"ಆಂಗ್ಲ" ಆವೃತ್ತಿಗಳ ಮಧ್ಯದ ಬದಲಾವಣೆಗಳು

Jump to navigation Jump to search
ಸಂಪಾದನೆಯ ಸಾರಾಂಶವಿಲ್ಲ
(ಷೇಕ್ಸ್‌ಪಿಯರ್)
No edit summary
ಪೌರ್ವಾತ್ಯ ದೇಶಗಳಿಂದಲೂ ಇಂಗ್ಲಿಷ್ ಶಬ್ದಭಂಡಾರಕ್ಕೆ ಕೊಡುಗೆ ಸಂದಿದೆ. ಫಕೀರ್, ಜೀರೋ, ಹೌರಿ, ಹೂಕಾ, ಫೌಲ್, ಸಿರಪ್, ಗಾರ್ಬಲ್, ಟ್ಯಾರಿಫ್, ಟ್ಯಾಮರಿಂಡ್, ಅಸ್ಯಾಸಿನ್, ಮ್ಯಾಗಜಿನ್ ಮೊದಲಾದ ಪದಗಳು ಅರಬ್ಬೀ ಭಾಷೆಯಿಂದಲೂ ಪ್ಯಾರಡೈಸ್, ಜಾಸ್ಮಿನ್, ಅಜ್ಯೂರ್, ಖಾಕಿ, ಪಾಲ್, ಚೆಸ್, ಮಸ್ಕ್ ಮೊದಲಾದವು ಪಾರಸೀ ಭಾಷೆಯಿಂದಲೂ ಟೀ, ಕ್ವೋಟೋಗಳು ಚೀನಿಭಾಷೆಯಿಂದಲೂ ಕಿಮೋನೋ, ಹರ-ಕಿರಿ, ಗೈಯ್ಷಾ, ಜುಜಿಟ್ಸು, ಜಿನ್ರಿಕ್ಷ ಪದಗಳು ಜಪಾನಿ ಭಾಷೆಯಿಂದಲೂ ಬೂಮರಾಂಗ್, ಒರಾಂಗ್ ಓಟಾಂಗ್ ಷಿಂಪಾಂಜಿ, ಟ್ಯಾಟೂ, ಟ್ಯಾಬೂ ಮೊದಲಾದವು ಪೆಸಿಫಿಕ್ ದ್ವೀಪಗಳಿಂದಲೂ ಬಂದಿವೆ. ನಮ್ಮ ಭಾರತೀಯ ಭಾಷೆಗಳೂ ಬೇಕಾದಷ್ಟು ಪದಗಳನ್ನು ಇಂಗ್ಲಿಷಿಗೆ ಕೊಟ್ಟಿವೆ. ಕ್ಯಾಲಿಕೋ, ಚಿಂಟ್ಸ್, ಕೋಪ್ರ, ಕಾಯಿರ್, ಷುಗರ್, ಇಂಡಿಗೊ, ಮಾಂಡ್, ಬೀಟ್ಲ್, ಅರೆಕ, ಸ್ಯಾಂಡಲ್, ಆಯಾ, ಬ್ಯಾನ್ಯನ್, ಸಾಂಬೂರ್, ಷಿಕಾರ್, ಜಗ್ಗರ್ನಾಟ್, ಲೂಟಿ, ಯೋಗಿ, ಧರ್ಮ, ಸಮಾಧಿ, ಸಂಸಾರ, ಪಂಡಿತ ಮೊದಲಾದವುಗಳೆಲ್ಲ ಭಾರತೀಯ ಪದಗಳೇ. ಇಂಥ ಪದಗಳು ಸಾವಿರಾರಿವೆ ಎಂದು ತಜ್ಞರು ಲೆಕ್ಕ ಹಾಕಿದ್ದಾರೆ.
