ವಿಶ್ವಕಪ್‌ ಕಬಡ್ಡಿ ಟೂರ್ನಿ ೨೦೧೬

ವಿಕಿಪೀಡಿಯ ಇಂದ
Jump to navigation Jump to search

ರೈಡರ್‌ ಅನೂಪ್ ಕುಮಾರ್ ನಾಯಕ[ಬದಲಾಯಿಸಿ]

Indoor kabaddi pictogram
 • 2016 ಆಕ್ಟೋಬರ್‍ನಲ್ಲಿ ಅಹಮದಾಬಾದ್‌ನಲ್ಲಿ ನಡೆ ಯಲಿರುವ ವಿಶ್ವಕಪ್‌ ಕಬಡ್ಡಿ ಟೂರ್ನಿಗೆ 14 ಸದಸ್ಯರ ಭಾರತ ತಂಡವನ್ನು ಪ್ರಕಟಿಸಲಾಗಿದ್ದು ರೈಡರ್‌ ಅನೂಪ್ ಕುಮಾರ್ ಅವರಿಗೆ ನಾಯಕತ್ವ ಲಭಿಸಿದೆ. ಆಲ್‌ರೌಂಡ್‌ ಆಟಗಾರ ಪಂಜಾಬ್‌ನ ಮಂಜಿತ್‌ ಚಿಲಾರ ಅವರು ಉಪನಾಯಕರಾಗಿ ಆಯ್ಕೆಯಾಗಿದ್ದಾರೆ. ಅಂತಿಮ ತಂಡವನ್ನು ಆಯ್ಕೆ ಮಾಡುವ ಸಲುವಾಗಿ ಒಂದು ತಿಂಗಳಿಂದ ರಾಷ್ಟ್ರೀಯ ತಂಡದ ಶಿಬಿರ ನಡೆದಿತ್ತು.
 • ಮಂಗಳವಾರ ಇಲ್ಲಿ ನಡೆದ ಸಮಾ ರಂಭದಲ್ಲಿ ತಂಡ ಮತ್ತು ಪೋಷಾಕು ಬಿಡುಗಡೆ ಮಾಡಲಾಯಿತು. ಅಕ್ಟೋಬರ್‌ 7ರಿಂದ ನಡೆಯಲಿರುವ ಟೂರ್ನಿಯಲ್ಲಿ 12 ತಂಡಗಳು ಪ್ರಶಸ್ತಿಗಾಗಿ ಪೈಪೋಟಿ ನಡೆಸಲಿವೆ. ಬಲ್ವಾನ್‌ ಸಿಂಗ್ ತಂಡದ ಮುಖ್ಯ ಕೋಚ್‌ ಆಗಿದ್ದು, ಭಾಸ್ಕರನ್‌ ಅವರನ್ನು ಸಹಾಯಕ ಕೋಚ್ ನೇಮಿಸಲಾಗಿದೆ.

ತಂಡಗಳು[ಬದಲಾಯಿಸಿ]

 • ಆತಿಥೇಯ ಭಾರತ, ೨.ಇರಾನ್, ೩.ದಕ್ಷಿಣ ಕೊರಿಯಾ, ೪.ಬಾಂಗ್ಲಾದೇಶ, ೫.ಯುನೈಟೆಡ್‌ ಅರಬ್‌ ಎಮಿರೇಟ್ಸ್‌, ೬.ಇಂಗ್ಲೆಂಡ್‌, ೭.ಆಸ್ಟ್ರೇಲಿಯಾ, ೮.ಪೋಲೆಂಡ್‌, ೯.ಥಾಯ್ಲೆಂಡ್, ೧೦.ಜಪಾನ್‌, ೧೧.ಅರ್ಜೆಂಟೀನಾ ಮತ್ತು ೧೨.ಕೆನ್ಯಾ ದೇಶಗಳು ಪಾಲ್ಗೊಳ್ಳಲಿವೆ. ಉದ್ಘಾಟನಾ ಪಂದ್ಯದಲ್ಲಿ ಭಾರತ ತಂಡ ದಕ್ಷಿಣ ಕೊರಿಯಾ ಎದುರು ಪೈಪೋಟಿ ನಡೆಸಲಿದೆ.
 • ‘ಅಹಮದಾಬಾದ್‌ನಲ್ಲಿ ನಡೆದ ಶಿಬಿರದಲ್ಲಿ ಉತ್ತಮ ಪ್ರದರ್ಶನ ತೋರಿದ ಆಟಗಾರರನ್ನು ಅಂತಿಮ ತಂಡಕ್ಕೆ ಆಯ್ದುಕೊಳ್ಳಲಾಯಿತು. ಪ್ರತಿ ವಿಭಾಗದಲ್ಲಿ ಪರಿಣತಿ ಹೊಂದಿರುವ ವರನ್ನು ಆಯ್ಕೆ ಮಾಡಿ ಸಮತೋಲನದ ತಂಡ ಇರುವಂತೆ ನೋಡಿಕೊಳ್ಳುವುದು ನಮ್ಮ ಗುರಿಯಾಗಿತ್ತು. ಹಿಂದಿನ ಎಲ್ಲಾ ಟೂರ್ನಿಗಳಿಗಿಂತ ಈ ಬಾರಿಯ ವಿಶ್ವಕಪ್‌ ಟೂರ್ನಿ ಹೆಚ್ಚು ಪೈಪೋಟಿಯಿಂದ ಕೂಡಿರಲಿದೆ’ ಎಂದು ಬಲ್ವಾನ್‌ ಸಿಂಗ್ ಹೇಳಿದರು.

