೧೦,೯೪೫
edits
ಚುNo edit summary |
ಚುNo edit summary |
||
ಇದರ ಪ್ರಧಾನ ಕೆಲಸವೆಂದರೆ ಸಹಜನ್ಯಾಯ ಕೊಡುವುದು. ಆತ್ಮಸಾಕ್ಷಿ, ಕಾರಣ ಮತ್ತು ನ್ಯಾಯದಲ್ಲಿ ಒಳ್ಳೆಯ ನಂಬಿಕೆ - ಇವುಗಳನ್ನು ಎಕ್ವಿಟಿ ನ್ಯಾಯಾಲಯಗಳು ತಮ್ಮ ಮೂಲತತ್ತ್ವಗಳನ್ನಾಗಿ ಇಟ್ಟುಕೊಂಡಿದ್ದುವೆಂದು ಆದಿಯಲ್ಲಿ ನಂಬಲಾಗಿತ್ತು. ಅದು ಸರ್ವಸಾಮಾನ್ಯವಾಗಿ ನ್ಯಾಯ ಅನ್ಯಾಯಗಳ ವಿಚಾರದಲ್ಲಿ ಜನರಿಗಿರುವ ಅಭಿಪ್ರಾಯಗಳನ್ನು ಪ್ರತಿಬಿಂಬಿಸುತ್ತಿತ್ತೆಂದು ತಿಳಿಯಲಾಗಿತ್ತು. ಅದುವರೆಗೆ ಸ್ವೀಕೃತವಾಗಿದ್ದ ನ್ಯಾಯವನ್ನೇ ಕೊಡುತ್ತ್ತಿದ್ದುವೆಂದು ಪರಿಗಣಿಸಲಾಗಿದ್ದರೂ ವಾಸ್ತವವಾಗಿ ಆ ನ್ಯಾಯಾಲಯಗಳು ಹೊಸ ಹೊಸ ಮೂಲಗಳಿಂದ ತಮ್ಮ ತೀರ್ಪನ್ನು ಸಮರ್ಥಿಸಿವೆ.
ಸಾಮ್ಯನ್ಯಾಯ ಮಾಡಿದ ಕೆಲಸವನ್ನು ಸಂಕ್ಷಿಪ್ತವಾಗಿ ಜೆ. ಎಲ್. ಬ್ರಿಯರನ ಮಾತಿನಲ್ಲಿ ಹೀಗೆ ಹೇಳಬಹುದು : ಸಾಮ್ಯನ್ಯಾಯ ಕಾನೂನಿಗೆ [[ನ್ಯಾಸ]] (ಟ್ರಸ್ಟ್)ವಿಚಾರವಾದ ಸಮಗ್ರನ್ಯಾಯವನ್ನು ಅಳವಡಿಸಿತು : ಅದು ಭೋಗ್ಯಗಳ (ಮಾರ್ಟ್ಗೇಜ್) ವಿಚಾರವಾಗಿ ಕಾನೂನಿನಲ್ಲಿ ಮಾರ್ಪಾಡು ತಂದಿತು. ಕರಾರುಗಳ ಹಕ್ಕುಗಳನ್ನು ಇನ್ನೊಬ್ಬರಿಗೆ ಕೊಡಲು ಸಾಧ್ಯವಿರುವಂತೆಯೂ ಮೋಸ ತಪ್ಪುಗಳಿಂದ ಆದ ಕರಾರುಗಳಿಗೆ ಇರುವ ನಿವಾರಣೆ ಉತ್ತಮಗೊಳ್ಳುವಂತೆಯೂ ಸಾಧಿಸಿತು. ಸಂಪ್ರದಾಯನ್ಯಾಯದಲ್ಲಿ ಕೊಡುತ್ತಿದ್ದ. ನಿವೃತ್ತಿಗಳ ವಿಧಾನಗಳಲ್ಲಿ ಹೆಚ್ಚು ಸುಧಾರಣೆ ತಂದಿತು. ಉದಾಹರಣೆಗಾಗಿ ಕರಾರುಗಳನ್ನು ಮುರಿದಲ್ಲಿ ಬರಿ ನಷ್ಟ ಕೊಡುವುದು ಮಾತ್ರವಲ್ಲದೆ ಕರಾರಿನಂತೆ ನಡೆಯುವಂತೆ (ಸ್ಪೆಸಿಫಿಕ್ ಪರ್ಫಾರ್ಮೆನ್ಸ್) ಮಾಡಲು ತಪ್ಪು ಕೆಲಸ ಮಾಡದಿರುವಂತೆ ನಿರ್ಬಂಧಕ ಆಜ್ಞೆ (ಇಂಜಂಕ್ಷನ್) ಅಥವಾ ತಡೆಆಜ್ಞೆ ನೀಡುವಂತೆಯೂ ಅವಕಾಶ ಕಲ್ಪಿಸಿದವು.
ಸಾಮ್ಯನ್ಯಾಯದ ಕ್ಷೇತ್ರಾಧಿಕಾರವನ್ನು (ಜ್ಯೂರಿಸ್ಡಿಕ್ಷನ್) ಅನನ್ಯ (ಎಕ್ಸ್ ಕ್ಲೂ ಸಿವ್), ಸಹಗಾಮಿ (ಕನ್ಕರೆಂಟ್) ಮತ್ತು ಸಹಾಯಕ (ಆಗ್ಸಿಲಿಯರಿ) ಎಂಬುದಾಗಿ ವಿಂಗಡಿಸಬಹುದು. ತನ್ನ ಸ್ವಂತ ಹಕ್ಕಿನಲ್ಲಿ ಅದು
ಚಾನ್ಸಲರನ ತೀರ್ಪುಗಳು ಖುಷಿ ಬಂದಂತೆ ಮಾಡುವ ತೀರ್ಪುಗಳೆಂದು ಅಪವಾದ ಬಂದರೂ ಬರಬರುತ್ತ ಸಂಪ್ರದಾಯನ್ಯಾಯದಲ್ಲಿ ಒಮ್ಮೆ ಮಾಡಿದ ತೀರ್ಪುಗಳು ಹೇಗೆ ಮುಂದೆ ಬಂದ ಮೊಕದ್ದಮೆಗಳಲ್ಲಿ ಮಾರ್ಗದರ್ಶಿಗಳಾದ ಕಾನೂನುಗಳಾಗಿ ನಿಂತುವೋ ಹಾಗೆಯೇ ಈ ತೀರ್ಪುಗಳೂ ಮುಂದೆ ಅದೇ ರೀತಿಯ ಸಂದರ್ಭಗಳು ಬಂದಾಗ ಅನುಸರಿಸತಕ್ಕ ಕಾನೂನುಗಳಾಗಿ ನಿಂತವು. ಬೇರೆ ಬೇರೆ ಚಾನ್ಸಲರರು ತಮಗೆ ಸರಿತೋರಿದಂತೆ, ತಮಗೆ ನ್ಯಾಯ ಕಂಡಂತೆ ತೀರ್ಪು ಕೊಡುತ್ತಿದ್ದರೆಂದು ಹೇಳಲಾಗಿದ್ದರೂ ಅವರು ಹಿಂದಿನ ತೀರ್ಪುಗಳ ಬಾಹುಳ್ಯದಿಂದ ನಿಖರವಾದ, ಸುಸ್ಪಷ್ಟವಾದ, ಒಂದೇ ರೀತಿಯ ನ್ಯಾಯಗಳನ್ನು ಕೊಡಬೇಕಾಯಿತು, ಕೊಡುತ್ತಿದ್ದರು.
|
edits