ವಿಷಯಕ್ಕೆ ಹೋಗು

ವೇರಾ ಮಿಖೈಲೋವ್ನಾ ವೆಲಿಚ್ಕಿನಾ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
ವೇರಾ ಮಿಖೈಲೋವ್ನಾ ವೆಲಿಚ್ಕಿನಾ
Вера Михайловна Величкина
ಜನನ
ವೇರಾ ಮಿಖೈಲೋವ್ನಾ ವೆಲಿಚ್ಕಿನಾ

(೧೮೬೮-೦೯-೨೦)೨೦ ಸೆಪ್ಟೆಂಬರ್ ೧೮೬೮
ಮಾಸ್ಕೋ, ರಷ್ಯನ್ ಸಾಮ್ರಾಜ್ಯ
ಮರಣ30 September 1918(1918-09-30) (aged 50)
ಮಾಸ್ಕೋ, ರಷ್ಯನ್ ಸೋವಿಯತ್ ಫೆಡರೇಟಿವ್ ಸೋಷಿಯಲಿಸ್ಟ್ ಗಣರಾಜ್ಯ
ಇತರ ಹೆಸರುಗಳುವೇರಾ ಮಿಖೈಲೋವ್ನಾ ವೆಲಿಚ್ಕಿನಾ
ಸಂಗಾತಿವ್ಲಾಡಿಮಿರ್ ಬಾಂಚ್-ಬ್ರುಯೆವಿಚ್

ವೇರಾ ಮಿಖೈಲೋವ್ನಾ ವೆಲಿಚ್ಕಿನಾ (Вера Михайловна Величкина) (20 ಸೆಪ್ಟೆಂಬರ್ 1868 – 30 ಸೆಪ್ಟೆಂಬರ್ 1918) ರಷ್ಯನ್ ರಾಜಕಾರಣಿ, ವೈದ್ಯೆ, ಲೇಖಕಿ ಮತ್ತು ಕ್ರಾಂತಿಕಾರಿಯಾಗಿದ್ದರು. ಅವರು 1890ರ ದಶಕದಿಂದಲೇ ಬೋಲ್ಶೆವಿಕ್ ಚಳವಳಿಯಲ್ಲಿ ಸಕ್ರಿಯರಾಗಿದ್ದರು. ಅಕ್ಟೋಬರ್ ಕ್ರಾಂತಿ ನಂತರ, ಸೋವಿಯತ್ ಆರೋಗ್ಯ ಸೇವೆಗಳನ್ನು ಸಂಘಟಿಸುವ ಜವಾಬ್ದಾರಿಯನ್ನು ಅವರಿಗೆ ನೀಡಲಾಯಿತು. ಅವರು ವ್ಲಾಡಿಮಿರ್ ಲೆನಿನ್ ಅವರ ವೈಯಕ್ತಿಕ ವೈದ್ಯೆಯಾಗಿ ಕಾರ್ಯನಿರ್ವಹಿಸಿದ್ದರು ಹಾಗೂ ರಾಜಕಾರಣಿ ವ್ಲಾಡಿಮಿರ್ ಬಾಂಚ್-ಬ್ರುಯೆವಿಚ್ ಅವರ ಮೊದಲ ಪತ್ನಿಯಾಗಿದ್ದರು.[]

ಪ್ರಾರಂಭಿಕ ಜೀವನ ಮತ್ತು ಶಿಕ್ಷಣ

[ಬದಲಾಯಿಸಿ]
ವೇರಾ ವೆಲಿಚ್ಕಿನಾ c. 1900

ವೇರಾ ವೆಲಿಚ್ಕಿನಾ 20 ಸೆಪ್ಟೆಂಬರ್ 1868ರಂದು ಮಾಸ್ಕೋದಲ್ಲಿ ಜನಿಸಿದರು. ಅವರು ಒಬ್ಬ ಪಾದ್ರಿಯ ಪುತ್ರಿಯಾಗಿದ್ದು, ಹದಿಮೂರು ಮಕ್ಕಳಲ್ಲಿ ಒಬ್ಬರಾಗಿದ್ದರು.[][] ಅವರು 1885ರಲ್ಲಿ ಮಾಸ್ಕೋದ ಪ್ರಥಮ ಬಾಲಕಿಯರ ಹೈ ಸ್ಕೂಲಿನಲ್ಲಿ ಪ್ರೌಢ ಶಿಕ್ಷಣ ಪೂರ್ಣಗೊಳಿಸಿ, ಅದೇ ವರ್ಷ ಪೆಡಗಾಜಿ (ಶಿಕ್ಷಣಶಾಸ್ತ್ರ) ಪಠ್ಯಕ್ರಮಗಳಿಗೆ ಹಾಜರಾಗಲು ಆರಂಭಿಸಿದರು.[]

