ವಿಷಯಕ್ಕೆ ಹೋಗು

ವಿಸ್ಮಯಗಳ ದೇಶ ನಾರ್ವೆ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ವಿಸ್ಮಯಗಳ ದೇಶ ನಾರ್ವೆ

[ಬದಲಾಯಿಸಿ]

ನಾರ್ವೆಯು ಉತ್ತರ ಯುರೋಪ್‌ನಲ್ಲಿ ಸ್ಕ್ಯಾಂಡಿನೇವಿಯಾದ ಪಶ್ಚಿಮ ಮತ್ತು ಉತ್ತರದ ಭಾಗವನ್ನು ಒಳಗೊಂಡಿದೆ, ಅಕ್ಷಾಂಶಗಳು 57° ಮತ್ತು 81° N , ಮತ್ತು ರೇಖಾಂಶಗಳು 4° ಮತ್ತು 32° E . ನಾರ್ವೆ ನಾರ್ಡಿಕ್ ದೇಶಗಳ ಉತ್ತರದ ತುದಿಯಾಗಿದೆ ಮತ್ತು ಸ್ವಾಲ್ಬಾರ್ಡ್ ಅನ್ನು ಸೇರಿಸಿದರೆ ಪೂರ್ವದ ಭಾಗವೂ ಆಗಿದೆ. ನಾರ್ವೆ ಯುರೋಪಿನ ಮುಖ್ಯ ಭೂಭಾಗದ ಉತ್ತರದ ತುದಿಯನ್ನು ಒಳಗೊಂಡಿದೆ. ಇಲ್ಲಿ ಹಲವಾರು ವಿಸ್ಮಯಗಳು ನಡೆಯುತ್ತದೆ ಹಾಗು ಜನರನ್ನು ತನ್ನೆಡೆಗೆ ಆಕರ್ಷಿಸುತ್ತದೆ.

ವಿಸ್ಮಯಗಳು

[ಬದಲಾಯಿಸಿ]

ಸೂರ್ಯ ಮುಳುಗದ ನಾಡು ಎಂದು ಖ್ಯಾತಿ ಗಳಿಸಿರುವ ಉತ್ತರ ಧ್ರುವಕ್ಕೆ ಹತ್ತಿರದಲ್ಲಿರುವ ಭೂಮಿಯ ಕಟ್ಟಕಡೆಯ ದೇಶ ನಾರ್ವೆ. ನಾರ್ವೆ ಈ ಭೂಮಿಯ ಕಟ್ಟಕಡೆಯ ದೇಶ. ಭೂಮಿ ತನ್ನ ಅಕ್ಷದ ಮೇಲೆ ಸುತ್ತುವ ಉತ್ತರ ಧ್ರುವಕ್ಕೆ ಸಮೀಪದಲ್ಲಿದೆ ಈ ದೇಶ.

ಮಧ್ಯ ರಾತ್ರಿಯ ಸೂರ್ಯ ಉದಯಿಸುವ ದೇಶ

[ಬದಲಾಯಿಸಿ]

ಈ ದೇಶ ತುಂಬಾ ಸುಂದರವಾದ ದೇಶ. ಉತ್ತರ ನಾರ್ವೆಯ ಹೇವರ್‌ಫೆಸ್ಟ್ ನಗರದಲ್ಲಿ, ಸೂರ್ಯ ಕೇವಲ 40 ನಿಮಿಷಗಳ ಕಾಲ ಮಾತ್ರ ಮುಳುಗುತ್ತಾನೆ. ಹಾಗಾಗಿ, ಇದನ್ನು ಮಧ್ಯರಾತ್ರಿಯ ಸೂರ್ಯ ಉದಯಿಸುವ ದೇಶ ಎಂದೂ ಕರೆಯುತ್ತಾರೆ. ಇಲ್ಲಿ ಕೇವಲ 40 ನಿಮಿಷಗಳು ಮಾತ್ರ ಕತ್ತಲೆ ಇರುತ್ತದೆ, ಉಳಿದ 23 ಗಂಟೆ 20 ನಿಮಿಷಗಳ ಕಾಲ ಈ ನಗರ ಬೆಳಕಿನಿಂದ ಕಂಗೊಳಿಸುತ್ತದೆ.

