ಕೆ. ಬಿ. ಸಿದ್ದಯ್ಯ: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
Content deleted Content added
No edit summary
No edit summary
೪೫ ನೇ ಸಾಲು: ೪೫ ನೇ ಸಾಲು:
<ref>https://vijaykarnataka.com/news/tumakuru/senior-dalit-poet-kb-siddaiah-passed-away/articleshow/71642120.cms</ref>
<ref>https://vijaykarnataka.com/news/tumakuru/senior-dalit-poet-kb-siddaiah-passed-away/articleshow/71642120.cms</ref>
<ref>https://www.vijayavani.net/kb-siddaiah-death-dalit-writer-tumkur/</ref>
<ref>https://www.vijayavani.net/kb-siddaiah-death-dalit-writer-tumkur/</ref>
<ref>https://sanjevani.com/sanjevani/%E0%B2%B8%E0%B2%BE%E0%B2%B9%E0%B2%BF%E0%B2%A4%E0%B2%BF-%E0%B2%95%E0%B3%86-%E0%B2%AC%E0%B2%BF-%E0%B2%B8%E0%B2%BF%E0%B2%A6%E0%B3%8D%E0%B2%A6%E0%B2%AF%E0%B3%8D%E0%B2%AF-%E0%B2%A8%E0%B2%BF%E0%B2%A7/</ref>
<ref>http://m.varthabharati.in/article/2019_10_18/215292</ref>
<ref>http://m.varthabharati.in/article/2019_10_18/215274</ref>

೧೩:೦೬, ೧೯ ಅಕ್ಟೋಬರ್ ೨೦೧೯ ನಂತೆ ಪರಿಷ್ಕರಣೆ

ಕೆ.ಬಿ.ಸಿದ್ದಯ್ಯ ಕನ್ನಡ ದಲಿತ ಸಾಹಿತ್ಯ ಲೋಕ ಕಂಡ ಅದ್ಭುತ ಚಿಂತಕ, ಹಿರಿಯಚೇತನ ಕವಿ, ವಾಗ್ಮಿ.ನೊಂದವರ, ದಮನಿತರ ದನಿಯಾಗಿ, ಎಡಗೈ ಪ್ರತಿನಿಧಿಯಾಗಿ ನಮ್ಮ ಕಣ್ಣೆದುರು ನಿಲ್ಲುತ್ತಿದ್ದಿದ್ದು ಸಿದ್ದಯ್ಯ. ದಲಿತ ಹೋರಾಟದ ಕಿಡಿ ಹಣತೆ, ಸಿದ್ದಯ್ಯ ನಿಜಕ್ಕೂ ನಮ್ಮೊಳಗಿನ ಹೆಮ್ಮೆ.ಸಾಕಷ್ಟು ಬರೆಯುವ ಶಕ್ತಿ ಇದ್ದರೂ ಹೆಚ್ಚು ಬರೆಯಲಿಲ್ಲ.

