ಬದಲಾವಣೆಗಳು

Jump to navigation Jump to search
ಸಂಪಾದನೆಯ ಸಾರಾಂಶವಿಲ್ಲ
==ಓದು==
ಟೋಕಿಯೋದಲ್ಲಿ ಶಾಲೆ ಓದಿದ ಶಿಂಜೋ, ಸೈಕಿಯೆ ವಿಶ್ವವಿದ್ಯಾಲಯದಲ್ಲಿ ರಾಜ್ಯಶಾಸ್ತ್ರ ಪದವಿ ಪಡೆದರು. ೧೯೭೭ರಲ್ಲಿ ಪದವಿ ಪಡೆದು, ಅಮೇರಿಕೆಗೆ ತೆರಳಿದ
ಶಿಂಜೋ, ದಕ್ಷಿಣ ಕ್ಯಾಲಿಫೋರ್ನಿಯಾ ವಿವಿಯಲಿ ಸಾರ್ವಜನಿಕ ಆಡಳಿತದ ಅಧ್ಯಯನ ನಡೆಸಿದರು.
==ವೃತ್ತಿ==
೧೯೭೯ರ ಏಪ್ರಿಲ್ ನಲ್ಲಿ ಕೊಬೆ ಸ್ಟೀಲ್ ಕಂಪನಿ ಸೇರಿದ ಶಿಂಜೋ, ೧೯೮೨ರವರೆಗೆ ಅಲ್ಲಿ ಕಾರ್ಯನಿರ್ವಹಿಸಿದರು.
ವಿದೇಶಾಂಗ ಸಚಿವರಿಗೆ ಆಪ್ತ ಸಹಾಯಕನಾಗುವ ಅವಕಾಶ ೧೯೮೨ರಲ್ಲಿ ಒದಗಿಬಂತು. ಅಬೆ, ಕೆಲಸಕ್ಕೆ ರಾಜೀನಾಮೆಯಿತ್ತು ಪೂರ್ಣಪ್ರಮಾಣದ ರಾಜಕೀಯ ಬದುಕಿಗೆ ಹೊರಳಿದರು.
==ರಾಜಕೀಯ ಬದುಕು==
೧೯೮೨ರಲ್ಲಿ ಲಿಬರಲ್ ಡೆಮಾಕ್ರಟಿಕ್ ಪಾರ್ಟಿ ಸೇರಿದ ಅಬೆ, ಮೊದಲಿಗೆ ವಿದೇಶಾಂಗ ಇಲಾಖೆ, ನಂತರ ಪಕ್ಷದ ಅಧ್ಯಕ್ಷರ ಆಪ್ತ ಕಾರ್ಯದರ್ಶಿಯಾಗಿ ೯ ವರ್ಷ ದುಡಿದರು. ಸಂಘಟನೆ ಮತ್ತು ಸರ್ಕಾರದ ಹಲವು ಬಗೆಗಳನ್ನು ಅರಿತ ಅಬೆ, ಈ ಕಾಲದಲ್ಲಿ ರಾಜಕೀಯ ಪಟ್ಟುಗಳನ್ನು ಕಲಿತರು.
ಯೋಷಿರೋ ಮೋರಿ ಮತ್ತು ಜುನಿಚಿರೋ ಕೊಯಿಜುಮಿ ರೊಂದಿಗೆ ಮೋರಿ ಪಂಗಡದಲ್ಲಿ ಗುರುತಿಸಿಕೊಂಡ ಅಬೆ,
೧೯೯೩ರಲ್ಲಿ ತಮ್ಮ ತಂದೆಯ ನಿಧನದ ಕಾರಣ, ಯಮಗುಚಿ ಕ್ಷೇತ್ರದಲ್ಲಿ ಚುನಾವಣೆಗೆ ನಿಂತು ಗೆದ್ದರು. ೧೯೯ರ ಹೊತ್ತಿಗೆ ಸಮಾಜ ಕಲ್ಯಾಣ್ ಇಲಾಖೆಯ ಕಾರ್ಯದರ್ಶಿಯಾಗಿ ನೇಮಕಗೊಂಡ ಅಬೆ, ೨೦೦೦ರ ಉತ್ತರ ಕೊರಿಯಾ ಅಪಹರಣದಲ್ಲಿ ಹೆಸರು ಮಾಡಿದರು. ಉತ್ತರ ಕೊರಿಯಾದಲ್ಲಿ ಜಪಾನ್ ನಾಗರೀಕರ ಅಪಹರಣವಾದಾಗ, ಅಬೆ, ಕೊಯಿಜುಮಿರೊಂದಿಗೆ ಉತ್ತರ ಕೊರಿಯಾಕ್ಕೆ ಸಂಧಾನಕ್ಕೆ ತೆರಳಿದರು. ಒತ್ತೆಯಾಳುಗಳನ್ನು ವಾರದ ಮಟ್ಟಿಗೆ ಜಪಾನಿಗೆ ಕರೆತರುವಲ್ಲಿ ಯಶಸ್ವಿಯಾದ ಅಬೆ, ಒತ್ತೆಯಾಳುಗಳನ್ನು ಮತ್ತೆ ಕಳಿಸಲು ನಿರಾಕರಿಸಿದರು. ೨೦೦೩ರಲ್ಲಿ ಮುಖ್ಯ ಕ್ಯಾಬಿನೆಟ್ ಕಾರ್ಯದರ್ಶಿಯಾದರು.
