ಜಿಪ್ಸೀ ಪತಂಗ: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
Content deleted Content added
ಚು ಹೊಸ ಲೇಖನ
೩೩ ನೇ ಸಾಲು: ೩೩ ನೇ ಸಾಲು:
[[File:Gypsy Moth Defoliation Snow Shoe PA.jpg|thumb|Aerial photo showing gypsy moth defoliation of hardwood trees along the [[Allegheny Front]] near [[Snow Shoe, Pennsylvania]], in July 2007. The light green patches on hilltops are trees that had begun refoliating by the time this picture was taken.]]

ನ್ಯೂ ಇಂಗ್ಲೆಂಡಿನಲ್ಲಿ ಲಕ್ಷಾಂತರ ಡಾಲರ್ ಬೆಲೆಬಾಳುವ ಓಕ್ ಮರಗಳು, ಸೇಬಿನ ಗಿಡಗಳು ಈ ಪತಂಗದ ಹಾವಳಿಗೆ ಸಿಕ್ಕಿ ನಾಶವಾಗಿವೆ. ಈ ಶತಮಾನದ ಆದಿಯಲ್ಲಿ ದಶಕಗಳಲ್ಲಿ ಇವುಗಳ ಹಾವಳಿ ಅಮೆರಿಕದ ಕೇಂದ್ರ ಸರ್ಕಾರದ ಗಮನಕ್ಕೆ ಬಂದು ಇವುಗಳ ನಿರ್ಮೂಲನಕ್ಕಾಗಿ ರಾಜ್ಯ ಸರ್ಕಾರದೊಡನೆ ಸಹಕರಿಸಿ ಕ್ರಿಯಾತ್ಮಕವಾಗಿ ನಿರೋಧಕ ಕಾರ್ಯಕ್ರಮಗಳನ್ನು ಆರಂಭಿಸಿದೆ. ಸಂಪರ್ಕ ನಿರೋಧ ಕಾರ್ಯಕ್ರಮದ ವ್ಯವಸ್ಥೆ (ಕ್ವಾರೆಂಟೈನ್), ಪದಾರ್ಥಗಳನ್ನು ಹೊರಗೆ ರವಾನಿಸುವಾಗ ಅವುಗಳಲ್ಲಿ ಪತಂಗ ಸಾಗದಂತೆ ನೋಡಿಕೊಳ್ಳುವುದು-ಮುಂತಾದ ವಿಧಾನಗಳಿಂದ ಅದರ ಹರಡುವಿಕೆಯನ್ನು ತಡೆಯಬಹುದಾಗಿದೆ. ಸ್ವಾಭಾವಿಕ ವಿಧಾನಗಳಿಂದ ನ್ಯೂ ಇಂಗ್ಲೆಂಡ್ ರಾಜ್ಯಗಳ ಇತರ ಭಾಗಕ್ಕೆ ಹರಡದಂತೆ ತಕ್ಕ ನಿರ್ಬಂಧಗಳನ್ನು ಅನುಷ್ಠಾನಕ್ಕೆ ತರಲಾಗಿದೆ. 