"ಅಂತರ್ಜಲ" ಆವೃತ್ತಿಗಳ ಮಧ್ಯದ ಬದಲಾವಣೆಗಳು
Jump to navigation
Jump to search
ಸಂಪಾದನೆಯ ಸಾರಾಂಶವಿಲ್ಲ
(Clean up ; using AWB) |
ಟ್ಯಾಗ್ಗಳು: ಮೊಬೈಲ್ ಸಂಪಾದನೆ ಮೊಬೈಲ್ ವೆಬ್ ಸಂಪಾದನೆ |
||
'''ಅಂತರ್ಜಲ''' ಭೂಮಿಯ ಒಳಗೆ ಶೇಖರವಾಗಿರುವ ಜಲ. ಈ ವಲಯದಲ್ಲಿ ಶಿಲೆಗಳು ಮತ್ತು ಮಣ್ಣು ಸಂತೃಪ್ತವಾಗಿರುತ್ತವೆ. ಇದರ ಮೇಲ್ಭಾಗವೇ '''ಅಂತರ್ಜಲ ಮಟ್ಟ'''. ಸಂತೃಪ್ತ ವಲಯದಲ್ಲಿರುವ ನೀರೇ ಬಾವಿಗಳಿಗೆ ನೀರಿನ ಆಕರ. ಮಳೆಯಿಂದ ನೆಲದ ಮೇಲೆ ಬಿದ್ದ ನೀರಿನ ಬಹುಭಾಗ ಎತ್ತರದಿಂದ ತಗ್ಗಿನ ಕಡೆಗೆ ಹರಿಯುತ್ತದೆ. ಸ್ವಲ್ಪ ಪ್ರಮಾಣದ ನೀರು ಆವಿಯಾಗಿ ವಾಯುಗೋಳವನ್ನು ಸೇರುತ್ತದೆ. ಅತ್ಯಲ್ಪ ಪ್ರಮಾಣದ ನೀರನ್ನು ಸಸ್ಯಗಳು ಹೀರಿಕೊಳ್ಳುತ್ತವೆ. ಮಳೆ ನೀರಿನ ಒಂದು ಭಾಗ ಜಿನುಗಿ ಸ್ಥಳೀಯ ಶಿಲೆಗಳಲ್ಲಿರುವ ರಚನೆಗಳನ್ನು ಆಧರಿಸಿ ಅಂತರ್ಜಲವಾಗಿ ಶೇಖರಣೆಯಾಗುತ್ತ ಹೋಗುತ್ತದೆ. ಎಲ್ಲ ಪ್ರದೇಶಗಳಲ್ಲೂ ಅಂತರ್ಜಲದ ಪ್ರಮಾಣ ಒಂದೇ ಬಗೆಯದಾಗಿರುವುದಿಲ್ಲ. ಮರಳಿನ ನೆಲವಾಗಿದ್ದರೆ ನೀರು ಬಹುಬೇಗ ಇಂಗಿಹೋಗುತ್ತದೆ, ಜೇಡು ಮಣ್ಣಿನ ನೆಲವಾಗಿದ್ದರೆ ಇಂಗುವ ದರ ಅತ್ಯಂತ ಕಡಿಮೆ. ಶಿಲೆಗಳು ರಂಧ್ರಮಯವಾಗಿದ್ದರೆ ನೀರು ಜಿನುಗುವುದು ಸುಲಭ. ಗಟ್ಟಿ ಶಿಲೆಗಳಾದ [[ಗ್ರನೈಟ್]], [[ಬಸಾಲ್ಟ್]] ಮುಂತಾದ ಶಿಲೆಗಳಲ್ಲಿ ನೀರು ಸುಲಭವಾಗಿ ಆಳಕ್ಕೆ ಇಳಿಯದು. ಆದರೆ ಇಂಥ ಶಿಲೆಗಳಲ್ಲಿ ಹೆಚ್ಚಿನ ವೇಳೆ ಬಿರುಕುಗಳಿರುವುದರಿಂದ ಅವುಗಳ ಮೂಲಕ ನೀರು ನೆಲದಾಳಕ್ಕೆ ಇಳಿಯುತ್ತದೆ. ವಿಶೇಷವಾಗಿ ಜಲಜ ಶಿಲೆಗಳಲ್ಲಿ ಹೆಚ್ಚಿನ ರಂಧ್ರ ಅಥವಾ ತೆರಪುಗಳಿರುವುದರಿಂದ ಅಂತರ್ಜಲ ಹರಿಯುವುದು ಸುಲಭ. ಯಾವ ಶಿಲೆ ನೀರನ್ನು
==ಅಂತರ್ಜಲ ಮಟ್ಟ==
ಭೂಮಿಯೊಳಗೆ ಅಂತರ್ಜಲವಿರುವ ಮಟ್ಟವೇ ಸಂತೃಪ್ತವಲಯ. ಇದರ ಮೇಲ್ಭಾಗ ಜಲಮಟ್ಟ. ಜಲಮಟ್ಟದ ಮೇಲ್ಭಾಗದಲ್ಲಿ ಸದಾ ವಾಯುಚಲನೆ ಇರುತ್ತದೆ. ಈ ವಲಯದ ಮೂಲಕವೇ ನೆಲದ ಮೇಲೆ ಬಿದ್ದ ನೀರು ನಿಧಾನ ಗತಿಯಲ್ಲಿ ಜಿನುಗಿ ಅಂತರ್ಜಲ ಭಂಡಾರವಾಗುತ್ತದೆ. ಜಲವಿಜ್ಞಾನದಲ್ಲಿ ಇದನ್ನು '''[[ಜಿನುಗುನೀರು]]''' ಎಂದೇ ಕರೆಯುತ್ತಾರೆ. ಅಂತರ್ಜಲ ಎಲ್ಲ ಕಾಲದಲ್ಲೂ ಒಂದೇ ಮಟ್ಟವನ್ನು ಉಳಿಸಿಕೊಳ್ಳುವುದಿಲ್ಲ. ಆಯಾ ಪ್ರದೇಶದಲ್ಲಿ ಬೀಳುವ ಮಳೆ ಕೂಡ ಅಂತರ್ಜಲ ಮಟ್ಟವನ್ನು ನಿರ್ಧರಿಸುತ್ತದೆ. ಹೆಚ್ಚು ಮಳೆ ಬೀಳುವ ಮಲೆನಾಡಿನಲ್ಲಿ ಅಂತರ್ಜಲ ಮಟ್ಟ ನೆಲಕ್ಕೆ ಕೆಲವೇ ಮೀಟರುಗಳಷ್ಟು ಸಮೀಪದಲ್ಲಿರುತ್ತವೆ. ಮರುಭೂಮಿಗಳಲ್ಲಿ ಮಳೆಯ ಪ್ರಮಾಣ ಕಡಿಮೆಯಾದ್ದರಿಂದ ಅಂತರ್ಜಲದ ಮಟ್ಟ ತುಂಬ ಆಳದಲ್ಲಿರುತ್ತದೆ.<ref>http://water.columbia.edu/?id=learn_more&navid=groundwater%2F</ref>
|