"ಕಂಪ್ಯೂಟರ್" ಆವೃತ್ತಿಗಳ ಮಧ್ಯದ ಬದಲಾವಣೆಗಳು

Jump to navigation Jump to search
ಕಂಪ್ಯೂಟರಿಗೆ ಊಡಿಸಲಾದ ದತ್ತಾಂಶವನ್ನು ನಿರ್ದಿಷ್ಟ ಹೆಜ್ಜೆಗಳಲ್ಲಿ ಸಂಸ್ಕರಿಸಲಾಗುತ್ತದೆ. ಬಳಕೆದಾರರ ಅಯ್ಕೆಗೆ ಅನುಗುಣವಾಗಿ ಇಂತಹ ನಿರ್ದೇಶನಗಳನ್ನು ನೀಡುವುದು ತಂತ್ರಾಂಶದ (ಸಾಫ್ಟ್‌ವೇರ್) ಕೆಲಸ. ಬಳಕೆದಾರ ಕಂಪ್ಯೂಟರನ್ನು ಬಳಸಲು ನೆರವಾಗುವುದು, ದತ್ತಾಂಶ ಸಂಸ್ಕರಣೆಯಲ್ಲಿ [[ತಂತ್ರಾಂಶ]] ನೀಡುವ ನಿರ್ದೇಶನಗಳನ್ನು ಪಾಲಿಸುವುದೆಲ್ಲ [[ಯಂತ್ರಾಂಶ]]ದ (ಹಾರ್ಡ್‌ವೇರ್) ಜವಾಬ್ದಾರಿ. ಕಂಪ್ಯೂಟರ್‌ನಲ್ಲಿ ದ್ವಿಮಾನ ಪದ್ಧತಿಯ (ಬೈನರಿ ಪದ್ಧತಿ) ಯಂತ್ರ ಭಾಷೆಯನ್ನು ಬಳಸಲಾಗಿದ್ದು, ಅದು ನಾವು ನೀಡುವ ಎಲ್ಲ ಮಾಹಿತಿಗಳನ್ನು, ಅಂದರೆ ಅಕ್ಷರಗಳು, ಅಂಕೆಗಳು, ಚಿತ್ರಗಳು, ವಿರಾಮ ಚಿಹ್ನೆಗಳು ಹಾಗೂ ಖಾಲಿ ಸ್ಥಾನ, ದ್ವಿಮಾನ ಪದ್ಧತಿಯಲ್ಲಿ ಸ್ವೀಕರಿಸಿ ಅರ್ಥೈಸಿಕೊಳ್ಳುತ್ತದೆ.
 
==ಉತ್ಪತ್ತಿ ==
== ವ್ಯುತ್ಪತ್ತಿ ==
 
[[ಲ್ಯಾಟಿನ್]] ಪದಗಳಾದ 'computus' ಹಾಗೂ 'computare'ಗಳನ್ನು 'ಕಂಪ್ಯೂಟರ್' ಹೆಸರಿನ ಮೂಲ ಎಂದು ಗುರುತಿಸಲಾಗಿದೆ<ref>http://www.cciw.com/content/computer_etymology.html</ref>. ಇವು ಇಂಗ್ಲಿಷಿನ 'ಕಂಪ್ಯೂಟ್' ಪದದ ಸಮಾನಾರ್ಥಕಗಳು. ಹಾಗಾಗಿ 'ಲೆಕ್ಕ ಮಾಡುವ' ಅಥವಾ 'ಗಣನೆ ಮಾಡುವ' ಯಂತ್ರವೇ ಕಂಪ್ಯೂಟರ್.
 
ಯಾಂತ್ರಿಕ ಕಂಪ್ಯೂಟರುಗಳ ಆವಿಷ್ಕಾರಕ್ಕೆ ಮೊದಲು ಲೆಕ್ಕಾಚಾರ ಮಾಡುವ ಕೆಲಸದಲ್ಲಿ ತೊಡಗಿದ್ದ ವ್ಯಕ್ತಿಗಳನ್ನೇ ಕಂಪ್ಯೂಟರುಗಳೆಂದು ಕರೆಯಲಾಗುತ್ತಿತ್ತು. ಯಂತ್ರಗಳ ನೆರವಿನಿಂದ ಲೆಕ್ಕಾಚಾರ ಮಾಡುವುದು ಸಾಧ್ಯವಾದ ನಂತರ ಅಂತಹ ಯಂತ್ರಗಳನ್ನು ಕಂಪ್ಯೂಟರ್ ಎಂದು ಗುರುತಿಸುವ ಅಭ್ಯಾಸ ಬೆಳೆಯಿತು.
೨,೯೨೯

edits

"https://kn.wikipedia.org/wiki/ವಿಶೇಷ:MobileDiff/809285" ಇಂದ ಪಡೆಯಲ್ಪಟ್ಟಿದೆ

ಸಂಚರಣೆ ಪಟ್ಟಿ