ಅಣಕುಬರೆಹ: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
Content deleted Content added
Edited minor changes
Edited minor changes
೧ ನೇ ಸಾಲು: ೧ ನೇ ಸಾಲು:
[[File:Dictator charlie3.jpg|thumb|240px|Comedian [[Charlie Chaplin]] [[impersonator|impersonating]] [[Adolf Hitler|Hitler]] for comic effect in the satirical film ''[[The Great Dictator]]'' (1940)]]
[[File:Dictator charlie3.jpg|thumb|240px|Comedian [[Charlie Chaplin]] [[impersonator|impersonating]] [[Adolf Hitler|Hitler]] for comic effect in the satirical film ''[[The Great Dictator]]'' (1940)]]


'''ಅಣಕುಬರೆಹ''' ಹಾಸ್ಯಸಾಹಿತ್ಯದ ಒಂದು ಪ್ರಭೇದ (ಪ್ಯಾರಡಿ). ಪ್ಯಾರಡಿ ಎನ್ನುವ ಮೂಲ ಗ್ರೀಕ್ ಶಬ್ದಕ್ಕೆ, ಹಾಡಿಗೆ ಪ್ರತಿಯಾಗಿ ಹೇಳಿದ ಹಾಡು (ಕೌಂಟರ್ ಸಾಂಗ್) ಎಂದು ಅರ್ಥವಿದ್ದರೂ ಈಗ ಅಣಕುಬರೆಹವೆನ್ನುವ ಅರ್ಥದಲ್ಲಿ ಅದರ ಬಳಕೆ ಇದೆ. ಒಬ್ಬ ಸಾಹಿತಿ ಇನ್ನೊಬ್ಬ ಸಾಹಿತಿಯ ಶೈಲಿ, ವಿಲಕ್ಷಣ ರೀತಿನೀತಿಗಳನ್ನು ಬೇರೊಂದು ವಿರುದ್ಧ ಅರ್ಥವುಳ್ಳ ವಸ್ತುವಿನ ಅಭಿವ್ಯಕ್ತಿಗಾಗಿ ಬಳಸಿ, ಗೇಲಿ ಮಾಡುವುದು ಪ್ಯಾರಡಿಯ ಗುರಿ. ಇಂಥ ಅಣಕುಬರೆಹ ಸೃಜಿಸುವ ಉತ್ತಮ ಸಾಹಿತಿ ಕೇವಲ ವಿಕಟಾನುಕರಣ (ಟ್ರ್ಯಾವೆಸ್ಟಿ) ಮಾಡದೆ, ಅತಿಯಾದ ಉತ್ಪ್ರೇಕ್ಷೆಯಿಂದ ಕೂಡಿದ ಹುಚ್ಚಾಟ (ಬರ್ಲೆಸ್ಕ್)ಬರೆಯದೆ, ತನ್ನ ರಸಮಯ ಕಲ್ಪನೆಯ ಮೂಲಕ ಕಲಾತ್ಮಕ ಸಾಹಿತ್ಯರೂಪ ಸೃಷ್ಟಿಸುತ್ತಾನೆ. ಮೂಲದ ದೌರ್ಬಲ್ಯಗಳನ್ನು ಕೃತಕತೆಯನ್ನೂ ಎತ್ತಿ ತೋರಿಸುತ್ತಾನೆ. ಯಾವುದನ್ನು ತಪ್ಪೆಂದು ಟೀಕಿಸಿ, ಖಂಡಿಸುತ್ತಾನೋ ಅದರ ಬದಲು ಒಪ್ಪಾದುದನ್ನು ಸೃಷ್ಟಿಸಿ ಕೃತಕೃತ್ಯನಾಗುತ್ತಾನೆ. ಅವನೊಬ್ಬ ಕ್ರಿಯಾತ್ಮಕ ವಿಮರ್ಶಕ. ಯೂರಿಪಡೀಸನನ್ನು ಟೀಕಿಸಲು ಹೊರಟ [[ಆರಿಸ್ಟೋಫೆನಿಸ್]] ತನ್ನ ನಾಟಕದಲ್ಲಿ (ದಿ ಫ್ರಾಗ್ಸ್) ಸೃಷ್ಟ್ಯಾತ್ಮಕ ಚಿರಂತನ ಮೌಲ್ಯಗಳನ್ನು ಕುರಿತು ವಿವೇಚನೆ ಮೂಡಿಸಿದ. ರಿಚರ್ಡ್‍ಸನ್ ಬರೆದ ಅತಿಭಾವುಕ ವಸ್ತುವಿನ [[ಕಾದಂಬರಿ]]ಯನ್ನು ಒಪ್ಪದ ಫೀಲ್ಡಿಂಗ್ ತಾನೇ ಸೊಗಸಾದ ಕಾದಂಬರಿ ಸೃಷ್ಟಿಸಿದ. ಶ್ಲೇಷೆ, ವ್ಯಂಗ್ಯದ ಮೂಲಕ ವಿರೋಧ ಅರ್ಥಗಳ ವೈದೃಶ್ಯ ತೋರಿಸುವುದು (ಐರಾನಿಕ್ ಕಾನ್ಟ್ರಾಸ್ಟ್), ಹದಿರು ನುಡಿ-ಇವು ಅಣಕು ಸಾಹಿತಿಯ ಸಾಧನಗಳು. ಪುರಾತನ ಗ್ರೀಕ್ ದೇಶದಲ್ಲಿ ಹುಟ್ಟಿ, ಅರಿಸ್ಟೋಫೆನಿಸ್‍ನಿಂದ ಹಿಡಿದು ಜೇಮ್ಸ್ ಜಾಯ್ಸನವರೆಗೆ ಪ್ರಪಂಚದ ಎಲ್ಲ ಸಾಹಿತ್ಯದಲ್ಲೂ ಹಬ್ಬಿದ ಈ ತೆರನಾದ ಅಣಕುಬರೆವಣಿಗೆಯನ್ನು ಹಲವು ಸಾಹಿತಿಗಳು ರಚಿಸಿದ್ದಾರೆ. ತಾನು ಒಪ್ಪಿಯೋ ಒಪ್ಪದೆಯೋ ಅಳವಡಿಸಿಕೊಳ್ಳುವ ರಮ್ಯ ಪ್ರಣಯವಸ್ತು, ಹಳೆಯ ನಾಟಕಗಳ ಆಡಂಬರದ ವಾಗ್ವಿಲಾಸ, ಹಳ್ಳಿಗಾಡಿನ ಜೀವವನ ಚಿತ್ರಿಸುವ ಕವನ ಸಂಪ್ರದಾಯ (ಪ್ಯಾಸ್ಟೊರಲ್) ಇವುಗಳನ್ನು ತಾನೇ ಅಣಕಿಸುವ ಷೇಕ್ಸ್‍ಷಿಯರನ ರಮ್ಯವಿನೋದ ನಾಟಕಗಳಲ್ಲಿ ಅಣಕುಬರೆಹದ ವಿವಿಧ ಸ್ತರಗಳನ್ನು ಕಾಣಬಹುದು. ತನ್ನನ್ನು ತಾನೇ ಗೇಲಿ ಮಾಡಿಕೊಳ್ಳುವ, ನಕ್ಕು ನಗಿಸುವ ಷೇಕ್ಸ್‍ಪಿಯರನ ಈ ಮನೋಧರ್ಮ ಅಣಕುಬರೆಹಗಾರರಿಗೆ ಒಳ್ಳೆಯ ಪ್ರೇರಣೆ, ಸ್ಫೂರ್ತಿ.
'''ಅಣಕುಬರೆಹ''' ಹಾಸ್ಯ ಸಾಹಿತ್ಯದ ಒಂದು ಪ್ರಭೇದ (ಪ್ಯಾರಡಿ). ಪ್ಯಾರಡಿ ಎನ್ನುವ ಮೂಲ ಗ್ರೀಕ್ ಶಬ್ದಕ್ಕೆ, ಹಾಡಿಗೆ ಪ್ರತಿಯಾಗಿ ಹೇಳಿದ ಹಾಡು (ಕೌಂಟರ್ ಸಾಂಗ್) ಎಂದು ಅರ್ಥವಿದ್ದರೂ ಈಗ ಅಣಕುಬರೆಹವೆನ್ನುವ ಅರ್ಥದಲ್ಲಿ ಅದರ ಬಳಕೆ ಇದೆ. ಒಬ್ಬ ಸಾಹಿತಿ ಇನ್ನೊಬ್ಬ ಸಾಹಿತಿಯ ಶೈಲಿ, ವಿಲಕ್ಷಣ ರೀತಿನೀತಿಗಳನ್ನು ಬೇರೊಂದು ವಿರುದ್ಧ ಅರ್ಥವುಳ್ಳ ವಸ್ತುವಿನ ಅಭಿವ್ಯಕ್ತಿಗಾಗಿ ಬಳಸಿ, ಗೇಲಿ ಮಾಡುವುದು ಪ್ಯಾರಡಿಯ ಗುರಿ. ಇಂಥ ಅಣಕುಬರೆಹ ಸೃಜಿಸುವ ಉತ್ತಮ ಸಾಹಿತಿ ಕೇವಲ ವಿಕಟಾನುಕರಣ (ಟ್ರ್ಯಾವೆಸ್ಟಿ) ಮಾಡದೆ, ಅತಿಯಾದ ಉತ್ಪ್ರೇಕ್ಷೆಯಿಂದ ಕೂಡಿದ ಹುಚ್ಚಾಟ (ಬರ್ಲೆಸ್ಕ್)ಬರೆಯದೆ, ತನ್ನ ರಸಮಯ ಕಲ್ಪನೆಯ ಮೂಲಕ ಕಲಾತ್ಮಕ ಸಾಹಿತ್ಯರೂಪ ಸೃಷ್ಟಿಸುತ್ತಾನೆ. ಮೂಲದ ದೌರ್ಬಲ್ಯಗಳನ್ನು ಕೃತಕತೆಯನ್ನೂ ಎತ್ತಿ ತೋರಿಸುತ್ತಾನೆ. ಯಾವುದನ್ನು ತಪ್ಪೆಂದು ಟೀಕಿಸಿ, ಖಂಡಿಸುತ್ತಾನೋ ಅದರ ಬದಲು ಒಪ್ಪಾದುದನ್ನು ಸೃಷ್ಟಿಸಿ ಕೃತಕೃತ್ಯನಾಗುತ್ತಾನೆ. ಅವನೊಬ್ಬ ಕ್ರಿಯಾತ್ಮಕ ವಿಮರ್ಶಕ. ಯೂರಿಪಡೀಸನನ್ನು ಟೀಕಿಸಲು ಹೊರಟ [[ಆರಿಸ್ಟೋಫೆನಿಸ್]] ತನ್ನ ನಾಟಕದಲ್ಲಿ (ದಿ ಫ್ರಾಗ್ಸ್) ಸೃಷ್ಟ್ಯಾತ್ಮಕ ಚಿರಂತನ ಮೌಲ್ಯಗಳನ್ನು ಕುರಿತು ವಿವೇಚನೆ ಮೂಡಿಸಿದ. ರಿಚರ್ಡ್‍ಸನ್ ಬರೆದ ಅತಿಭಾವುಕ ವಸ್ತುವಿನ [[ಕಾದಂಬರಿ]]ಯನ್ನು ಒಪ್ಪದ ಫೀಲ್ಡಿಂಗ್ ತಾನೇ ಸೊಗಸಾದ ಕಾದಂಬರಿ ಸೃಷ್ಟಿಸಿದ. ಶ್ಲೇಷೆ, ವ್ಯಂಗ್ಯದ ಮೂಲಕ ವಿರೋಧ ಅರ್ಥಗಳ ವೈದೃಶ್ಯ ತೋರಿಸುವುದು (ಐರಾನಿಕ್ ಕಾನ್ಟ್ರಾಸ್ಟ್), ಹದಿರು ನುಡಿ-ಇವು ಅಣಕು ಸಾಹಿತಿಯ ಸಾಧನಗಳು. ಪುರಾತನ ಗ್ರೀಕ್ ದೇಶದಲ್ಲಿ ಹುಟ್ಟಿ, ಅರಿಸ್ಟೋಫೆನಿಸ್‍ನಿಂದ ಹಿಡಿದು ಜೇಮ್ಸ್ ಜಾಯ್ಸನವರೆಗೆ ಪ್ರಪಂಚದ ಎಲ್ಲ ಸಾಹಿತ್ಯದಲ್ಲೂ ಹಬ್ಬಿದ ಈ ತೆರನಾದ ಅಣಕುಬರೆವಣಿಗೆಯನ್ನು ಹಲವು ಸಾಹಿತಿಗಳು ರಚಿಸಿದ್ದಾರೆ. ತಾನು ಒಪ್ಪಿಯೋ ಒಪ್ಪದೆಯೋ ಅಳವಡಿಸಿಕೊಳ್ಳುವ ರಮ್ಯ ಪ್ರಣಯವಸ್ತು, ಹಳೆಯ ನಾಟಕಗಳ ಆಡಂಬರದ ವಾಗ್ವಿಲಾಸ, ಹಳ್ಳಿಗಾಡಿನ ಜೀವವನ ಚಿತ್ರಿಸುವ ಕವನ ಸಂಪ್ರದಾಯ (ಪ್ಯಾಸ್ಟೊರಲ್) ಇವುಗಳನ್ನು ತಾನೇ ಅಣಕಿಸುವ ಷೇಕ್ಸ್‍ಷಿಯರನ ರಮ್ಯವಿನೋದ ನಾಟಕಗಳಲ್ಲಿ ಅಣಕುಬರೆಹದ ವಿವಿಧ ಸ್ತರಗಳನ್ನು ಕಾಣಬಹುದು. ತನ್ನನ್ನು ತಾನೇ ಗೇಲಿ ಮಾಡಿಕೊಳ್ಳುವ, ನಕ್ಕು ನಗಿಸುವ ಷೇಕ್ಸ್‍ಪಿಯರನ ಈ ಮನೋಧರ್ಮ ಅಣಕುಬರೆಹಗಾರರಿಗೆ ಒಳ್ಳೆಯ ಪ್ರೇರಣೆ, ಸ್ಫೂರ್ತಿ.