1923ರಿಂದ ನ್ಯೂಯಾರ್ಕಿನ ಪೂರ್ವ ಪ್ರದೇಶಗಳಲ್ಲೂ ಪೂರ್ವದ ಇತರ ರಾಜ್ಯಗಳಲ್ಲೂ ಇದ್ದ ಈ ಪತಂಗವನ್ನು ನಿರ್ಮೂಲ ಮಾಡುವುದರ ಮೂಲಕ ಪಶ್ಚಿಮ ಪ್ರದೇಶಗಳಿಗೆ ಹರಡದಂತೆ ಮಾಡುತ್ತಿದೆ. 1950ರ ಸುಮಾರಿಗೆ ಈ ಪತಂಗ ಪೂರ್ವ ನ್ಯೂಯಾರ್ಕಿನ ಅನೇಕ ಪ್ರದೇಶಗಳಲ್ಲೂ ಪೆನ್ಸಿಲ್‍ವೇನಿಯದ ಕೆಲವೆಡೆಗಳಲ್ಲೂ ಹರಡಿತ್ತು. ಅವುಗಳ ಹಾವಳಿ ಒಂದೊಂದು ವರ್ಷವೂ ಒಂದೊಂದು ಪ್ರಮಾಣದ ತೀವ್ರತೆಯನ್ನು ಮುಟ್ಟುತ್ತಿತ್ತು. ವಿಮಾನಗಳಲ್ಲಿ ಅವುಗಳ ನೆಲೆಗಳ ಮೇಲೆ ಡಿ.ಡಿ.ಟಿ.ಯನ್ನು ಸಿಂಪಡಿಸಿ ಅವುಗಳ ಹರಡಿಕೆಯನ್ನು ತಡೆಯಲಾಗುತ್ತಿತ್ತು. ದೀರ್ಘಕಾಲ ಸಂಶೋಧನೆ ನಡೆಸಿದ ಮೇಲೆ ಈಚೆಗೆ ಅನೇಕ ಹೊಸ ನಿಯಂತ್ರಣ ವಿಧಾನಗಳೂ ಬಳಕೆಗೆ ಬಂದಿವೆ. ಸೀಸದ ಆರ್ಸನೇಟ್ ಪುಡಿಯನ್ನು ಕಲಸಿದ ದ್ರಾವಣವನ್ನು ಕಂಬಳಿಹುಳುಗಳ ಮೇಲೆ ಸಿಂಪಡಿಸುವುದು ಅತ್ಯಂತ ಪರಿಣಾಮಕಾರಿಯಾದ ನಿಯಂತ್ರಣ ವಿಧಾನ. ಮೊಟ್ಟೆಗಳ ಮೇಲೆ ಕ್ರಿಯೊಸೋಟ್ ದ್ರಾವಣವನ್ನೆರಚಿ ನಾಶಪಡಿಸುವುದೂ ಉಂಟು. ರಾಸಾಯನಿಕ ನಿಯಂತ್ರಣಕ್ಕಿಂತ ಜೈವಿಕ ಹತೋಟಿ ವಿಧಾನಗಳನ್ನು ಪರಿಸರ ರಕ್ಷಣೆಯ ನಿಟ್ಟಿನಲ್ಲಿ ಇಂದು ಬಳಸಲಾಗುತ್ತಿದೆ. ಯೂರೋಪಿನಿಂದ ಅನೇಕ ಪರಾವಲಂಬಿ ಜೀವಿಪ್ರಭೇದಗಳನ್ನು ಜಿಪ್ಸೀ ಪತಂಗಗಳ ವಿನಾಶಕ್ಕಾಗಿ ಆಮದು ಮಾಡಿಕೊಳ್ಳಲಾಗಿದೆ. ಇಂಥ ಪರಾವಲಂಬಿಗಳಲ್ಲಿ ಬ್ರಾಕೊನಿಡ್‍ಗಳು (ಕಣಜ), ಪ್ರೆಕೈನಾ ಚಿಟ್ಟೆಗಳು ಪ್ರಧಾನವಾಗಿದೆ. ಕೆಲಸೋಮ ಸೈಕೋಪ್ಯಾಂಟ ಎಂಬ ಮಾಂಸಾಹಾರಿ ಕೀಟವೂ (ಬೀಟಲ್) ಈ ಕಾರ್ಯದಲ್ಲಿ ಸಹಾಯಕವೆನಿಸಿದೆ.

