"ತೆಲುಗು" ಆವೃತ್ತಿಗಳ ಮಧ್ಯದ ಬದಲಾವಣೆಗಳು

Jump to navigation Jump to search
[[File:Telugu speakers in India.png|thumb|Geographic distribution of Telugu immigrants in light blue, Telugu is native to dark blue.]]
ದ್ರಾವಿಡಭಾಷಾವರ್ಗಕ್ಕೆ ಸೇರಿದ ತೆಲುಗನ್ನು ಆಂಧ್ರಭಾಷೆಯೆಂದು ಕರೆಯುವುದು ಅಷ್ಟು ಸರಿಯಲ್ಲದಿದ್ದರೂ ರೂಢಿಯಲ್ಲಿ ಆ ಹೆಸರೂ ನಿಂತು ಬಿಟ್ಟಿದೆ. ಇದಕ್ಕೇನು ಕಾರಣವೆಂದರೆ ಆಂಧ್ರ ಚಕ್ರಾಧಿಪತ್ಯವೂ ತೆಲುಗು ದೇಶವೂ ಸಮಾನವ್ಯಾಪ್ತಿಯುಳ್ಳವಲ್ಲ. ಚಕ್ರಾಧಿಪತ್ಯದ ಒಂದು ಭಾಗವಾದ ಮಹಾರಾಷ್ಟ್ರ ಎಂದಿಗೂ ತೆಲುಗು ದೇಶದ ಒಂದು ಭಾಗವಾಗಲಿಲ್ಲ. ತೆಲುಗು ದೇಶದ ಭಾಗಗಳಾದ [[ಕಳಿಂಗ]]ದ ಮಧ್ಯ ಮತ್ತು ದಕ್ಷಿಣ ಭಾಗಗಳು ಆಂಧ್ರ ಚಕ್ರಾಧಿಪತ್ಯಕ್ಕೆ ಎಂದೂ ಸೇರಿರಲಿಲ್ಲ. ತೆಲುಗು ದೇಶದಲ್ಲಿ ನೂರಾರು [[ಸಂಸ್ಕೃತ]] ಮತ್ತು ಪ್ರಾಕೃತಿಕ ಪದಗಳು ಬಳಕೆಯಲ್ಲಿವೆ ಮತ್ತು ಇನ್ನೂ ಹೆಚ್ಚಿನ ಪದಗಳು ತೆಲುಗು ಸಾಹಿತ್ಯದಲ್ಲಿ ಪ್ರಯುಕ್ತವಾಗಿವೆ. ಆದರೆ ಈ ಸಾಲ ತೆಗೆದುಕೊಂಡ ಶಬ್ದಗಳಿಂದ, ಇವು ಎಷ್ಟೇ ಇರಲಿ, ನಾಡಿನಲ್ಲಿ ಎಷ್ಟೇ ಹರಡಲಿ, ಭಾಷಾ ಬಾಂಧವ್ಯವನ್ನು ನಿರ್ಧರಿಸಲಾಗದು. ತೆಲುಗು ತೆಲಂಗಾಣದ (ತ್ರಿಲಿಂಗ) ಭಾಷೆ. ಅದು ಈಗಿನ ಆಂಧ್ರ ಪ್ರದೇಶದ ಭಾಷೆಯಾಗಿರುವುದರಿಂದ ಅದರ ಸ್ಥೂಲ ಪರಿಚಯವನ್ನಿಲ್ಲಿ ಮಾಡಿಕೊಡಲಾಗಿದೆ.
 
==ಬೆಳವಣಿಗೆ==
ರಾಜಮಹೇಂದ್ರಿಯಲ್ಲಿದ್ದ ಪೂರ್ವ [[ಚಾಲುಕ್ಯ]] ವಂಶದ ರಾಜರಾಜ ನರೇಂದ್ರನ (1033-43) ಆಸ್ಥಾನದಲ್ಲಿದ್ದ [[ನನ್ನಯ]]ನ ಕಾಲಕ್ಕೆ ಹಿಂದೆ ತೆಲುಗು ಭಾಷೆ ಹೇಗೆ ಬೆಳೆಯಿತು ಎಂಬ ವಿಷಯವನ್ನು ನಿರೂಪಿಸಲು ನಮಗೆ ತಕ್ಕಷ್ಟು ಆಧಾರಗಳು ದೊರೆತಿಲ್ಲ. ಬೆಜವಾಡದಲ್ಲಿರುವ ([[ವಿಜಯವಾಡ]]) ಒಂದು ಕಂಬದಲ್ಲಿ ಕೊರೆದಿರುವ "ಯುದ್ಧಮಲ್ಲ ಶಾಸನಮು" ಎಂಬ [[ಶಾಸನ]] ಮತ್ತು ನನ್ನಯ್ಯನಿಗೆ ಹಿಂದಿನ ಇತರ ಶಾಸನಗಳಲ್ಲಿ ಪದ್ಯಗಳಿವೆ; ಅವುಗಳ ಭಾಷೆ ನನ್ನಯ್ಯ ಬಳಸಿರುವ ಭಾಷೆಯ ಹಾಗೆಯೇ ಇದೆ. ತೆಲುಗು ಭಾಷೆ ಅಥವಾ ಸಾಹಿತ್ಯ ಯಾವಾಗ ಹುಟ್ಟಿತ್ತೆಂಬುದನ್ನು ಖಚಿತವಾಗಿ ಹೇಳಲು ಸಾಧ್ಯವಿಲ್ಲ. ಆದರೆ ಅದು ಕ್ರಿ.ಶ 600ರ ಹೊತ್ತಿಗೆ ದ್ರಾವಿಡ ಭಾಷೆಯ ಒಂದು ಪ್ರತ್ಯೇಕ ಶಾಖೆಯಾಗಿ ಇದ್ದಿತ್ತೆಂಬುದನ್ನು ಆ ಕಾಲದ [[ಚೋಳ ವಂಶ|ಚೋಳ]] ಮಹಾರಾಜರ ತೆಲುಗು ಶಾಸನವೊಂದರಿಂದ ನಿರ್ದಿಷ್ಟವಾಗಿ ಹೇಳಬಹುದು.
೪೦

edits

"https://kn.wikipedia.org/wiki/ವಿಶೇಷ:MobileDiff/867301" ಇಂದ ಪಡೆಯಲ್ಪಟ್ಟಿದೆ

ಸಂಚರಣೆ ಪಟ್ಟಿ