ಖಾನಾಪುರ: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
Content deleted Content added
ಟ್ಯಾಗ್‌ಗಳು: ಮೊಬೈಲ್ ಸಂಪಾದನೆ ಮೊಬೈಲ್ ವೆಬ್ ಸಂಪಾದನೆ
ಟ್ಯಾಗ್‌ಗಳು: ಮೊಬೈಲ್ ಸಂಪಾದನೆ ಮೊಬೈಲ್ ವೆಬ್ ಸಂಪಾದನೆ
೩೨ ನೇ ಸಾಲು: ೩೨ ನೇ ಸಾಲು:
ತಾಲ್ಲೂಕಿನ ವಿಸ್ತೀರ್ಣ 633 ಚ.ಮೈ. [[ಸಹ್ಯಾದ್ರಿ]] ಬೆಟ್ಟಗಳ ಪ್ರದೇಶದಲ್ಲಿರುವ ತಾಲ್ಲೂಕು ಪ್ರಕೃತಿ ಸೌಂದರ್ಯದಿಂದ ಕೂಡಿದೆ. ತಾಲ್ಲೂಕಿನ ವಾಯವ್ಯ ಭಾಗದಲ್ಲಿ ಎತ್ತರವಾದ ಬೆಟ್ಟಗಳು, ಈಶಾನ್ಯ ಹಾಗೂ ಪೂರ್ವದಲ್ಲಿ ಬಯಲುಪ್ರದೇಶ, ದಕ್ಷಿಣ ಹಾಗೂ ನೈಋತ್ಯ ಭಾಗದಲ್ಲಿ ದಟ್ಟವಾದ ಕಾಡು ಇವೆ. ತಾಲ್ಲೂಕಿನ ವಾಯುಗುಣ ಹಿತಕರವಾದ್ದು. ಇಲ್ಲಿಯ ವಾರ್ಷಿಕ ಸರಾಸರಿ ಮಳೆ 71". ಕಣಕುಂಬಿಯಲ್ಲಿ ಉಗಮಿಸುವ ಮಲಪ್ರಭಾ ನದಿ ತಾಲ್ಲೂಕಿನ ಉತ್ತರಾರ್ಧದಲ್ಲಿಯೇ ಹರಿದು ಪೂರ್ವಕ್ಕೆ ಸಾಗುತ್ತದೆ.ಖಾನಾಪುರ ಮಹಾದಾಯಿ ನದಿಯ ಉಗಮ ಭೂಮಿಯೂ ಹೌದು. ಮಹಾದಾಯಿ ನದಿ ಖಾನಾಪುರದ ಪಶ್ಚಿಮ ಘಟ್ಟಗಳಲ್ಲಿ ಹುಟ್ಟಿ ಗೋವೆಯ ಮೂಲಕ ಅರಬ್ಬಿ ಸಮುದ್ರವನ್ನು ಸೇರುತ್ತದೆ. ಭೀಮಗಢ ರಾಷ್ಟ್ರೀಯ ಅಭಯಾರಣ್ಯ ಕೂಡ ಖಾನಾಪುರ ತಾಲ್ಲೂಕಿನಲ್ಲಿಯೇ ಇದೆ. ಈ ಅಭಯಾರಣ್ಯದಲ್ಲಿ ವನ್ಯಜೀವಿಗಳಾದ ಆನೆ, ಕರಡಿ, ನರಿ, ಜಿಂಕೆ, ಹುಲಿ, ಚಿರತೆಗಳು ವಾಸಿಸುತ್ತವೆ.