[[ವರ್ಗ:ಕೀಟಗಳು]]

೧೮:೦೦, ೨೨ ಡಿಸೆಂಬರ್ ೨೦೧೬ ನಂತೆ ಪರಿಷ್ಕರಣೆ

ಜಿಪ್ಸೀ ಪತಂಗ
Adult female gypsy moth
Adult male gypsy moth
Scientific classification
ಸಾಮ್ರಾಜ್ಯ:
ವಿಭಾಗ:
ವರ್ಗ:
ಗಣ:
ಕುಟುಂಬ:
ಉಪಕುಟುಂಬ:
ಕುಲ:
ಪ್ರಜಾತಿ:
Subspecies:
L. d. dispar
Trinomial name
Lymantria dispar dispar

ಜಿಪ್ಸೀ ಪತಂಗ - ಲೆಪಿಡಾಪ್ಟಿರ ಗಣದ ಲಿಪಾರಿಡೀ ಕುಟುಂಬಕ್ಕೆ ಸೇರಿದ ಪತಂಗ. ಪಾರ್ತೆಟ್ರಿಯ ಡಿಸ್ಪಾರ್ ಇದರ ವೈಜ್ಞಾನಿಕ ಹೆಸರು.

ಮೂಲ

ಇದನ್ನು 1869ರಲ್ಲಿ ಯೂರೋಪಿನಿಂದ ಅಮೆರಿಕ ಸಂಯುಕ್ತಸಂಸ್ಥಾನಗಳಿಗೆ ಮೊಟ್ಟ ಮೊದಲು ಸಂಶೋಧನೆಯ ಉದ್ದೇಶಕ್ಕಾಗಿ ತರಲಾಯಿತು. ಆದರೆ ಆ ಪತಂಗಗಳಲ್ಲಿ ಕೆಲವು ಸಂಶೋಧನಾಲಯದಿಂದ ತಪ್ಪಿಸಿಕೊಂಡು ಹಾರಿಹೋಗಿ ಕಾಡು ಮೇಡುಗಳಲ್ಲಿ ಯಥೇಚ್ಛವಾಗಿ ಬೆಳೆದಿದ್ದ ಮರಗಿಡಗಳನ್ನೂ ಫಲವೃಕ್ಷಗಳನ್ನೂ ಆವರಿಸಿದುವು. ಬಹುಬೇಗ ತಮ್ಮ ಸಂತತಿಯನ್ನು ವೃದ್ಧಿ ಮಾಡಿ ನ್ಯೂ ಇಂಗ್ಲೆಂಡಿನ ಕಾಡುಮೇಡುಗಳಲ್ಲಿ ಅಪಾಯಕಾರಿ ಪಿಡುಗಾಗಿ ವ್ಯಾಪಿಸಿದುವು. ಈಗ ಅಲ್ಲಿನ ಅರಣ್ಯಸಂಪತ್ತಿಗೂ ಫಲವೃಕ್ಷದ ಬೆಳೆಗಳಿಗೂ ಅಪಾರ ನಷ್ಟವುಂಟುಮಾಡುತ್ತಿರುವ ಕೀಟಗಳಾಗಿ ಪರಿಣಮಿಸಿವೆ.