ಭಾರತ ತಂಡ ಮತ್ತು ಪೊಷಾಕು[ಬದಲಾಯಿಸಿ]

 • ಪೋಷಾಕು ಅನಾವರಣ: ಭಾರತ ಕ್ರಿಕೆಟ್‌ ತಂಡದ ಮಾಜಿ ನಾಯಕ ಕಪಿಲ್‌ ದೇವ್‌ ಅವರು ತಂಡದ ಪೋಷಾಕು ಬಿಡುಗಡೆ ಮಾಡಿದರು. ಕಪಿಲ್‌ ದೇವ್‌ ತಮ್ಮ ಹಸ್ತಾಕ್ಷರ ಒಳಗೊಂಡ ಟೀ ಶರ್ಟ್‌ ಅನ್ನು ಅನೂಪ್‌ ಗೆ ನೀಡಿದರು.
 • ತಂಡ : ಅನೂಪ್‌ ಕುಮಾರ್‌ (ನಾಯಕ, ಹರಿಯಾಣ), ಅಜಯ್‌ ಠಾಕೂರ್‌ (ಹಿಮಾಚಲ ಪ್ರದೇಶ), ದೀಪಕ್‌ ಹೂಡಾ (ಹರಿಯಾಣ), ಧರ್ಮರಾಜ್‌ ಚೇರಲಾತನ್‌ (ತಮಿಳು ನಾಡು), ಜಸ್ವೀರ್ ಸಿಂಗ್ (ಹರಿಯಾಣ), ಕಿರಣ್‌ ಪರ್ಮಾರ್‌ (ಗುಜರಾತ್‌), ಮಂಜೀತ್‌ ಚಿಲಾರ (ಪಂಜಾಬ್‌), ಮೋಹಿತ್‌ ಚಿಲಾರ (ಪಂಜಾಬ್‌), ನಿತಿನ್ ತೋಮಾರ್‌ (ಉತ್ತರ ಪ್ರದೇಶ), ಪರದೀಪ್‌ ನರ್ವಾಲ್‌ (ಹರಿಯಾಣ), ರಾಹುಲ್ ಚೌಧರಿ (ಉತ್ತರ ಪ್ರದೇಶ), ಸಂದೀಪ್‌ ನರ್ವಾಲ್‌ ಮತ್ತು ಸುರೇಂದರ್‌ ನಾಡಾ (ಇಬ್ಬರೂ ಹರಿಯಾಣ).[೧]
 • ತಂಡದ ಫೋಟೊ:[[೧]]

ಎಂಟನೇ ಆವೃತ್ತಿಯ ಕಬಡ್ಡಿ ವಿಶ್ವಕಪ್ ಟೂರ್ನಿ ವಿವರ[ಬದಲಾಯಿಸಿ]

