ವಿಷಯಕ್ಕೆ ಹೋಗು

ಜೋಳ: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

ಸಂಪಾದನೆಯ ಸಾರಾಂಶವಿಲ್ಲ
No edit summary
ಟ್ಯಾಗ್‌ಗಳು: ಮೊಬೈಲ್ ಸಂಪಾದನೆ ಮೊಬೈಲ್ ವೆಬ್ ಸಂಪಾದನೆ
No edit summary
ಟ್ಯಾಗ್‌ಗಳು: ಮೊಬೈಲ್ ಸಂಪಾದನೆ ಮೊಬೈಲ್ ವೆಬ್ ಸಂಪಾದನೆ
===ಧಾನ್ಯ ಜೋಳದ ಸಾಗುವಳಿ===
ನಿರ್ದಿಷ್ಟ ವರುಷದಲ್ಲಿ ಜೋಳವು ಅತಿ ಹೆಚ್ಚು ಧಾನ್ಯ ಇಳುವರಿ ನೀಡಬೇಕಾದರೆ ಸರಾಸರಿ ತಾಪಮಾನ ೨೫° ಸೆಲ್ಸಿಯಸ್ ಇರಬೇಕಾಗುತ್ತದೆ. ದಿನದ ತಾಪಮಾನ ೩೦° ಸೆ (ಸೆಲ್ಸಿಯಸ್) ಇದ್ದಾಗ ಅತಿಹೆಚ್ಚು //ದ್ಯುತಿಸಂಶ್ಲೇಷಣೆ ಇರುತ್ತದೆ. ರಾತ್ರಿಯ ತಾಪಮಾನ ಕೆಲವು ದಿನಗಳಿಗೂ ಹೆಚ್ಚು ೧೩° ಸೆ. ಕಡಿಮೆಯಾದರೆ ಗಿಡದ ಧಾನ್ಯ ಉತ್ಪಾದನೆಯ ಸಾಮರ್ಥ್ಯ ಕಡಿಮೆಯಾಗುತ್ತದೆ. ಮಣ್ಣಿನ ತಾಪಮಾನ ೧೭° ಸೆ. ಆಗುವವರೆಗೂ ಬೀಜ ನಾಟುವುದು ಉಪಯುಕ್ತವಲ್ಲ. ಅದು ೪೫° ಸೆ. ನಷ್ಟು ಹೆಚ್ಚಿನ ಉಷ್ಟಾಂಶವನ್ನು ತಾಳಿಕೊಳ್ಳ ಬಲ್ಲದು ಆದರೆ ೮° ಸೆ. ಗೂ ಕಡಿಮೆ ತಾಪಮಾನವು ಹೂಬಿಡುವುದು ಮತ್ತು ಪರಾಗಸಂಪರ್ಕಕ್ಕೆ ದಕ್ಕೆಯುಂಟು ಮಾಡುತ್ತದೆ. ಹೂಬಿಡುವ ಹಂತದಲ್ಲಿ ೧೩°ಸೆ ಕಡಿಮೆ ತಾಪಮಾನ ಕಾಳುಕಟ್ಟುವುದರ ಮೇಲೆ ಪರಿಣಾಮ ಬೀರುತ್ತದೆ. ಹೀಗಾಗಿ ಇದನ್ನು ಉತ್ತರ ಭಾರತದಲ್ಲಿ ಹಿಂಗಾರಿನಲ್ಲಿ ಬೆಳೆಯುವುದಿಲ್ಲ.<ref name=B>Gangaiah B, [http://nsdl.niscair.res.in/jspui/bitstream/123456789/527/1/Millets%20(Sorghum,%20Pearl%20Millet,%20Finger%20Millet)%20-%20%20Formatted.pdf “Agronomy – Kharif Crops Millets Sorghum (Jowar) Pearl Millet (Bajra) Finger Millet”] access date 2016-07-14</ref> ಉಷ್ಣವಲಯದಲ್ಲಿ ಬೆಳೆಯ ಬಹುದಾದ (ಮತ್ತು ಬೆಳೆಯುತ್ತಿರುವ) ಇನ್ನೊಂದು ಧಾನ್ಯ ಭತ್ತಕ್ಕೆ ಹೋಲಿಸಿದರೆ ಇದರ ನೀರಿನ ಅಗತ್ಯ ಕಡಿಮೆ.<ref name=C> [http://www.aboutcivil.org/water-requirements-of-crops.html ”Irrigation Water Requirement of Crops”] access date 2016-07-14</ref> ಸಾಮಾನ್ಯವಾಗಿ ಜೋಳವನ್ನೂ ಒಳಗೊಂಡು ಎಲ್ಲಾ ಬೆಳೆಗಳ ಸಾಗುವಳಿ ಪದ್ಧತಿಗಳು ಒಂದು ಕೃಷಿ ವಲಯದಿಂದ ಇನ್ನೊಂದು ಕೃಷಿ ವಲಯಕ್ಕೆತುಸು ಭಿನ್ನವಾಗುತ್ತವೆ. ಹೀಗಾಗಿ ಇಲ್ಲಿನ ಜೋಳದ ಸಾಗುವಳಿಯ ವಿವರಗಳು ಹೆಚ್ಚಾಗಿ ಭಾರತಕ್ಕೆ ಸೀಮಿತವಾಗಿವೆ.