ಉತ್ತರ ಕೊರಿಯಾದಲ್ಲಿ ಜಪಾನ್ ನಾಗರೀಕರ ಅಪಹರಣವಾದಾಗ, ಅಬೆ, ಕೊಯಿಜುಮಿರೊಂದಿಗೆ ಉತ್ತರ ಕೊರಿಯಾಕ್ಕೆ ಸಂಧಾನಕ್ಕೆ ತೆರಳಿದರು. ಒತ್ತೆಯಾಳುಗಳನ್ನು ವಾರದ ಮಟ್ಟಿಗೆ ಜಪಾನಿಗೆ ಕರೆತರುವಲ್ಲಿ ಯಶಸ್ವಿಯಾದ ಅಬೆ, ಒತ್ತೆಯಾಳುಗಳನ್ನು ಮತ್ತೆ ಕಳಿಸಲು ನಿರಾಕರಿಸಿದರು.
೨೦೦೩ರಲ್ಲಿ ಮುಖ್ಯ ಕ್ಯಾಬಿನೆಟ್ ಕಾರ್ಯದರ್ಶಿಯಾದರು.
ಏಪ್ರಿಲ್ ೨೦೦೬ರಲ್ಲಿ ಪಕ್ಷದ ಅಧ್ಯಕ್ಷರಾಗಿ ಆಯ್ಕೆಯಾದ ಅಬೆ, ತಮ್ಮ ಗುರುಗಳಾದ ಯೋಷಿರೋ ಮೋರಿ ಮತ್ತು ಕೊಯಿಜುಮಿರ ಬೆಂಬಲ ಗಳಿಸಿದರು.
ಜುಲೈ ೨೦೦೬ರಲ್ಲಿ, ೫೨ ವರ್ಷದ ಅಬೆ, ದ್ವಿತೀಯ ಯುದ್ಧಾನಂತರದ ಅತಿ ಕಿರಿಯ ಪ್ರಧಾನಿ ಎಂಬ ಹೆಗ್ಗಳಿಕೆಗೆ ಪಾತ್ರರಾದರು.
==ಮೊದಲ ಪ್ರಧಾನಿ ಅವಧಿ ೨೦೦೬-೦೭==
ತಮ್ಮ ಮುಂಚಿನ ಪ್ರಧಾನಿ ಕೊಯಿಜುಮಿರ ಆರ್ಥಿಕ ನೀತಿಗಳನ್ನು ಮುಂದುವರಿಸಿಕೊಂಡು ನಡೆದ ಅಬೆ, ತೆರಿಗೆ ಸುಧಾರನೆಗೆ ಒತ್ತು ನೀಡಿದರು. ತೆರಿಗೆಗಳನ್ನು ಹೆಚ್ಚಿಸದೆಯೇ, ಪೋಲುವೆಚ್ಚ್ಚಗಳನ್ನು ನಿಲ್ಲಿಸಿದ ಜಾಣತನದಿಂದ ಅಬೆ, ಜನಪ್ರಿಯರಾದರು.
ಬಜೆಟ್ ಅನ್ನು ಖೋತಾದಿಂದ ಉಳಿತಾಯದತ್ತ ತರಲು, ಯೋಜನಾ ಗಾತ್ರವನ್ನು ಕಡಿತ ಮಾಡಿದ್ದು ಕೂಡಾ ಅಬೆಯವರ ಹಿರಿಮೆ.
