ವಿಷಯಕ್ಕೆ ಹೋಗು

ವೈಶಾಲಿ ರಮೇಶ್ ಬಾಬು

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
ವೈಶಾಲಿ ರಮೇಶ್ ಬಾಬು
2025ರಲ್ಲಿ ವೈಶಾಲಿ
ದೇಶ ಭಾರತ
ಹುಟ್ಟಿದ. (2001-06-21) 21 ಜೂನ್ 2001 (ವಯಸ್ಸು 23)   ಚೆನ್ನೈ, ತಮಿಳುನಾಡು, ಭಾರತ
ಶೀರ್ಷಿಕೆ ಗ್ರ್ಯಾಂಡ್ ಮಾಸ್ಟರ್ (2024)
ಫಿಡೆ ರೇಟಿಂಗ್ 2476 (ಫೆಬ್ರವರಿ 2025)
ಗರಿಷ್ಠ ರೇಟಿಂಗ್  2506 (ಆಗಸ್ಟ್ 2024)

ವೈಶಾಲಿ ರಮೇಶ್ ಬಾಬು (ಜನನ 21 ಜೂನ್ 2001) ಒಬ್ಬ ಭಾರತೀಯ ಚೆಸ್ ಗ್ರ್ಯಾಂಡ್ ಮಾಸ್ಟರ್[][]. ಅವರು 2023ರ ಮಹಿಳಾ ಗ್ರ್ಯಾಂಡ್ ಸ್ವಿಸ್ ಪಂದ್ಯಾವಳಿಯಲ್ಲಿ ವಿಜಯಶಾಲಿಯಾಗಿ ಹೊರಹೊಮ್ಮಿ, 2024ರ ಮಹಿಳಾ ಅಭ್ಯರ್ಥಿಗಳ ಪಂದ್ಯಾವಳಿಗೆ ಅರ್ಹತೆ ಪಡೆದರು. 2024 ರ ಮಹಿಳಾ ವಿಶ್ವ ಬ್ಲಿಟ್ಜ್ ಚೆಸ್ ಚಾಂಪಿಯನ್ಶಿಪ್ ಅವರು ಕಂಚಿನ ಪದಕ ಗೆದ್ದರು. ಆಕೆ ಚೆಸ್ ಗ್ರ್ಯಾಂಡ್ ಮಾಸ್ಟರ್ ಪ್ರಜ್ಞಾನಂದ ಅವರ ಹಿರಿಯ ಸಹೋದರಿ.[]

ವೈಯಕ್ತಿಕ ಜೀವನ

[ಬದಲಾಯಿಸಿ]

ವೈಶಾಲಿ ಅವರು 2001ರ ಜೂನ್ 21ರಂದು ತಮಿಳುನಾಡಿನ ಚೆನ್ನೈನಲ್ಲಿ ಜನಿಸಿದರು. ಆಕೆಯ ತಂದೆ ರಮೇಶ್ ಬಾಬು ಟಿಎನ್ಎಸ್ಸಿ ಬ್ಯಾಂಕಿನಲ್ಲಿ ಬ್ರಾಂಚ್ ಮ್ಯಾನೇಜರ್ ಆಗಿ ಕೆಲಸ ಮಾಡುತ್ತಾರೆ[]. ಇವರ ತಾಯಿ ನಾಗಲಕ್ಷ್ಮಿ ಅವರು ಗೃಹಿಣಿ.[]. ಆಕೆಯ ಕಿರಿಯ ಸಹೋದರ ಆರ್ ಪ್ರಜ್ಞಾನಂದ ಕೂಡ ಚೆಸ್ ಗ್ರ್ಯಾಂಡ್ ಮಾಸ್ಟರ್ ಆಗಿದ್ದಾರೆ.

ವೃತ್ತಿಜೀವನ

[ಬದಲಾಯಿಸಿ]

ವೈಶಾಲಿ ಅವರು 2012ರಲ್ಲಿ 12 ವರ್ಷದೊಳಗಿನ ಬಾಲಕಿಯರ ವಿಶ್ವ ಯುವ ಚೆಸ್ ಚಾಂಪಿಯನ್ಶಿಪ್ ಮತ್ತು 2015ರಲ್ಲಿ 14 ವರ್ಷದೊಳಗಿನ ಬಾಲಕಿಯರ ವಿಶ್ವ ಯುವ ಚೆಸ್ನ ಚಾಂಪಿಯನ್ಶಿಪ್ ಗೆದ್ದರು []. 2013 ರಲ್ಲಿ ತಮ್ಮ 12 ನೇ ವಯಸ್ಸಿನಲ್ಲಿ ಮುಂದೆ ವಿಶ್ವ ಚೆಸ್ ಚಾಂಪಿಯನ್ ಆದ ಮ್ಯಾಗ್ನಸ್ ಕಾರ್ಲ್ಸನ್ ಅವರನ್ನು ಸೋಲಿಸಿದರು, ಇದು ವೈಶಾಲಿ ಅವರ ತವರು ನಗರವಾದ ಚೆನ್ನೈನಲ್ಲಿ ವಿಶ್ವ ಚೆಸ್ ಚ್ಯಾಂಪಿಯನ್ಶಿಪ್ 2013 ಕ್ಕೋಸ್ಕರ ನಡೆದ ಸಿಮುಲ್ ಸ್ಪರ್ಧೆ ಆಗಿತ್ತು[][]

2016ರಲ್ಲಿ ಅವರು ವುಮನ್ ಇಂಟರ್ನ್ಯಾಷನಲ್ ಮಾಸ್ಟರ್ (WIM) ಶ್ರೇಣಿಯನ್ನು ಪಡೆದರು. ಅಕ್ಟೋಬರ್ 2016ರ ಹೊತ್ತಿಗೆ ಆಕೆ ವಿಶ್ವ ಮಹಿಳಾ ಚೆಸ್ ರ್ಯಾಂಕಿಂಗಿನಲ್ಲಿ ಭಾರತದ ಎರಡನೇ ಸ್ಥಾನ ಮತ್ತು ವಿಶ್ವ ಅಂಡರ್ ೧೬ ರ್ಯಾಂಕಿಂಗಿನಲ್ಲಿ ಹನ್ನೆರಡನೆಯ ಸ್ಥಾನ ಪಡೆದ ಆಟಗಾರ್ತಿಯಾಗಿದ್ದರ್. ಆ ಸಮಯದಲ್ಲಿ ಆಕೆ ಚೆಸ್ ರೇಟಿಂಗ್ ಆದ 2300 ರ ಎಲೋ ರೇಟಿಂಗ್ ಹೊಂದಿದ್ದರು.

ಅವರು 12 ಆಗಸ್ಟ್ 2018 ರಂದು ಲಾಟ್ವಿಯಾದ ರಿಗಾದಲ್ಲಿ ನಡೆದ ರಿಗಾ ಟೆಕ್ನಿಕಲ್ ಯೂನಿವರ್ಸಿಟಿ ಓಪನ್ ಚೆಸ್ ಪಂದ್ಯಾವಳಿಯಲ್ಲಿ ಮಹಿಳಾ ಗ್ರ್ಯಾಂಡ್ ಮಾಸ್ಟರ್ (ಡಬ್ಲ್ಯುಜಿಎಂ) ಶ್ರೇಣಿಗೆ ಏರಲು ಬೇಕಾದಷ್ಟು ಅಂಕಗಳನ್ನು ಸಂಪಾದಿಸುವ ಈ ಶ್ರೇಣಿಯನ್ನು ಪಡೆದರು.[]