ತಾಲ್ಲೂಕಿನ ಎಲ್ಲ ಕಡೆಗಳಲ್ಲೂ ಭತ್ತ,ಕಬ್ಬು,ಶೆಂಗಾ ಬೆಳೆಯುತ್ತಾರೆ ಮತ್ತು ಅಲ್ಲಲ್ಲಿ ಮಾವು, ಸಪೋಟ, ಪೇರಲ ಹಣ್ಣಿನ ತೋಟಗಳು ಉಂಟು. ಭತ್ತ,ಕಬ್ಬು,ಮೆಣಸಿನಕಾಯಿ ಇವು ತಾಲ್ಲೂಕಿನ ಮುಖ್ಯ ಬೆಳೆಗಳು. ದಕ್ಷಿಣ ಭಾಗದಲ್ಲಿರುವ ಕಾಡಿನಲ್ಲಿ ಬಿದಿರು, ಸಾಗವಾನಿ, ಶಿವನಿ, ಮತ್ತಿ ಮುಂತಾದ ಮರಗಳುಂಟು. ಮರಮುಟ್ಟು, ಉರುವಲು ಕಟ್ಟಿಗೆ ಇವು ಮುಖ್ಯ ಅರಣ್ಯೋತ್ಪನ್ನಗಳು.
ತಾಲ್ಲೂಕಿನ ಎಲ್ಲ ಕಡೆಗಳಲ್ಲೂ ಭತ್ತ,ಕಬ್ಬು,ಶೆಂಗಾ ಬೆಳೆಯುತ್ತಾರೆ ಮತ್ತು ಅಲ್ಲಲ್ಲಿ ಮಾವು, ಸಪೋಟ, ಪೇರಲ ಹಣ್ಣಿನ ತೋಟಗಳು ಉಂಟು. ಭತ್ತ, ಕಬ್ಬು,ಶೆಂಗಾ, ಮೆಣಸಿನಕಾಯಿ ಇವು ತಾಲ್ಲೂಕಿನ ಮುಖ್ಯ ಬೆಳೆಗಳು. ದಕ್ಷಿಣ ಭಾಗದಲ್ಲಿರುವ ಕಾಡಿನಲ್ಲಿ ಬಿದಿರು, ಸಾಗವಾನಿ, ಶಿವನಿ, ಮತ್ತಿ ಮುಂತಾದ ಮರಗಳುಂಟು. ಮರಮುಟ್ಟು, ಉರುವಲು ಕಟ್ಟಿಗೆ ಇವು ಮುಖ್ಯ ಅರಣ್ಯೋತ್ಪನ್ನಗಳು.

==ಜನಸಂಖ್ಯೆ==
==ಜನಸಂಖ್ಯೆ==

೧೫:೦೨, ೬ ಅಕ್ಟೋಬರ್ ೨೦೧೯ ನಂತೆ ಪರಿಷ್ಕರಣೆ

ಖಾನಾಪುರ
ಖಾನಾಪುರ
Town
Population
 (2001)
 • Total೧೬,೫೬೩

ಖಾನಾಪುರ ಕರ್ನಾಟಕ ರಾಜ್ಯದ ಬೆಳಗಾವಿ ಜಿಲ್ಲೆಯ ದಕ್ಷಿಣ ಭಾಗದ ಒಂದು ತಾಲ್ಲೂಕು, ತಾಲ್ಲೂಕಾ ಕೇಂದ್ರ ಮತ್ತು ಪಟ್ಟಣ. ಇದು ಬೆಳಗಾವಿ ನಗರದಿಂದ ಸುಮಾರು ೨೬ ಕಿಮಿ ದೂರದಲ್ಲಿದೆ. ಖಾನಾಪುರ ಕರ್ನಾಟಕ, ಗೋವಾ ಮತ್ತು ಮಹಾರಾಷ್ಟ್ರದ ಪ್ರಮುಖ ನಗರಗಳಿಗೆ ಉತ್ತಮ ರೈಲ್ವೆ ಮತ್ತು ರಸ್ತೆ ಸಂಪರ್ಕಗಳನ್ನು ಹೊಂದಿದೆ.ಖಾನಾಪುರ ಪಟ್ಟಣದಲ್ಲಿ ಜನರು ಪ್ರಮುಖವಾಗಿ ಕನ್ನಡ ಮತ್ತು ಮರಾಠಿ ಭಾಷೆಗಳನ್ನು ಮಾತನಾಡುತ್ತಾರೆ.