ಪಠ್ಯಪುಸ್ತಕಗಳ ನವೀಕರಣದಲ್ಲಿ ಆಸಕ್ತಿ ತೋರಿದ ಅಬೆ, ರಾಜಮನೆತನದ ಜೊತೆ ಉತ್ತಮ ಸಂಬಂಧವನ್ನು ಗಳಿಸಿದರು.
ಚೈನಾ, ಭಾರತದ ಜೊತೆಗೆ ಸಂಬಂಧ ಸುಧಾರಿಸಲು ಒತ್ತು ಕೊಟ್ಟ ಅಬೆ, ಉತ್ತರ ಕೊರಿಯಾದ ಜೊತೆ ಕಟುವಾದ ನಿರ್ಧಾರ್ಗಳನ್ನು ತಳೆದರು.
ತೈವಾನ್ ಸ್ವಾತಂತ್ರ್ಯವನ್ನು ಬೆಂಬಲಿಸುತ್ತಲೂ ಕೂಡ, ಚೈನಾವನ್ನು ತಮ್ಮೆಡೆಗೆ ಸೆಳೆದದ್ದು ಅಬೆರ ದೀರ್ಘಕಾಲದ ವಿದೇಶಾಂಗ ಖಾತೆಯಲ್ಲಿದ್ದ ಅನುಭವದಿಂದ ಸಾಧ್ಯವಾಯಿತು.
ಸೆಂಕಾಕು ದ್ವೀಪಗಳು, ಯಾಸುಕುನಿ ತೀರ್ಥಕ್ಷೇತ್ರಕ್ಕೆ ಭೇಟಿ ಹೀಗೆ ಸಂಪ್ರದಾಯಸ್ಥ ಮತ್ತು ವಿವಾದಾಸ್ಪದ ಘಟನೆಗಳು ಅಬೆರನ್ನು ಮೂಲಭೂತವಾದಿ ಎಂಬ ಹಣೆಪಟ್ಟಿಗೆ ಈಡು ಮಾಡಿದವು.
೨೦೦೭ರ ಚುನಾವಣೆಯಲ್ಲಿ ೫೨ ವರ್ಷದಲ್ಲಿ ಮೊದಲ ಬಾರಿಗೆ ಲಿಬರಲ್ ಡೆಮಾಕ್ರಟಿಕ್ ಪಕ್ಷ ಜಪಾನ್ ಸಂಸತ್ತಿನ ಹಿರಿಮನೆಯಲ್ಲಿ ಬಮತ ಕಳೆದುಕೊಂಡಿತು. ಹಲಮಂದಿ ಸಚಿವ ಸಂಪುಟದ ಸಹೋದ್ಯೋಗಿಗಳು ಭ್ರಷ್ಟಾಚಾರದ ಆರೋಪ ಹೊತ್ತು ರಾಜೀನಾಮೆ ನೀಡಿದ್ದು ಅಬೆರನ್ನು ನಿರಾಶರನ್ನಾಗಿಸಿತು. ಇದೇ ಸಮಯಕ್ಕೆ ತೀಕ್ಷ್ಣ ಅಲ್ಸರ್ ರೀಗಕ್ಕೆ ಗುರಿಯಾದ ಅಬೆ, ೨೬ ಸೆಪ್ಟೆಂಬರ್ ೨೦೦೭ರಂದು ಪ್ರಧಾನಿ ಪದವಿಗೆ ರಾಜೀನಾಮೆ ಇತ್ತರು. ಯಾಸುವೋ ಫುಕುಡ ಪ್ರಧಾನಿಯಾದರು.
==೨೦೦೭-೧೨==
ಅಸಾಕೊಲ್ ಎಂಬ ಔಷಧದಿಂದ ಅಬೆ, ತಮ್ಮ ಅಲ್ಸರ್ ರೋಗದಿಂದ ಪಾರಾದರು. ವಿ~ಗ್ಞಾನ ಮತ್ತು ಔಷಧ ಸಂಶೋಧನೆಗೆ ಒತ್ತು ನೀಡುವುದರ ಮಹತ್ವ ಅಬೆರಿಗೆ ಆಯಿತು.
೨೦೦೯ರಲ್ಲಿ ಸಂಸತ್ ಗೆ ಆಯ್ಕೆಯಾದ ಅಬೆ, ೩ ವರ್ಷ ವಿರೋಧ ಪಕ್ಷದ ನಾಯಕರಾಗಿದ್ದರು.
