ವೇಮನ

ವಿಕಿಪೀಡಿಯ ಇಂದ
Jump to navigation Jump to search
 • ವೇಮನ ೧೫ನೆಯ ಶತಮಾನದಲ್ಲಿ ಆಂಧ್ರಪ್ರದೇಶದ ತೆಲುಗಿನ ಶ್ರೇಷ್ಠ ವಚನಕಾರ,ಕವಿ ಸಮಾಜ ಚಿಂತಕರು ಮಾನವ ಕುಲದ ಏಳಿಗೆಗಾಗಿ ಶ್ರಮಿಸಿದರು. ಕನ್ನಡದಲ್ಲಿ ಸರ್ವಜ್ಞ, ತಮಿಳಿನ ತಿರುವಳ್ಳುವರ್ ಅವರಂತೆ ತೆಲುಗಿಗೆ ವೇಮನ ವಚನಕಾರರು, ಮಾಹಾಕವಿ ಮಹಾಯೋಗಿಯಾಗಿದ್ದಾರೆ.

ಜನನ, ಜೀವನ[ಬದಲಾಯಿಸಿ]

 • ವೇಮನ ಸಿದ್ಧಾಪುರ ಸಮೀಪದ ಕುಮಾರಗಿರಿಯ ವೇಮರೆಡ್ಡಿಯ ಮಗ. ವೇಮನ ಹೆತ್ತವರಿಂದ, ಒಡಹುಟ್ಟಿದವರಿಂದ, ಸಂಬಂಧಿಕರಿಂದ ಅನಾದಾರಕ್ಕೆ ಗುರಿಯಾಗಿ ದುಶ್ಚಟಗಳ ದಾಸನಾಗುತ್ತಾನೆ.

ಭೋಗಾಸಕ್ತನಾಗಿ[ಬದಲಾಯಿಸಿ]

 • ಪರಸ್ತ್ರೀ ಸಂಗದಲ್ಲಿ ವಿಚಯಾಸಕ್ತನಾದ ವೇಮನ ಭೋಗಾಸಕ್ತನಾಗಹುತ್ತಾನೆ. ವೇಶ್ಯಾಸ್ತ್ರೀಯೊಬ್ಬಳ ಸಹವಾಸ ಮಾಡಿ, ಮನೆಯ ಸಂಪತ್ತನ್ನೇಲ್ಲಾ ಹಾಳುಗೆಡವುತ್ತಾನೆ. ವೇಮನನಿಗೆ ಅತ್ತಿಗೆಯಾಗಿ ಬಂದ ಹೇಮರೆಡ್ಡಿ ಮಲ್ಲಮ್ಮ ಮೈದುನನ ಮನ ತಿದ್ದುವಲ್ಲಿ ಪ್ರಯತ್ನಿಸಿ ಸಫಲಳಾಗುತ್ತಾಳೆ.

ಮೂಗುತಿಯಿಂದ ಮನಪರಿವರ್ತನೆ[ಬದಲಾಯಿಸಿ]

 • ದುಶ್ಚಟಗಳ ದಾಸನಾದ ವೇಮನ ವೇಶ್ಯಾಸ್ತ್ರೀಯೊಬ್ಬಳ ಮನದಾಸೆ ಈಡೇರಿಸಲು, ಅತ್ತಿಗೆಯಾಗಿದ್ದ ಹೇಮರೆಡ್ಡಿ ಮಲ್ಲಮ್ಮನ ಮೂಗುತಿಯನ್ನು ಬೇಕೆಂದು ಕೇಳುತ್ತಾನೆ. ಹೇಮರೆಡ್ಡಿ ಮಲ್ಲಮ್ಮ ಮೈದುನನಾದ ವೇಮನನಿಗೆ ಮೂಗುತಿ ಕೊಡಲು ಒಪ್ಪಿ ಕರಾರೊಂದನ್ನು ವಿಧಿಸುತ್ತಾಳೆ.

ಹೇಮರೆಡ್ಡಿ ಮಲ್ಲಮ್ಮನ ಕರಾರು[ಬದಲಾಯಿಸಿ]

"ವೇಮನ ಹೇಮರೆಡ್ಡಿ ಮಲ್ಲಮ್ಮನ ಮೂಗುತಿಯನ್ನು ಆ ವೇಶ್ಯಾಸ್ತ್ರೀಗೆ ಕೊಡುವಾಗ, ಆಕೆ ನಗ್ನಳಾಗಿ ಬಂದು ವೇಮನ ಕುಳಿತದ್ದ ಮಂಚವನ್ನು ಮೂರು ಸುತ್ತು ಸುತ್ತಬೇಕು. ಮೂರು ಸುತ್ತು ಹಾಕಿದ ನಂತರ ಹಿಂಬದಿಗೆ ಬಾಗಿ, ಎರಡು ಕಾಲುಗಳ ನಡುವೆ ಬಗ್ಗಿ ಕೈ ಚಾಚಿ ವೇಮನನಿಂದ ಮೂಗುತಿಯನ್ನು ಪಡೆಯಬೇಕು. ಅವಳು ಆ ಮೂಗುತಿಯನ್ನು ಪಡೆಯುವವರೆಗೂ ವೆಮನ ಆಕೆಯ ನಗ್ನದೇಹವನ್ನು ತದೇಕ ಚಿತ್ತನಾಗಿ ನೋಡಬೇಕು". ವೇಮನ ಅತ್ತಿಗೆ ಹೇಮರೆಡ್ಡಿ ಮಲ್ಲಮ್ಮನ ಮಾತನ್ನು ಚಾಚು ತಪ್ಪದೆ ಪಾಲಿಸುತ್ತಾನೆ.