ಅವರ ಸಾಮಾಜಿಕ ಚಟುವಟಿಕೆಗಳು 1891–1892ರ ರಷ್ಯನ್ ದುರ್ಭಿಕ್ಷದ ಸಮಯದಲ್ಲಿ ಆರಂಭವಾಯಿತು. ಈ ಅವಧಿಯಲ್ಲಿ, ಲೇಖಕ ಲಿಯೋ ಟಾಲ್ಸ್ಟಾಯ್ ಅವರಿಂದ ಸಂಘಟಿಸಲ್ಪಟ್ಟ ರಿಯಾಜಾನ್ ಪ್ರಾಂತ್ಯದ ದುರ್ಭಿಕ್ಷ ಪರಿಹಾರ ಕೇಂದ್ರದಲ್ಲಿ ಅವರು ಸೇವೆ ಸಲ್ಲಿಸಿದರು. ಅಲ್ಲಿ ಅವರು ಟಾಲ್ಸ್ಟಾಯ್ ಅವರನ್ನು ಭೇಟಿಯಾಗಿ, ಅವರೊಂದಿಗೆ ಪತ್ರವ್ಯವಹಾರ ಆರಂಭಿಸಿದರು ಮತ್ತು ಅವರ ಆಲೋಚನೆಗಳಿಂದ ಗಾಢವಾಗಿ ಪ್ರಭಾವಿತರಾದರು.[]

1892ರಲ್ಲಿ ವೈದ್ಯಕೀಯ ವಿದ್ಯಾಭ್ಯಾಸಕ್ಕಾಗಿ ಅವರು ಸ್ವಿಟ್ಜರ್ಲ್ಯಾಂಡ್‌ಗೆ ತೆರಳಿ ಬರ್ನ್ ಮತ್ತು ಜ್ಯೂರಿಕ್ನ ವೈದ್ಯಕೀಯ ಶಾಲೆಗಳಲ್ಲಿ ಅಧ್ಯಯನ ಮಾಡಿದರು. ಅಲ್ಲಿದ್ದಾಗ ರಷ್ಯನ್ ರಾಜಕೀಯ ವಲಸಿಗರೊಂದಿಗೆ ಸಂಪರ್ಕ ಹೊಂದಿದರು. ಕ್ರಾಂತಿಕಾರಿ ಚಟುವಟಿಕೆಗಳೊಂದಿಗೆ ಅವರ ಸಂಪರ್ಕವಿದೆ ಎಂದು ರಷ್ಯನ್ ರಹಸ್ಯ ಪೊಲೀಸರು ಗಮನಿಸಿ, 1894ರ ಬೇಸಿಗೆಯಲ್ಲಿ ಮಾಸ್ಕೋಗೆ ಬಂದಾಗ ಅವರನ್ನು ನಿಗಾವಹಿಸಿದರು. ಅಕ್ಟೋಬರ್ 3ರಂದು ನಗರವನ್ನು ತೊರೆಯಲು ಯತ್ನಿಸುವಾಗ ಅವರನ್ನು ಬಂಧಿಸಲಾಯಿತು. ಅಕ್ಟೋಬರ್ 4ರ ರಾತ್ರಿ ನಡೆದ ಮನೆಯ ಶೋಧನೆಯಲ್ಲಿ ಅನಧಿಕೃತ ಯುರೋಪಿಯನ್ ಸಾಹಿತ್ಯ ಪತ್ತೆಯಾಗಿದ್ದು, ಅವರ ಸಹೋದರ ನಿಕೋಲೈ ಮತ್ತು ಸಹೋದರಿ ಕ್ಲಾವ್ದಿಯಾ ಅವರನ್ನು ಬಂಧಿಸಲಾಯಿತುಆ. ವೇರಾ ವೆಲಿಚ್ಕಿನಾ ಅವರನ್ನು 1894ರ ಡಿಸೆಂಬರ್ 12ರವರೆಗೆ ಕಾರಾಗೃಹದಲ್ಲಿ ಇರಿಸಲಾಯಿತು. ನಂತರ ನಿಕೊಲಸ್ ದ್ವಿತೀಯರ ಸಿಂಹಾಸನಾರೋಹಣದ ಅಂಗವಾಗಿ ನೀಡಲಾದ ಸಾಮಾನ್ಯ ಕ್ಷಮಾದಾನದಲ್ಲಿ ಬಿಡುಗಡೆ ಮಾಡಲಾಯಿತು. ಆದರೆ ಅವರ ವಿರುದ್ಧದ ಪ್ರಕರಣ ಮುಂದಿನ ವರ್ಷವರೆಗೆ ಅಧಿಕೃತಹೇಳಿ ಗಿ ಮುಚ್ಚಲಿಲ್ಲ ಮತ್ತು ಎರಡು ವರ್ಷಗಳ ಕಾಲ ಅವರು ಪೊಲೀಸ್ ನಿಗಾವಹಣೆಯಲ್ಲೇ ಇದ್ದರು.[]