ವೈಶಾಲಿ ಅವರು ಆನ್ಲೈನ್ ಒಲಿಂಪಿಯಾಡ್ 2020 ರಲ್ಲಿ ಚಿನ್ನದ ಪದಕ ಗೆದ್ದ ಭಾರತೀಯ ತಂಡದ ಭಾಗವಾಗಿದ್ದರು[]. ಈ ಸ್ಪರ್ಧೆಯಲ್ಲಿ ಭಾರತವು ತನ್ನ ಮೊದಲ ಪದಕವನ್ನು ಗೆದ್ದುಕೊಂಡಿದ್ದು ೨೦೨೦ರಲ್ಲೇ ಆಗಿತ್ತು .[೧೦]

ಆಕೆ 2021ರಲ್ಲಿ ಇಂಟರ್ನ್ಯಾಷನಲ್ ಮಾಸ್ಟರ್ (ಐಎಂಎಂ) ಶ್ರೇಣಿಯನ್ನು ಪಡೆದರು. 2022ರಲ್ಲಿ, ವೈಶಾಲಿ 8ನೇ ಫಿಶರ್ ಸ್ಮಾರಕ ಪಂದ್ಯಾವಳಿಯ ಪ್ರಶಸ್ತಿಯನ್ನು ಗೆದ್ದರು. ಇಲ್ಲಿ ಈಕೆ 7.0/9 ಅಂಕಗಳನ್ನು ಗಳಿಸಿ ತಮ್ಮ ಎರಡನೇ ಗ್ರ್ಯಾಂಡ್ ಮಾಸ್ಟರ್ ಮಾನದಂಡವನ್ನು ಪಡೆದರು .[೧೧][೧೨][೧೩][೧೪][೧೫]

ವೈಶಾಲಿ ಅವರನ್ನು ಫಿಡೆ ಮಹಿಳಾ ಸ್ಪೀಡ್ ಚೆಸ್ ಚಾಂಪಿಯನ್ಶಿಪ್ 2022 ರಲ್ಲಿ ಭಾಗವಹಿಸಲು ಆಹ್ವಾನಿಸಲಾಯಿತು.[೧೬] ಅಲ್ಲಿ ಅವರು ಮಹಿಳಾ ವಿಶ್ವ ಬ್ಲಿಟ್ಜ್ ಚೆಸ್ ಚಾಂಪಿಯನ್ ಬಿಬಿಸಾರಾ ಅಸ್ಸೌಬಯೇವಾ ಅವರನ್ನು 16 ರ ಸುತ್ತಿನಲ್ಲಿ ಸೋಲಿಸಿದರು[೧೭]. ಇವರು ಕ್ವಾರ್ಟರ್ ಫೈನಲ್ನಲ್ಲಿ ಭಾರತದವರೇ ಆದ ಹರಿಕಾ ದ್ರೋಣವಲ್ಲಿ ಅವರನ್ನು ಸೋಲಿಸಿದರು.[೧೮][೧೮]

ವೈಶಾಲಿ 2022ರ ಜುಲೈ-ಆಗಸ್ಟ್ನಲ್ಲಿ ಚೆನ್ನೈನ ಮಾಮಲ್ಲಪುರಂನಲ್ಲಿ ನಡೆದ 44ನೇ ಚೆಸ್ ಒಲಿಂಪಿಯಾಡ್ ಮಹಿಳಾ ವಿಭಾಗದಲ್ಲಿ 3ನೇ ಬೋರ್ಡ್ನಲ್ಲಿ ಆಡಿದರು. ಭಾರತದ ಮಹಿಳಾ ತಂಡವು ಈ ಪಂದ್ಯಾವಳಿಯಲ್ಲಿ ಕಂಚಿನ ಪದಕವನ್ನು ಗೆದ್ದುಕೊಂಡಿತು . ಇಲ್ಲಿ ವೈಶಾಲಿ ಅವರೂ ೩ ನೇ ಬೋರ್ಡಿಗೆ ವೈಯಕ್ತಿಕ ಕಂಚಿನ ಪದಕವನ್ನು ಪಡೆದರು.

