiac problems
NationalityIndian
Other namesHuman computer

ಶಕುಂತಲಾ ದೇವಿ ( ಜನನ : ೧೯೩೯ , ಮರಣ ೨೦೧೩) ಸುಪ್ರಸಿದ್ಧ ಗಣಿತಜ್ಞೆ , ಜ್ಯೋತಿಷಿ, ಸಂಖ್ಯಾ ಶಾಸ್ತ್ರಜ್ಞೆ , ಎಲ್ಲಕ್ಕೂ ಮಿಗಿಲಾಗಿ ಅತ್ಯಂತ ಕಠಿಣ ಗಣಿತ ಸಮಸ್ಯೆಗಳನ್ನು ಶರವೇಗವಾಗಿ ಮನಸ್ಸಿನಲ್ಲೇ ಬಿಡಿಸಿ 'ಮಾನವ ಕಂಪ್ಯೂಟರ್' ಎಂದು ಹೆಸರಾದರು.ಇವರು ಬೆಂಗಳೂರಿನಲ್ಲಿ ೧೯೩೯ರ ನವೆಂಬರ್ ೪ರಂದು ಹುಟ್ಟಿದರು. ೨೦೧೩ರ ಏಪ್ರಿಲ್ ೨೧ರಂದು ಬೆಂಗಳೂರಿನ ತಮ್ಮ ಮನೆಯಲ್ಲಿ ತಮ್ಮ ೭೪ ನೇ ವಯಸ್ಸಿನಲ್ಲಿ ತೀರಿಕೊಂಡರು. 'ಅಸ್ಟ್ರಾಲಜಿ ಫರ್ ಯೂ', 'ಜಾಯ್ ಆಫ್ ನಂಬರ್ಸ್‌', 'ಪಜಲ್ಸ್ ಟು ಪಜಲ್ಸ್ ಯು' ಮುಂತಾದ ಪುಸ್ತಕಗಳನ್ನು ಬರೆದಿದ್ದಾರೆ. ೭,೬೮೬,೩೬೯,೭೭೪,೮೭೦ ಹಾಗೂ ೨,೪೬೫,೦೯೯,೭೪೫,೭೭೯ ಈ ಸಂಖ್ಯೆಗಳ ಗುಣಾಕಾರವನ್ನು ಕೇವಲ 28 ಸೆಕೆಂಡುಗಳಲ್ಲಿ ಸರಿಯಾದ ಉತ್ತರ ಹೇಳಿ ಗಿನ್ನೆಸ್ ದಾಖಲೆ ಸ್ಥಾಪಿಸಿದವರು.

ಜೀವನ ವೃತ್ತಾಂತ[ಬದಲಾಯಿಸಿ]