ಕಾರಾಗೃಹದಿಂದ ಬಿಡುಗಡೆಯಾದ ನಂತರ, 1895ರ ಶರತ್ಕಾಲದಿಂದ 1896ರ ವಸಂತಕಾಲದವರೆಗೆ ಅವರು ವೊರೊನೇಜ್ ಪ್ರಾಂತ್ಯದಲ್ಲಿ ವಾಸವಿದ್ದು, ಸ್ಥಳೀಯ ಜನರಿಗೆ ವೈದ್ಯಕೀಯ ಸಹಾಯಕಿಯಾಗಿ ಮತ್ತು ಶಿಕ್ಷಕಿಯಾಗಿ ಸೇವೆ ಸಲ್ಲಿಸಿದರು. ಈ ಅವಧಿಯಲ್ಲಿ ಅವರು ವ್ಲಾಡಿಮಿರ್ ಬಾಂಚ್-ಬ್ರುಯೆವಿಚ್ ಅವರನ್ನು ಭೇಟಿಯಾಗಿ ವಿವಾಹವಾದರು. ನಂತರ ಇಬ್ಬರೂ ಸ್ವಿಟ್ಜರ್ಲ್ಯಾಂಡ್‌ಗೆ ಮರಳಿ, 1896ರಿಂದ 1898ರವರೆಗೆ ಅವರು ಬರ್ನ್ ವಿಶ್ವವಿದ್ಯಾಲಯದಲ್ಲಿ ವೈದ್ಯಕೀಯ ವಿದ್ಯಾಭ್ಯಾಸ ಪೂರ್ಣಗೊಳಿಸಿ ವೈದ್ಯಕೀಯ ಪದವಿಯನ್ನು ಪಡೆದರು. ಬಳಿಕ ಅವರು ಮಕ್ಕಳ ಚಿಕಿತ್ಸಾಲಯದಲ್ಲಿ ಕೆಲಸ ಮಾಡಿದರು. ಅಲ್ಲಿಯೇ ಮಕ್ಕಳಿಗೆ ಕೃತಕ ಹಾಲು ನೀಡುವ ವಿಷಯದ ಮೇಲೆ ತಮ್ಮ ಮಹಾಪ್ರಬಂಧವನ್ನು ಸಮರ್ಥಿಸಿಕೊಂಡರು. ಸ್ವಿಟ್ಜರ್ಲ್ಯಾಂಡ್‌ನಲ್ಲಿ ಕೆಲಸ ಮಾಡಲು ಬಂದ ಆಹ್ವಾನಗಳನ್ನು ನಿರಾಕರಿಸಿ, ರಷ್ಯಾಕ್ಕೆ ಮರಳುವುದು ತಮ್ಮ ಗುರಿ ಎಂದು ಹೇಳಿದರು. ಆದರೆ 1899ರಲ್ಲಿ ಪತಿಯೊಂದಿಗೆ ಕೆನಡಾಕ್ಕೆ ತೆರಳಿ, ಡೌಖೋಬೋರ್ ವಲಸಿಗರ ಹಡಗಿನಲ್ಲಿ ವೈದ್ಯಕೀಯ ನೆರವು ನೀಡಿದರು. Lake Huron ಎಂಬ ಈ ಹಡಗು ಲಿಯೋ ಟಾಲ್ಸ್ಟಾಯ್ ಅವರ ಅಭಿಯಾನದ ಫಲವಾಗಿ ಚಾರ್ಟರ್ ಮಾಡಲಾಗಿತ್ತು. ವೇರಾ ವೆಲಿಚ್ಕಿನಾ ಹದಿಮೂರು ತಿಂಗಳು ವಲಸಿಗರೊಂದಿಗೆ ಉಳಿದು, ವೈದ್ಯಕೀಯ ಸೇವೆಯ ಜೊತೆಗೆ ಆಡಳಿತಾತ್ಮಕ ಸಹಾಯವನ್ನೂ ನೀಡಿದರು.[][]