 • 2016 ಸೆ. 16:(ಬೆಂಗಳೂರು),
 • ಎಂಟನೇ ಆವೃತ್ತಿಯ ಕಬಡ್ಡಿ ವಿಶ್ವಕಪ್ ಟೂರ್ನಿಯ ವೇಳಾಪಟ್ಟಿ ಪ್ರಕಟಗೊಂಡಿದೆ. ಉದ್ಘಾಟನಾ ಪಂದ್ಯದಲ್ಲಿ ಆತಿಥೇಯ ಚಾಂಪಿಯನ್ ಭಾರತ ತಂಡವನ್ನು ದಕ್ಷಿಣ ಕೊರಿಯಾ ಎದುರಿಸಲಿದೆ. ಅಕ್ಟೋಬರ್ 7ರಿಂದ 22ವರೆಗೆ ಟೂರ್ನಿ ನಡೆಯಲಿದೆ. ಈ ಟೂರ್ನಿಗೆ ಸಂಪೂರ್ಣ ಮಾರ್ಗದರ್ಶಿ ಇಲ್ಲಿದೆ.
 • ಭಾರತದಲ್ಲಿ ಪ್ರೊ ಕಬಡ್ಡಿ ಲೀಗ್ ಯಶಸ್ಚಿಯಾಗಿರುವುದರಿಂದ ಅಂತಾರಾಷ್ಟ್ರೀಯ ಮಟ್ಟದಲ್ಲಿ ವಿಶ್ವಕಪ್ ಕೂಡಾ ಯಶಸ್ವಿಯಾಗುವ ನಿರೀಕ್ಷೆಗಳಿವೆ. ಹಾಲಿ ಚಾಂಪಿಯನ್ ಭಾರತ ಸಹಜವಾಗಿ ಪ್ರಶಸ್ತಿ ಗೆಲ್ಲುವ ನೆಚ್ಚಿನ ತಂಡ ಎನಿಸಿದೆ. ಸಮರ್ಥ ಎದುರಾಳಿ ಎನಿಸಿಕೊಂಡಿರುವ ಪಾಕಿಸ್ತಾನ ತಂಡ ಈ ಟೂರ್ನಿಯಲ್ಲಿ ಭಾಗವಹಿಸುವುದು ಅನುಮಾನವಾಗಿದೆ.
 • ಅಹಮದಾಬಾದ್‌ನ ಟ್ರಾನ್ಸ್‌ಸ್ಟೇಡಿಯಾ ಕ್ರೀಡಾಂಗಣದಲ್ಲಿ ಅಕ್ಟೋಬರ್ 7 ರಿಂದ 22ವರೆಗೆ ಟೂರ್ನಿ ನಡೆಯಲಿದೆ. ವಿಶ್ವಕಪ್‌ಗೆ ವಿಶೇಷ ಲಾಂಛನವನ್ನು ತಯಾರಿಸಲಾಗಿದ್ದು, ಸಿಂಹ ಗರ್ಜನೆಯ ಮುಖ ಹೊಂದಿದೆ.
 • October 7, 2016: ಅಹಮದಾಬಾದ್,2016 ಅಕ್ಟೋಬರ್ 07: ಕಬಡ್ಡಿ ವಿಶ್ವಕಪ್ 2016 ಟೂರ್ನಿಗೆ ಶುಕ್ರವಾರ ಸಂಜೆ ಭರ್ಜರಿಯಾಗಿ ಆರಂಭಗೊಳ್ಳಲಿದೆ. ಉದ್ಘಾಟನಾ ಪಂದ್ಯದಲ್ಲಿ ಆತಿಥೇಯ ಚಾಂಪಿಯನ್ ಭಾರತ ತಂಡವನ್ನು ದಕ್ಷಿಣ ಕೊರಿಯಾ ಎದುರಿಸಿದೆ. ಅಕ್ಟೋಬರ್ 7ರಿಂದ 22ವರೆಗೆ ಟೂರ್ನಿ ನಡೆಯಲಿದೆ. ಒಟ್ಟು 12 ತಂಡಗಳು ಕಣದಲ್ಲಿವೆ. 2 ಗುಂಪುಗಳಲ್ಲಿ ತಲಾ 6 ತಂಡಗಳನ್ನು ವಿಂಗಡಿಸಲಾಗಿದೆ. ಅಮದಾಬಾದಿನ ಟ್ರಾನ್ಸ್ ಸ್ಟಾಡಿಯಾ ಸ್ಟೇಡಿಯಂನಲ್ಲಿ ಪಂದ್ಯಗಳು ನಡೆಯಲಿವೆ.(ಸ್ಟಾರ್ ಸ್ಫೋರ್ಟ್ಸ್ ನೆಟ್ವರ್ಕ್ ನಲ್ಲಿ ಲೈವ್ ಪ್ರಸಾರ, ಹಾಟ್ ಸ್ಟಾರ್ ಮೊಬೈಲ್ ಅಪ್ಲಿಕೇಷನ್ ನಲ್ಲೂ ನೋಡಬಹುದು.)
 • ಭಾರತ ಎ ಗುಂಪಿನಲ್ಲಿದೆ ಎದುರಾಳಿಗಳು: ಬಾಂಗ್ಲಾದೇಶ, ದಕ್ಷಿಣ ಕೊರಿಯಾ, ಆಸ್ಟ್ರೇಲಿಯಾ, ಇಂಗ್ಲೆಂಡ್ ಹಾಗೂ ಅರ್ಜೆಂಟೀನಾ.[ಭಾರತ ತಂಡಕ್ಕೆ ಅನೂಪ್ ನಾಯಕ]

