ಪಡನೂರ: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
Content deleted Content added
No edit summary
ಟ್ಯಾಗ್: 2017 source edit
೧೩೯ ನೇ ಸಾಲು: ೧೩೯ ನೇ ಸಾಲು:
'''ಊರಿನ ಒಂದು ಹಿನ್ನೋಟ'''
'''ಊರಿನ ಒಂದು ಹಿನ್ನೋಟ'''


ಹಿಂದೊಮ್ಮ ಬಂದ ಭಿಮಾನದಿಯ ಮಹಾಪೂರದ ಹೊಡೆತಕ್ಕೆ ಸಿಲುಕಿ ಎರಡು ಭಾಗಗಳಾಗಿ ಹೊರ ಹೊಮ್ಮಿದವು
ಹಿಂದೊಮ್ಮ ಬಂದ ಭಿಮಾನದಿಯ ಮಹಾಪೂರದ ಹೊಡೆತಕ್ಕೆ ಸಿಲುಕಿ ಎರಡು ಭಾಗಗಳಾಗಿ ಹೊರ ಹೊಮ್ಮಿದವು
೧>ಹಳೆ ಪಡನೂರ ‌
# ಹಳೆ ಪಡನೂರ ‌
೨>ಹೊಸ ಪಡನೂರ
# ಹೊಸ ಪಡನೂರ


==ಉಲ್ಲೇಖ==
==ಉಲ್ಲೇಖ==

೧೧:೪೦, ೩ ಜೂನ್ ೨೦೧೭ ನಂತೆ ಪರಿಷ್ಕರಣೆ

ಪಡನೂರ
ಪಡನೂರ
village

ಪಡನೂರ ಗ್ರಾಮವು ಕರ್ನಾಟಕ ರಾಜ್ಯದ ವಿಜಯಪುರ ಜಿಲ್ಲೆಯ ಇಂಡಿ ತಾಲ್ಲೂಕಿನಲ್ಲಿದೆ.

ಭೌಗೋಳಿಕ

ಗ್ರಾಮವು ಭೌಗೋಳಿಕವಾಗಿ 16* 31' 10"x ಉತ್ತರ ಅಕ್ಷಾಂಶ ಮತ್ತು 75* 31' 19" ಪೂರ್ವ ರೇಖಾಂಶದಲ್ಲಿ ಬರುತ್ತದೆ.

ಹವಾಮಾನ

  • ಬೆಸಿಗೆ-ಚಳಿಗಾಲದಲ್ಲಿ ಹವಾಗುಣವು ಹಿತಕರವಾಗಿದ್ದು, ಸಾಧಾರಣ ಪ್ರಮಾಣದ ಮಳೆಯಾಗುತ್ತದೆ. ಬೇಸಿಗೆಯಲ್ಲಿ ಅತಿ ಹೆಚ್ಚು ಉಷ್ಣತೆ ಅಂದರೆ 43 ಡಿಗ್ರಿವರೆಗೆ(ಎಪ್ರೀಲನಲ್ಲಿ) , ಅತೀ ಕಡಿಮೆ ಅಂದರೆ 9 ಡಿಗ್ರಿ ಸೆಲ್ಸಿಯಸವರೆಗೆ (ಡಿಸೆಂಬರನಲ್ಲಿ) ಉಷ್ಣತೆ ದಾಖಲಾಗಿದೆ.
  • ಬೇಸಿಗೆಕಾಲ - 35°C-43°C ಡಿಗ್ರಿ ಸೆಲ್ಸಿಯಸ್
  • ಚಳಿಗಾಲ ಮತ್ತು
  • ಮಳೆಗಾಲ - 18°C-30°C ಡಿಗ್ರಿ ಸೆಲ್ಸಿಯಸ್.
  • ಮಳೆ - ಪ್ರತಿ ವರ್ಷ ಮಳೆ 300 - 600ಮಿಮಿ ಗಳಸ್ಟು ಆಗಿರುತ್ತದೆ.
  • ಗಾಳಿ -ಗಾಳಿ ವೇಗ 18 ಕಿಮಿ/ಗಂ (ಜೂನ), 19 ಕಿಮಿ/ಗಂ (ಜುಲೈ)ಹಾಗೂ 17 ಕಿಮಿ/ಗಂ (ಅಗಸ್ಟ್) ಇರುತ್ತದೆ.

