ಪ್ರಕಾಶ್ ಮೆಹರಾ: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
Content deleted Content added
ಚು clean up, replaced: ಹಿಂದೀ → ಹಿಂದಿ using AWB
Infobox added
೧ ನೇ ಸಾಲು: ೧ ನೇ ಸಾಲು:
{{Infobox person
| image =
| name = ಪ್ರಕಾಶ್ ಮೆಹ್ರಾ
| birth_date = {{birth date |1939|7|13|df=y}}
| birth_place = ಬಿಜ್ನರ್, ಉತ್ತರ ಪ್ರದೇಶ
| death_date = {{death date and age|2009|05|17|1939|07|13}}
| death_place = [[ಮುಂಬೈ]], [[ಮಹಾರಾಷ್ಟ್ರ]], [[ಭಾರತ]]
| children = ಸುಮಿತ್, ಅಮಿತ್ ಮತ್ತು ಪುನೀತ್ ಮೆಹ್ರಾ
}}
'''ಪ್ರಕಾಶ್ ಮೆಹರಾ''' ([[ಜುಲೈ ೧೩]] [[೧೯೩೯]] - [[ಜುಲೈ ೧೭]] [[೨೦೦೯]]) [[ಹಿಂದಿ]] ಚಿತ್ರರಂಗದ ಸುಪ್ರಸಿದ್ಧ ನಿರ್ಮಾಪಕ ಹಾಗು ದಿಗ್ದರ್ಶಕ. [[ಅಮಿತಾಬ್ ಬಚ್ಚನ್|ಅಮಿತಾಬ್ ಬಚ್ಚನ್‌ರವರನ್ನು]] ''ಆಂಗ್ರಿ ಯಂಗ್ ಮ್ಯಾನ್ ನಾಯಕ'' ನನ್ನಾಗಿ ಮಾಡಿ, [[ಸಲೀಮ್-ಜಾವೀದ್|ಸಲೀಮ್-ಜಾವೀದ್‌ರವರ]] ಸ್ಪೋಟಕ ಶಬ್ದಗಳ ಸಂಭಾಷಣೆಯೊಂದಿಗೆ ಒಂದು ದಶಕದ ವರೆಗೆ ತಾವು ನಿರ್ಮಿಸಿದ ಪ್ರತಿಯೊಂದು ಚಿತ್ರದಲ್ಲೂ ಎಲ್ಲಿಲ್ಲದ ಹೊಸತನವನ್ನು ಪ್ರದರ್ಶಿಸಿ, ಚಿತ್ರರಂಗಕ್ಕೆ ಒಂದು ಹೊಸಕಳೆಯನ್ನು ನೀಡಿ ಹೆಸರುಮಾಡಿದವರು, ಪ್ರಕಾಶ್ ಮೆಹರ. ಅಮಿತಾಬ್ ಬಚ್ಚನ್ ರಲ್ಲಿ ಸುಪ್ತವಾಗಿದ್ದ ಪ್ರಚಂಡ-ಕಲಾ-ಪ್ರತಿಭೆಗೆ ಒಂದು ಆಯಾಮವನ್ನು ಕಲ್ಪಿಸಿಕೊಟ್ಟು ಅವರನ್ನು ಮೇರುನಟನನ್ನಾಗಿಮಾಡಿದ ಶ್ರೇಯಸ್ಸು ಅವರಿಗೂ ಸಲ್ಲಬೇಕು.
'''ಪ್ರಕಾಶ್ ಮೆಹರಾ''' ([[ಜುಲೈ ೧೩]] [[೧೯೩೯]] - [[ಜುಲೈ ೧೭]] [[೨೦೦೯]]) [[ಹಿಂದಿ]] ಚಿತ್ರರಂಗದ ಸುಪ್ರಸಿದ್ಧ ನಿರ್ಮಾಪಕ ಹಾಗು ದಿಗ್ದರ್ಶಕ. [[ಅಮಿತಾಬ್ ಬಚ್ಚನ್|ಅಮಿತಾಬ್ ಬಚ್ಚನ್‌ರವರನ್ನು]] ''ಆಂಗ್ರಿ ಯಂಗ್ ಮ್ಯಾನ್ ನಾಯಕ'' ನನ್ನಾಗಿ ಮಾಡಿ, [[ಸಲೀಮ್-ಜಾವೀದ್|ಸಲೀಮ್-ಜಾವೀದ್‌ರವರ]] ಸ್ಪೋಟಕ ಶಬ್ದಗಳ ಸಂಭಾಷಣೆಯೊಂದಿಗೆ ಒಂದು ದಶಕದ ವರೆಗೆ ತಾವು ನಿರ್ಮಿಸಿದ ಪ್ರತಿಯೊಂದು ಚಿತ್ರದಲ್ಲೂ ಎಲ್ಲಿಲ್ಲದ ಹೊಸತನವನ್ನು ಪ್ರದರ್ಶಿಸಿ, ಚಿತ್ರರಂಗಕ್ಕೆ ಒಂದು ಹೊಸಕಳೆಯನ್ನು ನೀಡಿ ಹೆಸರುಮಾಡಿದವರು, ಪ್ರಕಾಶ್ ಮೆಹರ. ಅಮಿತಾಬ್ ಬಚ್ಚನ್ ರಲ್ಲಿ ಸುಪ್ತವಾಗಿದ್ದ ಪ್ರಚಂಡ-ಕಲಾ-ಪ್ರತಿಭೆಗೆ ಒಂದು ಆಯಾಮವನ್ನು ಕಲ್ಪಿಸಿಕೊಟ್ಟು ಅವರನ್ನು ಮೇರುನಟನನ್ನಾಗಿಮಾಡಿದ ಶ್ರೇಯಸ್ಸು ಅವರಿಗೂ ಸಲ್ಲಬೇಕು.
[[ಚಿತ್ರ:Prakash-mehra.jpg|right|thumb|ಪ್ರಕಾಶ್ ಮೆಹ್ರಾ]]
[[ಚಿತ್ರ:Prakash-mehra.jpg|right|thumb|ಪ್ರಕಾಶ್ ಮೆಹ್ರಾ]]