ನಾರ್ವೆಯ ವಾತವರಣ ಸ್ಠಿತಿ-ಗತಿ

[ಬದಲಾಯಿಸಿ]

ಇಲ್ಲಿ ಬೇಸಿಗೆಯಲ್ಲೂ ಹಿಮ ಬೀಳುತ್ತದೆ. ಈ ದೇಶದಲ್ಲಿ ತುಂಬಾ ತಂಪಾದ ವಾತಾವರಣ ಇರುತ್ತದೆ. ವಿಶ್ವದ ಕೆಲವು ದೇಶಗಳಲ್ಲಿ, ಬೇಸಿಗೆಯಲ್ಲಿ ಉಷ್ಣತೆ 45 ರಿಂದ 50 ಡಿಗ್ರಿ ಇದ್ದರೆ, ಈ ದೇಶದಲ್ಲಿ ಬೇಸಿಗೆಯಲ್ಲೂ ಹಿಮಪಾತ ಇರುತ್ತದೆ. ಈ ಸಮಯದಲ್ಲಿ, ಇಲ್ಲಿನ ಉಷ್ಣತೆ ಶೂನ್ಯ ಡಿಗ್ರಿ ಇರುತ್ತದೆ. ಚಳಿಗಾಲದಲ್ಲಿ, ಇಲ್ಲಿನ ಉಷ್ಣತೆ ಮೈನಸ್ 45 ಡಿಗ್ರಿಗೆ ಇಳಿಯುತ್ತದೆ. ಇಲ್ಲಿನ ಸೌಂದರ್ಯ ಬೇರೆಯದ್ದೇ ಲೋಕವನ್ನೇ ಸೃಷ್ಟಿಸುತ್ತದೆ.ಇಲ್ಲಿ ಬೇಸಿಗೆಯಲ್ಲಿ ರಾತ್ರಿ ಇರುವುದಿಲ್ಲ. ಉತ್ತರ ಧ್ರುವಕ್ಕೆ ಹತ್ತಿರದಲ್ಲಿರುವುದರಿಂದ, ಇತರ ದೇಶಗಳಂತೆ ಪ್ರತಿದಿನ ಹಗಲು ಅಥವಾ ರಾತ್ರಿ ಇರುವುದಿಲ್ಲ. ಬದಲಾಗಿ, ಇಲ್ಲಿ ಆರು ತಿಂಗಳು ಹಗಲು ಮತ್ತು ಆರು ತಿಂಗಳು ರಾತ್ರಿ ಇರುತ್ತದೆ. ಚಳಿಗಾಲದಲ್ಲಿ, ಇಲ್ಲಿ ಸೂರ್ಯ ಉದಯಿಸುವುದಿಲ್ಲ, ಆದರೆ ಬೇಸಿಗೆಯಲ್ಲಿ, ಇಲ್ಲಿ ಸೂರ್ಯ ಮುಳುಗುವುದಿಲ್ಲ. ಜಗತ್ತಿನಾದ್ಯಂತ ಜನರು ಈ ದೇಶಕ್ಕೆ ಭೇಟಿ ನೀಡುತ್ತಾರೆ.