ಭಾರತದ ವೇಳಾಪಟ್ಟಿ[ಬದಲಾಯಿಸಿ]

 • 2016-
 • ಅಕ್ಟೋಬರ್ 07 ಭಾರತ vs ದಕ್ಷಿಣ ಆಫ್ರಿಕಾ (8 PM IST)
 • ಅಕ್ಟೋಬರ್ 08 ಭಾರತ vs ಆಸ್ಟ್ರೇಲಿಯಾ (9 PM IST)
 • ಅಕ್ಟೋಬರ್ 11 ಭಾರತ vs ಬಾಂಗ್ಲಾದೇಶ (9 PM IST)
 • ಅಕ್ಟೋಬರ್ 15 ಭಾರತ vs ಅರ್ಜೆಂಟೀನಾ (9 PM IST)
 • ಅಕ್ಟೋಬರ್ 18 ಭಾರತ vs ಇಂಗ್ಲೆಂಡ್ (9 PM IST)
 • ಅಕ್ಟೋಬರ್ 21 ಸೆಮಿಫೈನಲ್ -1 (8 PM IST)
 • ಸೆಮಿಫೈನಲ್ -2 (9 PM IST)
 • ಅಕ್ಟೋಬರ್ 22 ಫೈನಲ್ (9 PM IST)

ಗುಂಪುಗಳು[ಬದಲಾಯಿಸಿ]

 • ಒಟ್ಟು 12 ತಂಡಗಳು ಕಣದಲ್ಲಿವೆ. 2 ಗುಂಪುಗಳಲ್ಲಿ ತಲಾ 6 ತಂಡಗಳನ್ನು ವಿಂಗಡಿಸಲಾಗಿದೆ.
 • ಗುಂಪು ಎ : ಭಾರತ, ಬಾಂಗ್ಲಾದೇಶ, ದಕ್ಷಿಣ ಕೊರಿಯಾ, ಆಸ್ಟ್ರೇಲಿಯಾ, ಇಂಗ್ಲೆಂಡ್ ಹಾಗೂ ಅರ್ಜೆಂಟೀನಾ.
 • ಗುಂಪು ಬಿ: ಇರಾನ್, ಥಾಯ್ಲೆಂಡ್, ಜಪಾನ್, ಯುಎಸ್ಎ, ಪೋಲೆಂಡ್ ಹಾಗೂ ಕೀನ್ಯಾ
 • ರೌಂಡ್ ರಾಬಿನ್ ಮತ್ತು ನಾಕೌಟ್ ಮಾದರಿಯಲ್ಲಿ ಟೂರ್ನಿ ನಡೆಯಲಿದೆ.
 • ಅ. 21 ರಂದು ಸೆಮಿಫೈನಲ್ ಪಂದ್ಯ ಮರುದಿನವೇ ಫೈನಲ್ ನಿಗದಿಯಾಗಿದೆ. ಎಲ್ಲಿ ಪ್ರಸಾರ: ಸ್ಟಾರ್ ಸ್ಫೋರ್ಟ್ ಇಂಡಿಯಾ

[೨]

ಭಾರತದ ಮೊದಲ ಪಂದ್ಯ[ಬದಲಾಯಿಸಿ]

ಅಹಮದಾಬಾದ್‌, ಅಕ್ಟೋಬರ್. 08 : ವಿಶ್ವಕಪ್‌ ಕಬಡ್ಡಿ ಟೂರ್ನಿಯ ಮೊದಲ ಪಂದ್ಯದಲ್ಲಿ ಹಾಲಿ ಚಾಂಪಿಯನ್ಸ್ ಭಾರತ ಸೋಲು ಕಂಡಿದೆ. 32-34 ಅಂತರದಿಂದ ದಕ್ಷಿಣ ಕೊರಿಯಾಗೆ ಶರಣಾಯಿತು.[೩]