ಭೌಗೋಳಿಕ

ತಾಲ್ಲೂಕಿನ ವಿಸ್ತೀರ್ಣ 633 ಚ.ಮೈ. ಸಹ್ಯಾದ್ರಿ ಬೆಟ್ಟಗಳ ಪ್ರದೇಶದಲ್ಲಿರುವ ತಾಲ್ಲೂಕು ಪ್ರಕೃತಿ ಸೌಂದರ್ಯದಿಂದ ಕೂಡಿದೆ. ತಾಲ್ಲೂಕಿನ ವಾಯವ್ಯ ಭಾಗದಲ್ಲಿ ಎತ್ತರವಾದ ಬೆಟ್ಟಗಳು, ಈಶಾನ್ಯ ಹಾಗೂ ಪೂರ್ವದಲ್ಲಿ ಬಯಲುಪ್ರದೇಶ, ದಕ್ಷಿಣ ಹಾಗೂ ನೈಋತ್ಯ ಭಾಗದಲ್ಲಿ ದಟ್ಟವಾದ ಕಾಡು ಇವೆ. ತಾಲ್ಲೂಕಿನ ವಾಯುಗುಣ ಹಿತಕರವಾದ್ದು. ಇಲ್ಲಿಯ ವಾರ್ಷಿಕ ಸರಾಸರಿ ಮಳೆ 71". ಕಣಕುಂಬಿಯಲ್ಲಿ ಉಗಮಿಸುವ ಮಲಪ್ರಭಾ ನದಿ ತಾಲ್ಲೂಕಿನ ಉತ್ತರಾರ್ಧದಲ್ಲಿಯೇ ಹರಿದು ಪೂರ್ವಕ್ಕೆ ಸಾಗುತ್ತದೆ.ಖಾನಾಪುರ ಮಹಾದಾಯಿ ನದಿಯ ಉಗಮ ಭೂಮಿಯೂ ಹೌದು. ಮಹಾದಾಯಿ ನದಿ ಖಾನಾಪುರದ ಪಶ್ಚಿಮ ಘಟ್ಟಗಳಲ್ಲಿ ಹುಟ್ಟಿ ಗೋವೆಯ ಮೂಲಕ ಅರಬ್ಬಿ ಸಮುದ್ರವನ್ನು ಸೇರುತ್ತದೆ. ಭೀಮಗಢ ರಾಷ್ಟ್ರೀಯ ಅಭಯಾರಣ್ಯ ಕೂಡ ಖಾನಾಪುರ ತಾಲ್ಲೂಕಿನಲ್ಲಿಯೇ ಇದೆ. ಈ ಅಭಯಾರಣ್ಯದಲ್ಲಿ ವನ್ಯಜೀವಿಗಳಾದ ಆನೆ, ಕರಡಿ, ನರಿ, ಜಿಂಕೆ, ಹುಲಿ, ಚಿರತೆಗಳು ವಾಸಿಸುತ್ತವೆ.

ತಾಲ್ಲೂಕಿನ ಎಲ್ಲ ಕಡೆಗಳಲ್ಲೂ ಭತ್ತ,ಕಬ್ಬು,ಶೆಂಗಾ ಬೆಳೆಯುತ್ತಾರೆ ಮತ್ತು ಅಲ್ಲಲ್ಲಿ ಮಾವು, ಸಪೋಟ, ಪೇರಲ ಹಣ್ಣಿನ ತೋಟಗಳು ಉಂಟು. ಭತ್ತ, ಕಬ್ಬು,ಶೆಂಗಾ, ಮೆಣಸಿನಕಾಯಿ ಇವು ತಾಲ್ಲೂಕಿನ ಮುಖ್ಯ ಬೆಳೆಗಳು. ದಕ್ಷಿಣ ಭಾಗದಲ್ಲಿರುವ ಕಾಡಿನಲ್ಲಿ ಬಿದಿರು, ಸಾಗವಾನಿ, ಶಿವನಿ, ಮತ್ತಿ ಮುಂತಾದ ಮರಗಳುಂಟು. ಮರಮುಟ್ಟು, ಉರುವಲು ಕಟ್ಟಿಗೆ ಇವು ಮುಖ್ಯ ಅರಣ್ಯೋತ್ಪನ್ನಗಳು.