೧೯:೧೩, ೧೬ ಜುಲೈ ೨೦೧೭ ನಂತೆ ಪರಿಷ್ಕರಣೆ

ಪ್ರಕಾಶ್ ಮೆಹ್ರಾ
Born(೧೯೩೯-೦೭-೧೩)೧೩ ಜುಲೈ ೧೯೩೯
ಬಿಜ್ನರ್, ಉತ್ತರ ಪ್ರದೇಶ
DiedMay 17, 2009(2009-05-17) (aged 69)
Childrenಸುಮಿತ್, ಅಮಿತ್ ಮತ್ತು ಪುನೀತ್ ಮೆಹ್ರಾ

ಪ್ರಕಾಶ್ ಮೆಹರಾ (ಜುಲೈ ೧೩ ೧೯೩೯ - ಜುಲೈ ೧೭ ೨೦೦೯) ಹಿಂದಿ ಚಿತ್ರರಂಗದ ಸುಪ್ರಸಿದ್ಧ ನಿರ್ಮಾಪಕ ಹಾಗು ದಿಗ್ದರ್ಶಕ. ಅಮಿತಾಬ್ ಬಚ್ಚನ್‌ರವರನ್ನು ಆಂಗ್ರಿ ಯಂಗ್ ಮ್ಯಾನ್ ನಾಯಕ ನನ್ನಾಗಿ ಮಾಡಿ, ಸಲೀಮ್-ಜಾವೀದ್‌ರವರ ಸ್ಪೋಟಕ ಶಬ್ದಗಳ ಸಂಭಾಷಣೆಯೊಂದಿಗೆ ಒಂದು ದಶಕದ ವರೆಗೆ ತಾವು ನಿರ್ಮಿಸಿದ ಪ್ರತಿಯೊಂದು ಚಿತ್ರದಲ್ಲೂ ಎಲ್ಲಿಲ್ಲದ ಹೊಸತನವನ್ನು ಪ್ರದರ್ಶಿಸಿ, ಚಿತ್ರರಂಗಕ್ಕೆ ಒಂದು ಹೊಸಕಳೆಯನ್ನು ನೀಡಿ ಹೆಸರುಮಾಡಿದವರು, ಪ್ರಕಾಶ್ ಮೆಹರ. ಅಮಿತಾಬ್ ಬಚ್ಚನ್ ರಲ್ಲಿ ಸುಪ್ತವಾಗಿದ್ದ ಪ್ರಚಂಡ-ಕಲಾ-ಪ್ರತಿಭೆಗೆ ಒಂದು ಆಯಾಮವನ್ನು ಕಲ್ಪಿಸಿಕೊಟ್ಟು ಅವರನ್ನು ಮೇರುನಟನನ್ನಾಗಿಮಾಡಿದ ಶ್ರೇಯಸ್ಸು ಅವರಿಗೂ ಸಲ್ಲಬೇಕು.

