ವಿಕಿಪೀಡಿಯ:ಸದ್ಬಳಕೆ: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
Content deleted Content added
ವಾಕ್ಯಗಳ ಮರುಜೋಡಣೆ, ಹೆಚ್ಚಿನ ವಿವರಣೆ
ಚು →‎ನಿಯಮಗಳು: ಕಾಗುಣಿತ
೨೩ ನೇ ಸಾಲು: ೨೩ ನೇ ಸಾಲು:
# '''ಚಿತ್ರದ ಮಾಹಿತಿ ಪುಟವು ಕೆಳಗಿನ ಮಾಹಿತಿಗಳನ್ನು ಒಳಗೊಂಡಿರಬೇಕು'''
# '''ಚಿತ್ರದ ಮಾಹಿತಿ ಪುಟವು ಕೆಳಗಿನ ಮಾಹಿತಿಗಳನ್ನು ಒಳಗೊಂಡಿರಬೇಕು'''
## ಚಿತ್ರದ ಬಗೆಗಿನ ಮಾಹಿತಿಯನ್ನು ಕೊಡುವಂತಹ ಪುಟದಲ್ಲಿ ಮಾಹಿತಿಯ ಮೂಲವನ್ನು ತಿಳಿಸತಕ್ಕದ್ದು
## ಚಿತ್ರದ ಬಗೆಗಿನ ಮಾಹಿತಿಯನ್ನು ಕೊಡುವಂತಹ ಪುಟದಲ್ಲಿ ಮಾಹಿತಿಯ ಮೂಲವನ್ನು ತಿಳಿಸತಕ್ಕದ್ದು
## ಹಕ್ಕುಸ್ವಾಮ್ಯ ಟ್ಯಾಗಿನ ಮೂಲಕ ವಿಕಿಪೀಡಿಯದ ಸದ್ಬಳಕೆ ನೀತಿ ಈ ಚಿತ್ರದ ಉದ್ದಾತ್ತ ಉದ್ದೇಶಗಳನ್ನು ಅನುಮತಿಸುತ್ತದೆ ಎಂದು ತಿಳಿಸಬೇಕು
## ಹಕ್ಕುಸ್ವಾಮ್ಯ ಟ್ಯಾಗಿನ ಮೂಲಕ ವಿಕಿಪೀಡಿಯದ ಸದ್ಬಳಕೆ ನೀತಿ ಈ ಚಿತ್ರದ ಉದಾತ್ತ ಉದ್ದೇಶಗಳನ್ನು ಅನುಮತಿಸುತ್ತದೆ ಎಂದು ತಿಳಿಸಬೇಕು
## ಯಾವ ಯಾವ ಲೇಖನಗಳಲ್ಲಿ ಈ ಚಿತ್ರ/ಕಡತವನ್ನು ಬಳಸಲಾಗಿದೆ ಎಂದು ಉಲ್ಲೇಖಿಸಿ ಆಯಾ ವಿಕಿಪೀಡಿಯ ಲೇಖನದ ಕೊಂಡಿ ಕೊಡಬೇಕು
## ಯಾವ ಯಾವ ಲೇಖನಗಳಲ್ಲಿ ಈ ಚಿತ್ರ/ಕಡತವನ್ನು ಬಳಸಲಾಗಿದೆ ಎಂದು ಉಲ್ಲೇಖಿಸಿ ಆಯಾ ವಿಕಿಪೀಡಿಯ ಲೇಖನದ ಕೊಂಡಿ ಕೊಡಬೇಕು
# '''ಚಿತ್ರಗಳ ಬಳಕೆಗೆ ನಿರ್ಬಂಧ'''- ಸದ್ಬಳಕೆ ಕಾರ್ಯನೀತಿಯ ಅನುಸಾರ ಅಪ್ಲೋಡ್ ಮಾಡಿದ ಚಿತ್ರಗಳನ್ನು ಲೇಖನಗಳಲ್ಲಿ ಅಥವಾ ಸಂಬಂಧಪಟ್ಟ ವರ್ಗಗಳಲ್ಲಿ ಮಾತ್ರ ಬಳಸಬಹುದು; ಗ್ಯಾಲರಿಗಳಲ್ಲಿ ಇದನ್ನು ಬಳಸುವಂತಿಲ್ಲ.
# '''ಚಿತ್ರಗಳ ಬಳಕೆಗೆ ನಿರ್ಬಂಧ'''- ಸದ್ಬಳಕೆ ಕಾರ್ಯನೀತಿಯ ಅನುಸಾರ ಅಪ್ಲೋಡ್ ಮಾಡಿದ ಚಿತ್ರಗಳನ್ನು ಲೇಖನಗಳಲ್ಲಿ ಅಥವಾ ಸಂಬಂಧಪಟ್ಟ ವರ್ಗಗಳಲ್ಲಿ ಮಾತ್ರ ಬಳಸಬಹುದು; ಗ್ಯಾಲರಿಗಳಲ್ಲಿ ಇದನ್ನು ಬಳಸುವಂತಿಲ್ಲ.

