ಶಂಕರ್ ನಾಗ್: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
Content deleted Content added
No edit summary
ಟ್ಯಾಗ್‌ಗಳು: ಮೊಬೈಲ್ ಸಂಪಾದನೆ ಮೊಬೈಲ್ ವೆಬ್ ಸಂಪಾದನೆ
No edit summary
ಟ್ಯಾಗ್‌ಗಳು: ಮೊಬೈಲ್ ಸಂಪಾದನೆ ಮೊಬೈಲ್ ವೆಬ್ ಸಂಪಾದನೆ
೧೨ ನೇ ಸಾಲು: ೧೨ ನೇ ಸಾಲು:
| height = 5 ft 7 in
| height = 5 ft 7 in
| yearsactive = 1977–1990
| yearsactive = 1977–1990
| othername = ಶಂಕರ್ ಅಣ್ಣ, ಕರಾಟೆ ಕಿಂಗ್, ಆಟೋರಾಜ, ಸುಪ್ಪರ್ ಸ್ಟರ್,
| othername = ಶಂಕರ್ ಅಣ್ಣ, ಕರಾಟೆ ಕಿಂಗ್, ಆಟೋರಾಜ, ಸೂಪರ್ ಸ್ಟಾರ್,
| occupation = ನಟ, ನಿರ್ದೇಶಕರು, ನಿರ್ಮಾಪಕರು, ಚಿತ್ರಕಥೆಗಾರ, ಕಿರುತೆರೆಯ ನಟರು,ಕಿರುತೆರೆ ನಿರ್ದೇಶಕರು
| occupation = ನಟ, ನಿರ್ದೇಶಕರು, ನಿರ್ಮಾಪಕರು, ಚಿತ್ರಕಥೆಗಾರ, ಕಿರುತೆರೆಯ ನಟರು,ಕಿರುತೆರೆ ನಿರ್ದೇಶಕರು
| ಮಡದಿ = [[ಆರುಂಧತಿ ನಾಗ್]]
| ಮಡದಿ = [[ಆರುಂಧತಿ ನಾಗ್]]

೧೬:೦೩, ೧೪ ಏಪ್ರಿಲ್ ೨೦೧೮ ನಂತೆ ಪರಿಷ್ಕರಣೆ

kannada

ಚಿತ್ರ:Shankar nag.jpg
ಶಂಕರ್ ನಾಗ್
ಶಂಕರ್ ನಾಗ್
ಚಿತ್ರ:Shankar-nag.jpg
ಶಂಕರ್ ನಾಗ್
Born
ಶಂಕರ್ ನಾಗರ ಕಟ್ಟೆ

(೧೯೫೪-೧೧-೦೯)೯ ನವೆಂಬರ್ ೧೯೫೪
ಮಲ್ಲಾಪುರ್, ಹೊನ್ನಾವರ (North Kanara), Mysore State, ಭಾರತ
Died30 September 1990(1990-09-30) (aged 35)
Near Anagod, ದಾವಣಗೆರೆ , ಕರ್ನಾಟಕ
Other namesಶಂಕರ್ ಅಣ್ಣ, ಕರಾಟೆ ಕಿಂಗ್, ಆಟೋರಾಜ, ಸೂಪರ್ ಸ್ಟಾರ್,
Occupation(s)ನಟ, ನಿರ್ದೇಶಕರು, ನಿರ್ಮಾಪಕರು, ಚಿತ್ರಕಥೆಗಾರ, ಕಿರುತೆರೆಯ ನಟರು,ಕಿರುತೆರೆ ನಿರ್ದೇಶಕರು
Years active1977–1990
Height5 ft 7 in (170 cm)
Websitehttp://www.shankarnag.in/
http://www.rangashankara.org/

ಶಂಕರ್ ನಾಗ್(ನಾಗರಕಟ್ಟೆ ಶಂಕರ್) (೧೯೫೪ - ೧೯೯೦) ಕನ್ನಡ ಚಿತ್ರರಂಗದ ಮತ್ತು ರಂಗಭೂಮಿಯ ಪ್ರಮುಖ ನಾಯಕ ನಟ ಮತ್ತು ನಿರ್ದೇಶಕರು.

ಜನನ, ವೃತ್ತಿ ಜೀವನ

  • ನವೆಂಬರ್ ೯,೧೯೫೪ ರಂದು ಕರ್ನಾಟಕದ ಹೊನ್ನಾವರ ತಾಲೂಕಿನ ಮಲ್ಲಾಪುರ ಎಂಬ ಪುಟ್ಟ ಹಳ್ಳಿಯಲ್ಲಿ ಶಂಕರ್ ನಾಗ್ ಅವರು ಹುಟ್ಟಿದರು.ನಕ್ಷತ್ರ ನಾಮ'ಅವಿನಾಶ'.ಹೀಗೆಂದರೆ ವಿನಾಶವಿಲ್ಲದವನು ಎಂದರ್ಥ.ತಂದೆ ಹೊನ್ನಾವರದ ನಾಗರ ಕಟ್ಟೆಯ ಸದಾನಂದ, ಬಾಲ್ಯದಲ್ಲಿ ಪ್ರೀತಿಯಿಂದ ಮಗನನ್ನು ಕರೆಯುತಿದ್ದ ಹೆಸರು ಭವಾನಿ ಶಂಕರ್. ಶಂಕರ್ ನಾಗ್ ತನ್ನ ವಿದ್ಯಾಬ್ಯಾಸದ ನಂತರ ಮುಂಬೈಗೆ ತೆರಳಿದರು .
  • ಮುಂಬೈನ ಮರಾಠಿ ಚಿತ್ರಮಂದಿರದ ಕಡೆಗೆ ಆಕಷಿ೯ತರಾದ ಶಂಕರ್ ತಮಗರಿವಿಲ್ಲದಂತೆ ಮರಾಠಿ ರಂಗಭೂಮಿ ಹವ್ಯಾಸವನ್ನು ಬೆಳೆಸಿಕೊಳ್ಳುತ್ತಾ ಮರಾಠಿ ರಂಗಭೂಮಿಯಲ್ಲಿ ತೀವ್ರವಾಗಿ ತೊಡಗಿಕೊಂಡಿದ್ದರು. ತಮ್ಮ ಗೆಳೆಯರೊಂದಿಗೆ ಅವರು ಚಿತ್ರಕತೆ ರಚಿಸಿದ ಮರಾಠಿ ಚಿತ್ರ ’೨೨ ಜೂನ್ ೧೮೯೭’ ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿ ಪಡೆದಿತ್ತು.
  • ಅಣ್ಣನಂತೆ ತಮ್ಮನೂ ಬ್ಯಾಂಕ್ ನೌಕರನಾದರೂ ಬ್ಯಾಂಕ್ ವೃತ್ತಿಯ ಜೊತೆಯಲ್ಲಿ ಸಂಗೀತ ಅಭಿರುಚಿ ಇದ್ದ ಕಾರಣ ತಬಲ , ಕೊಳಲು , ಹಾರ್ಮೋನಿಯಂ ಹೀಗೆ ಹಲವಾರು ವಾದ್ಯಗಳನ್ನು ನುಡಿಸಲು ಕಲಿತರು. ಮರಾಠಿ ನಾಟಕಗಳ ಮೂಲಕ ತಮ್ಮ ವೃತ್ತಿ ಜೀವನವನ್ನು ಪ್ರಾರಂಭ ಮಾಡಿದರು. ಗಿರೀಶ್ ಕಾರ್ನಾಡರ 'ಒಂದಾನೊಂದು ಕಾಲದಲ್ಲಿ' ಎನ್ನುವ ಚಿತ್ರದ ಮೂಲಕ ಕನ್ನಡ ಚಿತ್ರರಂಗಕ್ಕೆ ಪಾದಾರ್ಪಣೆ ಮಾಡಿದರು.