*<b>ಬಿತ್ತನೆಯ ವಿವರಗಳು</b>: ಭಾರತದಲ್ಲಿ ಈ ಬೆಳೆಯನ್ನು ಮುಂಗಾರು, ಹಿಂಗಾರು ಮತ್ತು ಬೇಸಿಗೆಯಲ್ಲಿಯೂ ಬೆಳೆಯಲಾಗುತ್ತದೆ. ಅತ್ಯುತ್ತಮ ಹೆಕ್ಟೇರಿನಲ್ಲಿನ ಸಸ್ಯಗಳ ಸಂಖ್ಯೆ ನಿರಾವರಿಯಲ್ಲಿ (ಎಲ್ಲಾ ಕಾಲಗಳಲ್ಲಿಯೂ) ೧,೫೦,೦೦೦ ದಿಂದ ೨,೦೦,೦೦೦ ಇದ್ದರೆ ಈ ಸಂಖ್ಯೆ ಖುಷ್ಕಿಯಲ್ಲಿ ೧,೩೫,೦೦೦ ವಿರುತ್ತದೆ. ೪೫x೧೫ ಸೆಂಮೀ ಅಥವಾ ೬೦x೧೦ ಸೆಂಮೀಗಳ ಮೂಲಕ ಪಡೆಯ ಬಹುದು. ಇದನ್ನು ಹೆಕ್ಟೇರಿಗೆ ೮-೧೦ ಕೆಜಿ ಬಿತ್ತುವ ಮೂಲಕ ಪಡೆಯ ಬಹುದು. ಇದನ್ನು ಬಿತ್ತನೆಯು ಮೊಳೆತ ನಂತರ ದಟ್ಟಣೆ ಕಡಿಮೆ ಮಾಡುವ ಮೂಲಕ ಸಾಧಿಸ ಬಹುದುಸಾಧಿಸಬಹುದು. ಬಹಳಷ್ಟು ಹೆಚ್ಚು ಇಳುವರಿಯ ಮತ್ತು ಹೈಬ್ರಿಡ್ ತಳಿಗಳು ೯೦-೧೨೦ ದಿನಗಳಲ್ಲಿ ಕಟಾವಿಗೆ ಬರುತ್ತವೆ.<ref name=B />
*<b>ತಳಿಗಳು</b>: ಹಲವು ಸುಧಾರಿತ ಹಾಗೂ ಹೈಬ್ರಿಡ್ ತಳಿಗಳನ್ನು ಬಿತ್ತನೆಗೆ ಶಿಪಾರಸು ಮಾಡಲಾಗಿದೆ. ಕರ್ನಾಟಕಕ್ಕೆ ಸೀಮಿತವಾಗಿ ಈ ತಳಿಗಳ ಯಾದಿಯನ್ನು ಕೆಳಗಿನ ಕೋಷ್ಟಕದಲ್ಲಿ ಕೊಡಲಾಗಿದೆ.
