ಬಳೆ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
ಬಳೆ
File:Bangles


ಬಳೆ ಎಂದರೆ ವೃತ್ತಾಕಾರವಾದ ಒಂದು ವಸ್ತು. ಸಾಮಾನ್ಯವಾಗಿ ಹೆಂಗಸರು ತಮ್ಮ ಕೈಗಳಿಗೆ ಧರಿಸುತ್ತಾರೆ. ಬಳೆಗಳು ಸಣ್ಣಮಕ್ಕಳಿಂದ ಹಿಡಿದು ವಯಸ್ಕರವರೆಗೂ ಎಲ್ಲರೂ ಧರಿಸುತ್ತಾರೆ. ಘಳಘಳ ಸದ್ದು ಮಾಡುತ್ತಾ ಎಲ್ಲರನ್ನು ತನ್ನತ್ತ ಸೆಳೆಯುವ ವಿಶಿಷ್ಟ ಗುಣ ಇದ್ದಕ್ಕಿದೆ.[೧]

ಬಳೆಗಳ ವಿಧಗಳು[ಬದಲಾಯಿಸಿ]

  • ಗಾಜಿನ ಬಳೆಗಳು-ಮಣ್ಣಿನ ಬಳೆಗಳು
  • ರಬ್ಬರ್ ಬಳೆಗಳು
  • ಅಲ್ಯೂಮಿನಿಯಮ್ ಬಳೆಗಳು
  • ಪ್ಲಾಸ್ಟಿಕ್ ಬಳೆಗಳು
  • ಚಿನ್ನದ ಬಳೆಗಳು
  • ಬೆಳ್ಳಿಯ ಬಳೆಗಳು
  • ಇತರ ಲೋಹದ ಬಳೆಗಳು

ಗಾಜಿನ ಬಳೆಗಳು ಅಥವಾ ಮಣ್ಣಿನ ಬಳೆಗಳು:[ಬದಲಾಯಿಸಿ]

ಗಾಜಿನ ಬಳೆಗಳು ಅಥವಾ ಮಣ್ಣಿನ ಬಳೆಗಳು:ವಿವಿಧ ಬಣ್ಣಗಳಿಂದ ಕೂಡಿದ್ದು ಬಡವರಿಂದ ಹಿಡಿದು ಶ್ರೀಮಂತರವರೆಗೆ ಎಲ್ಲರು ಇದನ್ನು ಇಷ್ಟಪಡುತ್ತಾರೆ. ಅದರಲ್ಲಿಯೂ ಕೆಂಪು ಮತ್ತು ಹಸಿರು ಬಣ್ಣದ ಬಳೆಗಳು ಮುತೈದೆಯರ ಲಕ್ಷಣವಾಗಿದೆ.ಮಣ್ಣಿನ ಬಳೆಗಳು ಹೆಚ್ಚು ದಪ್ಪಗಿದ್ದು ವಿವಿಧ ಬಣ್ಣಗಳಿಂದ ಆಕಷಕವಾಗಿ ಕಾಣುತ್ತದೆ.

ಪ್ಲಾಸ್ಟಿಕ್ ಬಳೆಗಳು:[ಬದಲಾಯಿಸಿ]

ಇತ್ತೀಚಿನ ದಿನಗಳಲ್ಲಿ ಪ್ಲಾಸ್ಟಿಕ್ ಬಳೆಗಳು ಹೊಸ ಜನಾಂಗದ ಯುವತಿಯರನ್ನು ಹೆಚ್ಚು ಸೆಳೆಯುತ್ತದೆ. ಹೆಚ್ಚು ಬಾಳಿಕೆ ಬರುವ ಈ ಬಳೆಗಳು ಬೇರೆ ಬೇರೆ ಗಾತ್ರ ಮತ್ತು ಆಕಾರಗಳಲ್ಲಿಯೂ ದೊರೆಯುತ್ತದೆ.

ಚಿನ್ನದ ಬಳೆಗಳು:[ಬದಲಾಯಿಸಿ]

ಹೆಚ್ಚಾಗಿ ಇದನ್ನು ಶ್ರೀಮಂತರು ಮಾತ್ರ ಧರಿಸುತ್ತಾರೆ.ಮದುವೆ ಮುಂತಾದ ಸಮಾರಂಭಗಳಲ್ಲಿ ಇದು ಹೆಚ್ಚು ಪ್ರಾಶಸ್ತ್ಯವನ್ನು ಹೊಂದಿದೆ.

ಬೆಳ್ಳಿಯ ಬಳೆಗಳು:[ಬದಲಾಯಿಸಿ]

ಇದನ್ನು ಬಳಸುವುದು ಬಲು ವಿರಳ. ಆದರೂ ಬೆಳ್ಳಿಯ ಬಳೆಗೆ ಚಿನ್ನದ ಲೇಪನವನ್ನು ಹಾಕಿ ಬಳಸುವುದು ಇದೆ.

ಇತರ ಲೋಹದ ಬಳೆಗಳು:[ಬದಲಾಯಿಸಿ]

ಲೋಹಗಳಲ್ಲಿ ಚಿನ್ನ ಮತ್ತು ಬೆಳ್ಳಿಯನ್ನು ಹೊರತು ಪಡಿಸಿ ಇತರ ಲೋಹಗಳನ್ನು ಬಳಸುತ್ತಾರೆ. ಇವುಗಳಿಗೆ ಚಿನ್ನ ಅಥವಾ ಬೆಳ್ಳಿಯ ಲೇಪನ ನೀಡಿ ಹೊಳೆಯುವ ಹಾಗೆ ಮಾಡುತ್ತಾರೆ. ಇತ್ತೀಚಿನ ದಿನಗಳಲ್ಲಿ "ಒನ್ ಗ್ರಾಂ ಗೋಲ್ಡ್" (one gram gold ornaments)[೨] ಹೆಚ್ಚು ಪ್ರಚಲಿತದಲ್ಲಿದೆ.

ಉಲ್ಲೇಖಗಳು[ಬದಲಾಯಿಸಿ]

  1. https://www.google.co.in/#q=bangles
  2. https://www.google.co.in/#q=one+gram+gold+ornaments
"https://kn.wikipedia.org/w/index.php?title=ಬಳೆ&oldid=1190977" ಇಂದ ಪಡೆಯಲ್ಪಟ್ಟಿದೆ