ಮೇಲಿನ ವಿವರಗಳು ಇಂಗ್ಲಿಷ್ ಭಾಷೆ ಹೇಗೆ ನಿಸ್ಸಂಕೋಚವಾಗಿ ಜಗತ್ತ್ತಿನ ಎಲ್ಲ ಭಾಷೆಗಳಿಂದಲೂ ತನಗೆ ಬೇಕಾದ, ಅನುಕೂಲವಾದ ಪದಗಳನ್ನು ತೆಗೆದುಕೊಂಡು ವಿವಿಧ ಮುಖಗಳ ಶಬ್ದಸಂಪತ್ತನ್ನು ವೃದ್ಧಿಪಡಿಸಿಕೊಂಡಿದೆ. ಹೀಗೆ ಎಲ್ಲ ಅನುಭವಗಳ, ಭಾವಗಳ, ಆಲೋಚನೆಗಳ ಅಭಿವ್ಯಕ್ತಿಗೂ ಸಾಮರ್ಥ್ಯವನ್ನು ಗಳಿಸಿದೆ ಎಂಬುದರ ಅರಿವು ಸ್ವಲ್ಪಮಟ್ಟಿಗಾದರೂ ನಮಗೆ ತೋರದಿರದು. ಹೀಗೆ ಅದು ಎಲ್ಲ ಕಡೆಯಿಂದಲೂ ಶಬ್ದಸಂಪತ್ತನ್ನು ಪಡೆದಿರುವುದರಿಂದಲೇ ಜಗತ್ತಿನ ಅತ್ಯಂತ ವ್ಯಾಪಕವೂ ಪ್ರಭಾವಯುತವೂ ಆದ ನುಡಿಯಾಗಿ ಶೋಭಿಸುತ್ತ್ತಿರುವುದು.
ಇಂಗ್ಲಿಷ್ ಭಾಷೆ ಬೆಳೆದಿರುವುದು ಕೇವಲ ಪರಭಾಷಾಪದಗಳನ್ನು ತೆಗೆದುಕೊಂಡು ತನ್ನ ಭಂಡಾರಕ್ಕೆ ಸೇರಿಸಿಕೊಳ್ಳುವುದರಿಂದಲೇ ಅಲ್ಲ. ಅದರಲ್ಲಿ ಸಾಹಿತ್ಯ ಸೃಷ್ಟಿ ಮಾಡಿರುವ ಪ್ರಸಿದ್ಧ ಲೇಖಕರನೇಕರು ಹೊಸ ಹೊಸ ಪದಗಳನ್ನೂ ಪದಗುಚ್ಛಗಳನ್ನೂ ರೂಪಿಸಿ ಅದರ ಅಭಿವ್ಯಕ್ತಿಶಕ್ತಿಯನ್ನು ಹೆಚ್ಚಿಸಿದ್ದಾರೆ. ಅವರೆಲ್ಲರೂ ತಮ್ಮ ಭಾಷೆಯ ಪದಗಳನ್ನು ಹೊಸ ಹೊಸ ರೀತಿಗಳಲ್ಲಿ ಉಪಯೋಗಿಸಿ ಅವುಗಳಿಗೆ ಹೊಸ ಜೀವವನ್ನೇ ಕೊಟ್ಟಿದ್ದಾರೆ. ಹೊಸ ಪದಗಳನ್ನು ಸೃಷ್ಟಿಸುವುದು ಹೇಗೆ ಭಾಷೆಯ ಭಂಡಾರವನ್ನು ಬೆಳೆಸುವುದೊ ಹಾಗೆಯೇ ಇರುವ ಪದಗಳ ನೂತನ ಸಂಯೋಜನೆ ಮತ್ತು ಪ್ರಯೋಗಗಳು ಅದರಲ್ಲಿರುವ ಅಭಿವ್ಯಕ್ತಿಸಾಧ್ಯತೆಗಳನ್ನು ಬೆಳೆಸುತ್ತವೆ. ಛಾಸರ್, ಸ್ಪೆನ್ಸರ್, ಬೈಬಲಿನ ಪ್ರಸಿದ್ಧ ಇಂಗ್ಲಿಷ್ ಭಾಷಾಂತರವಾದ ದಿ ಆಥರೈಸ್ಡ್ ವರ್ಷನ್ನಿನ ಕರ್ತರು. ಷೇಕ್ಸ್ ಪಿಯರ್, ಸ್ಪೆನ್ಸರ್, ಮಿಲ್ಟನ್ ಇವರನ್ನು ಈ ಸಂದಂರ್ಭದಲ್ಲಿ ಮುಖ್ಯರೆಂದು ನೆನೆಯಬೇಕು. ಬೈಬಲಿನ ಭಾಷಾಂತರದಿಂದ ಇಂಗ್ಲಿಷಿಗೆ ಪೀಸ್ ಮೇಕರ್, ಲಾಂಗ್ ಸಫರಿಂಗ್, ಲವಿಂಗ್ ಕೈಂಡ್ ನೆಸ್, ಮಾರ್ನಿಂಗ್ ಸ್ಟಾರ್, ಫರ್ಮಮೆಂಟ್, ಡ್ಯಾಮ್ಸೆಲ್ ಮೊದಲಾದ ಮುದ್ದಾದ ಮಾತುಗಳು ಸಿಕ್ಕಿರುವುದಲ್ಲದೆ, ನ್ಯೂ ವೈನ್ ಇನ್ ಓಲ್ಡ್ ಬಾಟಲ್, ಹೌಸ್ ಡಿವೈಡೆಡ್ ಅಗ್ಯೇನ್ಸ್ಟ ಇಟ್ಸೆಲ್ಪ್, ದಿ ಅವರ್ ಹ್ಯಾಸ್ ಕಮ್, ದಿ ಇಲೆವಂತ್ ಅವರ್, ಎ ಲೇಬರ್ ಆಫ್ ಲವ್, ಟು ಸಿ ಐ ಟು ಐ, ಕ್ಯಾಸ್ಟ್ ಪಲ್ಸ್ ಬಿಫೋರ್ ಸ್ವೈನ್, ಮೊದಲಾದ ಅರ್ಥ ಪೂರ್ಣವಾದ ನೂರಾರು ಪದಗುಚ್ಛಗಳು ಬಂದಿವೆ. ಫುಟ್ ಬಾಲ್, ಮಲ್ಟಿ ಟ್ಯೂಡಿನಸ್ ಇನ್ ಕಾರ್ನಡೈನ್, ಹೋಮ್ ಕೀಪಂಗ್, ಎ ಹೆವೆನ್ ಕಿಸಿಂಗ್ ಹಿಲ್, ದಿ ಸಿಯರ್ ಅಂಡ್ ಯಲ್ಲೊ ಲೀಫ್, ಟು ಬಿ ಆರ್ ನಾಟು ಟು ಬಿ, ಅಂಡರ್ ದಿ ಗ್ರೀನ್ವುಡ್ ಟ್ರೀ, ದಿ ಟೈಮ್ ಈಸ್ ಔಟ್ ಆಫ್ ಜಾಯಿಂಟ್, ಬ್ರೆವಿಟಿ ಈಸ್ ದಿ ಸೋಲ್ ಆಫ಼್ ವಿಟ್ ಮೊದಲಾದ, ಇಂಗ್ಲಿಷ್ ಬಲ್ಲವರು ಮತ್ತೆ ಮತ್ತೆ ಉಪಯೋಗಿಸುವ ಸಾವಿರಾರು ಪದಗಳೂ ಪದಗುಚ್ಛಗಳೂ ಷೇಕ್ಸ್ಪಿಯರನವು. ನಾಮಪದವನ್ನು ಕ್ರ್ರಿಯಾಪದವಾಗಿ ಉಪಯೋಗಿಸುವುದು ಇತ್ಯಾದಿ ಪ್ರಯೋಗಗಳಲ್ಲಿ [[ವಿಲಿಯಂ ಷೇಕ್ಸ್‌ಪಿಯರ್]]ಷೇಕ್ಸ್‌ಪಿಯರ್ ಎತ್ತಿದ ಕೈ. ಸ್ಪೆನ್ಸರ್ ಮತ್ತು ಮಿಲ್ಟನರೂ ಇದೇರೀತಿ ತಮ್ಮದೇ ಆದ ಪದಗಳನ್ನು ಸೃಷ್ಟಿಸಿ ಭಾಷೆಗೆ ನೀಡಿದ್ದಾರೆ. ಅವರ ಅನಂತರ ಬಂದ ಲೇಖಕರು ತಮ್ಮ ತಮ್ಮ ಯೋಗ್ಯತಾನುಸಾರ ಈ ಕೆಲಸ ಮಾಡಿರುವರು. ಒಂದು ಭಾಷೆ ಬೆಳೆಯಲು ಅದರಲ್ಲಿ ಕೃತಿರಚನೆ ಮಾಡುವ ಬರೆಹಗಾರರು ಹೇಗೆ ಸಹಾಯಕರಾಗಬಹುದು ಎಂಬುದಕ್ಕೆ ಈ ಇಂಗ್ಲಿಷ್ ಲೇಖಕರು ಅತ್ಯುತ್ತಮ ನಿದರ್ಶನಗಳಾಗಿದ್ದಾರೆ.
ಇಂಗ್ಲಿಷ್ ಭಾಷೆ ಇನ್ನೊಂದು ರೀತಿಯಲ್ಲಿ ಬೆಳೆದಿದೆ. ಒಂದೇ ಅರ್ಥವನ್ನು ಕೊಡುವ ಅನೇಕ ಶಬ್ದಗಳು ಯಾವ ಭಾಷೆಯಲ್ಲಾದರೂ ಬರುವುದುಂಟು. ಸಾಮಾನ್ಯ ಜನ ಅನಾವಶ್ಯಕವಾದ ಇಂಥ ಪದಗಳನ್ನೆಲ್ಲ ಬಳಸಲು ಇಷ್ಟಪಡುವುದಿಲ್ಲ. ಆದ್ದರಿಂದ ಕಾಲಕ್ರಮೇಣ ಅವುಗಳಲ್ಲಿ ಕೆಲವನ್ನು ಮರೆತುಬಿಡಬಹುದು. ಇಲ್ಲದಿದ್ದರೆ ಒಂದು ಅರ್ಥದಲ್ಲಿ ಒಂದು ಅಥವಾ ಎರಡು ಪದಗಳನ್ನು ಇಟ್ಟುಕೊಂಡು ಮಿಕ್ಕ ಪದಗಳನ್ನು ಸ್ವಲ್ಪ ಬೇರೆ ಅರ್ಥಕೊಡುವಂತೆ ಮಾರ್ಪಡಿಸಿಕೊಳ್ಳಬಹುದು. ಇಂಗ್ಲಿಷಿನಲ್ಲೂ ಇಂಥ ಅರ್ಥವ್ಯತ್ಯಾಸ ನಾನಾರೀತಿಯಲ್ಲಿ ನಡೆದಿದೆ. ಅಂಕಿತನಾಮಗಳು ಸಾಮಾನ್ಯನಾಮಗಳಾಗುವುದು ಒಂದು ಉದಾಹರಣೆ. ಸ್ಯಾಂಡ್ವಿಚ್ ಎಂದರೆ ಇಂದು ಎರಡು ಬ್ರೆಡ್ ಚೂರುಗಳ ನಡುವೆ ಏನಾದರೂ ವ್ಯಂಜನಪದಾರ್ಥವಿಟ್ಟು ಮಾಡಿರುವ ತಿನಿಸು. ಅದರ ಹೆಸರು ಅದನ್ನು ಮೊದಲು ಬಳಕೆಗೆ ತಂದ ಲಾರ್ಡ್ ಸ್ಯಾಂಡ್ವಿಚ್ಚನದು. ರಸ್ತೆಗೆ ಟಾರು