ಸಂಪಾದಕೀಯ ವೃತ್ತಿ ಮತ್ತು ಚಟುವಟಿಕೆ

[ಬದಲಾಯಿಸಿ]

1901ರಲ್ಲಿ ತಾಯಿಯ ಅಸ್ವಸ್ಥತೆಯ ಕಾರಣ ವೇರಾ ವೆಲಿಚ್ಕಿನಾ ತ್ವರಿತವಾಗಿ ರಷ್ಯಾಕ್ಕೆ ಮರಳಿದರು. ಆದರೆ ಜೆನೀವಾದಲ್ಲಿರುವ ರಷ್ಯನ್ ಕಾನ್ಸುಲೇಟ್ ಎದುರು ವಿದ್ಯಾರ್ಥಿ ಚಳವಳಿಗಳ ಮೇಲೆ ನಡೆದ ದಮನದ ವಿರುದ್ಧ ಪ್ರತಿಭಟನೆ ಸಂಘಟಿಸಿದ್ದ ಕಾರಣ, ಅಕ್ಟೋಬರ್ 2ರಂದು ವೇಜ್‌ಬೊಲೋವೊ ಗಡಿಯಲ್ಲಿ ಅವರನ್ನು ಬಂಧಿಸಲಾಯಿತು. ಅವರನ್ನು ಸೇಂಟ್ ಪೀಟರ್ಸ್‌ಬರ್ಗ್ನ ಕ್ರೆಸ್ಟಿ ಕಾರಾಗೃಹಕ್ಕೆ ಕಳುಹಿಸಲಾಯಿತು. 1902ರ ಜನವರಿಯಲ್ಲಿ ಅವರನ್ನು ಬಿಡುಗಡೆ ಮಾಡಲಾಗಿದ್ದು, ಮೇ ತಿಂಗಳಲ್ಲಿ ಅವರು ಮರುಸ್ವಿಟ್ಜರ್ಲ್ಯಾಂಡ್‌ಗೆ ತೆರಳಿದರು.[]

1905ರಲ್ಲಿ ಅವರು ರಷ್ಯಾಕ್ಕೆ ಮರಳಿ, ಸೇಂಟ್ ಪೀಟರ್ಸ್‌ಬರ್ಗ್‌ನ ಯೆವ್ಗೆನ್ಯೆವ್‌ಸ್ಕಾಯಾ ರೆಡ್ ಕ್ರಾಸ್ ಮಕ್ಕಳ ಆಸ್ಪತ್ರೆಯಲ್ಲಿ ಕೆಲಸ ಮಾಡಿದರು.[] ಆದರೆ 1905ರ ಮೊದಲ ರಷ್ಯನ್ ಕ್ರಾಂತಿ ಸಮಯದಲ್ಲಿ, ಕಾರ್ಮಿಕರ ಪ್ರತಿನಿಧಿಗಳ ಸೋವಿಯತ್ ಸದಸ್ಯರೊಂದಿಗೆ ಅವರನ್ನು ಮತ್ತೊಮ್ಮೆ ಬಂಧಿಸಲಾಯಿತು. ಆರೋಪವಿಲ್ಲದೆ ಏಕಾಂಗ ಬಂಧನದಲ್ಲಿ ಇರಿಸಲಾಯಿತು. ಸಾರ್ವಜನಿಕ ಅಭಿಯೋಜಕರ ನ್ಯಾಯಾಲಯದಿಂದ ಬಿಡುಗಡೆ ಆದೇಶ ಬಂದರೂ, ಪೊಲೀಸ್ ಮುಖ್ಯಸ್ಥರ ಆದೇಶದಿಂದ ಅವರು ಕಾರಾಗೃಹದಲ್ಲೇ ಉಳಿದರು. ಇದಕ್ಕೆ ಪ್ರತಿಯಾಗಿ ವೇರಾ ವೆಲಿಚ್ಕಿನಾ ಉಪವಾಸ ಸತ್ಯಾಗ್ರಹ ಆರಂಭಿಸಿದರು. ಕೊನೆಗೆ 1906ರ ಮಾರ್ಚ್ 6ರಂದು ಅವರನ್ನು ಬಿಡುಗಡೆ ಮಾಡಲಾಯಿತು. ಬಿಡುಗಡೆಯಾದ ಬಳಿಕ, 1907ರಲ್ಲಿ ಸೇಂಟ್ ಪೀಟರ್ಸ್‌ಬರ್ಗ್‌ನಲ್ಲಿ ಸ್ವಯಂ-ಶಿಕ್ಷಣ ಕ್ಲಬ್ ಸ್ಥಾಪಿಸಿದರು. ಅದೇ ವರ್ಷ ಪತಿಯೊಂದಿಗೆ ಸೇರಿ ಮಾರ್ಕ್ಸಿಸ್ಟ್ ಪ್ರಕಾಶನ ಸಂಸ್ಥೆ Life and Knowledge ಅನ್ನು ಸಂಪಾದನೆ ಮಾಡಲಾರಂಭಿಸಿದರು.[]

ಮೊದಲ ವಿಶ್ವಯುದ್ಧದ ಸಮಯದಲ್ಲಿ, ಅವರು ಒಂದು ವರ್ಷಾರ್ಧ ಕಾಲ ಮುಂಚೂಣಿಯಲ್ಲಿ ಮತ್ತು ನಂತರ ಕಾರಾಗೃಹ ಶಿಬಿರದಲ್ಲಿ ವೈದ್ಯೆಯಾಗಿ ಸೇವೆ ಸಲ್ಲಿಸಿದರು. ಅವರ ಪರಿಶ್ರಮಕ್ಕಾಗಿ ಅವರಿಗೆ 4ನೇ ದರ್ಜೆಯ ಸೇಂಟ್ ಜಾರ್ಜ್ ಪಟ್ಟಿಕೆ ಮತ್ತು ಸೇಂಟ್ ವ್ಲಾಡಿಮಿರ್ ಪದಕದ ಬೆಳ್ಳಿ ಪದಕವನ್ನು ನೀಡಲಾಯಿತು.[]

ಕ್ರಾಂತಿ ಮತ್ತು ಆಡಳಿತಾತ್ಮಕ ವೃತ್ತಿ

[ಬದಲಾಯಿಸಿ]

ಫೆಬ್ರವರಿ ಕ್ರಾಂತಿ ನಂತರ, ವೇರಾ ವೆಲಿಚ್ಕಿನಾ ಅವರನ್ನು Izvestiia petrogradskogo soveta ಪತ್ರಿಕೆಯ ಸಂಪಾದಕೀಯ ಕಾರ್ಯದರ್ಶಿಯಾಗಿ ನೇಮಿಸಲಾಯಿತು. ಜೊತೆಗೆ ಅವರು ಆರ್‌ಎಸ್‌ಡಿಎಲ್‌ಪಿ (ಬೋಲ್ಶೆವಿಕ್) ಸಮಿತಿಯ ಸದಸ್ಯೆಯಾದರು.[]