ವೈಶಾಲಿ ಟಾಟಾ ಸ್ಟೀಲ್ ಚಾಲೆಂಜರ್ಸ್ 2023 ಪಂದ್ಯಾವಳಿಯಲ್ಲಿ ಆಡಿದರು. ಇಲ್ಲಿ ಇವರು 4.5/14 ಸ್ಕೋರ್ ಮಾಡಿದರು . ಇಲ್ಲಿ ಎರಡು 2600 ಕ್ಕಿಂತ ಹೆಚ್ಚಿನ ಶ್ರೇಯಾಂಕಿತ ಜಿಎಂಗಳಾದ ಲೂಯಿಸ್ ಪಾಲೊ ಸುಪಿ ಮತ್ತು ಜೆರ್ಗುಸ್ ಪೆಚಾಕ್ ಅವರನ್ನು ಸೋಲಿಸಿದರು. ಈ ಪಂದ್ಯಾವಳಿಯಲ್ಲಿ ವೈಶಾಲಿ ಅವರು ಒಟ್ಟಾರೆ ಶ್ರೇಯಾಂಕಗಳಲ್ಲಿ ಹನ್ನೆರಡನೇ ಸ್ಥಾನವನ್ನು ಗಳಿಸಿದರು. .[೧೯]

ಕತಾರ್ ಮಾಸ್ಟರ್ಸ್ ಓಪನ್ 2023 ರಲ್ಲಿ ವೈಶಾಲಿ 5/9 ಅಂಕ ಗಳಿಸಿದರು. ಈ ಪಂದ್ಯಾವಳಿಯ ಪ್ರದರ್ಶನದ ಆದಾರದ ಮೇಲೆ 2609 ಶ್ರೇಯಾಂಕ ಗಳಿಸಿದ ಇವರು ತಮ್ಮ ಅಂತಿಮ ಜಿಎಂ ಮಾನದಂಡವನ್ನು ಪಡೆದರು.[೨೦] ಇದರಲ್ಲಿ ಭಾರತದವರೇ ಆದ ದಿವ್ಯಾ ದೇಶ್ಮುಖ್ ಅವರಿಗಿಂತ ಉತ್ತಮ ಟೈಬ್ರೇಕ್ ಅಂಕಗಳನ್ನು ಗಳಿಸಿದ್ದಕ್ಕಾಗಿ ಪಂದ್ಯಾವಳಿಯಲ್ಲಿ ಅಗ್ರಸ್ಥಾನ ಪಡೆದ ಮಹಿಳಾ ಸ್ಪರ್ಧಿ ಎಂಬ ಬಹುಮಾನವನ್ನು ಗೆದ್ದರು.[೨೧]

ವೈಶಾಲಿ ಐಲ್ ಆಫ್ ಮ್ಯಾನ್ ನಲ್ಲಿ ನಡೆದ ಫಿಡೆ ಮಹಿಳಾ ಗ್ರ್ಯಾಂಡ್ ಸ್ವಿಸ್ 2023 ಪಂದ್ಯಾವಳಿಯಲ್ಲಿ ಒಂದೇ ಒಂದು ಪಂದ್ಯವನ್ನು ಸೋಲದೆ 8.5/11 ಅಂಕಗಳನ್ನು ಗಳಿಸುವ ಮೂಲಕ ಗೆದ್ದರು. ಈ ಗೆಲುವಿನ ಮೂಲಕ ಕೆನಡಾದ ಟೊರೊಂಟೊದಲ್ಲಿ ನಡೆಯುವ 2024 ರ ಮಹಿಳಾ ಅಭ್ಯರ್ಥಿಗಳ ಪಂದ್ಯಾವಳಿಯಲ್ಲಿ ಸ್ಪರ್ಧಿಸಲು ಅರ್ಹತೆ ಪಡೆದರು [೨೨][೨೩]. ಆಕೆ ಮತ್ತು ಆಕೆಯ ಕಿರಿಯ ಸಹೋದರ ಪ್ರಜ್ಞಾನಂದ ಅವರು ಈ ಸ್ಪರ್ಧೆಗೆ ತಮ್ಮ ತಮ್ಮ ವಿಭಾಗಗಳಲ್ಲಿ ಅರ್ಹತೆ ಪಡೆದ ಮೊದಲ ಅಕ್ಕ-ತಮ್ಮನ ಜೋಡಿಯಾದರು.[೨೪]