ಜನನ/ಜೀವನ

  • ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಮಾಗಡಿ ತಾಲೂಕಿನ ಕೆಂಕೆಯಲ್ಲಿ ಬೈಲಪ್ಪ ಮತ್ತು ಅಂತೂರಮ್ಮನವರ ಪುತ್ರರಾಗಿ 1954 ಮಾರ್ಚ್ 2 ರಂದು ಜನಿಸಿದ ಕೆ.ಬಿ.ಸಿದ್ದಯ್ಯ, ಅಲ್ಲಿಂದ ತುಮಕೂರಿಗೆ ಬಂದು ನೆಲೆಸಿದರು. ದಲಿತ ಕುಟುಂಬದಲ್ಲಿ ಜನಿಸಿದ ಕೆ.ಬಿ. ಸಿದ್ದಯ್ಯ ಅವರು ಶ್ರೀ ಸಿದ್ದಾರ್ಥ ಪದವಿ ಪೂರ್ವ ಕಾಲೇಜಿನಲ್ಲಿ ಇಂಗ್ಲಿಷ್ ಭಾಷೆಯ ಶಿಕ್ಷಕರಾಗಿ ಕಾರ್ಯ ನಿರ್ವಹಿಸಿದರು. 1970-80ರ ದಶಕದಲ್ಲಿ ದಲಿತ ಚಳವಳಿಗಳಲ್ಲಿ ಗುರುತಿಸಿಕೊಂಡಿದ್ದರು.
  • ಖಂಡ ಕಾವ್ಯವನ್ನೇ ವಿಶಿಷ್ಟವಾಗಿ ಆಯ್ಕೆ ಮಾಡಿಕೊಂಡು ದೇಶೀಯತೆಯ ಮೂಲಕ ವಿಶ್ವವನ್ನು ಕಾಣಲು ಬಯಸಿದ್ದರು. ಮೊದಲಿಗೆ ಕಾವ್ಯದಲ್ಲಿ ಆಧ್ಯಾತ್ಮವನ್ನು ತಂದ ಹೆಗ್ಗಳಿಕೆ ಕಬಿ ಅವರದ್ದು. ದಕ್ಷಕಥಾದೇವಿ, ಬಕಾಲ, ಅನಾತ್ಮ ಗಲ್ಲೇಬಾನೆ ಈ ನಾಲ್ಕು - ಖಂಡಕಾವ್ಯಗಳಾದರೆ, ಕತ್ತಲೊಡನೆ ಮಾತುಕತೆ, ಬುದ್ದನ ನಾಲ್ಕು ಸತ್ಯಗಳು -ಗದ್ಯಬರಹಗಳು.
  • ದಲಿತ ಚಳವಳಿಯೊಂದಿಗೆ ಮುನ್ನಡೆದು ಬಂದಿದ್ದ ಕೆಬಿ ರಾಜ್ಯದ ಉದ್ದಕ್ಕೂ ಸಾಹಿತ್ಯ ವಲಯದಲ್ಲಿ ಪ್ರಭಾವ ಬೀರಿದ್ದರು.ಬುದ್ಧ ಮತ್ತು ಅಲ್ಲಮನ ಕುರಿತು ಗಂಭೀರವಾಗಿ ಓದಿಕೊಂಡಿದ್ದರು. ಅಲ್ಲಮನ ವಚನಗಳನ್ನು ಸಭಿಕರಿಗೆ ಮನವರಿಕೆಯಾಗುವಂತೆ ವಿವರಿಸುತ್ತಿದ್ದರು. ಒಳಮೀಸಲಾತಿಯ ಹೋರಾಟದಲ್ಲೂ ಗುರುತಿಸಿಕೊಂಡಿದ್ದರು.

ಕೃತಿಗಳು

ಕವಿ ಸಿದ್ಧಯ್ಯ ಅವರು

  1. ಬಕಾಲ,
  2. ದಕ್ಷಕಥಾದೇವಿ ಕಾವ್ಯ,
  3. ಅನಾತ್ಮ(ಕಾವ್ಯ)
  4. ನಾಲ್ಕು ಶ್ರೇಷ್ಠಸತ್ಯಗಳು (ಅನುವಾದ)
  5. ದಲಿತಕಾವ್ಯ (ಸಂಪಾದನೆ) ಕೃತಿಗಳನ್ನು ಪ್ರಕಟಿಸಿದ್ದಾರೆ. ಅವರ ಒಂದು ಪ್ರಸಿದ್ದ ಕವಿತೆ ಈ ಕೆಳಕಂಡಂತೆ ಇದೆ.

ಈ ದೇಹ, ನನ್ನ ದೇಹ, ಇಡೀ ದೇಹ
ಭವದ ಸಾಲ
ತೀರಿ ಹೋಗಲೆಂದು ಸಾಲ
ಇಡೀ ದೇಹ ಮಾರಿಬಿಟ್ಟೆ
ಮೂರು ಕಾಸಿಗೆ.
ಕೊಲ್ಲುವವರೂ ಕೊಳ್ಳಲಿಲ್ಲ
ಮಡಿಯುವವರೂ ಮುಟ್ಟಲಿಲ್ಲ
ಇರಲಿ ಬಿಡು ಈ ದೇಹ
ಹೋಗಲಿ ಬಿಡು ನನ್ನ ದೇಹ
ಎಂದು ಅರಿತು
ಕಟ್ಟಕಡೆಗೆ
ಸುಲಿದು ಸುಲಿದು ಸುಲಿದು
ಚರ್ಮ ಸುಲಿದು
ಮೆಟ್ಟು ಹೊಲೆದು
ಮೆಟ್ಟೀ ಮೆಟ್ಟೀ ಮೆಟ್ಟೀ
ಬಿಟ್ಟುಬಿಟ್ಟೆ ಮೆಟ್ಟುಬಿಡುವ ಜಾಗದಲ್ಲಿ....-ಕೆ.ಬಿ.ಸಿದ್ದಯ್ಯ

ಪ್ರಶಸ್ತಿಗಳು

  1. ಕರ್ನಾಟಕ ಸಾಹಿತ್ಯ ಅಕಾಡಮಿಯ ಗೌರವ ಪ್ರಶಸ್ತಿ (2೦೦೦)
  2. ಕನ್ನಡ ರಾಜ್ಯೋತ್ಸವ ಪ್ರಶಸ್ತಿ.

