ವೈದ್ಯಕೀಯ ಪರೀಕ್ಷೆ

ವಿಕಿಪೀಡಿಯ ಇಂದ
ಇಲ್ಲಿಗೆ ಹೋಗು: ಸಂಚರಣೆ, ಹುಡುಕು
ಕೈಯಿನ ಕ್ಷ-ಕಿರಣ. ಕ್ಷ-ಕಿರಣಗಳು ಒಂದು ಸಾಮಾನ್ಯವಾದ ವೈದ್ಯಕೀಯ ಪರೀಕ್ಷೆ.

ವೈದ್ಯಕೀಯ ಪರೀಕ್ಷೆಯು ರೋಗ, ರೋಗದ ಪ್ರಕ್ರಿಯೆಗಳು, ಈಡಾಗುವಿಕೆಯನ್ನು ಕಂಡುಹಿಡಿಯಲು, ರೋಗನಿದಾನ ಮಾಡಲು, ಅಥವಾ ನಿರ್ಣಯಿಸಲು, ಮತ್ತು ಚಿಕಿತ್ಸೆಯ ಪಥವನ್ನು ನಿಶ್ಚಯಿಸಲು ನಡೆಸಲಾಗುವ ಒಂದು ಬಗೆಯ ವೈದ್ಯಕೀಯ ವಿಧಾನ. ರೋಗನಿದಾನ ಪರೀಕ್ಷೆಯು ರೋಗವನ್ನು ಹೊಂದಿದ್ದಾನೆಂದು ಶಂಕಿಸಲಾದ ಒಬ್ಬ ವ್ಯಕ್ತಿಯಲ್ಲಿ ರೋಗದ ಇರವನ್ನು ನಿರ್ಧರಿಸಲು, ಅಥವಾ ನಿಶ್ಚಯಿಸಲು, ಸಾಮಾನ್ಯವಾಗಿ ಕಾಯಿಲೆಯ ಸೂಚನೆಗಳ ವರದಿಯ ನಂತರ, ಅಥವಾ ಇತರ ವೈದ್ಯಕೀಯ ಪರೀಕ್ಷೆಗಳ ಫಲಿತಾಂಶಗಳ ಆಧಾರದ ಮೇಲೆ, ನಡೆಸಲಾಗುವ ಒಂದು ಪ್ರಕ್ರಿಯೆ. ದುಗ್ಧರಸ ಗ್ರಂಥಿಯ ಅರ್ಬುದವಿರುವ ಒಬ್ಬ ರೋಗಿಯನ್ನು ಪರೀಕ್ಷಿಸಲು ಪರಮಾಣು ವೈದ್ಯಶಾಸ್ತ್ರದ ತಂತ್ರಗಳನ್ನು ಬಳಸುವುದು ಅಂತಹ ಒಂದು ಪರೀಕ್ಷೆ.