 • 10 Oct, 2016
 • ರೈಡಿಂಗ್‌ ಮತ್ತು ರಕ್ಷಣಾ ವಿಭಾಗದಲ್ಲಿ ಅಮೋಘ ಆಟ ಆಡಿ ಎದುರಾಳಿಗಳ ಸವಾಲನ್ನು ಮೀರಿ ನಿಂತ ಇರಾನ್‌ ತಂಡ ಇಲ್ಲಿ ನಡೆಯುತ್ತಿರುವ ವಿಶ್ವಕಪ್‌ ಕಬಡ್ಡಿಯಲ್ಲಿ ಅಗ್ರಸ್ಥಾನಕ್ಕೇರಿದೆ.
 • ಅಹಮದಾಬಾದ್‌‍ನಲ್ಲಿ ರೈಡಿಂಗ್‌ ಮತ್ತು ರಕ್ಷಣಾ ವಿಭಾಗದಲ್ಲಿ ಅಮೋಘ ಆಟ ಆಡಿ ಎದುರಾಳಿಗಳ ಸವಾಲನ್ನು ಮೀರಿ ನಿಂತ ಇರಾನ್‌ ತಂಡ ಇಲ್ಲಿ ನಡೆಯುತ್ತಿರುವ ವಿಶ್ವಕಪ್‌ ಕಬಡ್ಡಿಯಲ್ಲಿ ಗೆಲುವಿನ ಓಟ ಮುಂದುವರಿಸಿದೆ. ಭಾನುವಾರ ನಡೆದ ಪಂದ್ಯದಲ್ಲಿ ಇಲ್ಲಿ ಪ್ರಶಸ್ತಿ ಗೆಲ್ಲುವ ನೆಚ್ಚಿನ ತಂಡ ಎನಿ ಸಿರುವ ಇರಾನ್‌ 64–23 ಪಾಯಿಂಟ್ಸ್‌ ನಿಂದ ಥಾಯ್ಲೆಂಡ್‌ ತಂಡವನ್ನು ಪರಾಭವಗೊಳಿಸಿತು. 17ನೇ ನಿಮಿಷದ ಆಟ ಮುಗಿದಾಗ 30–6ರ ಮುನ್ನಡೆ ಹೊಂದಿದ್ದ ಇರಾನ್‌ ಆ ನಂತರವೂ ಎದುರಾಳಿಗಳ ಮೇಲೆ ಸವಾರಿ ನಡೆಸಿತು. ಈ ತಂಡ ಒಟ್ಟು ಆಡು ಬಾರಿ ಥಾಯ್ಲೆಂಡ್‌ ತಂಡವನ್ನು ಆಲೌಟ್‌ ಮಾಡಿ ನಿರಾಯಾಸವಾಗಿ ಗೆಲುವಿನ ತೋರಣ ಕಟ್ಟಿತು.
 • ಇತರ ಪಂದ್ಯಗಳಲ್ಲಿ ಜಪಾನ್‌ ತಂಡ 45–19ರಲ್ಲಿ ಅಮೆರಿಕ ತಂಡವನ್ನು ಮಣಿಸಿದರೆ, ಕೊರಿಯಾ ತಂಡ 68–42ರಲ್ಲಿ ಅರ್ಜೆಂಟೀನಾ ವಿರುದ್ಧ ಜಯಭೇರಿ ಮೊಳಗಿಸಿತು.[೪]
 • 11 Oct, 2016:ಮಂಗಳವಾರ ನಡೆದ ಪಂದ್ಯದಲ್ಲಿ ಏ.ಗುಂಪಿನಲ್ಲಿ ಭಾರತದ ಆಟಗಾರರು ಬಾಂಗ್ಲಾದೇಶ ತಂಡವನ್ನು 57–20ರಿಂದ ಸೋಲಿಸಿದರು. ೧೧ ಅಂಕ ಪಡೆದು ಮೊದಲ ಸ್ಥಾನದಲ್ಲಿದೆ.