[[ಕನ್ನಡ]]ದಲ್ಲಿ [[ನಾ.ಕಸ್ತೂರಿ]], ಬುಳ್ಳ ಮೊದಲಾದವರು ಪ್ರಸಿದ್ಧ ಹೊಸಗನ್ನಡ ಕವಿಗಳ ಹಾಗೂ ದಾಸರ ಕವನಗಳ ಪ್ರಶಸ್ತ ಅಣಕರೂಪಗಳನ್ನು ರಚಿಸಿದ್ದಾರೆ.[[ದ.ರಾ.ಬೇಂದ್ರೆ|ಬೇಂದ್ರೆಯವರು]] ತಮ್ಮ ಕವನಗಳನ್ನೇ ಬಳಸಿಕೊಂಡು ಅಣಕವಾಡುಗಳನ್ನು ಕಟ್ಟಿದ್ದಾರೆ. ರಾಶಿಯವರ 'ಕೆಣಕೋಣ ಬಾರ ಒಂದು ಗಮನಾರ್ಹ ಅಣಕು. ನಾರಣಪ್ಪನ ಭಾರತದ ಶೈಲಿಯಲ್ಲಿ [[ಜಿ.ಪಿ.ರಾಜರತ್ನಂ\\ ರಚಿಸಿರುವ ಪುರುಷಸರಸ್ವತಿಯ ಬಹುಭಾಗ ಗ್ರಂಥಸಂಪಾದನಾಕಾರ್ಯವನ್ನು ಬಹು ಚೆನ್ನಾಗಿ ಅಣಕಿಸುತ್ತದೆ.
[[ಕನ್ನಡ]]ದಲ್ಲಿ [[ನಾ.ಕಸ್ತೂರಿ]], ಬುಳ್ಳ ಮೊದಲಾದವರು ಪ್ರಸಿದ್ಧ ಹೊಸಗನ್ನಡ ಕವಿಗಳ ಹಾಗೂ ದಾಸರ ಕವನಗಳ ಪ್ರಶಸ್ತ ಅಣಕರೂಪಗಳನ್ನು ರಚಿಸಿದ್ದಾರೆ.[[ದ.ರಾ.ಬೇಂದ್ರೆ|ಬೇಂದ್ರೆಯವರು]] ತಮ್ಮ ಕವನಗಳನ್ನೇ ಬಳಸಿಕೊಂಡು ಅಣಕವಾಡುಗಳನ್ನು ಕಟ್ಟಿದ್ದಾರೆ. ರಾಶಿಯವರ 'ಕೆಣಕೋಣ ಬಾರ ಒಂದು ಗಮನಾರ್ಹ ಅಣಕು. ನಾರಣಪ್ಪನ ಭಾರತದ ಶೈಲಿಯಲ್ಲಿ [[ಜಿ.ಪಿ.ರಾಜರತ್ನಂ\\ ರಚಿಸಿರುವ ಪುರುಷಸರಸ್ವತಿಯ ಬಹುಭಾಗ ಗ್ರಂಥಸಂಪಾದನಾಕಾರ್ಯವನ್ನು ಬಹು ಚೆನ್ನಾಗಿ ಅಣಕಿಸುತ್ತದೆ.
