ವೈ ಎಸ್ ವಿ ದತ್ತಾ
Y. S. V. Datta | |
---|---|
MLA from Kadur
| |
ಅಧಿಕಾರ ಅವಧಿ 2013 – 2018 | |
Member of Legislative council
| |
ಅಧಿಕಾರ ಅವಧಿ 2006 – 2012 | |
ವೈಯಕ್ತಿಕ ಮಾಹಿತಿ | |
ಜನನ | 24th June, 1954 Yagati, Kadur Taluk, Chikmagalur District |
ರಾಜಕೀಯ ಪಕ್ಷ | Janata Dal (Secular) |
ಸಂಗಾತಿ(ಗಳು) | Smt. R. Nirmala |
ಮಕ್ಕಳು | 1 |
ವಾಸಸ್ಥಾನ | Chikmagalur, Karnataka, India |
ವೈ ಎಸ್ ವಿ ದತ್ತ ಕರ್ನಾಟಕದ ರಾಜಕಾರಣಿ. ಇವರ ಪೂರ್ಣ ಹೆಸರು ಯಗಟಿ ಸೂರ್ಯನಾರಾಯಣ ವೆಂಕಟೇಶ ದತ್ತ. ಬಿಎಸ್‍ಸಿ ಪದವೀಧರರಾದ ದತ್ತಾರವರು ಗಣಿತ ಮತ್ತು ಭೌತಶಾಸ್ತ್ರದ ಅದ್ಯಾಪಕರಾಗಿಯೂ ಸೇವೆ ಸಲ್ಲಿಸಿದ್ದಾರೆ. [೧]
ಸಮಾಜ ಸೇವೆ
[ಬದಲಾಯಿಸಿ]ಬಡವರ , ರೈತರ, ಕನ್ನಡ ಪರ ಹೋರಾಟಗಳಲ್ಲಿ ಸಕ್ರಿಯರಾಗಿ ಹೋರಾಡಿದ ಅವರು ಜನತಾದಳ (ಜಾತ್ಯಾತೀತ) ಸಮಾಜವಾದಿ ಚಿಂತನೆಯುಳ್ಳ ಅವರು ಸರಳತೆ ಮತ್ತು ಸಜ್ಜನಿಕೆಯ ರಾಜಕೀಯ ವ್ಯಕ್ತಿ.
ರಾಜಕೀಯ
[ಬದಲಾಯಿಸಿ]೨೦೧೩ ರಲ್ಲಿ ಕರ್ನಾಟಕ ವಿಧಾನಸಭೆ ಚುನಾವಣೆಯಲ್ಲಿ ದತ್ತ ಅವರು ಕಡೂರು ಕ್ಷೇತ್ರದಿಂದ ಶಾಸನಸಭಾ ಸದಸ್ಯರಾಗಿ ಆಯ್ಕೆಯಾಗಿದ್ದರು. ಹಿಂದೆ ವಿಧಾನ ಪರಿಶತ್ತಿನ ಸದಸ್ಯರಾಗಿಯೂ ಸೇವೆ ಸಲ್ಲಿಸಿದ್ದರು. ಜನಪ್ರತಿನಿಧಿಯಾಗಿ ಎಂಎಲ್‍ಎ, ಎಂಎಲ್ಸಿ ಮತ್ತು ಜೆಡಿಎಸ್ ಶಾಸಕಾಂಗ ಪಕ್ಷದ ಉಪನಾಯಕರಾಗಿಯೂ, ಪಕ್ಷದಲ್ಲಿ ಅಧಿಕೃತ ವಕ್ತಾರರಾಗಿಯೂ ಸೇವೆ ಸಲ್ಲಿಸಿದ್ದಾರೆ. ಕಡೂರು ಕ್ಷೇತ್ರದಿಂದ ೨೦೧೩ರಲ್ಲಿ ಶಾಸಕರಾಗಿ ಚುನಾಯಿತರಾದವರು ವಿಧಾನಸಭೆಯಲ್ಲಿ ಜೆಡಿಎಸ್ ಶಾಸಕಾಂಗ ಪಕ್ಷದ ಉಪ ನಾಯಕ ಸ್ಥಾನ, ಎಂಎಲ್ಎ, ಎಂಎಲ್ಸಿ, ಪಕ್ಷ ವಕ್ತಾರ ಸ್ಥಾನಗಳನ್ನು ಪಡೆದಿದ್ದರು. ೨೦೧೮ ರ ವಿಧಾನಸಭಾ ಚುನಾವಣೆಯಲ್ಲಿ ಕಡೂರು ಕ್ಷೇತ್ರದಿಂದ ಜೆಡಿಎಸ್ ಅಭ್ಯರ್ಥಿಯಾಗಿ ಸ್ಪರ್ಧಿಸಿದ್ದ ಅವರು ಸೋಲನುಭವಿಸಿದ್ದರು. ತಾವು ಇಪ್ಪತ್ತನೇ ವಯಸ್ಸಿನಲ್ಲಿ ಸಮಾಜವಾದಿ ಪಕ್ಷದೊಳಗೆ ಬಂದಿದ್ದು, ರಾಮಕೃಷ್ಣ ಹೆಗಡೆ ಹಾಗೂ ದೇವೇಗೌಡರ ಮಧ್ಯೆ ಅಸಮಾಧಾನ ಬಂದಾಗ ಜಾತಿ ನೋಡದೆ ಗೌಡರ ಜತೆ ನಿಂತಿದ್ದಾಗಿಯೂ ಅದಕ್ಕೆ ಸೈದ್ಧಾಂತಿಕ ಕಾರಣ ಇರುವುದಾಗಿಯೂ ಹೇಳುತ್ತಾರೆ. [೨]
ಉಲ್ಲೇಖ
[ಬದಲಾಯಿಸಿ]