ಶಕುಂತಲಾ ದೇವಿ ಸಂಪ್ರದಾಯ ಅರ್ಚಕ ಕುಟುಂಬದಲ್ಲಿ, ಬೆಂಗಳೂರಿನಲ್ಲಿ ಹುಟ್ಟಿದ್ದಾರೆ. ತಂದೆ ಅರ್ಚಕ ಕೆಲಸವನ್ನು ಮಾಡುವುದ್ದಕ್ಕೆ ನಿರಾಕರಿಸಿ,ಒಂದು ಸರ್ಕಸ್ ಕಂಪೆನಿಯಲ್ಲಿ ಕೆಲಸಕ್ಕೆ ಸೇರಿದರು. ವೊದಲು ಸರ್ಕಸ್ನಲ್ಲಿ ಹಗ್ಗದ ಮೇಲೆ ನಡೆಯುವ ಕೆಲಸ(tight rope walk). ಆಮೇಲೆ ರಿಂಗ್ ಮಾಸ್ಟರ್ ಆಗಿದ್ದವರು. ಶಂಕುತಲಾ ದೇವಿ ಮೂರು ವರ್ಷ ವಯಸ್ಸಿನಲ್ಲೆ ತಂದೆಯ 'ಕಾರ್ಡ್ ಟ್ರಿಕ್ಕು ' ಕೆಲಸದಲ್ಲಿ ಸಹಾಯ ಮಾಡುವುದನ್ನು ಪ್ರಾರಂಭಿಸಿದರು. ಅವರ ತಂದೆ ಸರ್ಕಸನ್ನು ಬಿಟ್ಟು,ಶಕುಂತಲಾ ಅವರ ಜೊತೆ ರೋಡ್ ಷೋ (road show) ಪ್ರಾರಂಭಿಸಿದರು. ಚಿಕ್ಕ ವಯಸ್ಸಿನಲ್ಲೆ ಶಂಕುತಲಾ ಮಾಡುವ ಸಂಖ್ಯಾಮಾನ ಎಲ್ಲರಿಗೂ ಆಶ್ಚರ್ಯ ತರಿಸಿತು. ಶಂಕುತಲದೇವಿ ವಿದ್ಯೆ ಓದಿಲ್ಲದಿದ್ದರೂ,ಅವರ ಜ್ಞಾಪಕಶಕ್ತಿ ಅಪಾರವಾಗಿತ್ತು.[೨] .ಶಂಕುತಲಾ ದೇವಿ ೬ವರ್ಷ ವಯಸ್ಸಿನಲ್ಲಿ, ಮೈಸೂರು ವಿಶ್ವ ವಿದ್ಯಾನಿಲಯದಲ್ಲಿ ಪ್ರದರ್ಶನ ನೀಡಿದರು.[೩]. ಆಮೇಲೆ ೮ ವರ್ಷದ ವಯಸ್ಸಿನಲ್ಲಿ ,ಅಣ್ಣಾಮಲೈ ಯೂನಿವರ್ಷಿಟಿಯಲ್ಲಿಯೂ ಪ್ರದರ್ಶನ ನೀಡಿದ್ದರು. ೨೦೦೬ನಲ್ಲಿ 'ದಿ ವಂಡರ್ ಲಾಂಡ್ ಆಫ್ ನಂಬರ್ಸುಪುಸ್ತಕವನ್ನು ಬರೆದು, ಪ್ರಚಾರ ಮಾಡಿದ್ದಾರೆ. ಶಕುಂತಲಾ ದೇವಿ ೧೯೬೦ರ ದಲ್ಲಿ ವಿದೇಶದಿಂದ ಭಾರತ ದೇಶಕ್ಕೆ ಬಂದು, ಕಲ್ಕತ್ತಾದ, ಸೀನಿಯರು ಐ.ಎ,ಎಸ್, ಆಫೀಸರ್ ಪರಿತೋಶ್ ಬ್ಯಾನರ್ಜಿ ಅವರನ್ನು ಮದುವೆ ಮಾಡಿ ಕೊಂಡಿದ್ದಾರೆ. ಅವರಿಗೆ ಅನುಪಮ ಬ್ಯಾನರ್ಜಿ ಎಂಬ ಒಬ್ಬ ಮಗಳಿದ್ದಾಳೆ. ೧೯೮೦ರಲ್ಲಿ ಶಕುಂತಲಾ ದೇವಿ ಬೆಂಗಳೂರಿಗೆ ಬಂದು ಅಲ್ಲೆ ವಾಸಿಸಿದರು.

ಕಾರ್ಯ ಸಾಧನೆಗಳು[ಬದಲಾಯಿಸಿ]

  • ಕ್ರಿ.ಶ.೧೯೭೭ ರಲ್ಲಿ, ಅಮೆರಿಕಾ ದಲ್ಲಿ ಅವರಿಗಾಗಿ ಕಂಪ್ಯೂಟರ್ ಸ್ಪರ್ಧೆ ನಡೆಸಲಾಯಿತು. ೧೮೮೧೩೮೧೭ ದ ಘನ ಮೂಲ ಎಷ್ಟು ಎಂದು ಕೇಳಲಾಗಿ ಅವರು ಕಂಪ್ಯೂಟರ್ ಗಿಂತ ವೊದಲೆ ಉತ್ತರ ಕೊಟ್ಟು,ಅದನ್ನು ಸೋಲಿಸಿದ್ದಾರೆ. ಸದರನ್ ಮೆಥೊಡಿಸ್ಟ್ ಯೂನಿವರ್ಸಿಟಿ (southern Methodist university)ಯಲ್ಲಿ ೨೦೧ ಅಂಕಗಳಿದ್ದ ಸಂಖ್ಯೆಗೆ ೨೩ ವರ್ಗಮೂಲವನ್ನು ಕಳೆದಾಗ ೫೦ ಸೆಕಂಡುಗಳೊಳಗೆ ಅವರು ಉತ್ತರ ಕೊಟ್ಟಿದಾರೆ [೪]. ಅವರು ಹೇಳಿದ ಸಮಾಧಾನ ೫೪೬,೩೭೨,೮೯೧. ಸಮಾಧಾನ ಸರಿ(right)ಯಾಗಿದೆ ಎಂದು, ಯು.ಎಸ್.ಬ್ಯೂರು ಆಫ್ ಸ್ಟಾಂಡರ್ಡ್(U.S.Bureau os Standards)ನಲ್ಲಿದ್ದ ಯೂನಿವಕ್ ೧೧೦೧(univac 1101)ಕಂಪ್ಯೂಟರ್ಗೆ ಪ್ರತ್ಯೇಕವಾದ ಪ್ರೋಗ್ರಾಮ್ ಕೊಟ್ಟು ರೂಢಿ ಮಾಡಲಾಗಿದೇ[೫].
  • ೧೮,ಜೂನ್,೧೯೮೦ ರಲ್ಲಿ, ಕಂಪ್ಯೂಟರ್ ಡಿಪಾರ್ಟ್ಮೆಂಟ್, ಇಂಫಿರಿಯಲ್ ಕಾಲೇಜ್, ಲಂಡನ್ನನಲ್ಲಿ ೧೩ ಅಂಕೆಗಳಿದ್ದ ಎರಡು ಸಂಖ್ಯೆಗಳಾದ ೭,೬೮೬,೩೬೯,೭೭೪,೮೭೦X೨,೪೬೫,೦೯೯,೭೪೫,೭೭೯ ರ ಗುಣಕಾರವನ್ನು ಕೇಳಲಾಗಿದೆ. ೨೮ ಸೆಕಂಡುಗಳಲ್ಲಿ ಅದರ ಸರಿಯಾದ ಉತ್ತರ ೧೮,೯೪೭,೬೬೮,೧೭೭,೯೯೫,೪೨೬,೪೬೨,೭೭೩,೭೩೦ ವನ್ನು ಹೇಳಿದ್ದಾರೆ [೬].ಇದನ್ನು ಗಿನ್ನೀಸ್ ಆಫ್ ವರ್ಡ್ಲ ರೆಕಾರ್ಡ್ಎಂದು ನಮೂದು ಮಾಡಲಾಗಿದೆ.