 • ಬಿ.ಗುಂಪಿನ ಇರಾನ್‌ ತಂಡದ ಅನುಭವಿ ಆಟಗಾರರು ಕೆನ್ಯಾದ ವಿರುದ್ಧ 33–28ರಿಂದ ಗೆಲುವು ಪಡೆದರು. ೧೫ ಅಂಕ ಪಡೆದು ಮೊದಲ ಸ್ಥಾನದಲ್ಲಿದೆ.[೫]
 • ಫಲಿತಾಂಶಗಳ ಮನೆ-ಪಟ್ಟಿ: [[೨]]
 • 12/13 Oct, 2016
 • ಜಪಾನ್‌ ತಂಡದವರು ಇಲ್ಲಿ ನಡೆಯುತ್ತಿರುವ ವಿಶ್ವಕಪ್‌ ಕಬಡ್ಡಿ ಟೂರ್ನಿಯ ಬಿ ಗುಂಪಿನ ಪಂದ್ಯದಲ್ಲಿ ಪೋಲೆಂಡ್‌ ವಿರುದ್ಧ 33–22 ಪಾಯಿಂಟ್‌ಗಳಿಂದ ಗೆಲುವು ಗಳಿಸಿತು.
 • ಇನ್ನೊಂದು ಪಂದ್ಯದಲ್ಲಿ ಆಸ್ಟ್ರೇಲಿಯ ತಂಡದ ಆಟಗಾರರು 68–45ರಿಂದ ಅರ್ಜೆಂಟಿನಾ ವಿರುದ್ಧ ಗೆಲುವು ದಾಖಲಿಸಿದರು.[೬]
 • ೧೫-೧೦-೨೦೧೬
 • ಬಲಿಷ್ಠ ಭಾರತ ತಂಡದೆದುರು ಅರ್ಜೆಂಟೀನಾ ತಂಡ ದಾಖಲೆಯ 54 ಅಂಕಗಳ ಅಂತರದಿಂದ ಸೋಲು ಕಂಡಿದೆ. ಅಹಮದಾಬಾದಿನ ಟ್ರಾನ್ಸ್​ಸ್ಟೇಡಿಯಾದ ದಿ ಅರೆನಾ ಸ್ಟೇಡಿಯಂನಲ್ಲಿ ಶನಿವಾರದಂದು ನಡೆದ ಪಂದ್ಯದಲ್ಲಿ ಆರಂಭದಿಂದಲೇ ಭಾರತ ಪ್ರಾಬಲ್ಯ ಮೆರೆಯಿತು. ಎದುರಾಳಿ ತಂಡವನ್ನು 6 ಬಾರಿ ಆಲೌಟ್ ಮಾಡಿ ಬೋನಸ್ ನೊಂದಿಗೆ 74-20 ಅಂಕಗಳಿಂದ ಗೆಲುವು ದಾಖಲಿಸಿತು.[೭]
 • 18 Oct, 2016
 • ಪೋಲೆಂಡ್ ದೇಶವು ಯುರೋಪ್‌ನ ಕಬಡ್ಡಿ ಶಕ್ತಿ ಕೇಂದ್ರವಾಗುವ ಎಲ್ಲಾ ಲಕ್ಷಣಗಳು ಅನಾವರಣಗೊಂಡಿವೆ. ಇಲ್ಲಿ ನಡೆಯುತ್ತಿರುವ ವಿಶ್ವಕಪ್‌ ಕಬಡ್ಡಿಯ ಸೋಮವಾರದ ಪಂದ್ಯದಲ್ಲಿ ಏಷ್ಯಾದ ಪ್ರಬಲ ತಂಡ ಇರಾನ್‌ 25–41 ರಿಂದ ಮೈಕೆಲ್‌ ಸ್ಪಿಸ್ಕೊ ಬಳಗಕ್ಕೆ ಸೋತಿತು.
 • ಬಾಂಗ್ಲಾದೇಶದ ಆಟಗಾರರು ಎ ಗುಂಪಿನ ಪಂದ್ಯದಲ್ಲಿ ಆಸ್ಟೇಲಿಯಾವನ್ನು 80–8 ರಿಂದ ಲೀಲಾಜಾಲವಾಗಿ ಸೋಲಿಸಿದರು.