ಚಿತ್ರ:Prakash-mehra.jpg
ಪ್ರಕಾಶ್ ಮೆಹ್ರಾ

೭೦ ರ ದಶಕದಲ್ಲಿ ಪ್ರಕಾಶ್ ಮೆಹರಾರವರ ಕೊಡುಗೆಗಳು

೭೦ ರ ದಶಕದಲ್ಲಿ, ಹಿಂದಿ ಚಿತ್ರರಂಗದಲ್ಲಿ, ಪ್ರಕಾಶ್ ಮೆಹರಾ-ಅಮಿತಾಬ್ ಜೋಡಿ, ಸಲೀಮ್-ಜಾವಿದ್ ಜೋಡಿ, ಮಾಡಿದ ಮೋಡಿ ಹಿಂದಿ ಚಿತ್ರವಲಯದಲ್ಲಿ ಒಂದು ಹೊಸ ಛಾಪನ್ನು ಮೂಡಿಸಿತು. ಅಮಿತಾಬ್ ರನ್ನು ನಾಯಕನನ್ನಾಗಿರಿಸಿ ನಿರ್ಮಿಸಿದ 'ಜಂಜೀರ್ '[೧೯೭೩]ಚಿತ್ರ, ಬಾಕ್ಸ್ ಆಫೀಸ್ ನಲ್ಲಿ ಹಿಟ್ ಆಗಿ ಹೆಸರು ಮಾಡಿತು. ಅದಾದಮೇಲೆ ಮಾಡಿದ ಮೋಡಿಯಿಂದ ಈ ಅಮಿತಾಬ್-ಪ್ರಕಾಶ್ ಮೆಹರಾ-ಕಲಾವಂತ ಜೋಡಿ, ಅನೇಕಾನೇಕ ಹಿಟ್ ಚಿತ್ರಗಳನ್ನು ನಿರ್ಮಿಸಿ, ಅತ್ಯಂತ ಪ್ರಭಾವಿ-ಡಯಲಾಗ್, ಮತ್ತು ಕೆಟ್ಟದ್ದನ್ನು ಹೊಡೆದೋಡಿಸಿ, ಒಳ್ಳೆಯತನವನ್ನು ಸಂರಕ್ಷಿಸುವ ಸನ್ನಿವೇಶಗಳಿಂದ ಪ್ರೇಕ್ಷಕರಿಗೆ 'ದೃಶ್ಯಕಾವ್ಯದ ರಸದೌತಣ,' ವನ್ನು ಉಣಬಡಿಸಿತು. ಅವುಗಳಲ್ಲಿ ಜನಪ್ರಿಯವಾದ, ಎಂದೂ ಮರೆಯಲಾರದ ಚಿತ್ರಗಳು :

ಅಮಿತಾಬ್ ಜೊತೆ, ಸಂಪರ್ಕಕ್ಕೆ ಬರುವ ಮೊದಲೇ ರವರು, 'ಹಸೀನ ಮಾನ್ ಜಾಯೆಗಿ', 'ಮೇಲಾ,', 'ಸಮಾಧಿ,' ಚಿತ್ರಳನ್ನು ನಿರ್ಮಿಸಿ ಚಿತ್ರರಂಗದಲ್ಲಿ ಅವರ ಛಾಪನ್ನು ಒತ್ತಿದ್ದರು.