==ಮರಳಿ ಪ್ರಧಾನಿ==
೨೦೧೨ರ ನವೆಂಬರ್ ೧೬ರಂದು ಪ್ರಧಾನಿ ಯೊಶಿಹಿಕೋ ನೋಡಾ ಸಂಸತ್ತನ್ನು ವಿಸರ್ಜಿಸಿ ಚುನಾವಣೆಗೆ ಆದೇಶವಿತ್ತರು. ೨೬ ಡಿಸೆಂಬರ್ ೨೦೧೨ರಂದು ಶಿಂಜೋ ಅಬೆ, ನ್ಯೂ ಕೊಮಿಟೋ ಪಕ್ಷದ ಜೊತೆಗೂಡಿ ಸಮ್ಮಿಶ್ರ ಸರ್ಕಾರ ರಚಿಸಿದರು.
ಟಾರೀ ಅಸೋ ರನ್ನು ಉಪಪ್ರಧಾನಿ ಮತ್ತು ಯೋಷಿಹಿಡೆ ಸುಗಾರನ್ನು ಮುಖ್ಹ್ಯ ಕ್ಯಾಬಿನೇಟ್ ಕಾರ್ಯದರ್ಶಿಯನ್ನಾಗಿಸಿದ ಅಬೆ, ಅಬೆನಾಮಿಕ್ಸ್ ಎಂಬ ಹೊಸ ಹಣಕಾಸು ನೀತಿಯನ್ನು ಮೊದಲು ಮಾಡಿದರು.
೧೯೯೦ರಿಂದ ವಹಿವಾಟು ಹಿಂಜರಿತ (ಡೀಫ್ಲೇಷನ್) ಅನುಭವಿಸುತ್ತಿದ್ದ ಜಪಾನ್, ೨೦೦೮ರ ಜಾಗತಿಕ ಹಣಕಾಸು ಮುಗ್ಗಟ್ಟನ್ನು ಮತ್ತು ತೈಲ ಬೆಲೆ ಸಮಸ್ಯೆಗಳಿಂದ ಜರ್ಝರಿತವಾಗಿತ್ತು.
ಟಾರೀ ಅಸೋ ರನ್ನು ಉಪಪ್ರಧಾನಿ ಮತ್ತು ಯೋಷಿಹಿಡೆ ಸುಗಾರನ್ನು ಮುಖ್ಹ್ಯ ಕ್ಯಾಬಿನೇಟ್ ಕಾರ್ಯದರ್ಶಿಯನ್ನಾಗಿಸಿದ ಅಬೆ, ಅಬೆನಾಮಿಕ್ಸ್ ಎಂಬ ಹೊಸ ಹಣಕಾಸು ನೀತಿಯನ್ನು ಮೊದಲು ಮಾಡಿದರು.
೧೯೯೦ರಿಂದ ವಹಿವಾಟು ಹಿಂಜರಿತ (ಡೀಫ್ಲೇಷನ್) ಅನುಭವಿಸುತ್ತಿದ್ದ ಜಪಾನ್, ೨೦೦೮ರ ಜಾಗತಿಕ ಹಣಕಾಸು ಮುಗ್ಗಟ್ಟನ್ನು ಮತ್ತು ತೈಲ ಬೆಲೆ ಸಮಸ್ಯೆಗಳಿಂದ ಜರ್ಝರಿತವಾಗಿತ್ತು.
್ರ ೨% ಹಣದುಬ್ಬರ
್ರ ಸಡಿಲ ಮತ್ತು ಉದಾರವಾದ ಅರ್ಥಿಕ ನೆರವನ್ನು ಕೈಗಾರಿಕೆಗಳಿಗೆ ನೀಡುವುದು
* ಥಾಯ್ ಲ್ಯಾಂಡ್ ರಂಗ್ಸಿತ್ ವಿವಿಯ ಗೌರವ ಡಾಕ್ಟರೇಟ್ - ೨೦೧೩
* ದಿಲ್ಲಿಯ ಜೆ.ಎನ್.ಯು ವಿವಿಯ ಗೌರವ ಡಾಕ್ಟರೇಟ್ -೨೦೧೫
* ಲಕ್ಸೆಂಬರ್ಗ್, ನೆದರ್ ಲ್ಯಾಂಡ್, ಫಿಲಿಪ್ಪೈನ್ಸ್ ದೇಶಗಳ ಅತ್ಯುಚ್ಛ ನಾಗರೀಕ ಸನ್ಮಾನ
೨೭೦

edits

"https://kn.wikipedia.org/wiki/ವಿಶೇಷ:MobileDiff/880499" ಇಂದ ಪಡೆಯಲ್ಪಟ್ಟಿದೆ

ಸಂಚರಣೆ ಪಟ್ಟಿ