ವೈಎನ್ ಕೆ

ವಿಕಿಪೀಡಿಯ ಇಂದ
Jump to navigation Jump to search

ವೈಎನ್‍ಕೆ ಯವರು ೧೯೨೬ ಮೇ ೧೭ರಂದು ಜನಿಸಿದರು. ೧೯೪೯ರಲ್ಲಿ ಪ್ರಜಾವಾಣಿಗೆ ಉಪಸಂಪಾದಕರಾಗಿ ಸೇರಿದ ಇವರು ದೇಶಬಂಧು ಹಾಗು ಛಾಯಾ ಪತ್ರಿಕೆಗಳಲ್ಲಿಯೂ ದುಡಿದಿದ್ದರು.೧೯೬೭ರಲ್ಲಿ ಥಾಮ್ಸನ್ ವಿದ್ಯಾರ್ಥಿವೇತನ ಪಡೆದು ಪತ್ರಿಕೋದ್ಯಮ ವ್ಯಾಸಂಗ ಮಾಡಿದರು.

ಇವರಿಗೆ ಕನ್ನಡ ರಾಜ್ಯೋತ್ಸವ ಪ್ರಶಸ್ತಿ(೧೯೮೬),ಕನ್ನಡ ಸಾಹಿತ್ಯ ಅಕಾಡೆಮಿ ಪ್ರಶಸ್ತಿ(೧೯೮೮),ಕರ್ನಾಟಕ ಮಾಧ್ಯಮ ಅಕಾಡೆಮಿ ಪ್ರಶಸ್ತಿ(೧೯೮೯,೧೯೯೨),ಕರ್ನಾಟಕ ರಾಜ್ಯ ಪ್ರಶಸ್ತಿ(೧೯೮೬) ಲಭಿಸಿವೆ.

ಇವರು ರಷ್ಯಾ, ಕೆನಡಾ, ಅಮೆರಿಕಾ ಹಾಗು ಯುರೋಪ ದೇಶಗಳಿಗೆ ಮಾಡಿದ ಪ್ರವಾಸದ ಅನುಭವವು "ಹೈಡ್ ಪಾರ್ಕ್" ಪುಸ್ತಕರೂಪದಲ್ಲಿ ಹೊರಬಂದಿದೆ.ಪತ್ರಿಕೋದ್ಯಮಕ್ಕೆ ಕೈಪಿಡಿಯಾಗಿರುವ ಇವರ ಕೃತಿ " ಇದು ಸುದ್ದಿ ಇದು ಸುದ್ದಿ". ಇವರ ಅಂಕಣಗಳು ಕೃತಿರೂಪದಲ್ಲಿ ಹೊರಬಂದಿವೆ.

ವೈಎನ್‍ಕೆ ಯವರು ೧೯೯೯ ಅಕ್ಟೋಬರ್ ೧೫ ರಂದು ನ್ಯೂಯಾರ್ಕದಿಂದ ಬೆಂಗಳೂರಿಗೆ ವಾಯುಮಾರ್ಗದಲ್ಲಿ ಹಿಂದಿರುಗವಾಗ ಹೃದಯಾಘಾತದಿಂದ ನಿಧನರಾದರು.


"https://kn.wikipedia.org/w/index.php?title=ವೈಎನ್_ಕೆ&oldid=420613" ಇಂದ ಪಡೆಯಲ್ಪಟ್ಟಿದೆ