ಹಾಕುವುದಕ್ಕೆ ಮ್ಯಾಕಡಮೈಸ್ ಎನ್ನುವುದುಂಟು-ಮ್ಯಾಕ್ ಆಡಮ್ ಅದರ ಪ್ರವರ್ತಕರಲ್ಲಿ ಒಬ್ಬನಾದ್ದರಿಂದ, ಬಾಯ್ಕ್ಕಾಟ್, ಲಿಂಡ್, ಮೆಂಟಾರ್, ವೋಲ್ಟ್, ಡಾಹ್ಲಿಯಾ, ಗಿಲೊಟಿನ್, ಪ್ಯಾಶ್ಚರೈಸ್ ಮೊದಲಾದ ಪದಗಳೆಲ್ಲ ಹೀಗೆ ಬಂದವು. ಸ್ಥಳಗಳ ಹೆಸರುಗಳಿಂದಲೂ ಕೆಲವು ಪದಗಳು ಬಂದಿವೆ. ಕ್ಯಾಲಿಕಟ್ನಿಂದ ಕ್ಯಾಲಿಕೊ, ಡಾಮಸ್ಕಸಿನಿಂದ ಡಾಮಾಸ್ಕ್, ಈಜಿಪ್ಟಿನಿಂದ ಜಿಪ್ಸಿ, ಇತ್ಯಾದಿ. ಕೆಲವು ಹೆಸರುಗಳು ಮೊದಲು ಒಂದೇ ಒಂದು ವಸ್ತುವನ್ನು ಸೂಚಿಸುತ್ತಿದ್ದು ಈಚೆಗೆ ಸಾಮಾನ್ಯವಾಗಿವೆ. ಮೂಲವಸ್ತುಗಳನ್ನು ಹೋಲುವ ಇತರ ವಸ್ತುಗಳಿಗೂ ಅವನ್ನು ಬಳಸುವ ವಾಡಿಕೆ ಬಂದಿದೆ. ಉದಾ: ಪೈಪ್ ಎಂಬ ಪದ ಮೂಲತ: ಕೊಳವೆ. ಇದನ್ನು ಕೊಳಲು, ನಳಿಗೆ, ಸಿಗಾರು-ಹೀಗೆ ಬೇರೆ ಬೇರೆ ಸಂದರ್ಭಗಳಲ್ಲಿ ಉಪಯೋಗಿಸುತ್ತಾರೆ. ಟಂಗ್, ನಾಲಿಗೆ, ಬೆಂಕಿಯ ಜ್ವಾಲೆ, ಭೂಮಿಯ ಚಾಚು, ಹೀಗೆಲ್ಲಾ ಆಗಿದೆ. ಇನ್ನೂ ಕೆಲವು ಪದಗಳು ಅರ್ಥವಿಸ್ತರಣೆಹೊಂದಿವೆ. ಕಂಪ್ಯಾನಿಯನ್ ಮೊದಲು ಭೋಜನದಲ್ಲಿ ಸಂಗಾತಿಯಾಗಿದ್ದವು. ಈಗ ಯಾವ ಸಂಗಾತಿಯಾದರೂ ಆಗಬಹುದು. ಕಫೂರ್ಯ್ ಮೊದಲು ರಾತ್ರಿ ಹೊತ್ತಿನಲ್ಲಿ ಮನೆಯಲ್ಲಿರಬೇಕೆಂದಿದ್ದುದು ಈಗ ಯಾವ ಹೊತ್ತಿನಲ್ಲಾದರೂ ಆದೀತು. ಮೇಕೆ ಕೊಲ್ಲುವವನಾಗಿದ್ದ ಬುಚರ್ ಈಗ ಯಾವ ಪ್ರಾಣಿಯನ್ನಾದರೂ ಕಡಿದು ಮಾರುತ್ತಾನೆ. ಈ ಪ್ರವೃತ್ತಿಗೆ ವಿರುದ್ಧವಾದುದು ಅರ್ಥ ಸಂಕುಚಿತವಾಗುವುದು. ಮೀಟ್ ಯಾವ ಆಹಾರವಾದರೂ ಆಗಬಹುದಾಗಿತ್ತು; ಈಗ ಮಾಂಸ ಮಾತ್ರ; ಡೀರ್ ಯಾವ ಪ್ರಾಣಿಯಾದರೂ ಆಗಿದ್ದುದು ಈಗ ಜಿಂಕೆ ಮಾತ್ರ; ‘ಸ್ಟಿಂಕ್’ ಯಾವ ವಾಸನೆಯಾದರೂ ಆಗಿರಬಹುದಾಗಿದ್ದುದು ಈಗ ಕೆಟ್ಟ ವಾಸನೆ ಮಾತ್ರ. ವಾಯೆಜ್ ಯಾವ ಯಾನವಾದರೂ ಆಗಿದ್ದುದು ಈಗ ನೌಕಾಯಾನ ಮಾತ್ರ. ಕೆಲವು ಸಾರಿ ಕಾಗುಣಿತ ವ್ಯತ್ಯಾಸದಿಂದ ಅರ್ಥವ್ಯತ್ಯಾಸವೂ ಆಗಿಬಿಟ್ಟಿದೆ. ಘಿÆ್ರ-ಥರೊ, ಹ್ಯೂಮನ್-ಹ್ಯುಮೇನ್, ಟು-ಟೂ, ಮ್ಯಾಂಟಲ್-ಮ್ಯಾಂಟ್ಲ್ ಹೀಗೆ. ಕೆಲವು ಪದಗಳು ಅಶುಭಸೂಚಕವೆಂಬ ಕಾರಣದಿಂದ ಜನ ಅವಕ್ಕೆ ಬದಲಾಗಿ ಬೇರೆ ಪದಗಳನ್ನು ಬಳಸುತ್ತಾರೆ. ಉದಾಹರಣೆಗೆ ಸಮಾಧಿ ಎಂಬ ಅರ್ಥ ಕೊಡುವ ಗ್ರೇವಿಗೆ ಬದಲಾಗಿ ಸಿಮೆಟರಿ ಎನ್ನುವುದು. ಸಿಮೆಟರಿ ವಾಸ್ತವವಾಗಿ ಮಲಗುವ ಸ್ಥಳ ಮಾತ್ರ. ಲಿಂಗಭೇದಗಳನ್ನು ಸೂಚಿಸಲು ಬೇರೆ ಬೇರೆ ಪದಗಳು ಸೃಷ್ಟಿಯಾಗಿ ಪದಗಳು ಬೆಳೆವುದುಂಟು: ಕನ್ನಡದ ಹೆಣ್ಣು ಕುದುರೆ, ಹೆಣ್ಣುನಾಯಿ, ಹೆಣ್ಣು ಹುಲಿ ಮೊದಲಾದ ಪದಗಳಿಗೆ ಇಂಗ್ಲಿಷಿನಲ್ಲಿ ಮೇರ್, ಬಿಚ್, ಟೈಗ್ರೆಸ್ ಇತ್ಯಾದಿಯಾಗಿ ಪ್ರತ್ಯೇಕ ಪದಗಳೇ ಇವೆ. ಕೆಲವು ಪದಗಳ ಅರ್ಥ ಬರಬರುತ್ತ ಉಚ್ಚವಾದರೆ ಇನ್ನು ಕೆಲವು ಪದಗಳ ಅರ್ಥ ಕೀಳಾಗುತ್ತದೆ. ಉದಾ : ಪೈರೇಟ್ ಎಂದರೆ ಸಾಹಸಿ ಎಂದಷ್ಟೆ ಇದ್ದುದು ಈಗ ಕಡಲ್ಗಳ್ಳ ಎಂದಾಗಿದೆ. ಹೊಸ ಅರ್ಥಕ್ಕೂ ಮೂಲ ಅರ್ಥಕ್ಕೂ ಈಗಲೂ ಸ್ವಲ್ಪಮಟ್ಟಿನ ಸಂಬಂಧ ಉಳಿದುಕೊಂಡು ಬಂದಿರುವುದನ್ನು ಗಮನಿಸಬೇಕು. ಸ್ಲೈ, ಕ್ರಾಫ್ಟಿ, ಕನಿಂಗ್ ಎಂಬ ಪದಗಳ ಮೂಲ ಅರ್ಥ ಚತುರ ಎಂದಿದ್ದುದು ಈಗ ಕದೀಮ ಎಂದಾಗಿದೆ. ಇದಕ್ಕೆ ವಿರುದ್ಧವಾಗಿ ಕುದುರೆಯ ಆಳು ಎಂಬರ್ಥದ ಮಾರ್ಷಲ್ ಈಗ ಸೈನ್ಯಾಧಿಕಾರಿಯ ಬಿರುದು; ಸೇವಕ ಎಂದರ್ಥ ಕೊಡುತ್ತ್ತಿದ್ದ ಮಿನಿಸ್ಟರ್ ಈಗ ಮಂತ್ರಿ ಅಥವಾ ಧರ್ಮಬೋಧಕ. ಹೀಗೆ ಬೇರೆ ಬೇರೆ ಅರ್ಥ ಬಂದಾಗ ಪದ ಹಿಂದಿನದೇ ಆದರೂ ಅದು ಹೊಸ ಪದದ ಸೃಷ್ಟಿಗೆ ಸಮವಾಗುತ್ತದೆ.
ಇಂಗ್ಲಿಷಿನಲ್ಲಿ ಇಂಥ ಹೊಚ್ಚ ಹೊಸ ಪದಗಳ ಸೃಷ್ಟ್ಟಿಯೂ ಆಗಿದೆ. ಒಂದು ಪದದಿಂದ ಇನ್ನೊಂದನ್ನು ರೂಪಿಸಿಕೊಳ್ಳುವುದೂ ನಡೆದಿದೆ (ಕ್ರಿಯಾಪದಗಳ ವಿವಿಧ ಭೇದಗಳನ್ನು ಸೂಚಿಸಲು ಈ ರೀತಿಯ ಪದಸೃಷ್ಟಿ ಸಹಾಯಕವಾಗುತ್ತದೆ). ಉದಾ: ಸಿಂಗ್-ಸ್ಯಾಂಗ್-ಸಂಗ್-ಸಾಂಗ್ ಇತ್ಯಾದಿ. ಇದಲ್ಲದೆ ಎರಡು ಬೇರೆ ಬೇರೆ ಪದಗಳನ್ನು ಸೇರಿಸಿ ಒಂದು ಪದವಾಗಿಸಿರುವುದೂ ಉಂಟು. ಉದಾ : ಹೌಸ್-ಟಾಪ್, ರೇಲ್-ವೇ, ವೀಕ್-ಎಂಡ್, ಸ್ವೀಟ್-ಮೀಟ್, ಅಪ್-ಗ್ರೇಡ್, ಮೊದಲಾದವು. ಪದಗಳನ್ನು ಸಂಕ್ಷಿಪ್ತಗೊಳಿಸಿಯೂ ಬೇರೆ ಪದಗಳನ್ನು ಪಡೆಯಲಾಗಿದೆ. ಆಮ್ನಿಬಸ್ ನಿಂದ ಬಸ್, ಫೋಟೋಗ್ರಾಫಿನಿಂದ ಫೊ಼ಟೋ, ಅಮೆಂಡಿನಿಂದ ಮೆಂಡ್, ವೆಟೆರಿನರಿಯಿಂದ ವೆಟ್-ಹೀಗೆ.
೧೪

edits

"https://kn.wikipedia.org/wiki/ವಿಶೇಷ:MobileDiff/753442" ಇಂದ ಪಡೆಯಲ್ಪಟ್ಟಿದೆ

ಸಂಚರಣೆ ಪಟ್ಟಿ