"ಕಟ್ಟಡ" ಆವೃತ್ತಿಗಳ ಮಧ್ಯದ ಬದಲಾವಣೆಗಳು

Jump to navigation Jump to search
ಟ್ಯಾಗ್‌ಗಳು: ಮೊಬೈಲ್ ಸಂಪಾದನೆ ಮೊಬೈಲ್ ವೆಬ್ ಸಂಪಾದನೆ
ಟ್ಯಾಗ್‌ಗಳು: ಮೊಬೈಲ್ ಸಂಪಾದನೆ ಮೊಬೈಲ್ ವೆಬ್ ಸಂಪಾದನೆ
==ಮಹಡಿಯ ಮೆಟ್ಟಲುಗಳು==
ನೆಲಕ್ಕೂ ಮಹಡಿಗೂ ನಡುವೆ ಮರದ ಅಟ್ಟಗಳನ್ನು ಕಟ್ಟುವುದು ಮೊದಲಿನಿಂದಲೂ ರೂಢಿಯಲ್ಲಿದೆ. ಆಗ ಮಹಡಿಯನ್ನು ವಾಸಕ್ಕೆ ಉಪಯೋಗಿಸುವುದು ಸಾಧ್ಯವಾಯಿತು.
ಕೆಳಗಿನಿಂದ ಮೇಲಿನ ಮಹಡಿಗಳಿಗೆ ಸಾಂಪ್ರದಾಯಿಕವಾಗಿ ಇದ್ದ ಈ ಮೆಟ್ಟಿಲುಗಳನ್ನು ಹಳೆಯ ಕಾಲದಲ್ಲಿ ಮಣ್ಣು, ಮರ, ಕಲ್ಲು, ಇಟ್ಟಿಗೆ ಇವುಗಳಿಂದ ಕಟ್ಟುತ್ತಿದ್ದರು. ಈಗ ಪ್ರಬಲಿತ ಕಾಂಕ್ರೀಟಿನಿಂದಲೂ ಉಕ್ಕಿನಿಂದಲೂ ಕಟ್ಟುತ್ತಾರೆ. ಪುರ್ವಪೂರ್ವ ನಿರ್ಮಿತ ಕಾಂಕ್ರೀಟಿನ ಮೆಟ್ಟಲುಗಳನ್ನು ಕಲ್ಲಿನ ಮೆಟ್ಟಲುಗಳಂತೆಯೇ ಮಾಡಿ ಜೋಡಿಸುತ್ತಾರೆ. ಉಕ್ಕಿನ ಇಲ್ಲವೆ ಕಬ್ಬಿಣದ ಮೆಟ್ಟಲುಗಳನ್ನು ಸಾಮಾನ್ಯವಾಗಿ ಕಟ್ಟಡದೊಳಗೆ ಇಡುವುದಿಲ್ಲ. ಬೆಂಕಿಯೇನಾದರೂ ಬಿದ್ದರೆ ಕಾರ್ಖಾನೆಗಳಲ್ಲಿಯೂ ಕಚೇರಿಗಳಲ್ಲಿಯೂ ತಪ್ಪಿಸಿಕೊಂಡು ಹೋಗುವುದಕ್ಕೆ ಹೊರಗಡೆ ಇವನ್ನು ಇಟ್ಟಿರುತ್ತಾರೆ. ಮಹಡಿಯ ಮೆಟ್ಟಲುಗಳ ಸಂವಿಧಾನದಲ್ಲಿ ಏರುವಾಗಿನ ಶ್ರಮವನ್ನು ಗಣನೆಗೆ ತೆಗೆದುಕೊಳ್ಳಬೇಕು. ಈ ವಿಚಾರದಲ್ಲಿ ಕೆಲವು ಸಾಂಪ್ರದಾಯಿಕ ನಿಯಮಗಳಿವೆ. ಯಾವಾಗಲೂ ಮೆಟ್ಟಲಿನ ಅಗಲಕ್ಕೂ (ಟ್ರೆಡ್) ನಿಲುಪಟ್ಟಿಯ ಎತ್ತರಕ್ಕೂ (ರೈಸ್ó) ಒಂದು ಸಂಬಂಧವಿರಬೇಕು. ವಾಸದ ಮನೆಗಳಿಗೆ ಅನ್ವಯಿಸುವ ಒಂದು ಕ್ರಮದಲ್ಲಿ ಅಂಗುಲಗಳಲ್ಲಿ ಇವೆರಡನ್ನೂ ಗುಣಿಸಿದರೆ 66 ಬರಬೇಕು. ಎಂದರೆ ಮೆಟ್ಟಲುಗಳ ಎತ್ತರ 152 ಮಿಮೀ ಇದ್ದರೆ ಅಗಲ 279 ಮಿಮೀ ಇರಬೇಕು.
ಎತ್ತರವಾದ ಮಹಡಿಗಳನ್ನು ಹತ್ತುವಾಗ ಶ್ರಮ ಕಡಿಮೆಯಾಗಲು ಮಧ್ಯೆಮಧ್ಯೆ ನಿಲ್ಲುವುದಕ್ಕೆ ಅವಕಾಶ ಬೇಕು. ಮೆಟ್ಟಲುಗಳು ಪಕ್ಕಕ್ಕೆ ಕಿರಿದಾಗಲೂ ಸಂಪುರ್ಣವಾಗಿ ದಿಕ್ಕನ್ನು ಬದಲಿಸಿದಾಗಲೂ ಅಗಲವಾದ ಜಾಗ ಬಿಡಬೇಕು. ಜಾಗ ಸಾಲದೆ ಹೋದಾಗ ಸುತ್ತು ಮೆಟ್ಟಲುಗಳನ್ನು ಉಪಯೋಗಿಸುತ್ತಾರೆ. ಆದರೆ ಇದು ಅನುಕೂಲವಲ್ಲ. ಒಂದು ಮೆಟ್ಟಲು ಸಾಲಿನಲ್ಲಿ ಎಲ್ಲ ಮೆಟ್ಟಲುಗಳೂ ತಿರುಗುತ್ತಲೇ ಹೋದರೆ ಅದನ್ನು ತಿರುಗುವ ಮೆಟ್ಟಲು ಅಥವಾ ತಿರುವು ಮೆಟ್ಟಲು ಎನ್ನುತ್ತಾರೆ. ಇದನ್ನು ಕಬ್ಬಿಣದಿಂದ ತಯಾರು ಮಾಡುವುದು ರೂಢಿ.
ಈಗ ಕಚೇರಿಗಳಲ್ಲಿಯೂ ವಾಣಿಜ್ಯದ ಕಟ್ಟಡಗಳಲ್ಲಿಯೂ ಹತ್ತಾರು ಮಹಡಿಯ ಮನೆಗಳಲ್ಲಿಯೂ ಮೆಟ್ಟಲುಗಳೇನೋ ಇದ್ದರೂ ಅವಕ್ಕೆ ಎರಡನೆಯ ಸ್ಥಾನ ಬಂದಿದೆ. ವಿದ್ಯುತ್ತಿನಿಂದ ಚಲಿಸುವ [[ಎತ್ತುಗೆ]]ಗಳಿಗೆ (ಲಿಫ್ಟ್‌್ಸ) ಮೊದಲನೆಯ ಸ್ಥಾನ ಬಂದಿದೆ. ಇನ್ನೂ ಆಧುನಿಕವಾದ ಕ್ರಮ ಚಲಿಸುವ ಮಹಡಿಯ ಮೆಟ್ಟಲು (ಇಸ್ಕಲೇಟರ್).
 