೧೧:೫೦, ೨೩ ಮಾರ್ಚ್ ೨೦೧೭ ನಂತೆ ಪರಿಷ್ಕರಣೆ

ಕನ್ನಡ ವಿಕಿಪೀಡಿಯ ಅಭಿವೃಧ್ಧಿಸಲು ಯಾವ ರೀತಿಯ ಫೈಲುಗಳನ್ನು ಕನ್ನಡ ವಿಕಿಪೀಡಿಯದಲ್ಲೇ ಸ್ಥಳೀಯವಾಗಿ ಅಪ್ಲೋಡ್ ಮಾಡಬಹುದು ಎನ್ನುವುದನ್ನು ಈ ಕಾರ್ಯನೀತಿ ತಿಳಿಸುತ್ತದೆ. ವಿಕಿಪೀಡಿಯ ಗುಂಪಿನಲ್ಲಿ ಹಲವು ಭಾಷೆಗಳ ಜಾಲತಾಣಗಳಿವೆ. ಇದರಲ್ಲಿ ಒಂದು ನಿರ್ದಿಷ್ಟವಾದ ಭಾಷೆಯ ವಿಕಿಪೀಡಿಯದಲ್ಲೇ ಕಡತಗಳನ್ನು ಅಪ್ಲೋಡ್ ಮಾಡುವುದಕ್ಕೆ "ಸ್ಥಳೀಯವಾಗಿ ಅಪ್ಲೋಡ್" ಮಾಡುವುದು ಎನ್ನಲಾಗುತ್ತದೆ.

ಸ್ವತಂತ್ರ/ಮುಕ್ತ ಮಾಹಿತಿ

ವಿಕಿಪೀಡಿಯದಲ್ಲಿನ ಮಾಹಿತಿಯು ಹಕ್ಕುಸ್ವಾಮ್ಯ (ಕಾಪಿರೈಟ್) ನಿಯಮಾವಳಿಗಳ ನಿರ್ಬಂಧನೆಯನ್ನು ಹೊಂದಿರದ ಎಲ್ಲರೂ ಸ್ವತಂತ್ರವಾಗಿ ಬಳಸುವಂತಹ ಮಾಹಿತಿಯಾಗಿರಬೇಕು ಎನ್ನುವುದು ವಿಕಿಪೀಡಿಯದ ಉದ್ದೇಶ. ಅಂದರೆ ವಿಕಿಪೀಡಿಯಕ್ಕೆ ಯಾರು, ಯಾವಾಗ ಬೇಕಾದರೂ ಮಾಹಿತಿಯನ್ನು ಸೇರಿಸಬಹುದು, ಬದಲಾಯಿಸಬಹುದು. ವಿಕಿಪೀಡಿಯದಲ್ಲಿನ ಮಾಹಿತಿಯನ್ನು ಯಾರು, ಎಲ್ಲಿ, ಯಾವಾಗ ಬೇಕಾದರೂ, ಯಾವ ಉದ್ದೇಶಕ್ಕಾದರೂ (ಖಾಸಗೀ ಉದ್ದೇಶಗಳಿಗೂ) ಸ್ವತಂತ್ರವಾಗಿ ಬಳಸಬಹುದು. ಅಂತಹ ಬಳಕೆಗೆ ಅವಕಾಶ ನೀಡದ ಮಾಹಿತಿಯನ್ನು ಮುಕ್ತವಲ್ಲದ ಮಾಹಿತಿ ಎನ್ನಬಹುದು.