ಜನನ ಮತ್ತು ಬಾಲ್ಯ

ಪ್ರಕಾಶ್ ಮೆಹರಾರವರು, ೧೩ ಜುಲೈ,೧೯೩೯ ರಲ್ಲಿ ಉತ್ತರಪ್ರದೇಶದ 'ಬಿಜನೂರ್' ನಲ್ಲಿ ಜನ್ಮಿಸಿದರು. ಪ್ರಕಾಶ್ ಮೆಹರಾರವರು, ತಮ್ಮ ೬ ನೇ ವಯಸ್ಸಿನಲ್ಲೇ ಮನೆಯಿಂದ ಪಲಾಯನಗೈದು ಅಗಿನ ಮಾಯಾನಗರಿ, ಮುಂಬಯಿಗೆ ಬಂದರು. ಯಾರ ಪರಿಚಯವೂ ಇಲ್ಲದೆ ಸ್ವತಂತ್ರವಾಗಿ ಜೀವನ ಸಂಘರ್ಷಕ್ಕೆ ಇಳಿದ ಪ್ರಕಾಶ್ ಮೆಹರಾರವರು, ತಮ್ಮ ಕಠಿಣ ಪರಿಶ್ರಮ ಹಾಗೂ ನಿಷ್ಟೆಯಿಂದ ಸಿನಿಮಾರಂಗವನು ಪ್ರವೇಶಿಸಿ ತಮ್ಮದೇ ಜಾಗವೊಂದನ್ನು ಕಂಡುಕೊಂಡರು. ಸಿಕ್ಕ ಪರಿಚಯಸ್ತರನ್ನೇ ಹೊಂದಿಕೊಂಡು ಹಿಂದಿ ಸಿನಿಮ ವಲಯದಲ್ಲಿ 'ಪ್ರೊಡಕ್ಶನ್ ಕಂಟ್ರೋಲರ್,' ಹುದ್ದೆಯನ್ನು ಗಿಟ್ಟಿಸಿಕೊಂಡರು. ಪ್ರಕಾಶ್ ಮೆಹರಾರವರು, ಹೆಜ್ಜೆ ಹೆಜ್ಜೆಯಿಂದ ಎತ್ತರಕ್ಕೆ ಬೆಳೆದರು, ತಾವೇ ಚಿತ್ರನಿರ್ಮಾಣಮಾಡುವ ಮಹದಾಶೆಯನ್ನು ಈಡೇರಿಸಿಕೊಂಡರು. ಸಂಗೀತದ ಕಡೆ ಒಲವಿದ್ದ ಪ್ರಕಾಶ್ ರವರು, ತಮ್ಮ ಚಿತ್ರಗಳ ಯಶಸ್ಸಿಗೆ ಗೀತರಚನೆಯನ್ನು ಮಾಡಿದರು. ಉದಾಹರಣೆಗೆ, 'ಓ ಸಾಥಿರೇ,' 'ರೋತೆಹುಯೆ [ಮುಕದ್ದರ್ ಕ ಸಿಕಂದರ್ ]ಆತೆ ಹೈಂ ಸಬ್', 'ಮೇರೆ ಅಂಗನೆಮೆ ತೇರಾ ಕ್ಯಾ ಕಾಮ್ ಹೈಂ '[ಲಾವಾರಿಸ್] 'ದೇ ದೇ ಪ್ಯಾರ್ ದೇ ದೇ,' ಶರಾಬಿ 'ಪಗ್ ಘೂಂಗರೂ ಬಾಂದ್ ನಾಚೆ 'ನಮಕ್ ಹಲಾಲ್ ಇತ್ಯಾದಿ. ಅಮಿತಾಬ್ ರವರ ಪಾತ್ರಗಳಿಗೆ ಆ ಗೀತಗಳನ್ನು ಅಳವಡಿಸಿ ಸಮಯಬಂದಾಗ ಅವರಿಂದಲೇ ಹಾಡಿಸಿದ್ದರಿಂದ, ಚಿತ್ರದ ಜೊತೆ-ಜೊತೆಗೆ ಗೀತೆಗಳೂ ಹೆಚ್ಚು-ಹೆಚ್ಚು ಜನಪ್ರಿಯತೆಯನ್ನು ಮುಟ್ಟಿದವು.

ತಮ್ಮ ಕೆರಿಯರ್ ನ ಕೊನೆಯಚಿತ್ರ, 'ಮುಝೆ ಮೇರೀ ಬೀಬಿಸೆ ಬಚಾವ್' ೨೦೦೧

ಈ ಹಿಂದಿಚಿತ್ರದಲ್ಲಿ ಹೆಸರಾಂತ ಚಿತ್ರ-ನಟಿ, ರೇಖಾ ನಟಿಸಿದ್ದರು.

ರಾಜ್‌ಕಪೂರ್ ಮತ್ತು ಗುರುದತ್ ಅವರ ಆದರ್ಶವ್ಯಕ್ತಿಗಳು

ರಾಜ್‌ಕಪೂರ್ ಮತ್ತು ಗುರುದತ್‌ರನ್ನು ಅವರು ತುಂಬಾ ಇಷ್ಟಪಡುತ್ತಿದ್ದರು.