{| class="wikitable" style="margin:0 0 0.5em 1em"
| ೪೦೦ - ೪೫೦
|}
*<b>ಕಳೆ ಹತೋಟಿ</b>: ಕಳೆಗಳ ನಿಯಂತ್ರಣ ಬಿತ್ತನೆಯ ನಂತರದ ೩೦-೪೫ ದಿನಗಳು ಅತಿ ಮುಖ್ಯವಾದವು. ಈ ಸಮಯದಲ್ಲಿ ಬೆಳೆಯು ನಡುವಿನ ಕಳೆ ನಿಯಂತ್ರಣದಲ್ಲಿಡ ಬೇಕುನಿಯಂತ್ರಣದಲ್ಲಿಡಬೇಕು. ಕಳೆ ಹತೋಟಿ ಸರಿಯಾಗಿರದಿದ್ದಲ್ಲಿ ಶೇ ೨೦-೬೦ ರಷ್ಟು ಇಳುವರಿ ತಗ್ಗಬಹುದು. ಸಾಮಾನ್ಯ ವಿಧಾನವು ಕೈಯಿಂದ ಕುರ್ಚಿಗಿ (ಕುಡುಗೋಲು ಹೋಲುವ ಅದಕ್ಕೂ ಸಣ್ಣ ಸಾಧನ) ಮತ್ತು ಎತ್ತುಗಳ ನೊಗಕ್ಕೆ ಕಟ್ಟಿದ ಕಳೆಗುದ್ದಲಿ ಬಳಸಿ ತೆಗೆಯ ಬಹುದು. ಒಂದು ಕಿಲೊ (ಒಂದು ಹೆಕ್ಟೇರಿಗೆ) ಅಟ್ರಾಜಿನ್‌ನನ್ನು ೮೦೦-೧೦೦೦ ಲೀಟರು ನೀರಿನಲ್ಲಿ ಬೆರಸಿ ಬೆಳೆ ನಾಟುವ ಪೂರ್ವದಲ್ಲಿ ಸಿಂಪಡಿಸುವುದು ಕಳೆಯ ಹತೋಟಿಯ ಒಂದು ರೀತಿ. ಇದೇ ರೀತಿ ಜೋಳದಲ್ಲಿ ಬಳಸಬಹುದಾದ ಇನ್ನೊಂದು ನಾಟು ಪೂರ್ವ ಕಳೆನಾಶಕ ಪ್ರೋಮೆಟ್ರೈನೆ. ಇದನ್ನು ಹೆಕ್ಟೇರಿಗೆ ಒಂದು ಕಿಲೊನಂತೆ ಬಳಸ ಬೇಕುಬಳಸಬೇಕು. ಒಮ್ಮೆ ಕಳೆನಾಶಕದ ಬಳಕೆ ಮತ್ತು ಬಿತ್ತನೆಯ ೩೫-೪೦ ದಿನಗಳ ನಂತರ ಕೈಯಿಂದ ಕಳೆತೆಗೆಯುವುದು ಕಳೆಯನ್ನು ಉತ್ತಮವಾಗಿ ನಿಯಂತ್ರಿಸಲು ಸಾಕಾಗುತ್ತದೆ. ಜೋಳದ ಸಾಲುಗಳ ನಡುವೆ ಅಂತರ ಬೆಳೆಯಾಗಿ ಅಲಸಂದೆಅಲಸಂಡೆ ಬೆಳೆಯುವುದು ಸಹ ಜೋಳದ ಕಳೆಯನ್ನು ಹತೋಟಿಯಲ್ಲಿಡ ಬಲ್ಲದುಹತೋಟಿಯಲ್ಲಿಡಬಲ್ಲದು.<ref name=B />
*<b>ಕೊಯ್ಲು, ಒಕ್ಕಣೆ ಮತ್ತು ಇಳುವರಿ</b>: ಕಾಂಡ ಮತ್ತು ಎಲೆಗಳು ಒಣಗುವುದನ್ನು ಕಾಯದೆ ಕಾಳು ಗಟ್ಟಿಯಾಗಿ, ಅದರ ತೇವಾಂಶ ಶೇ೨೫ರಷ್ಟು ಆದಾಗ ಜೋಳವನ್ನು ಕಟಾವು ಮಾಡಬಹುದು. ಸಾಮಾನ್ಯವಾಗಿ ಕೊಯ್ಲಿಗೆ ಎರಡು ಪದ್ಧತಿಗಳನ್ನು ಅನುಸರಿಸಲಾಗುತ್ತದೆ. ಇವು ತೆನೆ ಕೊಯ್ಯುವುದು ಅಥವಾ ಕಾಂಡವನ್ನು ನೆಲದ ಬುಡದಿಂದ ತುಸು ಮೇಲೆ ಕೊಯ್ಯುವುದು. ಮುಂದುವರೆದ ದೇಶಗಳಲ್ಲಿ ಕಟಾವಿಗೆ ಯಂತ್ರಗಳನ್ನು ಬಳಸಲಾಗುತ್ತದೆ. ತೆನೆ ಕೊಯ್ಲಿನ ನಂತರ ಒಕ್ಕಣೆಯ ಪ್ರದೇಶದಲ್ಲಿ ಸಂಗ್ರಹಿಸಿ ೩—೪ ದಿನ ಸೂರ್ಯನ ಬಿಸಿಲಿಗೆ ಒಣಗಿದ ನಂತರ ಒಕ್ಕಲಾಗುತ್ತದೆ (ಕಾಳು ಬೇರ್ಪಡಿಸುವುದು). ತೆನೆಯೊಂದಿಗೆ ಕಾಂಡವನ್ನು ಕೊಯ್ದ ಸಂದಂರ್ಭದಲ್ಲಿ ಅವುಗಳನ್ನು ಅನುಕೂಲಕರ ಕಟ್ಟುಗಳಾಗಿ ಬಿಗಿಯಲಾಗುತ್ತದೆ ಮತ್ತು ಎರಡು ಮೂರು ದಿನ ಒಣಗಿದ ನಂತರ ತೆನೆಯನ್ನು ಕೊಯ್ದು ಕಾಂಡವನ್ನು ಬೇರ್ಪಡಿಸಲಾಗುತ್ತದೆ. ತೆನೆಗಳನ್ನು ಕಟ್ಟಿಗೆಯಿಂದ ಬಡಿಯುವ ಮೂಲಕವಾಗಲಿ ಅಥವಾ ಎತ್ತುಗಳ ಕಾಲಕೆಳಗೆ ತುಳಿಯಿಸುವ ಮೂಲಕವಾಗಲಿ ಜೋಳದ ಕಾಳು ಬೇರ್ಪಡಿಸುವಿಕೆಯನ್ನು ಮಾಡಲಾಗುತ್ತದೆ. ಕಾಳು ಬೇರ್ಪಡಿಸುವಿಕೆಗೆ ಯಂತ್ರಗಳೂ ಲಭ್ಯವಿವೆ. ಹೀಗೆ ಬೇರ್ಪಡಿಸಿದ ಕಾಳುಗಳನ್ನು ೬-೭ ದಿನ ಬಿಸಿಲಲ್ಲಿ ಒಣಗಿಸ ಬೇಕುಒಣಗಿಸಬೇಕು ಹಾಗೂ ಕಾಳಿನ ತೇವಾಂಶವು ಶೇ ೧೩-೧೫ ಇದ್ದರೆ ಕಾಳು ಸಂಗ್ರಹಿಸುವುದು ಸುರಕ್ಷಿತ. ಕಾಳಿನ ಇಳುವರಿಯು ೨.೫ ರಿಂದ ೩.೫ ಟನ್‌/ಹೆ (ಒಂದು ಹೆಕ್ಟೇರಿಗೆ ಟನ್ನುಗಳು) ರವೆರಗೂ ಇದ್ದು, ಸೊಪ್ಪೆಯು ೧೫ ರಿಂದ ೧೭ ಟನ್/ಹೆ ದೊರೆಯುತ್ತದೆ. ನೀರಾವರಿಯಲ್ಲಿ ಸುಧಾರಿತ ಬೇಸಾಯ ಪದ್ಧತಿಗಳ ಮೂಲಕ ಹೆಕ್ಟೇರಿಗೆ ೫ ಟನ್ನು ಧಾನ್ಯ ಹಾಗೂ ೧೦ ರಿಂದ ೧೨.೫ ಟನ್ ಒಣ ಮೇವು ಪಡೆಯ ಬಹುದು.<ref name=B />
{| class="wikitable" style="clear:left;float:right;margin:0 0 0.5em 1em"
|+ಹೆಚ್ಚು ಜೋಳ ಉತ್ಪಾದಿಸುವ ದೇಶಗಳು — ೨೦೦೮<ref>
೨,೭೬೭

edits

"https://kn.wikipedia.org/wiki/ವಿಶೇಷ:MobileDiff/845985" ಇಂದ ಪಡೆಯಲ್ಪಟ್ಟಿದೆ