*ಎ' ಗುಂಪಿನಲ್ಲಿ ದ.ಕೊರಿಯಾ ೨೫ ಮತ್ತು ಭಾರತ ೧೬ ಅಂಕಗಳಿಂದ ಮುಂದಿವೆ. ಬಿ' ಗುಂಪಿನಲ್ಲಿ ಇರಾನ್ ೨೦; ಥಾಯ್ಲೆಂಡ್ ೧೫ ಅಂಕಗಳಿಂದ ಮುಂದಿವೆ. [೮]

ಭಾರತದ ಗೆಲವು[ಬದಲಾಯಿಸಿ]

 • 19 Oct, 2016
 • ಅಹಮದಾಬಾದ್: ಭಾರತ ತಂಡ ದವರು ವಿಶ್ವಕಪ್‌ ಕಬಡ್ಡಿಯ ಲೀಗ್‌ ಹಂತದ ತಮ್ಮ ಕೊನೆಯ ಪಂದ್ಯದಲ್ಲಿ ಸೋಮೇಶ್ವರ ಕಾಲಿಯ ನೇತೃತ್ವದ ಇಂಗ್ಲೆಂಡ್‌ ತಂಡದ ವಿರುದ್ಧ 69–18 ರಿಂದ ಲೀಲಾಜಾಲ ಗೆಲುವು ಗಳಿಸಿದರು. ಈಗಾಗಲೇ ಎ ಗುಂಪಿನಲ್ಲಿ ಎರಡನೇ ಸ್ಥಾನದಲ್ಲಿರುವ ಭಾರತ ಈ ಗೆಲುವಿನಿಂದ ಸೆಮಿಫೈನಲ್‌ ಸ್ಥಾನವನ್ನು ಗಟ್ಟಿ ಮಾಡಿಕೊಂಡಿತು.
 • ಬಿ ಗುಂಪಿನಲ್ಲಿ ಎರಡನೇ ಸ್ಥಾನ ಪಡೆದು ಕೆನ್ಯಾ ಸೆಮಿಫೈನಲ್‌ ತಲುಪಿದರೆ ಅಚ್ಚರಿ ಏನಿಲ್ಲ. ಕೆನ್ಯಾ ತಂಡದವರು ಪೋಲೆಂಡ್‌, ಜಪಾನ್‌ ಮತ್ತು ಅಮೆರಿಕಾ ತಂಡಗಳನ್ನು ಸೋಲಿಸಿರುವುದರಿಂದ ಒಟ್ಟು 15 ಪಾಯಿಂಟ್ಸ್‌ ಗಳಿಸಿದೆ.
 • ಎ. ಗಂಪು :ದ.ಕೊರಿಯಾ ೨೫; ಭಾರತ :೨೧;; ಬಿ.=ಇರಾನ್ ೨೦; ಕೆನ್ಯಾ ೧೬;

[೯]*

 • ಎ. ಗಂಪು :ಭಾರತದ ಆಟಗಾರರು ಇಲ್ಲಿನ ಟ್ರಾನ್ಸ್‌ ಸ್ಟೇಡಿಯಾದಲ್ಲಿ ಶುಕ್ರವಾರ ನಡೆದ ಸೆಮಿಫೈನಲ್‌ನಲ್ಲಿ ಥಾಯ್ಲೆಂಡ್‌ ವಿರುದ್ಧರಿಂದ ಏಕಪಕ್ಷೀಯ 73-20 ಗೆಲುವು ಗಳಿಸಿದರು.
 • ಬಿ.=ಇರಾನ್‌ ಆಟಗಾರರು 28–22ರಿಂದ ಕೊರಿಯಾದ ವಿರುದ್ಧ ಗೆಲುವು ಗಳಿಸಿದರು.[೧೦]

ಆಂತಿಮ ಪಂದ್ಯ[ಬದಲಾಯಿಸಿ]

 • ಭಾರತ X ಇರಾನ್.

ಅಹಮದಾಬಾದ್‌‍ನಲ್ಲಿ ನಡೆದ ಫೈನಲ್‌ ಪಂದ್ಯದಲ್ಲಿ ಸತತ ಮೂರನೇ ಬಾರಿಗೆ ಮುಖಾಮುಖಿಯಾಗಿದ್ದ ಭಾರತ–ಇರಾನ್‌ ನಡುವಿನ ಸೆಣಸಾಟದಲ್ಲಿ ಇರಾನ್‌ ತಂಡವನ್ನು ಸೋಲಿಸಿ ಭಾರತದ ಆಟಗಾರರು ವಿಶ್ವಕಪ್‌ ಕಬಡ್ಡಿ ಚಾಂಪಿಯನ್‌ ಮುಡಿಗೇರಿಸಿಕೊಂಡರು. ದಿ.22 Oct, 2016 ಶನಿವಾರ ಟ್ರಾನ್ಸ್‌ಸ್ಟೇಡಿಯಾದಲ್ಲಿ ನಡೆದ ಇರಾನ್‌ ವಿರುದ್ಧದ ಫೈನಲ್‌ ಸೆಣಸಾಟದಲ್ಲಿ ಭಾರತ ತಂಡ 38–29ರಲ್ಲಿ ಪಂದ್ಯವನ್ನು ಗೆಲ್ಲುವ ಮೂಲಕ ಭಾರತ ವಿಜಯೋತ್ಸವ ಆಚರಿಸಿತು.

