ವೃತ್ತಿಶಿಕ್ಷಣ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ವೃತ್ತಿಶಿಕ್ಷಣ ಎಂದರೆ ತಂತ್ರಜ್ಞನಾಗಿ ಅಥವಾ ಕಸಬುದಾರ ಅಥವಾ ಕುಶಲಯಂತ್ರಕಾರನಂತಹ ವಿವಿಧ ವೃತ್ತಿಗಳಲ್ಲಿ ಕೆಲಸ ಮಾಡಲು ಜನರನ್ನು ತಯಾರು ಮಾಡುವ ಶಿಕ್ಷಣ. ವೃತ್ತಿಶಿಕ್ಷಣವನ್ನು ಕೆಲವೊಮ್ಮೆ ವೃತ್ತಿ ಮತ್ತು ತಾಂತ್ರಿಕ ಶಿಕ್ಷಣ ಎಂದು ಕರೆಯಲಾಗುತ್ತದೆ.[೧] ವೃತ್ತಿಶಿಕ್ಷಣ ಶಾಲೆಯು ನಿರ್ದಿಷ್ಟವಾಗಿ ವೃತ್ತಿಶಿಕ್ಷಣವನ್ನು ಒದಗಿಸಲು ವಿನ್ಯಾಸ ಮಾಡಲಾಗಿರುವ ಒಂದು ಬಗೆಯ ಶೈಕ್ಷಣಿಕ ಸಂಸ್ಥೆ.

ವೃತ್ತಿಶಿಕ್ಷಣವು ಮಾಧ್ಯಮಿಕ ಶಿಕ್ಷಣದ ನಂತರದ, ಹೆಚ್ಚಿನ ಶಿಕ್ಷಣ ಅಥವಾ ಉನ್ನತ ಶಿಕ್ಷಣದ ಸ್ತರದಲ್ಲಿ ನಡೆಯಬಹುದು ಮತ್ತು ಕಲಿಕಾಕಾಲದ ವ್ಯವಸ್ಥೆಯೊಂದಿಗೆ ಪರಸ್ಪರ ಕಾರ್ಯ ನಡೆಸಬಹುದು. ಮಾಧ್ಯಮಿಕದ ನಂತರದ ಮಟ್ಟದಲ್ಲಿ, ವೃತ್ತಿಶಿಕ್ಷಣವನ್ನು ಹಲವುವೇಳೆ ಅತಿ ವಿಶೇಷೀಕೃತ ವ್ಯಾಪಾರ ಶಾಲೆಗಳು, ತಾಂತ್ರಿಕ ಶಾಲೆಗಳು, ಸಮುದಾಯ ಕಾಲೇಜುಗಳು, ಮುಂದಿನ ಶಿಕ್ಷಣದ ಕಾಲೇಜುಗಳು (ಯುಕೆ), ವಿಶ್ವವಿದ್ಯಾನಿಲಯಗಳು, ಜೊತೆಗೆ (ಹಿಂದೆ ಪಾಲಿಟೆಕ್ನಿಕ್ ಸಂಸ್ಥೆಗಳೆಂದು ಕರೆಯಲ್ಪಡುತ್ತಿದ್ದ) ತಾಂತ್ರಿಕ ಸಂಸ್ಥೆಗಳು ಒದಗಿಸುತ್ತವೆ.

ಉಲ್ಲೇಖಗಳು[ಬದಲಾಯಿಸಿ]

  1. "Career and Technical Education". edglossary.org. Retrieved 2019-08-07.