{{Includes Wikisource|ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ/ಅಣಕುಬರೆಹ}}
{{Includes Wikisource|ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ/ಅಣಕುಬರೆಹ}}

೦೬:೦೮, ೩೦ ಆಗಸ್ಟ್ ೨೦೧೯ ನಂತೆ ಪರಿಷ್ಕರಣೆ

Comedian Charlie Chaplin impersonating Hitler for comic effect in the satirical film The Great Dictator (1940)

ಅಣಕುಬರೆಹ ಹಾಸ್ಯ ಸಾಹಿತ್ಯದ ಒಂದು ಪ್ರಭೇದ (ಪ್ಯಾರಡಿ). ಪ್ಯಾರಡಿ ಎನ್ನುವ ಮೂಲ ಗ್ರೀಕ್ ಶಬ್ದಕ್ಕೆ, ಹಾಡಿಗೆ ಪ್ರತಿಯಾಗಿ ಹೇಳಿದ ಹಾಡು (ಕೌಂಟರ್ ಸಾಂಗ್) ಎಂದು ಅರ್ಥವಿದ್ದರೂ ಈಗ ಅಣಕುಬರೆಹವೆನ್ನುವ ಅರ್ಥದಲ್ಲಿ ಅದರ ಬಳಕೆ ಇದೆ. ಒಬ್ಬ ಸಾಹಿತಿ ಇನ್ನೊಬ್ಬ ಸಾಹಿತಿಯ ಶೈಲಿ, ವಿಲಕ್ಷಣ ರೀತಿನೀತಿಗಳನ್ನು ಬೇರೊಂದು ವಿರುದ್ಧ ಅರ್ಥವುಳ್ಳ ವಸ್ತುವಿನ ಅಭಿವ್ಯಕ್ತಿಗಾಗಿ ಬಳಸಿ, ಗೇಲಿ ಮಾಡುವುದು ಪ್ಯಾರಡಿಯ ಗುರಿ. ಇಂಥ ಅಣಕುಬರೆಹ ಸೃಜಿಸುವ ಉತ್ತಮ ಸಾಹಿತಿ ಕೇವಲ ವಿಕಟಾನುಕರಣ (ಟ್ರ್ಯಾವೆಸ್ಟಿ) ಮಾಡದೆ, ಅತಿಯಾದ ಉತ್ಪ್ರೇಕ್ಷೆಯಿಂದ ಕೂಡಿದ ಹುಚ್ಚಾಟ (ಬರ್ಲೆಸ್ಕ್)ಬರೆಯದೆ, ತನ್ನ ರಸಮಯ ಕಲ್ಪನೆಯ ಮೂಲಕ ಕಲಾತ್ಮಕ ಸಾಹಿತ್ಯರೂಪ ಸೃಷ್ಟಿಸುತ್ತಾನೆ. ಮೂಲದ ದೌರ್ಬಲ್ಯಗಳನ್ನು ಕೃತಕತೆಯನ್ನೂ ಎತ್ತಿ ತೋರಿಸುತ್ತಾನೆ. ಯಾವುದನ್ನು ತಪ್ಪೆಂದು ಟೀಕಿಸಿ, ಖಂಡಿಸುತ್ತಾನೋ ಅದರ ಬದಲು ಒಪ್ಪಾದುದನ್ನು ಸೃಷ್ಟಿಸಿ ಕೃತಕೃತ್ಯನಾಗುತ್ತಾನೆ. ಅವನೊಬ್ಬ ಕ್ರಿಯಾತ್ಮಕ ವಿಮರ್ಶಕ. ಯೂರಿಪಡೀಸನನ್ನು ಟೀಕಿಸಲು ಹೊರಟ ಆರಿಸ್ಟೋಫೆನಿಸ್ ತನ್ನ ನಾಟಕದಲ್ಲಿ (ದಿ ಫ್ರಾಗ್ಸ್) ಸೃಷ್ಟ್ಯಾತ್ಮಕ ಚಿರಂತನ ಮೌಲ್ಯಗಳನ್ನು ಕುರಿತು ವಿವೇಚನೆ ಮೂಡಿಸಿದ. ರಿಚರ್ಡ್‍ಸನ್ ಬರೆದ ಅತಿಭಾವುಕ ವಸ್ತುವಿನ ಕಾದಂಬರಿಯನ್ನು ಒಪ್ಪದ ಫೀಲ್ಡಿಂಗ್ ತಾನೇ ಸೊಗಸಾದ ಕಾದಂಬರಿ ಸೃಷ್ಟಿಸಿದ. ಶ್ಲೇಷೆ, ವ್ಯಂಗ್ಯದ ಮೂಲಕ ವಿರೋಧ ಅರ್ಥಗಳ ವೈದೃಶ್ಯ ತೋರಿಸುವುದು (ಐರಾನಿಕ್ ಕಾನ್ಟ್ರಾಸ್ಟ್), ಹದಿರು ನುಡಿ-ಇವು ಅಣಕು ಸಾಹಿತಿಯ ಸಾಧನಗಳು. ಪುರಾತನ ಗ್ರೀಕ್ ದೇಶದಲ್ಲಿ ಹುಟ್ಟಿ, ಅರಿಸ್ಟೋಫೆನಿಸ್‍ನಿಂದ ಹಿಡಿದು ಜೇಮ್ಸ್ ಜಾಯ್ಸನವರೆಗೆ ಪ್ರಪಂಚದ ಎಲ್ಲ ಸಾಹಿತ್ಯದಲ್ಲೂ ಹಬ್ಬಿದ ಈ ತೆರನಾದ ಅಣಕುಬರೆವಣಿಗೆಯನ್ನು ಹಲವು ಸಾಹಿತಿಗಳು ರಚಿಸಿದ್ದಾರೆ. ತಾನು ಒಪ್ಪಿಯೋ ಒಪ್ಪದೆಯೋ ಅಳವಡಿಸಿಕೊಳ್ಳುವ ರಮ್ಯ ಪ್ರಣಯವಸ್ತು, ಹಳೆಯ ನಾಟಕಗಳ ಆಡಂಬರದ ವಾಗ್ವಿಲಾಸ, ಹಳ್ಳಿಗಾಡಿನ ಜೀವವನ ಚಿತ್ರಿಸುವ ಕವನ ಸಂಪ್ರದಾಯ (ಪ್ಯಾಸ್ಟೊರಲ್) ಇವುಗಳನ್ನು ತಾನೇ ಅಣಕಿಸುವ ಷೇಕ್ಸ್‍ಷಿಯರನ ರಮ್ಯವಿನೋದ ನಾಟಕಗಳಲ್ಲಿ ಅಣಕುಬರೆಹದ ವಿವಿಧ ಸ್ತರಗಳನ್ನು ಕಾಣಬಹುದು. ತನ್ನನ್ನು ತಾನೇ ಗೇಲಿ ಮಾಡಿಕೊಳ್ಳುವ, ನಕ್ಕು ನಗಿಸುವ ಷೇಕ್ಸ್‍ಪಿಯರನ ಈ ಮನೋಧರ್ಮ ಅಣಕುಬರೆಹಗಾರರಿಗೆ ಒಳ್ಳೆಯ ಪ್ರೇರಣೆ, ಸ್ಫೂರ್ತಿ. ಕನ್ನಡದಲ್ಲಿ ನಾ.ಕಸ್ತೂರಿ, ಬುಳ್ಳ ಮೊದಲಾದವರು ಪ್ರಸಿದ್ಧ ಹೊಸಗನ್ನಡ ಕವಿಗಳ ಹಾಗೂ ದಾಸರ ಕವನಗಳ ಪ್ರಶಸ್ತ ಅಣಕರೂಪಗಳನ್ನು ರಚಿಸಿದ್ದಾರೆ.ಬೇಂದ್ರೆಯವರು ತಮ್ಮ ಕವನಗಳನ್ನೇ ಬಳಸಿಕೊಂಡು ಅಣಕವಾಡುಗಳನ್ನು ಕಟ್ಟಿದ್ದಾರೆ. ರಾಶಿಯವರ 'ಕೆಣಕೋಣ ಬಾರ ಒಂದು ಗಮನಾರ್ಹ ಅಣಕು. ನಾರಣಪ್ಪನ ಭಾರತದ ಶೈಲಿಯಲ್ಲಿ [[ಜಿ.ಪಿ.ರಾಜರತ್ನಂ\\ ರಚಿಸಿರುವ ಪುರುಷಸರಸ್ವತಿಯ ಬಹುಭಾಗ ಗ್ರಂಥಸಂಪಾದನಾಕಾರ್ಯವನ್ನು ಬಹು ಚೆನ್ನಾಗಿ ಅಣಕಿಸುತ್ತದೆ.

ವಿಕಿಸೋರ್ಸ್ ನಲ್ಲಿ ಲಭ್ಯವಿರುವ ಲೇಖನದ ವಿಷಯವನ್ನು ಇಲ್ಲಿ ಅಳವಡಿಸಲಾಗಿದೆ: