"ನಂದ ರಾಜವಂಶ" ಆವೃತ್ತಿಗಳ ಮಧ್ಯದ ಬದಲಾವಣೆಗಳು

Jump to navigation Jump to search
ಚು
ಸಂಪಾದನೆಯ ಸಾರಾಂಶವಿಲ್ಲ
ಚು (ಕೋಷ್ಟಕ)
ಚು
[[ಪುರಾಣಗಳು|ಪುರಾಣಗಳಲ್ಲಿ]] ಈ ರಾಜವಂಶದ ಸಂಸ್ಥಾಪಕನಾದ [[ಮಹಾಪದ್ಮ ನಂದ]]ನನ್ನು ಎಲ್ಲ [[ಕ್ಷತ್ರಿಯ]]ರ ವಿನಾಶಕ ಎಂದು ವರ್ಣಿಸಲಾಗಿದೆ. ಇವನು [[ಪಾಂಚಾಲ]], ಕಾಸಿ, ಹೈಹಯ, ಕಲಿಂಗ, [[ಅಶ್ಮಕ]], [[ಕುರು ರಾಜ್ಯ|ಕುರು]], [[ವಿದೇಹ]], [[ಶೂರಸೇನ]], ವಿತಿಹೋತ್ರ ಸೇರಿದಂತೆ ಅನೇಕ ರಾಜ್ಯಗಳನ್ನು ಗೆದ್ದುಕೊಂಡನು. ಇವನು ತನ್ನ ಪ್ರಾಂತವನ್ನು ವಿಂಧ್ಯ ಶ್ರೇಣಿಯ ದಕ್ಷಿಣಕ್ಕೆ [[ದಖ್ಖನ ಪ್ರಸ್ಥಭೂಮಿ]]ಯೊಳಗೆ ವಿಸ್ತರಿಸಿದನು. ಕ್ರಿ.ಪೂ. ೩೪೫ರಲ್ಲಿ [[ಶಿಶುನಾಗ ರಾಜವಂಶ]]ದಿಂದ ಸಿಂಹಾಸನವನ್ನು ಕಸಿದುಕೊಂಡ ನಂದರು{{sfn|Panda|2007|p=28}} ಕೀಳು ಮೂಲದವರೆಂದು ನಂಬಲಾಗಿತ್ತು.{{sfn|Mookerji|1988|p=7}} ಮಹಾಪದ್ಮನಂದನು [[ಮಹಾನಂದಿನ್]] ಮತ್ತು ಒಬ್ಬ [[ಶೂದ್ರ]] ತಾಯಿಯ ಮಗನಾಗಿದ್ದನು.
 
[[ನಂದರು|ನಂದ]] ರಾಜರು ತಮ್ಮ ಪೂರ್ವಾಧಿಕಾರಿಗಳಾದ [[ಹರ್ಯಂಕ ರಾಜವಂಶ|ಹರ್ಯಂಕ]] ಮತ್ತು ಶಿಶುನಾಗರು ಸ್ಥಾಪಿಸಿದ ಅಡಿಪಾಯದ ಮೇಲೆ ಕಟ್ಟಿ ಉತ್ತರ ಭಾರತದ ಮೊದಲ ಬೃಹತ್ ಸಾಮ್ರಾಜ್ಯವನ್ನು ನಿರ್ಮಿಸಿದರು. ಈ ಗುರಿಯನ್ನು ಸಾಧಿಸಲು ಇವರು ೨೦೦,೦೦೦ ಪದಾತಿದಳ, ೨೦,೦೦೦ ಅಶ್ವದಳ, ೨,೦೦೦ ಯುದ್ಧ ರಥಗಳು ಮತ್ತು ೩,೦೦೦ ಯುದ್ಧ ಗಜಗಳು ಇದ್ದ ದೊಡ್ಡ ಸೈನ್ಯವನ್ನು ಕಟ್ಟಿದರು (ಅತ್ಯಂತ ಕಡಿಮೆ ಅಂದಾಜಿನ ಪ್ರಕಾರ). ಆದರೆ, ನಂದರಿಗೆ ತಮ್ಮ ಸೈನ್ಯ ಅಲೆಕ್ಸಾಂಡರ್‍ನನ್ನು ಎದುರಿಸುವ ಅವಕಾಶ ನೊಡಲು ಸಿಗಲಿಲ್ಲ. ಧನ ನಂದನ ಸಮಯದಲ್ಲಿ, ಅಲೆಕ್ಸಾಂಡರನು ವಾಯವ್ಯ ಭಾರತವನ್ನು ಆಕ್ರಮಣ ಮಾಡಿದನು. ಆದರೆ ಅಲೆಕ್ಸಾಂಡರ್‍ನ ಪಡೆಗಳು ಬ್ಯಾಸ್ ನದಿಯ ತಟದಲ್ಲಿ ಬಂಡಾಯವೆದ್ದು ಮುಂದಕ್ಕೆ ಹೋಗಲು ನಿರಾಕರಿಸಿದರು. ಹಾಗಾಗಿ ಅಲೆಕ್ಸಾಂಡರನು ತನ್ನ ದಂಡಯಾತ್ರೆಯನ್ನು ಪಂಜಾಬ್ ಮತ್ತು ಸಿಂಧ್‍ನ ಬಯಲುಪ್ರದೇಶಕ್ಕೆ ಸೀಮಿತಿಗೊಳಿಸಬೇಕಾಯಿತು.
 
[[ಕಲಿಂಗ]]ದಲ್ಲಿ ನಂದರ ಸೇನಾ ವಿಜಯಗಳ ಒಂದು ಸಂಭಾವ್ಯ ಸಂಕೇತವನ್ನು [[ಖಾರವೇಲ]]ನ ನಂತರದ [[ಹಾಥಿಗುಂಫಾ ಶಾಸನ]]ವು ಸೂಚಿಸುತ್ತದೆ. ಇದು ಕಾಲುವೆ ಕಟ್ಟಿಸಿ ಒಂದು ಸ್ಥಳವನ್ನು ಆಕ್ರಮಣ ಮಾಡಿದ ನಂದ ಹೆಸರಿನ ರಾಜನನ್ನು ಉಲ್ಲೇಖಿಸುತ್ತದೆ. [[ಗೋದಾವರಿ]] ನದಿಯ ದಡದಲ್ಲಿ ನೌ ನಂದ್ ದೆಹ್ರಾ ಹೆಸರಿನ ಒಂದು ಸ್ಥಳದ ಅಸ್ತಿತ್ವ ದಖ್ಖನ ಪ್ರಸ್ಥಭೂಮಿ ಮೇಲೆ ನಂದರ ಆಳ್ವಿಕೆಯನ್ನು ಪ್ರತಿಬಿಂಬಿಸುತ್ತದೆ ಎಂದು ಕೆಲವು ವಿದ್ವಾಂಸರು ಹೇಳುತ್ತಾರೆ. ಆದರೆ, ವಿಂಧ್ಯ ಶ್ರೇಣಿಯ ಆಚೆಗೆ ನಂದರ ಆಳ್ವಿಕೆಯ ವಿಸ್ತಾರಕ್ಕೆ ಸಾಕ್ಷ್ಯಾಧಾರ ಪ್ರಬಲವಾಗಿಲ್ಲ.
೪೧,೧೬೦

edits

"https://kn.wikipedia.org/wiki/ವಿಶೇಷ:MobileDiff/984882" ಇಂದ ಪಡೆಯಲ್ಪಟ್ಟಿದೆ

ಸಂಚರಣೆ ಪಟ್ಟಿ