ವಚನಕಾರನಾಗಿ[ಬದಲಾಯಿಸಿ]

 • ವೇಮನ ತನ್ನ ಪ್ರೇಯಸಿಯ ನಗ್ನ ಶರೀರವನ್ನು ಕಂಡೊಡನೆ ಅವನೊಳಗೆ ಭಯಂಕರವಾದ ಜಿಗುಪ್ಸೆ, ಅಸಹ್ಯಭಾವನೆ ಆವರಿಸಿ ಒಡನೆಯೇ ಗಾಭರಿಗೊಂಡು ಕಣ್ಮುಚ್ಚಿ -

ತಾಯಿಯ ಗರ್ಭದಿಂದ ತಾಂ ಬರುವ ಸಮಯದಿ
ಮೊದಲು ವಸ್ತ್ರಮಿಲ್ಲ, ತುದಿಗುಮಿಲ್ಲ
ನಡುವೆ ಬಟ್ಟೆಯುಡುವುದೇಕೆಂದು ತಿಳಿಯಿರಿ
ವಿಶ್ವತೋಭಿರಾಮ ಕೇಳುವೆ ಮಾ||

-ಎಂದು ತತ್ವ್ತಜ್ಞಾನ ಹೇಳುತ್ತಾ, ತಾನು ನಗ್ನನಾಗಿ ವೈರಾಗಿಯಂತೆ ಕಾಲ್ತೆಗೆದು ಹೊರ ಹೋರಟವನು, ಮುಂದೆ ತನ್ನ ಸಾಧನೆಯಿಂದ ಮಹಾಯೋಗಿಯಾದನು.

ಆಕರ ನೆರವು[ಬದಲಾಯಿಸಿ]

 1. ಮೂಗುತಿ ಮಹಿಮೆ -ಸಂ.ಹನುಮಂತಪ್ಪ ಅಂಡಗಿ, ಚಿಲಕವಾಡಗಿ
 2. ಹೇಮರೆಡ್ಡಿ ಮಲ್ಲಮ್ಮನ ಪುರಾಣ -ರುದ್ರಕವಿ, ಜೈನಾಪುರ

ಉಲ್ಲೇಖಗಳು[ಬದಲಾಯಿಸಿ]

<Refrece /> [೧] [೨] [೩] [೪] [೫] [೬]

ಬಾಹ್ಯ ಸಂಪರ್ಕಗಳು[ಬದಲಾಯಿಸಿ]

 1. http://www.prajavani.net/article/%E2%80%98%E0%B2%B5%E0%B3%87%E0%B2%AE%E0%B2%A8-%E0%B2%A4%E0%B2%A4%E0%B3%8D%E0%B2%B5%E0%B2%BE%E0%B2%A6%E0%B2%B0%E0%B3%8D%E0%B2%B6%E0%B2%A6%E0%B2%BF%E0%B2%82%E0%B2%A6-%E0%B2%B8%E0%B2%AE%E0%B2%BE%E0%B2%9C%E0%B2%A6-%E0%B2%AA%E0%B2%B0%E0%B2%BF%E0%B2%B5%E0%B2%B0%E0%B3%8D%E0%B2%A4%E0%B2%A8%E0%B3%86%E2%80%99
 2. http://vijaykarnataka.indiatimes.com/district/belagavi/-/articleshow/45944267.cms
 3. https://books.google.co.in/books?id=BXqYAwAAQBAJ&pg=PP5&lpg=PP5&dq=%E0%B2%B5%E0%B3%87%E0%B2%AE%E0%B2%A8&source=bl&ots=e_zszn6crT&sig=AMDtxbullKGHuN-HufPfwzdMpso&hl=en&sa=X&ei=E_dnVcOyBNC3uQSRs4CIDg&ved=0CGIQ6AEwCw#v=onepage&q=%E0%B2%B5%E0%B3%87%E0%B2%AE%E0%B2%A8&f=false
 4. http://pvhome.yodasoft.com/article/%E2%80%98%E0%B2%B5%E0%B3%87%E0%B2%AE%E0%B2%A8-%E0%B2%85%E0%B2%A7%E0%B3%8D%E0%B2%AF%E0%B2%AF%E0%B2%A8-%E0%B2%AA%E0%B3%80%E0%B2%A0%E0%B2%95%E0%B3%8D%E0%B2%95%E0%B3%86-%E2%82%A81-%E0%B2%95%E0%B3%8B%E0%B2%9F%E0%B2%BF%E2%80%99
 5. http://avadhimag.com/2015/05/08/%E0%B2%B8%E0%B2%82%E0%B2%A7%E0%B3%8D%E0%B2%AF%E0%B2%BE%E0%B2%B0%E0%B2%BE%E0%B2%A3%E0%B2%BF-%E0%B2%95%E0%B2%BE%E0%B2%B2%E0%B2%82-%E0%B2%85%E0%B2%B5%E0%B2%A8%E0%B3%81-%E0%B2%B5%E0%B2%BF%E0%B2%B0/
 6. http://kannadanudimutthu.blogspot.in/2015/02/blog-post_78.html
"https://kn.wikipedia.org/w/index.php?title=ವೇಮನ&oldid=968904" ಇಂದ ಪಡೆಯಲ್ಪಟ್ಟಿದೆ