ಜನಸಂಖ್ಯೆ

ಗ್ರಾಮದಲ್ಲಿ ಜನಸಂಖ್ಯೆ ಸುಮಾರು 2500 ಇದೆ. ಅದರಲ್ಲಿ 1300 ಪುರುಷರು ಮತ್ತು 1200 ಮಹಿಳೆಯರು ಇದ್ದಾರೆ.

ಸಾಂಸ್ಕೃತಿಕ

ಮುಖ್ಯ ಭಾಷೆ ಕನ್ನಡ. ಆದರೆ ವಿವಿಧ ಸಂಸ್ಕೃತಿಗಳ ಪ್ರಭಾವದಿಂದಾಗಿ , ಮರಾಠಿ ಮತ್ತು ಹಿಂದಿ ಮಿಶ್ರಿತ ವಿಶಿಷ್ಠವಾದ ಕನ್ನಡ. ಪ್ರಮುಖ ಆಹಾರ ಧಾನ್ಯ ಜೋಳ. ಜೊತೆಗೆ ಗೋಧಿ, ಅಕ್ಕಿ,ಮೆಕ್ಕೆ ಜೋಳ ಬೇಳೆಕಾಳುಗಳು. ಜವಾರಿ ಎಂದು ಗುರುತಿಸಲ್ಪಡುವ ವಿಶೇಷ ರುಚಿಯ ಕಾಯಿಪಲ್ಯ, ಸೊಪ್ಪುಗಳು ಹೆಸರುವಾಸಿ ಮತ್ತು ಸದಾಕಾಲವೂ ಲಭ್ಯ. ಜೋಳದ ರೊಟ್ಟಿ, ಸೇಂಗಾ ಚಟ್ನಿ, ಎಣ್ಣಿ ಬದನೆಯಕಾಯಿ ಪಲ್ಯ, ಕೆನೆಮೊಸರು ಕರ್ನಾಟಕದ ಮೂಲೆಮೂಲೆಗಳಲ್ಲಿ ಪ್ರಸಿದ್ಧಿ ಪಡೆದಿವೆ.

ಕಲೆ

ಉತ್ತರ ಕರ್ನಾಟಕದ ಊಟ

ಅಪ್ಪಟ ಉತ್ತರ ಕರ್ನಾಟಕ ಶೈಲಿಯ ಕಲೆಯನ್ನು ಒಳಗೊಂಡಿದೆ. ಪುರುಷರು ದೋತ್ರ, ನೆಹರು ಅಂಗಿ ಮತ್ತು ರೇಷ್ಮೆ ರುಮಾಲು(ಪಟಕ) ಧರಿಸುತ್ತಾರೆ.ಮಹಿಳೆಯರು ಇಲಕಲ್ಲ ಸೀರೆ ಮತ್ತು ಖಾದಿ ಬಟ್ಟೆಗಳನ್ನು ಧರಿಸುತ್ತಾರೆ.

ಧರ್ಮ

ಗ್ರಾಮದಲ್ಲಿ ಹಿಂದೂ ಮತ್ತು ಮುಸ್ಲಿಂ ಧರ್ಮದ ಜನರಿದ್ದಾರೆ. ಜಾತಿಯಲ್ಲಿ ಅಧಿಕವಾಗಿ ಲಿಂಗಾಯತ ಜನ ವಿದ್ದು ಉಪಜಾತಿಯ ಲಿಂಗಾಯತ ಬಣಜಿಗರು ಅಧಿಕರು

ಭಾಷೆ

ಗ್ರಾಮದ ಪ್ರಮುಖ ಭಾಷೆ ಕನ್ನಡ. ಇದರೊಂದಿಗೆ ಹಿಂದಿ ಹಾಗೂ ಮರಾಠಿ ಭಾಷೆಗಳನ್ನು ಮಾತನಾಡುತ್ತಾರೆ.

ಕನ್ನಡ ಮರಾಠಿ ಮಿಶ್ರಿತ ಭಾಷೆ ಮಾತನಾಡುತ್ತಾರೆ

ದೇವಾಲಯ

  • ಶ್ರೀ ಪಡನುರ ಯೊಗಿ ಚನ್ನಬಸವೆಶ್ವರ ದೇವಾಲಯ
  • ಶ್ರೀ ಹನುಮಂತನ ದೇವಾಲಯ
  • ಶ್ರೀ ಲಕ್ಷ್ಮೀ ದೇವಸ್ಥಾನ
  • ಶ್ರೀ ಭಿಮೆಶ್ವರ ದೇವಾಲಯ
  • ಶ್ರೀ ಮಲ್ಲಿಕಾರ್ಜುನ ದೇವಾಲಯ
  • ಶ್ರೀ ಶಾವರಸಿಧ್ಧ
  • ಶ್ರೀ ಚವಡೆಶ್ವರಿದೆವಿ