  • ಒಂದಾನೊಂದು ಕಾಲದಲ್ಲಿ ಚಿತ್ರದ ಅಭಿನಯಕ್ಕೆ ಸ್ಪರ್ಧಾರ್ಥಕ ಅಂತರರಾಷ್ಟೀಯ ಚಲನಚಿತ್ರೋತ್ಸವದಲ್ಲಿ ಅತ್ಯುತ್ತಮ ನಟ ಪ್ರಶಸ್ತಿ ದೊರೆಯಿತು. ನಂತರದ ೧೨ ವರ್ಷಗಳಲ್ಲಿ ಕನ್ನಡದ ಸುಮಾರು ೯೦ಕ್ಕೊ ಹೆಚ್ಚು ಚಿತ್ರಗಳಲ್ಲಿ ನಟಿಸಿದರು.ಶಂಕರ‍ನಾಗ್ ಪ್ರಥಮ ಬಾರಿಗೆ ತ್ರಿಪಾತ್ರದಲ್ಲಿ ಅಭಿನಯಿಸಿದ ಚಿತ್ರ "ಗೆದ್ದ ಮಗ". ತಮ್ಮ ಸಹೋದರ ಅನಂತ ನಾಗ್ ಅವರೊಡನೆ "ಮಿಂಚಿನ ಓಟ", "ಜನ್ಮ ಜನ್ಮದ ಅನುಬಂಧ" ಮತ್ತು "ಗೀತಾ" ಚಿತ್ರಗಳನ್ನು ನಿರ್ಮಿಸಿದರು.
  • ಇದರಲ್ಲಿ "ಜನ್ಮ ಜನ್ಮದ ಅನುಬಂಧ" ಮತ್ತು "ಗೀತಾ" ಚಿತ್ರಗಳು ಇಳಯರಾಜ ಅವರ ಮಧುರ ಸಂಗೀತವನ್ನು ಹೊಂದಿ ಜನಮನ್ನಣೆ ಗಳಿಸಿವೆ. ನಾಟಕಗಳನ್ನು ಮತ್ತು ರಂಗಭೂಮಿಯನ್ನು ಗೌರವಿಸಿ ಶ್ರೀಮಂತಗೊಳಿಸಿದ ಶಂಕರ್ ಅವರು ಗಿರೀಶ ಕಾರ್ನಾಡ ರ "ಅಂಜು ಮಲ್ಲಿಗೆ", "ನೋಡಿ ಸ್ವಾಮಿ ನಾವಿರೋದು ಹೀಗೆ" ಮತ್ತು ಮುಂತಾದ ನಾಟಕಗಳನ್ನು ನಿರ್ದೇಶಿಸಿದ್ದಾರೆ.
  • ಭಾರತೀಯ ದೂರದರ್ಶನದಲ್ಲೇ ದಾಖಲೆ ನಿರ್ಮಿಸಿದ ಅತ್ಯಂತ ಜನಪ್ರಿಯವಾದ ಆರ್.ಕೆ. ನಾರಾಯಣ್ ಅವರ "ಮಾಲ್ಗುಡಿ ಡೇಸ್ ಅಥವಾ ಮಾಲ್ಗುಡಿಯ ದಿನಗಳು" ಮತ್ತು ಸ್ವಾಮಿ ಧಾರವಾಹಿಯನ್ನು ನಿರ್ದೇಶಿಸಿದ್ದಾರೆ. ಇಂದೂ ಸಹ ಇದುವರೆಗೆ ಎಲ್ಲ ತರದ ದೂರದರ್ಶನ ಕಾರ್ಯಕ್ರಮಗಳಲ್ಲಿ ಅತಿ ಹೆಚ್ಚು ಜನ ಪ್ರಿಯತೆ ಗಳಿಸಿ ಪಂಡಿತರು, ಬುದ್ಧಿ ಜೀವಿಗಳಿಂದಲೂ ಮೆಚ್ಚುಗೆ ಗಳಿಸಿದ ಮಹೋನ್ನತ ಧಾರವಾಹಿ ‘ಮಾಲ್ಗುಡಿ ಡೇಸ್’.

