ವಿಷಯಕ್ಕೆ ಹೋಗು

ವೀರಮಾಸ್ತಿ ಬಸದಿ, ಹಾಡುವಳ್ಳಿ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ಶ್ರೀ ವೀರಮಾಸ್ತಿ ಬಸದಿಯು ಕರ್ನಾಟಕದ ಕರಾವಳಿ ಬಸದಿಗಳಲ್ಲಿ ಒಂದು.

ಶ್ರೀ ವೀರಮಾಸ್ತಿ ಬಸದಿಯು ಧೀರ್ಘ ಆಯತಾಕಾರದ ಬಿಳಿ ಚಂದ್ರಕಾಂತ ಶಿಲೆಯ ಭಗವಾನ್ ಶ್ರೀ ಚಂದ್ರನಾಥ ಸ್ವಾಮಿ ಬಸದಿ ಬಲಬದಿಗೆೆ ಪ್ರತ್ಯೇಕ ನಿವೇಶನದಲ್ಲಿದೆ.

ಈ ಬಸದಿಯೂ ಕೂಡ ದೀರ್ಘ ಆಯತಾಕಾರದಲ್ಲಿ ಇದ್ದು ಇದನ್ನು ವೀರಮಾಸ್ತಿ ಕ್ಷೇತ್ರಪಾಲ ಬಸದಿ ಎಂದು ಕರೆಯುತ್ತಾರೆ. ಇಲ್ಲಿ ಪೂಜೆ ಮಾಡುವವರು ಜೈನ ಪುರೋಹಿತರೇ ಆಗಿದ್ದಾರೆ. ಇಲ್ಲಿಯ ವೀರಮಾಸ್ತಿ ಒಂದು ಶಕ್ತಿದೇವತೆಯಂತೆ ಕಂಡುಬರುತ್ತಾಳೆ. ಜೊತೆಯಲ್ಲಿರುವ ಕ್ಷೇತ್ರಪಾಲನು ಜೈನ ಬ್ರಹ್ಮದೇವರನ್ನೇ ಹೋಲುತ್ತಾನೆ. ಇವರಿಬ್ಬರಿಗೂ ನಿತ್ಯಪೂಜೆ ನಡೆಯುತ್ತದೆ. ಇಲ್ಲಿರುವ ಕ್ಷೇತ್ರಪಾಲನು ಅಶ್ವರೂಢನಾಗಿ ಒಂದು ಕೈಯಲ್ಲಿ ಗಧಾದಂಡವನ್ನು ಇನ್ನೊಂದು ಕೈಯಲ್ಲಿ ಕುದುರೆಯ ಜೀನನ್ನು ಹಿಡಿದುಕೊಂಡು ಸವಾರಿ ಮಾಡುತ್ತಿರುವ ಭಂಗಿಯಲ್ಲಿ ತೋರಿಸಲಾಗಿದೆ. ವೀರಮಾಸ್ತಿಯನ್ನು ಜೈನ್ ಪದ್ಮಾವತಿ ದೇವಿಯಂತೆ ಆರಾಧಿಸಲಾಗುತ್ತದೆ. ಮೂರ್ತಿಯು ಖಡ್ಗಾಸನ ಭಂಗಿಯಲ್ಲಿದ್ದು ಒಂದು ಕೈಯನ್ನು ನೀಳವಾಗಿ ಬಿಟ್ಟು ಇನ್ನೊಂದು ಸೊಂಟದಮೇಲೆ ಇಟ್ಟುಕೊಂಡಿದೆ.[]

ಕಲಾಕೃತಿ

[ಬದಲಾಯಿಸಿ]

ಮಾಸ್ತಿಯ ಮುಖವು ಪ್ರಸನ್ನತೆ, ಪ್ರಶಾಂತತೆಯನ್ನು ತೋರ್ಪಡಿಸುವುದಿಲ್ಲ. ಆದರೂ ಸ್ತನಗಳನ್ನು ಸೀರೆಯ ಸೆರಗಿನಿಂದ ಮುಚ್ಚಿಕೊಂಡಿರುವಂತೆ ಇರುವುದರಿಂದ ಇದೊಂದು ಸೌಮ್ಯ ರೀತಿಯಲ್ಲಿ ಆರಾಧಿಸಲ್ಪಡುವ ದೇವತೆ ಎಂದು ಹೇಳಬಹುದು. ಕೊರಳಲ್ಲಿ ಮಾಂಗಲ್ಯದ ಆಭರಣವೂ ಇದೆ. ಕೆಳಗೆ ಇಳಿಯ ಬಿಟ್ಟ ಲಂಗದಂತ ತೊಡುಗೆ ಇರುವುದರಿಂದ ಇವಳೊಬ್ಬ ಕನ್ಯಾ ದೇವತೆಯೆಂದು ಹೇಳಬಹುದು. ಪಾದಗಳ ಮೇಲೆ ಅಲಂಕಾರವಾದ ಸರಪಳಿ, ಸೊಂಟದಲ್ಲಿ, ಆಭರಣ, ಕೈ ಬಳೆ, ಕಿವಿಯಲ್ಲಿ ಆಭರಣ ಇತ್ಯಾದಿಗಳಿಂದ ಇದು ಜಾನಪದ ದೇವತೆಗಳಿಗಿಂತ ಹೆಚ್ಚಾಗಿ ಜೈನ ಯಕ್ಷಿ ಎಂದು ಹೇಳುವುದು ಸರಿಯಾದೀತು. ಬಳಿಯಲ್ಲಿರುವ ಬ್ರಹ್ಮ ಯಕ್ಷನ ಮೂರ್ತಿಯು ಇದನ್ನು ಸಮರ್ಥಿಸುತ್ತದೆ. ಗರ್ಭಗೃಹಕ್ಕಿಂತ ಹೊರಗಿನ ಭಾಗ ವೃತ್ತಾಕಾರದ ಮುಚ್ಚಿಗೆಯನ್ನು ಹೊಂದಿ ಅದರಲ್ಲಿ ಕೆಲವು ರೇಖಾಕಾರದ ಮತ್ತು ವೃತ್ತಾಕಾರದ ಚಿತ್ರಿಕೆಗಳಿವೆ. []

ಉಲ್ಲೇಖಗಳು

[ಬದಲಾಯಿಸಿ]
  1. https://www.deccanherald.com/content/475635/jain-heritage-haduvalli.html
  2. ಶೆಣೈ, ವೈ. ಉಮಾನಾಥ. ಕರಾವಳಿ ಕರ್ನಾಟಕದ ಜಿನ ಮಂದಿರಗಳ ದರ್ಶನ. ಉಜಿರೆ: ಮಂಜುಶ್ರೀ ಪ್ರಿಂಟರ್ಸ್.