ಸದ್ಬಳಕೆ ಕಾರ್ಯನೀತಿ

ವಿಕಿಮೀಡಿಯ ಫೌಂಡೇಶನ್ನಿನ ಪರವಾನಗಿ ನಿಯಮ[೧]ದ ಪ್ರಕಾರ ವಿಕಿಪೀಡಿಯದಲ್ಲಿ ಮುಕ್ತ ಮಾಹಿತಿಯನ್ನು ಮಾತ್ರವೇ ಬಳಸಬಹುದು. ಆದರೆ ವಿಕಿಪೀಡಿಯದ ಬೇರೆ ಬೇರೆ ಸಮುದಾಯಗಳು ಉದಾತ್ತ ಉದ್ದೇಶಗಳಿಗಾಗಿ ಸ್ವತಂತ್ರವಾಗಿ ಲಭ್ಯವಿಲ್ಲದ ಮಾಹಿತಿಯನ್ನೂ ಬಳಸಬಹುದಾದ ಕೆಲವು ಸಂದರ್ಭಗಳಿಗೆ ಅವಕಾಶ ಮಾಡಿಕೊಟ್ಟಿದ್ದಾರೆ. ಆದರೆ ಆ ಸಮುದಾಯಗಳು ಅದಕ್ಕಾಗಿ ವಿನಾಯಿತಿ ನಿಯಮಾವಳಿಗಳನ್ನು (Exemption Doctrine Policy) ಹೊಂದಿರಬೇಕು. ಕನ್ನಡ ವಿಕಿಪೀಡಿಯದ ಒಳ್ಳೆಯ ಉದ್ದೇಶಗಳಿಗೆ ಸ್ವತಂತ್ರವಲ್ಲದ ದತ್ತಾಂಶಗಳನ್ನು/ಚಿತ್ರಗಳನ್ನು ಸ್ಥಳೀಯವಾಗಿ ಅಪ್ಲೋಡ್ ಮಾಡಲು ಅನುವು ಮಾಡಿಕೊಡುವುದೇ ಸದ್ಬಳಕೆ ಕಾರ್ಯನೀತಿಯ ಉದ್ದೇಶವಾಗಿದೆ

ನಿಯಮಗಳು

ಕನ್ನಡ ವಿಕಿಪೀಡಿಯದಲ್ಲಿ ಸ್ಥಳೀಯವಾಗಿ ಅಪ್ಲೋಡ್ ಮಾಡಬಯಸುವ ಕಡತ (ಫೈಲ್) ಕೆಳಗಿನ ನಿಯಮಾವಳಿಗಳನ್ನು ಪಾಲಿಸಬೇಕು.

