ವಿ. ಬಿ. ಬೇಕರಿ

ವಿಕಿಪೀಡಿಯ ಇಂದ
Jump to navigation Jump to search
'ವಿ.ಬಿ.ಬೇಕರಿ'

'ವಿ. ಬಿ. ಬೇಕರಿ,' ಬೆಂಗಳೂರಿನಲ್ಲಿ ಸ್ಥಾಪಿಸಿರುವ ಅನೇಕಾನೇಕ,'ಅಯ್ಯಂಗಾರ್ ಬೇಕರಿ'ಗಳಲ್ಲಿ ಒಂದು. ಇದನ್ನು ವಿಶ್ವೇಶ್ವರಪುರಂ ಬೇಕರಿಯೆಂದೂ ಕರೆಯುತ್ತಾರೆ. ಅಯ್ಯಂಗಾರ್ ಬೇಕರಿಗಳು ಸ್ವಚ್ಛ ಪರಿಸರದಲ್ಲಿದ್ದು, ಒಳ್ಳೆಯ ಹದವಾದ ಬಿಸಿ-ಬಿಸಿ ಕೇಕ್, ಬನ್, ಬ್ರೆಡ್, ಹುರಿಗಾಳು, ರಸ್ಕ್, ಬೆಣ್ಣೆ ಬಿಸ್ಕತ್ ಗಳು ದೊರೆಯುತ್ತವೆ. ಇದು, ಐಸ್ ಕ್ರೀಂಗಳಿಗೂ ಪ್ರಸಿದ್ಧಿ. ಬೆಂಗಳೂರಿನ ಎಲ್ಲಾ ಬೇಕರಿಗಳಿಗಿಂತಾ ಗುಣಮಟ್ಟದಲ್ಲಿ ವಿ.ಬಿ.ಬೇಕರಿ ಹೆಸರನ್ನು ಪಡೆದಿದೆ. ಇಲ್ಲಿ ತಯಾರಿಸಿದ ಉತ್ಪಾದನೆಗಳು ಸ್ವಾದಿಷ್ಟತೆಗೆ ಹೆಸರುವಾಸಿ. ಬಿಸಿ-ಬಿಸಿ ಖಾರಬನ್ನು, ಸಿಹಿ-ಬನ್ನಿನ ಜೊತೆ ಬೆಣ್ಣೆ ಹಾಕಿಕೊಡುತ್ತಾರೆ. ಬಾದಾಮಿಹಾಲು ಸಿಗುತ್ತದೆ. ಇಲ್ಲಿ ಭಾನುವಾರದಂದು ತಯಾರಿಸುವ 'ದಂರೋಟ್' ಬಹಳ ವಿಶೇಷ.(KBC),'ಖಾರ ಬನ್ ಕಾಂಗ್ರೆಸ್' ಇಲ್ಲಿ ಇನ್ನೊಂದು ವಿಶೇಷ. ಇದು 'ವಿಶ್ವೇಶ್ವರ ಪುರಂ ಸರ್ಕಲ್', ಅಥವಾ 'ಸಜ್ಜನರಾವ್ ಸರ್ಕಲ್' ಬಳಿಯೇ ಇದೆ. ಹತ್ತಿರದಲ್ಲೇ 'ವಾಲ್ಮೀಕಾಶ್ರಮ'ದಲ್ಲಿ ಪ್ರತಿದಿನವೂ 'ಹರಿಕಥೆ' ಜರುಗುತ್ತದೆ. 'ಪೋಸ್ಟ್ ಆಫೀಸ್' ಎದುರಿಗೇ ಇದೆ.'ಆರ್ಯಸಮಾಜ', 'ವೆಂಕಟರಮಣಸ್ವಾಮಿ ದೇವಾಲಯ', 'ಸತ್ಯನಾರಾಯಣ ದೇವಾಲಯ', 'ಸಜ್ಜನ್ ರಾವ್ ಛತ್ರ', 'ಸುಬ್ರಹ್ಮಣ್ಯಸ್ವಾಮಿ ದೇವಸ್ಥಾನ'(ಸಜ್ಜನ್ ರಾವ್ ದೇವಸ್ಥಾನ)ಗಳು ನಡೆದು ಹೋಗುವಷ್ಟು ಹತ್ತಿರ.

ಹತ್ತಿರದಲ್ಲಿರುವ ಮತ್ತಿತರ ಹೆಸರುವಾಸಿಯಾದ ಸ್ಥಳಗಳು[ಬದಲಾಯಿಸಿ]