ಮಸೀದಿ

ಮುಸ್ಲಿಮರು ಅಲ್ಪಜನ ಇರುವುದರಿಂದ ದರ್ಗಾ ಮಸೀದಿಗಳು ಇಲ್ಲಾ

ನೀರಾವರಿ

ಗ್ರಾಮದ ಪ್ರತಿಶತ ೭5 ಭಾಗ ನದಿ ಭೂಮಿ ಕಾಲುವೆ, ತೆರದ ಬಾವಿ, ಕೊಳವೆ ಬಾವಿಯಿಂದ ನೀರಾವರಿ ಇದ್ದು ಪ್ರಮುಖವಾಗಿ ಕಬ್ಬು , ಮೆಕ್ಕೆಜೋಳ, ಜೋಳ, ಉಳ್ಳಾಗಡ್ಡಿ (ಈರುಳ್ಳಿ), ನಿಂಬೆಹಣ್ಣು , ಪಪ್ಪಾಯ, ಅರಿಶಿನ, ನೆಲಕಡಲೆ, ಶೇಂಗಾ(ಕಡಲೆಕಾಯಿ), ತೊಗರಿ,ಸೂರ್ಯಕಾಂತಿ , ದ್ರಾಕ್ಷಿ , ದಾಳಿಂಬೆ, ಗೋಧಿ ಹಾಗೂ ಇತರೆ ಬೆಳೆಗಳನ್ನು ಬೆಳೆಯುತ್ತಾರೆ.

ಕೃಷಿ

ಗ್ರಾಮದ ಪ್ರಮುಖ ಉದ್ಯೋಗವೇ ಕೃಷಿ ಮತ್ತು ತೋಟಗಾರಿಕೆಯಾಗಿದೆ. ಈ ಕ್ಷೇತ್ರದಲ್ಲಿ ಸುಮಾರು ೭೫% ಜನರು ಕೆಲಸ ಮಾಡುತ್ತಾರೆ. ಗ್ರಾಮದಲ್ಲಿ ಕೇವಲ ೫೦% ಭೂಮಿ ಮಾತ್ರ ನೀರಾವರಿ ಹೊಂದಿದೆ. ಉಳಿದ ೫೦% ಭೂಮಿ ಮಳೆಯನ್ನೇ ಅವಲಂಭಿಸಿದೆ. ಇಲ್ಲಿ ಊರಿನಲ್ಲಿ ಮಲ್ಲಿಕಾರ್ಜುನ ಅಗ್ರೋ(ಗೊಬ್ಬರದ ಅಂಗಡಿ) ಕೇಂದ್ರವಿದ್ದು ರೈತರಿಗೆ ಅನುಕೂಲಕರವಾಗಿದೆ

ಆರ್ಥಿಕತೆ

ಗ್ರಾಮದಲ್ಲಿ ಆರ್ಥಿಕ ವ್ಯವಸ್ಥೆ ಮಧ್ಯಮ ತರಗತಿಯಲ್ಲಿದೆ.

ಉದ್ಯೋಗ

ಗ್ರಾಮದಲ್ಲಿ ಫಲವತ್ತಾದ ಭೂಮಿ ಇದುವುದರಿಂದ 70% ಜನಸಂಖ್ಯೆ ಕೃಷಿಯಲ್ಲಿ ನಿರತರಾಗಿದ್ದಾರೆ. ಕೃಷಿಯು ಗ್ರಾಮದ ಪ್ರಮುಖ ಉದ್ಯೋಗವಾಗಿದೆ. ಇದರೊಂದಿಗೆ ಹೈನುಗಾರಿಕೆ, ಕೋಳಿ ಸಾಕಾಣಿಕೆ, ದನಗಳ ಸಾಕಾಣಿಕೆ ಉಪ ಕಸುಬುಗಳಾಗಿವೆ.