ಡಿಸೆಂಬರ್ನಲ್ಲಿ ಸ್ಪೇನ್ನಲ್ಲಿ ನಡೆದ IV ಎಲ್ ಲೊಬ್ರೆಗಟ್ ಓಪನ್ ಟೂರ್ನಮೆಂಟ್ 2023ರಲ್ಲಿ ವೈಶಾಲಿ 2500 ಎಲೋ ರೇಟಿಂಗ್ ಮಿತಿಯನ್ನು ದಾಟಿ ಗ್ರ್ಯಾಂಡ್ ಮಾಸ್ಟರ್ ಶ್ರೇಣಿಗೆ ಬೇಕಾದ ಎಲ್ಲಾ ಅವಶ್ಯಕತೆಗಳನ್ನು ಪೂರೈಸಿದರು . ಇವರು ಹೀಗೆ ಮಾಡಿದ ಭಾರತದ ಮೂರನೇ ಮಹಿಳೆ ಮತ್ತು 84ನೇ ವ್ಯಕ್ತಿಯಾದರು.[೨೫][೨೫]

ಜನವರಿ 21,2024 ರಂದು ಭಾರತ ಚೆಸ್ ಒಕ್ಕೂಟವು ವೈಶಾಲಿಯ ಪರವಾಗಿ ಫಿಡೆ ಗ್ರಾಂಡ್ ಮಾಸ್ಟರ್ ಶ್ರೇಣಿಯನ್ನು ನಿರ್ವಹಿಸುವ ಫಿಡೆ ಅರ್ಹತಾ ಸಮಿತಿಗೆ ಗ್ರ್ಯಾಂಡ್ ಮಾಸ್ಟರ್ ಶೀರ್ಷಿಕೆಗಾಗಿ ಅರ್ಜಿಯನ್ನು ಸಲ್ಲಿಸಿತು.[೨೬]

2025ರ ಜನವರಿ 22ರ ವೇಳೆಗೆ ಆಕೆಯ ಶ್ರೇಯಾಂಕವು 2476 ಆಗಿದೆ.

ಪ್ರಶಸ್ತಿಗಳು

[ಬದಲಾಯಿಸಿ]

ರಾಷ್ಟ್ರೀಯ

[ಬದಲಾಯಿಸಿ]