== ಕಿಟಿಕಿಗಳು==
ತೆರೆದು ಹಾಕಿ ಮಾಡುವ ಹಾಗಿರುವ ಪ್ರತಿಯೊಂದು [[ಕಿಟಕಿ]]ಯಲ್ಲಿಯೂ ಒಂದು ಚೌಕಟ್ಟು, ತೆರೆಯುವ ಬಾಗಿಲುಗಳೂ ಇರಬೇಕು. ಚೌಕಟ್ಟಿನಲ್ಲಿ ಬಾಗಿಲುಗಳು ಪಕ್ಕಕ್ಕೆ ತೆರೆಯುವುದು ಸಾಂಪ್ರದಾಯಿಕ ಕ್ರಮ. ಈಚೆೆಗೆ ಕಿಟಕಿಗಳ ಬಾಗಿಲು ಚೌಕಟ್ಟಿನಲ್ಲಿ ಮೇಲಕ್ಕೂ ಕೆಳಕ್ಕೂ ಸರಿಯುವಂತೆ ಮಾಡುತ್ತಾರೆ ರೈಲ್ವೆಗಾಡಿಗಳಲ್ಲಿ ಮೊದಲಿನಿಂದಲೂ ಈ ನಮೂನೆಯ ಕಿಟಕಿಗಳು ಉಪಯೋಗದಲ್ಲಿವೆ. ಕಿಟಕಿಗಳ ಜಾರುಕದದ ಚೌಕಟ್ಟುಗಳನ್ನು ಮೇಲುಗಡೆೆ ಹಗ್ಗಗಳಿಂದಲೋ ಸರಪಳಿಗಳಿಂದಲೋ ತೂಗುಹಾಕಿ ಅವುಗಳ ತೂಕವನ್ನು ಚೌಕಟ್ಟಿನಲ್ಲಿ ನೇತಾಡುವ ಸೀಸದ ಭಾರಗಳಿಂದ ಸಮತೂಕ ಮಾಡುವುದೂ ಒಂದೂ ಕ್ರಮ. ಇದಲ್ಲದೆ ಅಡ್ಡಗಲವಾಗಿ ಬಾಗಿಲುಗಳು ಸರಿದಾಡುವಂತೆಯೂ ಮಾಡುತ್ತಾರೆ.
೨,೭೫೬

edits

"https://kn.wikipedia.org/wiki/ವಿಶೇಷ:MobileDiff/854076" ಇಂದ ಪಡೆಯಲ್ಪಟ್ಟಿದೆ

ಸಂಚರಣೆ ಪಟ್ಟಿ