ಬೆಳೆ

ಆಹಾರ ಬೆಳೆಗಳು

ಜೋಳ, ಗೋಧಿ, ಮೆಕ್ಕೆಜೋಳ, ಸಜ್ಜೆ , ಕಡಲೆ, ತೊಗರಿ, ಹೆಸರು ಮತ್ತು ಕಡಲೆ ಇತ್ಯಾದಿ

ವಾಣಿಜ್ಯ ಬೆಳೆಗಳು

ದ್ರಾಕ್ಷಿ, ಕಬ್ಬು, ದಾಳಿಂಬೆ, ನಿಂಬೆ, ಮಾವು, ಬಾಳೆ, ಸೂರ್ಯಕಾಂತಿ, ಅರಿಸಿಣ, ಪಪ್ಪಾಯಿ, ಕಲ್ಲಂಗಡಿ, ಉಳ್ಳಾಗಡ್ಡಿ (ಈರುಳ್ಳಿ) ಮತ್ತು ಶೇಂಗಾ(ಕಡಲೆಕಾಯಿ) ಇತ್ಯಾದಿ.

ತರಕಾರಿ ಬೆಳೆಗಳು

ಬದನೆಕಾಯಿ, ಟೊಮ್ಯಾಟೊ, ಹೀರೇಕಾಯಿ, ನುಗ್ಗೆಕಾಯಿ, ಗೆಣಸು, ಗಜ್ಜರಿ, ಮೆಣಸಿನಕಾಯಿ, ಸೌತೆಕಾಯಿ, ಮೊಲಂಗಿ, ಅವರೆಕಾಯಿ, ಪಡವಲಕಾಯಿ, ಕುಂಬಳಕಾಯಿ, ಮೆಂತೆ ಪಲ್ಲೆ ಮತ್ತು ಕೊತಂಬರಿ ಇತ್ಯಾದಿ.

ಸಸ್ಯ

ಆಲದ ಮರ, ಬೇವಿನ ಮರ, ಜಾಲಿ ಮರ, ಹೈಬ್ರೀಡ್ ಜಾಲಿ ಮರ, ಮಾವಿನ ಮರ ಮತ್ತು ಅರಳಿ ಮರ ಇತ್ಯಾದಿ.

ಪ್ರಾಣಿ

ತೋಳ, ನರಿ, ಹಾವು, ಮೊಲ, ನವಿಲು, ಬೆಳ್ಳಕ್ಕಿ, ಗುಬ್ಬಿ, ಕಾಗೆ, ಕೋಗಿಲೆ ,ಪಾರಿವಾಳ ಇತ್ಯಾದಿ.

ಹಬ್ಬ

ಪ್ರತಿವರ್ಷ ಕಾರ ಹುಣ್ಣುಮೆ, ಯುಗಾದಿ, ದಸರಾ, ದೀಪಾವಳಿ, ನಾಗರ ಪಂಚಮಿ, ಹಾಗೂ ಶಿವರಾತ್ರೀ,ಊರಿನ ಹಿನ್ನೊಟ ಆಚರಿಸುತ್ತಾರೆ.

ಶಿಕ್ಷಣ

ಗ್ರಾಮದಲ್ಲಿ ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಇದೆ.

ಹಾಗೂ ವ್ಹಿ.ವಾಯ್.ಪಾಟಿಲ್ ಪ್ರೌಢಶಾಲೆ ,ಕಾಲೇಜು ಇದೆ

ಸಾಕ್ಷರತೆ

ಗ್ರಾಮದ ಸಾಕ್ಷರತೆಯ ಪ್ರಮಾಣ ಸುಮಾರು ೬೭%. ಅದರಲ್ಲಿ ೭೫% ಪುರುಷರು ಹಾಗೂ ೫೫% ಮಹಿಳೆಯರು ಸಾಕ್ಷರತೆ ಹೊಂದಿದೆ.

ರಾಜಕೀಯ

ಗ್ರಾಮವು ವಿಜಯಪುರ ಲೋಕಸಭಾ ಕ್ಷೇತ್ರದ ವ್ಯಾಪ್ತಿಯಲ್ಲಿ ಬರುತ್ತದೆ.

ಊರಿನ ಒಂದು ಹಿನ್ನೋಟ

ಹಿಂದೊಮ್ಮ ಬಂದ ಭಿಮಾನದಿಯ ಮಹಾಪೂರದ ಹೊಡೆತಕ್ಕೆ ಸಿಲುಕಿ ಎರಡು ಭಾಗಗಳಾಗಿ ಹೊರ ಹೊಮ್ಮಿದವು

  1. ಹಳೆ ಪಡನೂರ ‌
  2. ಹೊಸ ಪಡನೂರ

ಉಲ್ಲೇಖ


ವಿಜಯಪುರ ಕರ್ನಾಟಕ

"https://kn.wikipedia.org/w/index.php?title=ಪಡನೂರ&oldid=779463" ಇಂದ ಪಡೆಯಲ್ಪಟ್ಟಿದೆ