 • ಸೆಮಿಫೈನಲ್‌ನಲ್ಲಿ ಥಾಯ್ಲೆಂಡ್‌ ವಿರುದ್ಧ 73–20ರಿಂದ ಏಕಪಕ್ಷೀಯ ಗೆಲುವು ಸಾಧಿಸಿದ್ದ ಭಾರತ ತಂಡ, ಫೈನಲ್‌ನಲ್ಲಿ ಇರಾನ್‌ ವಿರುದ್ಧ ಸೆಣಸಾಟದಲ್ಲಿ ಮೊದಲಾರ್ಧ ಮುಗಿದಾಗ ಹಿನ್ನಡೆ ಅನುಭವಿಸಿತ್ತು. ಬಳಿಕ ಚುರುಕು ಮತ್ತು ಉತ್ತಮ ಆಟ ಪ್ರದರ್ಶಿಸಿ ಮುನ್ನಡೆ ಸಾಧಿಸಿ ಗೆಲುವಿನ ಗುರಿ ತಲುಪಿತು.
 • ಇದರೊಂದಿಗೆ 2004, 2007 ಹಾಗೂ 2016ರಲ್ಲಿ ಇರಾನ್‌ ವಿರುದ್ಧ ನಡೆದ ಮೂರೂ ಫೈನಲ್‌ನಲ್ಲೂ ವಿಶ್ವಕಪ್‌ ಗೆದ್ದ ಹ್ಯಾಟ್ರಿಕ್‌ ಸಾಧನೆ ಭಾರತದ್ದಾಗಿದೆ.[೧೧]
 • ರೈಡರ್ಗಳು:ಭಾರತದ ಅಜಯ್‌ ಠಾಕೂರ್‌ ಮೂರನೇ ವಿಶ್ವಕಪ್‌ನಲ್ಲಿ ಅತ್ಯಧಿಕ ಯಶಸ್ವಿ ರೈಡ್‌ಗಳನ್ನು ಮಾಡಿದ ಆಟಗಾರ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ. ಅಜಯ್‌ ಒಟ್ಟು 54 ಯಶಸ್ವಿ ರೈಡ್‌ಗಳನ್ನು ನಡೆಸಿದ್ದರೆ, ಬಾಂಗ್ಲಾ ದೇಶದ ಮಹಮ್ಮದ್‌ ಅರ್ಜುದ್‌ಮಾನ್‌ ಮುನ್ಶಿ 46 ಪಾಯಿಂಟ್‌ಗಳೊಂದಿಗೆ ಎರಡನೇ ಸ್ಥಾನದಲ್ಲಿದ್ದಾರೆ. ನಂತರದ ಸ್ಥಾನಗಳಲ್ಲಿ ಥಾಯ್ಲೆಂಡ್‌ನ ಕೊಮ್ಯಾನ್‌ ತೊಂಗಾಮ್‌ (46) ಮತ್ತು ಪ್ರದೀಪ್‌ ನರ್ವಾಲ್‌ (39) ಇದ್ದಾರೆ.[೧೨]

ನೋಡಿ[ಬದಲಾಯಿಸಿ]

ಹೊರ ಸಂಪರ್ಕಗಳು[ಬದಲಾಯಿಸಿ]

ಉಲ್ಲೇಖ[ಬದಲಾಯಿಸಿ]

 1. ವಿಶ್ವಕಪ್‌ ಕಬಡ್ಡಿ ಟೂರ್ನಿಗೆ ಭಾರತ ತಂಡ ಪ್ರಕಟ
 2. ಎಂಟನೇ ಆವೃತ್ತಿಯ ಕಬಡ್ಡಿ ವಿಶ್ವಕಪ್ ಟೂರ್ನಿಯ ವೇಳಾಪಟ್ಟಿ
 3. ಭಾರತ ಸೋಲು ಕಂಡಿದೆ.
 4. ಅಗ್ರಸ್ಥಾನಕ್ಕೇರಿದ ಇರಾನ್‌
 5. ಭಾರತಕ್ಕೆ ಭರ್ಜರಿ ಜಯ
 6. ಜಪಾನ್‌ ಜಯಭೇರಿ
 7. 54 ಅಂಕಗಳ ಅಂತರದಿಂದ ಗೆಲುವು
 8. ಇರಾನ್‌ ಎದುರು ಅಬ್ಬರಿಸಿದ ಪೋಲೆಂಡ್‌
 9. ತಲೆಬಾಗಿದ ಇಂಗ್ಲೆಂಡ್‌
 10. ಭಾರತ X ಇರಾನ್.
 11. ಭಾರತ ವಿಶ್ವಕಪ್‌ ಕಬಡ್ಡಿ ಚಾಂಪಿಯನ್‌
 12. ಅಧಿಕ ರೈಡಿಂಗ್‌ ಪಾಯಿಂಟ್ಸ್‌: ಅಜಯ್‌ಗೆ ಅಗ್ರಸ್ಥಾನ