ಭೌತಿಕ ಲಕ್ಷಣಗಳು

Pupa

ವಯಸ್ಕಪತಂಗ ಮಾಸಲು ಬಣ್ಣದ ದಪ್ಪ ಮೈಯ ಕೀಟ ಅದರ ರೆಕ್ಕೆಯ ಮೇಲೆ ಓರೆಕೋರೆಯಾಗಿರುವ ದಪ್ಪ ಗೆರೆಗಳುಂಟು. ಹೆಣ್ಣು ಪತಂಗದ ದೇಹ ಹಾರಲು ಅವಕಾಶವೀಯದಷ್ಟು ಗಡುಸಾಗಿದೆ. ಗಂಡುಪತಂಗ ಚಿಕ್ಕ ಗಾತ್ರದ್ದು, ಕಪ್ಪಗಿದೆ; ಚೆನ್ನಾಗಿ ಹಾರಬಲ್ಲದು. ಚಳಿಗಾಲದಲ್ಲಿ ಮೊಟ್ಟೆಯ ಅವಸ್ಥೆಯಲ್ಲಿ ಈ ಪತಂಗಗಳ ಜೀವನ ಕಳೆಯುತ್ತದೆ. ಬೇಲಿಗಳ ಕಂಬಿಗಳು, ಉರುಳಿದ ಮರಗಳು, ಪೊಟರೆಗಳು, ಕೊಂಬೆಗಳು, ಬಂಡೆಗಳು ಮುಂತಾದೆಡೆ ಹೆಣ್ಣು ಪತಂಗ ಪಕ್ಷಿಗಳ ಕಣ್ಣಿಗೆ ಬೀಳದಂತೆ ಗುಚ್ಛಗಳಲ್ಲಿ 400-500 ಮೊಟ್ಟೆಯಿಡುತ್ತದೆ. ಮೊಟ್ಟೆಗಳ ಗುಚ್ಛಗಳ ಮೇಲೆ ಮಾಸಲು ಬಣ್ಣದ ರೋಮಗಳಿವೆ. ಇವು ಮೊಟ್ಟೆಗಳನ್ನು ರಕ್ಷಿಸುತ್ತವೆ. ವಸಂತ ಋತುವಿನಲ್ಲಿ ಮರಗಳು ಚಿಗುರಿದಂತೆ ಮೊಟ್ಟೆಯೊಡೆದು ಹೊಟ್ಟೆಬಾಕ ಮರಿಗಳು ಹೊರಬೀಳುತ್ತವೆ. ಎಲೆಗಳ ಚಿಗುರನ್ನೆಲ್ಲ ತಿಂದು ಜುಲೈ ತಿಂಗಳ ವೇಳೆಗೆ ಬೆಳೆದು ದಪ್ಪವಾಗುತ್ತವೆ. ಆ ವೇಳೆಗೆ ಅವುಗಳ ಹಾವಳಿಯಿಂದ ಮರಗಳೆಲ್ಲ ಬೋಳಾಗುತ್ತವೆ. ಬಲಿತ ಆ ಹುಳುಗಳು 2" ಉದ್ದವಾಗಿ, ಚಪ್ಪಟೆಯಾಗಿದ್ದು ಮಾಸಲು ಕಂದು ಬಣ್ಣದ ಮೈಮೇಲೆ ಎರಡು ಕಡೆಯಲ್ಲೂ ಉದ್ದವಾದ ಕಂದುಬಣ್ಣದ ಕೂದಲ ಕುಚ್ಚುಗಳನ್ನು ಬೆಳೆಸಿ ಕೊಂಡಿರುತ್ತವೆ. ಬೆನ್ನಿನ ಮೇಲೆ ಎರಡು ಸಾಲು ಗಂಟುಗಳು ಇರುವುದು ಇದರ ವೈಶಿಷ್ಟ್ಯ. ಅಲ್ಲದೆ ಐದು ಜೊತೆ ನೀಲಿ ಬಣ್ಣದ ಗಂಟುಗಳೂ ಅದರ ಹಿಂದೆ ಆರು ಜೊತೆ ಕೆಂಪು ಬಣ್ಣದ ಗಂಟುಗಳೂ ಮೈಮೇಲಿವೆ. ಹತ್ತು ದಿವಸಗಳ ನಂತರ ಈ ಹುಳುಗಳು ಕೋಶಾವಸ್ಥೆಯನ್ನು ಸೇರಿ ವಯಸ್ಕ ಚಿಟ್ಟೆಗಳಾಗಿ ಹೊರಬರುತ್ತವೆ. ವರ್ಷಕ್ಕೆ ಇವು ಒಂದು ಸಂತತಿಯನ್ನು ಮಾತ್ರ ವೃದ್ಧಿಪಡಿಸುತ್ತವೆ.

ಹರಡುವಿಕೆ

ಜಿಪ್ಸೀ ಪತಂಗಗಳು ಎಳೆಯ ಸಸಿಗಳ ಮಡಿ, ಮರದ ಚಿಗುರು, ಬಂಡೆ ಮುಂತಾದವುಗಳನ್ನು ಆಕ್ರಮಿಸುತ್ತವೆ. ಆಕ್ರಮಣಗೊಂಡ ಆಶ್ರಯಗಳು ಮಾರಾಟಕ್ಕಾಗಿ ಹೊರಗೆ ಕಳುಹಿಸಿದಾಗ ಅವುಗಳೊಂದಿಗೆ ಪತಂಗಗಳೂ ಸಾಗಿಹೋಗಿ ಅನ್ಯ ದೇಶಗಳಲ್ಲಿ ಹರಡುತ್ತವೆ. ಕಂಬಳಿ ಹುಳುಗಳ ಅವಸ್ಥೆಯಲ್ಲಿಯೂ ಗಾಳಿಗೆ ತೂರಿಕೊಂಡು ಹೋಗಿ ರಾಜ್ಯದಿಂದ ರಾಜ್ಯಕ್ಕೆ ಹರಡುವುದುಂಟು.

ಹಾನಿ

Aerial photo showing gypsy moth defoliation of hardwood trees along the Allegheny Front near Snow Shoe, Pennsylvania, in July 2007. The light green patches on hilltops are trees that had begun refoliating by the time this picture was taken.