ದಾಂಪತ್ಯ ನಾಟಕ ಬದುಕು

ಶಂಕರ್ ನಾಗ್ ಅವರ ಪತ್ನಿ ಅರುಂಧತಿ ನಾಗ್.ಕಲಾವಿದೆಯಾಗಿದ್ದ ಅರುಂಧತಿ ಅವರನ್ನು ಇಷ್ಟ ಪಟ್ಟ ನಂತರ ಮದುವೆಯಾದರು. ಮಗಳು ಕಾವ್ಯ.
ಈ ದಂಪತಿಗಳು ‘ಸಂಕೇತ್’ ಎಂಬ ಹವ್ಯಾಸಿ ರಂಗ ತಂಡವನ್ನು ಕಟ್ಟಿ ‘ಅಂಜುಮಲ್ಲಿಗೆ’, ‘ಬ್ಯಾರಿಸ್ಟರ್’, ‘ಸಂಧ್ಯಾ ಛಾಯ’, ‘ನೋಡಿ ಸ್ವಾಮಿ ನಾವಿರೋದು ಹೀಗೆ’, ‘ಆಟ ಬೊಂಬಾಟ’, ‘ನಾಗಮಂಡಲ’ ಮುಂತಾದ ಸುಂದರ ನಾಟಕಗಳ ನಿರ್ಮಾಣ, ನಿರ್ವಹಣೆಗಳಲ್ಲಿ ಸಕ್ರಿಯ ಪಾತ್ರವಹಿಸಿದರು. ನಾಟಕರಂಗದಲ್ಲಿಯೇ ಪ್ರಾರಂಭದಿಂದ ಒಡನಾಟ ಬೆಳೆಸಿಕೊಂಡಿದ್ದ ಶಂಕರನಾಗ್ ದಂಪತಿಗಳು ರಂಗಭೂಮಿಯ ಕಲಾವಿದರಿಗೆ ನೆರವಾಗುವಂತೆ, ನಾಟಕಗಳ ಪ್ರದರ್ಶನ ಸುಗಮವಾಗಿರುವಂತೆ ನಾಟಕಮಂದಿರವೊಂದನ್ನು ನಿರ್ಮಿಸಬೇಕೆಂದಿದ್ದರು. ಆ ಯೋಜನೆಯು ಕಾರ್ಯರೂಪಕ್ಕೆ ಬರುವ ಮುಂಚೆಯೇ ಶಂಕರನಾಗ್ ದುರ್ಮರಣಕ್ಕೀಡಾದರು. ಅವರ ಪತ್ನಿ ಅರುಂಧತಿನಾಗ್ ಆ ಯೋಜನೆಯನ್ನು ಮುಂದುವರೆಸಿ, ಕಾರ್ಯರೂಪಕ್ಕೆ ತಂದಿದ್ದಾರೆ.ಆ ರಂಗಮಂದಿರಕ್ಕೆ"ರಂಗಶಂಕರ" ಎಂದು ಹೆಸರಿಟ್ಟರು."ರಂಗಶಂಕರ" ಬೆಂಗಳೂರಿನ ಪ್ರಮುಖ ಸ್ಥಳವೊಂದರಲ್ಲಿ ಕಾರ್ಯನಿರ್ವಹಿಸುತ್ತಿದೆ.

ನಿರ್ದೇಶಕರಾಗಿ

ಡಾ.ರಾಜ್ ಕುಮಾರ್ ಅಭಿನಯಿಸಿರುವ ಒಂದು ಮುತ್ತಿನ ಕಥೆ ಚಿತ್ರವನ್ನು ಶಂಕರನಾಗ್ ನಿರ್ದೇಶಿಸಿದ್ದರು.
ನಂದಿ ಬೆಟ್ಟಕ್ಕೆ ರೋಪ್ ವೇ, ಬೆಂಗಳೂರಿಗೆ ಮೆಟ್ರೋ ರೈಲು, ರಂಗಮಂದಿರ ಇವೆಲ್ಲಕ್ಕೂ ನಕ್ಷೆ ತಯಾರಿಸಿ ಅಂದಿನ ಮುಖ್ಯಮಂತ್ರಿ ರಾಮಕೃಷ್ಣ ಹೆಗ್ಗಡೆಸರ್ಕಾರದ ಮುಂದೆ ಇಟ್ಟಿದ್ದು ನಮ್ಮ ಶಂಕರ್ ನಾಗ್.ಅಂದಿನ ಜನಪ್ರಿಯ ಮತ್ತು ಅಷ್ಟೇ ಕ್ರಿಯಾಶೀಲ ವ್ಯಕ್ತಿ ಮುಖ್ಯಮಂತ್ರಿ ರಾಮಕೃಷ್ಣ ಹೆಗ್ಗಡೆ ಅವರಿಗೆ ಶಂಕರ್ ಆತ್ಮೀಯ ಗೆಳೆಯ, ಜೊತೆಗೆ ಅಚ್ಚುಮೆಚ್ಚಿನ ವ್ಯಕ್ತಿ.

ಆಕಸ್ಮಿಕ ಅವಘಡ

  • ಸೆಪ್ಟೆಂಬರ್ ೩೦, ೧೯೯೦ ರಂದು ದಾವಣಗೆರೆಯ ಹಳ್ಳಿಯೊಂದಾದ ಅನಗೋಡು ಹಳ್ಳಿಯಲ್ಲಿ ಜೋಕುರಸ್ವಾಮಿ ಚಿತ್ರದ ಚಿತ್ರೀಕರಣ ನಡೆಯುತ್ತಿರುವ ಸಂದರ್ಭವದು ಧಾರವಾಡದಿಂದ ತೆರಳುತ್ತಿದ್ದ ಶಂಕರ್ ನಾಗ್ ಅವರು ಕಾರು ಅಪಘಾತದಿಂದ ತಮ್ಮ ಕೊನೆಯುಸಿರೆಳೆದರು . ಶಂಕರ್ ನಾಗ್ ಪತ್ನಿ ಹಾಗೂ ಓರ್ವ ಮಗಳಾದ ಕಾವ್ಯ ಅವರನ್ನು ಅಗಲಿದರು ಶಂಕರ್ ನಾಗ್, ತಮ್ಮ ಪರಿವಾರವನ್ನಷ್ಟೇ ಅಲ್ಲ ಇಡೀ ಚಿತ್ರೋಧ್ಯಮವನ್ನು ಅತೀ ಕಡಿಮೆ ಸಮಯದಲ್ಲಿ ತನ್ನತ್ತಾ ವಾಲುವಂತೆ ಮಾಡಿದ್ದ ಏಕೈಕ ವ್ಯಕ್ತಿಯನ್ನು ಕಳೆದುಕೊಂಡ ಕನ್ನಡ ಚಿತ್ರೋಧ್ಯಮ ಅನಾಥ ವಾಯಿತೆಂದರೆ ತಪ್ಪಾಗಲಾರದು.