ಜನಸಂಖ್ಯೆ

ಈ ತಾಲ್ಲೂಕಿನ ಜನಸಂಖ್ಯೆ 2,43,154 (2001). ಖಾನಾಪುರ ಪಟ್ಟಣದ ಜನಸಂಖ್ಯೆ 16,563 (2001).

ಸಾರಿಗೆ

ಲೋಂಡಾ ಒಂದು ಪ್ರಮುಖ ರೈಲ್ವೆ ಕೂಡುನಿಲ್ದಾಣ. ಇದರ ಸಮೀಪದಲ್ಲಿ ಮ್ಯಾಂಗನೀಸ್ ಗಣಿಗಳಿವೆ. ಹಲಶಿಯಲ್ಲಿ ಪುರಾತನ ವರಾಹ ಹಾಗೂ ನರಸಿಂಹ ದೇವಸ್ಥಾನಗಳಿವೆ. ನಂದಗಡ ವ್ಯಾಪಾರಕೇಂದ್ರ. ಇಲ್ಲಿ ಅನೇಕ ಅಕ್ಕಿ ಗಿರಣಿಗಳುಂಟು. ಖಾನಾಪುರ-ಜಂಬೋಟಿ ರಸ್ತೆಯ ಸಮೀಪದಲ್ಲಿ, ಖಾನಾಪುರದ ವಾಯವ್ಯಕ್ಕೆ ಸು. 8 ಮೈ. ದೂರದಲ್ಲಿ ಮಲಪ್ರಭಾ ನದಿಯ ದಡದ ಆಸೋಗಾ ಗ್ರಾಮದಲ್ಲಿ ಐತಿಹಾಸಿಕ ಬಸವಣ್ಣನ ದೇವಸ್ಥಾನವಿದೆ.

ಇದು ಬೆಂಗಳೂರು-ಪುಣೆ ರೈಲುಮಾರ್ಗದಲ್ಲಿ ಲೋಂಡಾ ಮತ್ತು ಬೆಳಗಾವಿಗಳ ಮಧ್ಯದಲ್ಲಿರುವ ಪ್ರಮುಖ ನಿಲ್ದಾಣ. ಇಲ್ಲಿಂದ ಬೆಳಗಾವಿ, ದಾಂಡೇಲಿ, ಗೋವೆಗಳಿಗೆ ಬಸ್ಸು ಸೌಕರ್ಯವುಂಟು. ಖಾನಾಪುರ ಸಾಗವಾನಿ ಮತ್ತು ಬಿದಿರುಗಳ ಸಂಗ್ರಹಸ್ಥಳ, ವ್ಯಾಪಾರಕೇಂದ್ರ. ಇಲ್ಲಿ ಪಿಂಗಾಣಿ ಸಾಮಾನು ಮತ್ತು ಮಂಗಳೂರು ಹೆಂಚು ತಯಾರಿಸುವ ಕಾರ್ಖಾನೆಗಳುಂಟು.

ವಿಕಿಸೋರ್ಸ್ ತಾಣದಲ್ಲಿ ಈ ವಿಷಯಕ್ಕೆ ಸಂಬಂಧಪಟ್ಟ ಮೂಲಕೃತಿಗಳು ಇವೆ:
"https://kn.wikipedia.org/w/index.php?title=ಖಾನಾಪುರ&oldid=944471" ಇಂದ ಪಡೆಯಲ್ಪಟ್ಟಿದೆ