ಅಕ್ಟೋಬರ್ ಕ್ರಾಂತಿ ಸಮಯದಲ್ಲಿ, ವ್ಲಾಡಿಮಿರ್ ಲೆನಿನ್ ಅವರ ವಿನಂತಿಯ ಮೇರೆಗೆ, ಗಾಯಗೊಂಡ ರೆಡ್ ಗಾರ್ಡ್ಸ್‌ಗಳಿಗೆ ಚಿಕಿತ್ಸೆ ಮತ್ತು ಆರೈಕೆ ವ್ಯವಸ್ಥೆಯನ್ನು ಅವರು ಸಂಘಟಿಸಿದರು.[] ನಂತರ ಅವರು ಪೆಟ್ರೋಗ್ರಾಡ್ ಸೋವಿಯತ್ ಕ್ರಾಂತಿಕಾರಿ ಸೈನಿಕ ಸಮಿತಿಯ ವೈದ್ಯಕೀಯ ಮತ್ತು ಆರೋಗ್ಯ ವಿಭಾಗದಲ್ಲಿ ಕಾರ್ಯನಿರ್ವಹಿಸಿದರು.[] ನಂತರ ಮಕ್ಕಳ ಆರೋಗ್ಯ ಸೇವೆಗಳತ್ತ ಗಮನಹರಿಸಿ, ಶಾಲಾ ಆರೋಗ್ಯ ಮತ್ತು ಸ್ವಚ್ಛತೆಯ ಹೊಣೆಗಾರಿಕೆಯನ್ನು ವಹಿಸಿಕೊಂಡರು ಮತ್ತು ಶಿಕ್ಷಣ ಜನ ಆಯುಕ್ತಾಲಯದೊಳಗೆ ವಿಶೇಷ ವಿಭಾಗವನ್ನು ಸ್ಥಾಪಿಸಿದರು.[][] ಅವರು ಲೆನಿನ್ ಅವರ ವೈಯಕ್ತಿಕ ವೈದ್ಯೆಯಲ್ಲೊಬ್ಬರಾಗಿದ್ದರು.[]

ವೇರಾ ವೆಲಿಚ್ಕಿನಾ ಅವರು 1918ರ ಸೆಪ್ಟೆಂಬರ್ 30ರಂದು ಮಾಸ್ಕೋದಲ್ಲಿ ಸ್ಪ್ಯಾನಿಷ್ ಫ್ಲೂ ರೋಗದಿಂದ 50ನೇ ವಯಸ್ಸಿನಲ್ಲಿ ನಿಧನರಾದರು.[][]

  1. ೧.೦ ೧.೧ ೧.೨ ೧.೩ ೧.೪ ೧.೫ [[೧](https://encyclopedia2.thefreedictionary.com/Velichkina%2c+Vera+Mikhailovna) "Velichkina, Vera Mikhailovna"]. The Great Soviet Encyclopedia. 1979. Retrieved 11 November 2025. {{cite encyclopedia}}: Check |url= value (help)
  2. ೨.೦ ೨.೧ ೨.೨ ೨.೩ ೨.೪ ೨.೫ ೨.೬ ೨.೭ ೨.೮ [[೨](https://web.archive.org/web/20230207143312/https://www.rodb-v.ru/about/velichkina/) "Вера Михайловна Величкина"]. Ростовская областная детская библиотека (in ರಷ್ಯನ್). Archived from [[೩](https://www.rodb-v.ru/about/velichkina/) the original] on 7 February 2023. Retrieved 11 November 2025. {{cite web}}: Check |archive-url= value (help); Check |url= value (help)
  3. ೩.೦ ೩.೧ ೩.೨ ೩.೩ [[೪](https://big_medicine.academic.ru/2960/) "ВЕЛИЧКИНА"] [Velichkina]. The Great Medical Encyclopedia (in ರಷ್ಯನ್). 1970. Retrieved 10 November 2025. {{cite encyclopedia}}: Check |url= value (help)
  4. Mikirtichan, G. L. (2014). [[೫](https://web.archive.org/web/20170818214820/https://historymedjournal.com/volume/number_3/3-2014_engl_Mikirtichan_05.pdf#federation=archive.wikiwix.com&tab=url) "N.A. Semashko and his role in the development of the soviet system for the protection of motherhood and infancy"] (PDF). History of medicine (История медицины) (3): 38–53. ISSN 2409-5834. Archived from [[೬](https://historymedjournal.com/volume/number_3/3-2014_engl_Mikirtichan_05.pdf) the original] on 18 August 2017. Retrieved 11 November 2025. {{cite journal}}: Check |archive-url= value (help); Check |url= value (help)