ಪ್ರಶಸ್ತಿ, ಗೌರವ

  • ಇವರು ಹಲವಾರು ರಾಜ್ಯಪ್ರಶಸ್ತಿಗಳನ್ನು ತಮ್ಮದಾಗಿಸಿಕೊಂಡರು ಉದಾಹರಣೆಗೆ ನೋಡಿ ಸ್ವಾಮಿ ನಾವಿರೋದೆ ಹೀಗೆ ಚಿತ್ರಕ್ಕಾಗಿ ಎರಡು ಬಾರಿ ಕ್ರಮವಾಗಿ ದ್ವಿತೀಯ ಹಾಗೂ ತೃತೀಯ ಸ್ಥಾನವನ್ನು ರಾಜ್ಯಸರ್ಕಾರದ ವತಿಯಿಂದ ತಮ್ಮದಾಗಿಸಿಕೊಂಡರು.
  • 'ಆಕ್ಸಿಡೆಂಟ್' ೧೯೮೮-೮೯ ರ ಸಾಲಿನ ಪ್ರಥಮ ಅತ್ಯುತ್ತಮ ಚಿತ್ರ ಎಂದು ರಾಜ್ಯ ಸರ್ಕಾರವಷ್ಟೇ ಅಲ್ಲದೆ ಪಾನನಿಷೇಧದ ಬಗೆಗಿನ ಉತ್ತಮ ಚಿತ್ರವೆಂದು ಪರಿಗಣಿತವಾಗಿ ರಜತ ಕಮಲ ಮತ್ತು ನಗದು ಬಹುಮಾನವನ್ನು ರಾಷ್ಟ್ರ ಪ್ರಶಸ್ತಿಯಾಗಿ ಪಡೆದರು.
  • ಕನ್ನಡ ಚಿತ್ರೋಧ್ಯಮಕ್ಕೆ ಕಂಪೂಟರ್ ಚಾಲಿತ ಶಬ್ದಗ್ರಹಣ ತಂತ್ರಜ್ಜಾನವನ್ನು ಕೊಡುಗೆಯಾಗಿತ್ತ ಸಂಕೇತ್ ಸ್ಟುಡಿಯೋ ಶಂಕರ್ ನಾಗ್ ಅವರ ಮತ್ತೊಂದು ಕಲಾ ಕೊಡುಗೆಯಾಗಿತ್ತು.
  • ಸುಮಾರು ೯೦ ಚಿತ್ರಗಳಲ್ಲಿ ಅಭಿನಯಿಸಿದ ಶಂಕರ್ ನಾಗ್, ನಟನೆ ಮತ್ತು ನಿರ್ದೇಶನ ಎರಡರಲ್ಲೂ ಸೈ ಎನ್ನಿಸಿಕೊಂಡವರು. ಅವರ ಚಿತ್ರಗಳನ್ನು ಪ್ರೇಕ್ಷಕರು ಮತ್ತು ವಿಮರ್ಶಕರು ಇಬ್ಬರೂ ಮೆಚ್ಚಿಕೊಂಡದ್ದು ಶಂಕರರ ಹೆಗ್ಗಳಿಕೆ.

ನಿಗೂಢ ರಹಸ್ಯ ಶಂಕರ್ ನಾಗ್ ಅಭಿನಯದ ಕೊನೆಯ ಚಿತ್ರ.

ಶಂಕರ್‍ನಾಗ್ ಅಭಿನಯಿಸಿರುವ ಇತರ ಚಿತ್ರಗಳು

ಹಿಂದಿ ಚಲನಚಿತ್ರದ ನಟರಾಗಿ