ಮರಣ

  • ದಲಿತ ಕವಿ ಕೆ.ಬಿ.ಸಿದ್ದಯ್ಯನವರು ಕೆಲ ದಿನಗಳ ಹಿಂದೆ ಮಾಗಡಿ ತಾಲೂಕಿನ ಕುದೂರು ಹೋಬಳಿಯ ಕೆಂಕೆರೆ ಗ್ರಾಮದ ಬಳಿ ಇರುವ ಅವರ ತೋಟಕ್ಕೆ ಹೋಗುವಾಗ ಸಿದ್ದಯ್ಯನವರ ಕಾರು ಅಪಘಾತವಾಗಿತ್ತು. ಅವರ ಕಾರು ಚಾಲಕ ಸ್ಥಳದಲ್ಲೇ ಸಾವನ್ನಪ್ಪಿದ್ದರು. ತೀವ್ರವಾಗಿ ಗಾಯಗೊಂಡಿದ್ದ ದಲಿತ ಕವಿ ಸಿದ್ದಯ್ಯನವರನ್ನು ಬೆಂಗಳೂರಿನ ಮಣಿಪಾಲ್ ಆಸ್ಪತ್ರೆಗೆ ದಾಖಲಿಸಲಾಗಿತ್ತು.
  • ತೀವ್ರ ರಕ್ತಸ್ರಾವವಾಗಿದ್ದರಿಂದ ಸಿದ್ದಯ್ಯನವರ ಶ್ವಾಸಕೋಶಕ್ಕೆ ಸೋಂಕು ತಗುಲಿದ ಕಾರಣ ಚಿಕಿತ್ಸೆ ಫಲಕಾರಿಯಾಗದೆ ದಿನಾಂಕ:೧೮-೧೦-೨೦೧೯ರಂದು ಕೊನೆಯುಸಿರೆಳೆದಿದ್ದಾರೆ. ಸಾಮಾಜಿಕ ಕಳಕಳಿ ಜೊತೆಜೊತೆಗೆ ಕನ್ನಡದ ಹಾಗು ದಲಿತಪರ ಧ್ವನಿ ಇಂದು ಮರೆಯಾಗಿದೆ.
  • ಕುದೂರು ಹೋಬಳಿಯ ಕೆಂಕೆರೆ ಗ್ರಾಮಕ್ಕೆ ಸಂಜೆ5.15 ಕ್ಕೆ ಅವರ ಪ್ರಾರ್ಥಿವ ಶರೀರವನ್ನು ಜನರ ಅಂತಿಮ ದರ್ಶನಕ್ಕೆ ಇಡಲಾಯಿತು. ನಂತರ ರಾತ್ರಿ 7 ಕ್ಕೆ ಅಂತ್ಯ ಸಂಸ್ಕಾರ ನೇರವೇರಿತು. ದಲಿತ ಕವಿ ಕೆ.ಬಿ.ಸಿದ್ದಯ್ಯನವರು ಪತ್ನಿ, ಇಬ್ಬರು ಪುತ್ರಿಯರು, ಮತ್ತು ಒರ್ವ ಪುತ್ರನನ್ನು ಬಿಟ್ಟು ಅಗಲಿದ್ದಾರೆ.

ಉಲ್ಲೇಖ

[೧] [೨] [೩] [೪] [೫] [೬]

  1. https://www.prajavani.net/news/article/2017/03/04/475677.html
  2. https://vijaykarnataka.com/news/tumakuru/senior-dalit-poet-kb-siddaiah-passed-away/articleshow/71642120.cms
  3. https://www.vijayavani.net/kb-siddaiah-death-dalit-writer-tumkur/
  4. https://sanjevani.com/sanjevani/%E0%B2%B8%E0%B2%BE%E0%B2%B9%E0%B2%BF%E0%B2%A4%E0%B2%BF-%E0%B2%95%E0%B3%86-%E0%B2%AC%E0%B2%BF-%E0%B2%B8%E0%B2%BF%E0%B2%A6%E0%B3%8D%E0%B2%A6%E0%B2%AF%E0%B3%8D%E0%B2%AF-%E0%B2%A8%E0%B2%BF%E0%B2%A7/
  5. http://m.varthabharati.in/article/2019_10_18/215292
  6. http://m.varthabharati.in/article/2019_10_18/215274