  1. ಸ್ವತಂತ್ರ/ಮುಕ್ತವಾಗಿರುವ ಕಡತದ ಅಲಭ್ಯತೆ - ಹಕ್ಕುಸ್ವಾಮ್ಯ (ಕಾಪಿರೈಟ್) ಹೊಂದಿರುವ ಕಡತ ತಿಳಿಸುವ ಅಂಶಗಳನ್ನೇ ತಿಳಿಸುವ ಸ್ವತಂತ್ರ ಕಡತ ಇಲ್ಲದಿದ್ದ ಸಂದರ್ಭದಲ್ಲಿ
  2. ಖಾಸಗಿ ಉದ್ದೇಶಗಳಿಗೆ ತೊಂದರೆಯೊಡ್ಡದಿರುವುದು - ವಿಕಿಪೀಡಿಯದಲ್ಲಿ ಬಳಸಿದ ಕಡತದಿಂದ ಮೂಲ ಹಕ್ಕುಸ್ವಾಮ್ಯ (ಕಾಪಿರೈಟ್) ಹೊಂದಿರುವ ವ್ಯಕ್ತಿಗೆ ಅಥವಾ ಸಂಸ್ಥೆಗೆ ಮಾರುಕಟ್ಟೆಯಲ್ಲಿನ ಹಣಕಾಸಿನ ವ್ಯವಹಾರಗಳಲ್ಲಿ ನಷ್ಟ ಉಂಟಾಗಬಾರದು
  3. ಕನಿಷ್ಠತಮ ಬಳಕೆ -
    1. ವಿಷಯವನ್ನು ತಿಳಿಸಲು ಬೇಕಾಗುವ ಕಡತದ ಕೆಲ ಅಂಶಗಳನ್ನು ಮಾತ್ರ ಬಳಸುವುದು
    2. ಇಡೀ ಪಠ್ಯವನ್ನು ಬಳಸುವ ಬದಲು ವಿಷಯಕ್ಕೆ ಪೂರಕವಾಗುವ ಕೆಲ ಅಂಶಗಳನ್ನು ಮಾತ್ರ ಬಳಸುವುದು
    3. ಹೆಚ್ಚಿನ ರೆಸಲ್ಯೂಷನ್ ಚಿತ್ರದ ಬದಲು ಕಮ್ಮಿ ರೆಸಲ್ಯೂಷನ್‍ನ ಚಿತ್ರಗಳ ಬಳಕೆ
  4. ಮುದ್ರಣವಾಗಿರುವ ಮಾಹಿತಿ - ವಿಕಿಪೀಡಿಯದಲ್ಲಿ ಹಾಕುವ ಮೊದಲು ಆ ಮಾಹಿತಿ ಈಗಾಗಲೇ ಬೇರೆ ಅಂತರ್ಜಾಲ ತಾಣವೊಂದರಲ್ಲಿ/ತಾಣಗಳಲ್ಲಿ ಪ್ರಕಟವಾಗಿರಬೇಕು
  5. ವಿಶ್ವಕೋಶರೂಪದ ಮಾಹಿತಿ - ವಿಕಿಯಲ್ಲಿ ಬಳಸುವ ಮಾಹಿತಿಗೆ ಇರಬೇಕಾದ ಸಾಮಾನ್ಯ ಅರ್ಹತೆಗಳು ಈ ಮಾಹಿತಿಗೂ ಅನ್ವಯಿಸುತ್ತವೆ
  6. ಅಗತ್ಯತೆ - ಈ ರೀತಿ ಅಪ್ಲೋಡ್ ಮಾಡಿದ ಕಡತವನ್ನು ಕನಿಷ್ಠ ಒಂದು ಲೇಖನದಲ್ಲಾದರೂ ಬಳಸಬೇಕು
  7. ಅನಿವಾರ್ಯತೆ - ಉಚಿತವಲ್ಲದ ಕಡತದಿಂದ ಲೇಖನದ ವಿಷಯಗ್ರಹಿಕೆಗೆ ಪೂರಕವಾಗುವಂತಿದ್ದು ಮತ್ತು ಕಡತವಿಲ್ಲದೆ ವಿಷಯಗ್ರಹಿಕೆ ಕಷ್ಟಸಾಧ್ಯವಾಗುವಂತಿದ್ದರೆ ಮಾತ್ರ ಬಳಸಬಹುದು
  8. ಚಿತ್ರದ ಮಾಹಿತಿ ಪುಟವು ಕೆಳಗಿನ ಮಾಹಿತಿಗಳನ್ನು ಒಳಗೊಂಡಿರಬೇಕು
    1. ಚಿತ್ರದ ಬಗೆಗಿನ ಮಾಹಿತಿಯನ್ನು ಕೊಡುವಂತಹ ಪುಟದಲ್ಲಿ ಮಾಹಿತಿಯ ಮೂಲವನ್ನು ತಿಳಿಸತಕ್ಕದ್ದು
    2. ಹಕ್ಕುಸ್ವಾಮ್ಯ ಟ್ಯಾಗಿನ ಮೂಲಕ ವಿಕಿಪೀಡಿಯದ ಸದ್ಬಳಕೆ ನೀತಿ ಈ ಚಿತ್ರದ ಉದಾತ್ತ ಉದ್ದೇಶಗಳನ್ನು ಅನುಮತಿಸುತ್ತದೆ ಎಂದು ತಿಳಿಸಬೇಕು
    3. ಯಾವ ಯಾವ ಲೇಖನಗಳಲ್ಲಿ ಈ ಚಿತ್ರ/ಕಡತವನ್ನು ಬಳಸಲಾಗಿದೆ ಎಂದು ಉಲ್ಲೇಖಿಸಿ ಆಯಾ ವಿಕಿಪೀಡಿಯ ಲೇಖನದ ಕೊಂಡಿ ಕೊಡಬೇಕು
  9. ಚಿತ್ರಗಳ ಬಳಕೆಗೆ ನಿರ್ಬಂಧ- ಸದ್ಬಳಕೆ ಕಾರ್ಯನೀತಿಯ ಅನುಸಾರ ಅಪ್ಲೋಡ್ ಮಾಡಿದ ಚಿತ್ರಗಳನ್ನು ಲೇಖನಗಳಲ್ಲಿ ಅಥವಾ ಸಂಬಂಧಪಟ್ಟ ವರ್ಗಗಳಲ್ಲಿ ಮಾತ್ರ ಬಳಸಬಹುದು; ಗ್ಯಾಲರಿಗಳಲ್ಲಿ ಇದನ್ನು ಬಳಸುವಂತಿಲ್ಲ.