ನಿಧನ[ಬದಲಾಯಿಸಿ]

ಏಪ್ರಿಲ್ ೧೮,೧೯೮೦, ಉದಯಕಾಲ ೮:೧೫ಕ್ಕೆ ಬೆಂಗಳೂರಿನ ಆಸ್ಪತ್ರೆಯಲ್ಲಿ ದೈವಾಧೀನರಾದರು. ಮೂತ್ರಪಿಂಡ ತೊಂದರೆ ಮತ್ತು ಶ್ವಾಸೋಚ್ಛ್ವಾಸ ಕಾಯಿಲೆಯ ಕಾರಣದಿಂದಾಗಿ ನರಳುತ್ತಿದ್ದ ಅವರನ್ನು ಏಪ್ರಿಲ್ ೩ರಂದು ಆಸ್ಪತ್ರೆಗೆ ಸೇರಿಸಲಾಗಿತ್ತು. <ref"Shakuntala Devi strove to simplify maths for students". The Hindu. April 21, 2013.</ref>.

ಬರೆದ ಪುಸ್ತಕಗಳು[ಬದಲಾಯಿಸಿ]

some of her books include:

ನೋಡಿ[ಬದಲಾಯಿಸಿ]

ಶಕುಂತಲಾ ದೇವಿ ಫೋಟೋಗಾಗಿ ಮತ್ತು ಹೆಚ್ಚಿನ ವಿವರಕ್ಕಾಗಿ

ಉಲ್ಲೇಖನಗಳು[ಬದಲಾಯಿಸಿ]

  1. http://indiankanoon.org/doc/153999/
  2. "ಆರ್ಕೈವ್ ನಕಲು". Archived from the original on 2013-05-07. Retrieved 2013-06-01.
  3. "Shakuntala Devi". knowyourstar.com. Archived from the original on 7 ಜನವರಿ 2013. Retrieved 01 Jan 2013. {{cite web}}: Check date values in: |accessdate= (help)
  4. Arthur R. Jensen, "Speed of Information Processing in a Calculating Prodigy Archived 2013-11-04 ವೇಬ್ಯಾಕ್ ಮೆಷಿನ್ ನಲ್ಲಿ.",University of California, Berkeley. INTELLIGENCE 14, 259-274 (1990)
  5. Smith, S.B. The great mental calculators, Columbia Un. Press (1983)
  6. Shakuntala Devi, ‘Human Computer’ Who Bested the Machines, Dies at 83, NY Times, April 23, 2013
  7. "The Sunday Tribune - Spectrum - Literature". Tribuneindia.com. April 20, 2003. Retrieved July 11, 2012.
  8. Devi, Shakuntala (March 1, 2005). "Astrology for You". ISBN 978-81-222-0067-6. {{cite journal}}: Cite journal requires |journal= (help)