ಪ್ರಕಾಶ್ ಮೆಹರರ, ಕೊನೆಯ ದಿನಗಳು

ಪ್ರಕಾಶ್ ಮೆಹರಾ ರವರ ಶೈಲಿಯ ಚಿತ್ರಗಳು, ಒಂದು ಕಾಲಕ್ಕೆ ಸರಿಯಾಗಿದ್ದು, ಇಂದಿನ ಯುವಕರಿಗೆ ಆದರ್ಶಗಳಿಗೆ ಹೋರಾಟ ಇತ್ಯಾದಿಗಳು ಹೆಚ್ಚು ಪರಿಣಾಮಮಾಡಲಿಲ್ಲ. 'ಜಾದೂಗರ್ ಚಿತ್ರ,' ಗಲ್ಲಾ ಪೆಟ್ಟಿಗೆಯಲ್ಲಿ ಸೋತಿತು. ಆಗ ಅಮಿತಾಬ್ ರೊಡನೆ ಸಂಬಂಧ ಬಿಗಡಾಯಿಸಿತು. ಕೊಂಚಕಾಲ ಅಮಿತಾಬ್ ರವರನ್ನು ಬಿಟ್ಟು ನಿರ್ಮಿಸಿದ ಅವರ ಕೆಲವು ಮಹತ್ವಾಕಂಕ್ಷಿ ಚಿತ್ರಗಳು ನೆಲಕಚ್ಚಿದವು. 'ದಲಾಲ್,' ಎಂಬ ಚಿತ್ರವನ್ನು ಬಿಟ್ಟು. ಅವರು ಮರಣ ಹೊಂದಿದಾಗ ೬೯ ವರ್ಷ ವಯಸ್ಸು. ಸುಮೀತ್ ಅಮಿತ್ -ಇಬ್ಬರು ಪುತ್ರರುಗಳು. ಪತ್ನಿ ಹಿಂದೆಯೇ ಮೃತರಾಗಿದ್ದರು.

ದೂರದರ್ಶನದಲ್ಲಿ ಧಾರಾವಾಹಿಗಳನ್ನು ತರುವ ಆಸೆ ಈಡೇರಲಿಲ್ಲ

ದೂರದರ್ಶನಕ್ಕಾಗಿ, 'ಸಾಮ್ರಾಟ್ ಅಶೋಕ್' ಧಾರಾವಾಹಿಯನ್ನು ನಿರ್ಮಿಸಲು ಬಯಕೆಯಿತ್ತು. ಆದರೆ ಕಾರಣಾಂತರಗಳಿಂದ ಆ ಆಶೆ ಈಡೇರಲಿಲ್ಲ.ಚಿತ್ರರಂಗಕ್ಕೆ ತಮ್ಮ ಸ್ವ-ಇಚ್ಛೆಯಿಂದ ಕಾಲಿಕ್ಕಿ ಸಂಘರ್ಷಮಯ ಬದುಕನ್ನು ಕಂಡರು. ಜಯಾಪಜಯಗಳು ಅವರ ಜೀವನದ ಅವಿಭಾಜ್ಯ ಅಂಗಗಳಾಗಿದ್ದವು. ತಮ್ಮ ಕೆಲವು ಮರೆಯಲಾರದ ಅನುಪಮ ಚಿತ್ರಕೊಡುಗೆಯಿಂದ ಚಿತ್ರರಂಗದ ಕಲಾಪ್ರೇಮಿಗಳನ್ನು ಅನೇಕವರ್ಷಗಳಕಾಲ ರಂಜಿಸಿದ ಪ್ರಕಾಶ್ ಮೆಹರ ತಮ್ಮ ಬಗ್ಗೆ ಕೆಲವೊಮ್ಮೆ ಹೇಳುತ್ತಿದ್ದ ಮಾತುಗಳು ಅರ್ಥಪೂರ್ಣವಾಗಿವೆ. " ಆಪ್ಗೆ ಆಗೆ ನ ಪೀಛೆ, ನ ಕೋಯಿ ಊಪರ್ ಮ ನೀಚೆ " ಕೆಲಕಾಲದಿಂದ ವ್ಯಸ್ತರಾಗಿದ್ದ ೬೯ ವರ್ಷ ವಯಸ್ಸಿನ, ಪ್ರಕಾಶ್ ಮೆಹರ, ೧೭-೦೫-೨೦೦೯ ರಂದು, ಮುಂಬಯಿಯಲ್ಲಿ ಕಾಲವಶರಾದರು.