ಸದ್ಬಳಕೆಯ ಸಂದರ್ಭಗಳು

ಸ್ವತಂತ್ರವಲ್ಲದ/ಮುಕ್ತವಲ್ಲದ ಮಾಹಿತಿಗಳನ್ನು ಕನ್ನಡ ವಿಕಿಪೀಡಿಯದಲ್ಲಿ ಸದ್ಬಳಕೆಗಾಗಿ ಸ್ಥಳೀಯವಾಗಿ ಅಪ್‍ಲೋಡ್ ಮಾಡಬಹುದಾದ ಕೆಲವು ಸಂದರ್ಭಗಳು-

ಧ್ವನಿ (ಆಡಿಯೋ)

  • ಯಾವುದಾದರೊಂದು ಮಾದರಿಯ ಸಂಗೀತವನ್ನು ವಿವರಿಸಲು ಅಥವಾ ಆ ಮಾದರಿಯ ಸಂಗೀತ ಎಂದರೆ ಹೇಗಿರುತ್ತದೆ ಎಂದು ಅರ್ಥ ಮಾಡಿಸಲು ಅಂತಹ ಸಂಗೀತದ ತುಣಕನ್ನು ಸೇರಿಸುವುದು
  • ಖ್ಯಾತ ವ್ಯಕ್ತಿಗಳ ಖ್ಯಾತ ಭಾಷಣ ಅಥವಾ ವಾಚನದ ತುಣುಕು.
  • ಖ್ಯಾತ ಕಾವ್ಯದ ವಾಚನದ (ಗಮಕ) ತುಣುಕು.
  • ಖ್ಯಾತ ಸಂಗೀತ (ಗಾಯನ ಅಥವಾ ವಾದನ), ಹರಿಕಥೆ, ಯಕ್ಷಗಾನ, ಇತ್ಯಾದಿ ಕಲಾವಿದರ ಗಾಯನ (ವಾಚನ), ಅಥವಾ ಸಂಗೀತದ ತುಣುಕು