ಉಲ್ಲೇಖಗಳು

[ಬದಲಾಯಿಸಿ]
  1. "Vaishali, Rameshbabu". ratings.fide.com. Retrieved 2024-04-09.
  2. "FIDE Title Application (GM)" (PDF).
  3. "Vaishali and Praggnanandhaa make history as the first-ever brother-sister duo to become Grandmasters". The Indian Express (in ಇಂಗ್ಲಿಷ್). 2023-12-02. Retrieved 2023-12-04.
  4. Susan Ninan (1 July 2018). "Praggnanandhaa: The boy who could be king". ESPN.
  5. Susan Ninan (2 December 2023). "The Indian siblings taking the chess world by storm". BBC.
  6. "Rameshbabu Praggnanandhaaa celebrity xyz page". Retrieved 29 December 2019.
  7. ೭.೦ ೭.೧ "Carlsen happy with arrangements for World Championship match". The Times of India. 2013-08-19. ISSN 0971-8257. Retrieved 2023-10-21.
  8. "R. Vaishali becomes Grand Master". 13 August 2018. Retrieved 29 December 2019.
  9. "The entire Gold medal winning Indian team from Online Olympiad 2020 interviewed by ChessBase India - ChessBase India". www.chessbase.in. 2020-09-18. Retrieved 2022-06-04.
  10. "The Triumph of the twelve brave Olympians - ChessBase India". www.chessbase.in. 2020-08-30. Retrieved 2022-06-04.
  11. "Vaishali triumphs at 8th Fischer Memorial 2022, scores her second GM-norm - ChessBase India". www.chessbase.in. 2022-05-04. Retrieved 2022-05-06.
  12. "Asian champ Vaishali sets her sight at Grand Master title". Business Standard India. Press Trust of India. 2017-05-24. Retrieved 2022-05-06.
  13. Rao, Rakesh (4 May 2022). "Fischer Memorial: Vaishali makes second GM norm, wins title". Sportstar (in ಇಂಗ್ಲಿಷ್). Retrieved 2022-05-06.
  14. News9 Staff (2022-05-04). "Indian woman grandmaster R Vaishali secures 2nd GM norm by winning Greek chess event". NEWS9LIVE (in ಇಂಗ್ಲಿಷ್). Archived from the original on 6 May 2022. Retrieved 2022-05-06.{{cite web}}: CS1 maint: numeric names: authors list (link)
  15. "Vaishali triumphs at 8th Fischer Memorial 2022, scores her second GM-norm - ChessBase India". www.chessbase.in. 2022-05-04. Retrieved 2022-05-06.
  16. Vaishali Rameshbabu Wins Women's Speed Chess Championship Qualifier #2 (in ಇಂಗ್ಲಿಷ್), 30 May 2021, retrieved 2023-09-27
  17. "FIDE WSCC 2022 Round of 16: Vaishali eliminates World Blitz Women champion Bibisara Assaubayeva - ChessBase India". www.chessbase.in. 2022-06-14. Retrieved 2022-07-25.
  18. ೧೮.೦ ೧೮.೧ West (NM_Vanessa), Vanessa (21 July 2022). "Rising Star Knocks Out Experienced Compatriot". Chess.com (in ಅಮೆರಿಕನ್ ಇಂಗ್ಲಿಷ್). Retrieved 2022-07-25.
  19. "Challengers standings". Tata Steel Chess Tournament 2023 (in ಅಮೆರಿಕನ್ ಇಂಗ್ಲಿಷ್). Archived from the original on 25 January 2022. Retrieved 2023-03-23.
  20. "Nodirbek Yakubboev wins Qatar Masters in blitz tiebreaks". Chess News (in ಇಂಗ್ಲಿಷ್). 2023-10-20. Retrieved 2023-10-21.
  21. ಉಲ್ಲೇಖ ದೋಷ: Invalid <ref> tag; no text was provided for refs named :0
  22. "Vaishali Wins Women's Grand Swiss, Vidit Also Gets Close To Title Triumph". News18 (in ಇಂಗ್ಲಿಷ್). 2023-11-06. Retrieved 2023-11-05.
  23. Sportstar, Team (2023-11-05). "Vaishali draws last round to win FIDE Women Grand Prix 2023". Sportstar (in ಇಂಗ್ಲಿಷ್). Retrieved 2023-11-05.
  24. ಉಲ್ಲೇಖ ದೋಷ: Invalid <ref> tag; no text was provided for refs named :1
  25. ೨೫.೦ ೨೫.೧ "R Vaishali becomes grandmaster, joins R Praggnanandhaa to become world's first brother-sister GM duo". India Today (in ಇಂಗ್ಲಿಷ್). 2 December 2023. Retrieved 2023-12-02.
  26. "FIDE TITLE REGULATIONS". International Chess Federation (FIDE) (in ಇಂಗ್ಲಿಷ್). Retrieved 2024-04-09.
  27. ೨೭.೦ ೨೭.೧ "Ministry of Youth Affairs and Sports". pib.gov.in (in ಇಂಗ್ಲಿಷ್). Retrieved 2024-01-09.