ವಿಷಯಕ್ಕೆ ಹೋಗು

ವ್ಯಂಗ್ಯ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ಅದರ ಅತ್ಯಂತ ವಿಶಾಲ ಅರ್ಥದಲ್ಲಿ ವ್ಯಂಗ್ಯವು (ಕುಹಕ) ಅಲಂಕಾರಿಕ ಸಾಧನ, ಸಾಹಿತ್ಯಿಕ ತಂತ್ರ, ಅಥವಾ ಮೇಲೆ ಏನಿದೆ ಎಂದು ಕಾಣುತ್ತದೆಯೊ, ವಾಸ್ತವದಲ್ಲಿ ಅದರಿಂದ ಸಂಪೂರ್ಣವಾಗಿ ಬೇರೆಯಾಗಿರುವ ಘಟನೆ. ವ್ಯಂಗ್ಯವನ್ನು ಭಿನ್ನ ಪ್ರಕಾರಗಳಾಗಿ ವರ್ಗೀಕರಿಸಬಹುದು: ಶಾಬ್ದಿಕ ವ್ಯಂಗ್ಯ, ನಾಟಕೀಯ ವ್ಯಂಗ್ಯ, ಮತ್ತು ಸಾಂದರ್ಭಿಕ ವ್ಯಂಗ್ಯ. ಶಾಬ್ದಿಕ, ನಾಟಕೀಯ, ಮತ್ತು ಸಾಂದರ್ಭಿಕ ವ್ಯಂಗ್ಯವನ್ನು ಹಲವುವೇಳೆ ಸತ್ಯದ ಪ್ರತಿಪಾದನೆಯಲ್ಲಿ ಒತ್ತುಕೊಡಲು ಬಳಸಲಾಗುತ್ತದೆ. ಕಟಕಿಯಲ್ಲಿ ಬಳಸಲಾದ ಉಪಮೆಯ ವ್ಯಂಗ್ಯಾತ್ಮಕ ರೂಪ, ಮತ್ತು ಸೌಮ್ಯೋಕ್ತಿಯ ಕೆಲವು ರೂಪಗಳು, ಸತ್ಯದ ವಿರುದ್ಧವನ್ನು ಹೇಳುವ, ಸತ್ಯದ ವಿರುದ್ಧವನ್ನು ನಿರಾಕರಿಸುವ, ಅಥವಾ ವಾಸ್ತವಿಕ ಸಂಬಂಧವನ್ನು ತೀವ್ರವಾಗಿ ಹಾಗೂ ನಿಸ್ಸಂಶಯವಾಗಿ ಕಡಿಮೆಮಾಡಿ ಹೇಳುವ ಭಾಷೆಯ ಉದ್ದೇಶಪೂರ್ವಕ ಬಳಕೆಯ ಮೂಲಕ ಒಬ್ಬರ ಅರ್ಥವನ್ನು ಒತ್ತಿ ಹೇಳಬಹುದು.[] ವ್ಯಂಗ್ಯಾತ್ಮಕ ಹೇಳಿಕೆಯು ಸಾಮಾನ್ಯವಾಗಿ ಒಂದು ದೃಷ್ಟಿಕೋನ ಅಥವಾ ಮೌಲ್ಯಮಾಪನದ ಪ್ರಕಟ ಅಭಿವ್ಯಕ್ತಿಯನ್ನು ಒಳಗೊಳ್ಳುತ್ತದೆ, ಆದರೆ ವಕ್ತೃವು ಉದ್ದೇಶಿಸುವ ಒಟ್ಟಾರೆ ಮಾತು-ಸಂದರ್ಭದಲ್ಲಿ ಬಹಳ ಭಿನ್ನ, ಮತ್ತು ಹಲವುವೇಳೆ ವಿರುದ್ಧವಾದ, ದೃಷ್ಟಿಕೋನ ಅಥವಾ ಮೌಲ್ಯಮಾಪನದ ಲಕ್ಷಣಗಳೊಂದಿಗೆ.

ಉಲ್ಲೇಖಗಳು

[ಬದಲಾಯಿಸಿ]


"https://kn.wikipedia.org/w/index.php?title=ವ್ಯಂಗ್ಯ&oldid=890361" ಇಂದ ಪಡೆಯಲ್ಪಟ್ಟಿದೆ