ನಾರ್ವೆಯ ಕಟ್ಟ ಕಡೆಯ ಹೆದ್ದಾರಿ

[ಬದಲಾಯಿಸಿ]

ಇಲ್ಲಿ ಒಬ್ಬಂಟಿಯಾಗಿ ಹೋಗುವುದನ್ನು ನಿಷೇಧಿಸಲಾಗಿದೆ. E-69 ಹೆದ್ದಾರಿ ಭೂಮಿಯ ತುದಿಗಳನ್ನು ನಾರ್ವೆಯೊಂದಿಗೆ ಸಂಪರ್ಕಿಸುತ್ತದೆ. ಈ ರಸ್ತೆ ವಿಶ್ವದ ಕೊನೆಯ ರಸ್ತೆಯಾಗಿದೆ. ನೀವು ಅಲ್ಲಿಗೆ ತಲುಪಿದಾಗ, ಎಲ್ಲಿಗೆ ಹೋಗಬೇಕೆಂದು ನಿಮಗೆ ತಿಳಿದಿರುವುದಿಲ್ಲ, ಏಕೆಂದರೆ ಅಲ್ಲಿಯೇ ಲೋಕ ಮುಗಿಯುತ್ತದೆ.ಈ ಹೆದ್ದಾರಿಯಲ್ಲಿ ಪ್ರಯಾಣಿಸಲು ಬಯಸಿದರೆ, ಒಬ್ಬಂಟಿಯಾಗಿ ಹೋಗುವುದನ್ನು ನಿಷೇಧಿಸಲಾಗಿದೆ. ಇಲ್ಲಿ, ಒಂದು ದೊಡ್ಡ ಗುಂಪಿನ ಜನರು ಮಾತ್ರ ಹೋಗಲು ಅವಕಾಶವಿದೆ. ಯಾವುದೇ ವ್ಯಕ್ತಿಯು ಒಬ್ಬಂಟಿಯಾಗಿ ಹೋಗಲು ಅಥವಾ ಈ ರಸ್ತೆಯಲ್ಲಿ ಒಬ್ಬಂಟಿಯಾಗಿ ವಾಹನ ಚಲಾಯಿಸಲು ಅನುಮತಿ ಇಲ್ಲ. ಇಲ್ಲಿ ಎಲ್ಲೆಡೆ ಹಿಮ ಇರುವುದರಿಂದ, ಒಬ್ಬಂಟಿಯಾಗಿ ಪ್ರಯಾಣಿಸುವುದರಿಂದ ದಾರಿ ತಪ್ಪುವ ಸಾಧ್ಯತೆ ಇರುವುದರಿಂದ ಒಂಟಿ ಪ್ರಯಾಣವನ್ನು ನಿಷೇಧಿಸಲಾಗಿದೆ. ಈ ಸ್ಥಳದಲ್ಲಿ ಸೂರ್ಯಾಸ್ತ ಮತ್ತು ಧ್ರುವಪ್ರಭೆಯನ್ನು ನೋಡುವುದು ಒಂದು ಅದ್ಭುತ ಅನುಭವ. ಹಲವು ವರ್ಷಗಳ ಹಿಂದೆ ಇಲ್ಲಿ ಮೀನು ವ್ಯಾಪಾರ ಇತ್ತು ಎಂದು ಹೇಳಲಾಗುತ್ತದೆ, ಆದರೆ ಕ್ರಮೇಣ ದೇಶ ಅಭಿವೃದ್ಧಿ ಹೊಂದುತ್ತಾ ಪ್ರವಾಸಿಗರು ಇಲ್ಲಿಗೆ ಬರಲು ಪ್ರಾರಂಭಿಸಿದರು. ಈಗ ಪ್ರವಾಸಿಗರಿಗೆ ಇಲ್ಲಿ ತಂಗಲು ಹೋಟೆಲ್‌ಗಳು ಮತ್ತು ರೆಸ್ಟೋರೆಂಟ್‌ಗಳ ಸೌಲಭ್ಯವೂ ಲಭ್ಯವಿದೆ.

ಉಲ್ಲೇಖ

[ಬದಲಾಯಿಸಿ]
  • "10 cool things about Norway you need to know".
  • "ಇದು ಭೂಮಿ ಮೇಲಿನ ಕೊನೆಯ ದೇಶ… ಇಲ್ಲಿ ಸೂರ್ಯ ಅಸ್ತಮಿಸೋದು ಕೇವಲ 40 ನಿಮಿಷ ಮಾತ್ರ!".