ಚಿತ್ರ

  • ಪುಸ್ತಕಗಳ ಮುಖಪುಟ (ಕವರ್ ಪೇಜ್). ಜೊತೆಗೆ ಸಾಂದರ್ಭಿಕವಾಗಿ ಲೇಖನಕ್ಕೆ ಪೂರಕವಾಗಿ ಬೇಕಾದಂತಹ ಪತ್ರಿಕೆ/ಪುಸ್ತಕದ ಕ್ಲಿಪ್ಪಿಂಗ್ಸ್.
  • ಕಂಪೆನಿ, ಸಂಸ್ಥೆ, ವಿಶ್ವವಿದ್ಯಾಲಯ, ಸರಕಾರಿ ಮತ್ತು ಅರೆಸರಕಾರಿ ಸಂಸ್ಥೆಗಳ ಲಾಂಛನ (ಲೋಗೋ)
  • ಅಂಚೆಚೀಟಿಯ ಚಿತ್ರ (ಫೋಟೋ)
  • ಹಣದ (ಕರೆನ್ಸಿ) ಚಿತ್ರ (ಫೋಟೋ)
  • ಸಿನಿಮಾ, ಸಂಗೀತ, ಹಾಡು, ಇತ್ಯಾದಿಗಳ ಆಡಿಯೋ ಅಥವಾ ವಿಡಿಯೋ ಸಿ.ಡಿ. ಅಥವಾ ಡಿ.ವಿ.ಡಿ.ಯ ಕವರ್ ಚಿತ್ರ
  • ಸಿನಿಮಾಗಳ ಪೋಸ್ಟರ್
  • ನಾಟಕ ಅಥವಾ ಇತರೆ ಯಾವುದೇ ಕಾರ್ಯಕ್ರಮದ ಪೋಸ್ಟರ್
  • ಖ್ಯಾತ ವರ್ಣಚಿತ್ರ (ಪೈಂಟಿಗ್) ಮತ್ತು ಇತರೆ ನಮೂನೆಯ ಕಲಾಚಿತ್ರಗಳು. ಉದಾಹರಣೆಗೆ ರಾಜಾ ರವಿವರ್ಮ ಅವರ ಚಿತ್ರಗಳು
  • ಗತಿಸಿಹೋದ ಮತ್ತು ಜೀವಂತ ಇರುವ ಖ್ಯಾತ ವ್ಯಕ್ತಿಗಳ ಚಿತ್ರ ಹಾಗೂ ಭಾವಚಿತ್ರಗಳು
  • ಕಲಾಪ್ರಕಾರಗಳ ನಟನೆಯ ಭಾವಚಿತ್ರಗಳು. ಉದಾಹರಣೆಗೆ ಯಕ್ಷಗಾನ, ನಾಟಕ, ಜಾನಪದ ಕಲೆಗಳ ಭಾವಚಿತ್ರಗಳು
  • ಕೈಬರಹದ ಮಾದರಿಗಳು, ಫಾಂಟುಗಳ ಚಿತ್ರಗಳು, ಧಾರ್ಮಿಕ/ಪಂಥದ ಸಂಕೇತಗಳು, ಚಿಹ್ನೆಗಳು

ಬಹುಮಾಧ್ಯಮ

ಬಹುಮಾಧ್ಯಮ ಎಂದರೆ ಆಡಿಯೋ, ವಿಡಿಯೋ, ಚಲನಚಿತ್ರ, ಚಿತ್ರಸಂಚಲನೆ (ಅನಿಮೇಶನ್) ಎಲ್ಲವನ್ನೂ ಒಳಗೊಂಡ ಫೈಲ್‍ಗಳು. ಕೆಲವು ಉದಾಹರಣೆಗಳು-

  • ಯಕ್ಷಗಾನದ ವಿಡಿಯೋ ತುಣುಕು
  • ನಾಟಕದ ವಿಡಿಯೋ ತುಣುಕು
  • ಬಹುಮಾದ್ಯಮ ಸಿ.ಡಿ. ಅಥವಾ ಡಿ.ವಿ.ಡಿ.ಯ ತುಣುಕು. ಉದಾಹರಣೆಗೆ ಹಳೆಗನ್ನಡ ಕಲಿಕೆಯ ಬಹುಮಾಧ್ಯಮ ಡಿ.ವಿ.ಡಿ.ಯಿಂದ ಸಂಪಾದಿಸಿ ತೆಗೆದ ಸಣ್ಣ ತುಣುಕು.

ಸದ್ಬಳಕೆಯ ಮಿತಿಗಳು

ಸದ್ಬಳಕೆಗಾಗಿ ಕಡತಗಳನ್ನು (ಫೈಲ್‍ಗಳನ್ನು) ಕನ್ನಡ ವಿಕಿಪೀಡಿಯಕ್ಕೆ ಸ್ಥಳೀಯವಾಗಿ ಸೇರಿಸುವಾಗ (ಅಪ್‍ಲೋಡ್ ಮಾಡುವಾಗ) ಕೆಲವು ಮಿತಿಗಳನ್ನು ಹಾಕಿಕೊಳ್ಳಬೇಕು. ಅವುಗಳನ್ನು ಇಲ್ಲಿ ನಮೂದಿಸಲಾಗಿದೆ.

ಧ್ವನಿ

  • ಧ್ವನಿಯ ತುಣುಕು (ಆಡಿಯೋ ಕ್ಲಿಪ್) ೯೦ ಸೆಕೆಂಡು ಕಾಲಾವಧಿಗಿಂತ ಕಡಿಮೆ ಇರಬೇಕು.
  • ಸ್ಟೀರಿಯೋ ಅಥವಾ ಮೋನೋ ಇರಬಹುದು.
  • ಸ್ಯಾಂಪಲಿಂಗ್ ರೇಟ್ ೪೪.೧ kHz ತನಕ ಇರಬಹುದು.
  • ಕಂಪ್ರೆಶನ್ ೧೯೨ kbps ತನಕ ಇರಬಹುದು.

ಚಿತ್ರ (ಇಮೇಜ್)

  • ಬಣ್ಣ ೨೪ ಬಿಟ್ ತನಕ ಇರಬಹುದು.
  • ಚಿತ್ರದ ಗಾತ್ರ ೧೦೦೦ x ೧೦೦೦ ಪಿಕ್ಸೆಲ್ ತನಕ ಇರಬಹುದು.
  • ಚಿತ್ರದ ರೆಸೊಲೂಶನ್ ೯೬ ಪಿಕ್ಸೆಲ್/ಇಂಚು ತನಕ ಇರಬಹುದು.
  • ಕಡತದ ಗಾತ್ರ (ಫೈಲ್ ಸೈಝ್) ೨ ಮೆಗಾಬೈಟ್‍ಗಿಂತ (೨೦೪೮ ಕಿಲೋಬೈಟ್) ಕಡಿಮೆ ಇರಬೇಕು

ಬಹುಮಾಧ್ಯಮ

  • ೯೦ ಸೆಕೆಂಡಿಗಿಂತ ಕಡಿಮೆ ಇರಬೇಕು

ಕಾರ್ಯನೀತಿಯ ಅನುಷ್ಠಾನ

  1. ಹಕ್ಕುಸ್ವಾಮ್ಯವಿಲ್ಲದ ತತ್ಸಂಬಂಧಿ ಕಡತ ಸಿಕ್ಕಿದಾಗ ಹಕ್ಕುಸ್ವಾಮ್ಯ ಇರುವ ಕಡತ ತೆಗೆದು ಆ ಜಾಗದಲ್ಲಿ ಹಕ್ಕುಸ್ವಾಮ್ಯವಿಲ್ಲದ ಕಡತವನ್ನು ಸೇರಿಸಬೇಕು
  2. ಮೇಲೆ ಅನಿವಾರ್ಯತೆ ನಿಯಮದಲ್ಲಿ ಹೇಳಿರುವಂತೆ, ಅಪ್ಲೋಡ್ ಮಾಡಿರುವ ಕಡತವನ್ನು ಯಾವ ಲೇಖನದಲ್ಲೂ ಬಳಸದಿದ್ದರೆ ಅಂತಹ ಕಡತದ ಬಗ್ಗೆ ಅರಳಿಕಟ್ಟೆಯಲ್ಲಿ ಮತ್ತು ಅಪ್ಲೋಡ್ ಮಾಡಿದವರಿಗೆ ಎಚ್ಚರಿಕೆ ಕೊಟ್ಟು ಅಂತಹ ಕಡತವನ್ನು ಒಂದು ತಿಂಗಳ ನಂತರ ಅಳಿಸಬೇಕು

ಉಲ್ಲೇಖಗಳು

  1. https://wikimediafoundation.org/wiki/Resolution:Licensing_policy