ಕಸೀದಾ: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
Content deleted Content added
ಹೊಸ ಪುಟ: ಅರಬ್ಬೀ, ಪಾರಸೀ ಮತ್ತು ಉರ್ದುಕಾವ್ಯಗಳ ಪ್ರಮುಖ ಪ್ರಕಾರ. ಇದು...
( ಯಾವುದೇ ವ್ಯತ್ಯಾಸವಿಲ್ಲ )

೧೭:೩೭, ೨೧ ಅಕ್ಟೋಬರ್ ೨೦೧೬ ನಂತೆ ಪರಿಷ್ಕರಣೆ

ಅರಬ್ಬೀ, ಪಾರಸೀ ಮತ್ತು ಉರ್ದುಕಾವ್ಯಗಳ ಪ್ರಮುಖ ಪ್ರಕಾರ. ಇದು ಮೂಲತಃ ಅರಬ್ಬಿಯದು. ಇದರ ಉದ್ದೇಶ ಕಾವ್ಯ ಅಥವಾ ಸ್ತುತಿಕಾವ್ಯ ಇಲ್ಲವೆ ಪ್ರಗಾಥಗಳ ರಚನೆ. ಇದರ ಕನಿಷ್ಠ ಮಿತಿ ಹದಿನೈದು ಪದ್ಯಗಳಾದರೆ ಗರಿಷ್ಠಮಿತಿ ನೂರಾರು ಪದ್ಯಗಳಾಗಬಹುದು. ಸಾಮಾನ್ಯವಾಗಿ ರಾಜ, ಆಶ್ರಯದಾತ, ಪೈಗಂಬರ್ ಅಥವಾ ಸಂತನ ಸ್ತುತಿಗಳೂ ವ್ಯಂಗ್ಯೋಕ್ತಿಗಳೂ ಕಸೀದಾಶೈಲಿಯ ವಸ್ತು. ಕೆಲವೊಮ್ಮೆ ಪ್ರೇಮ, ಋಣವರ್ಣನೆ, ನೀತಿಬೋಧೆ, ಕಾಲಜ್ಞಾನ ಮೊದಲಾದವೂ ಇವುಗಳ ಜೊತೆಗೆ ಸೇರಬಹುದು. ಕಸೀದಾಕ್ಕೆ ತನ್ನದೇ ಆದ ಶೈಲಿ, ಶಬ್ದವಿನ್ಯಾಸಗಳಿರುತ್ತವೆ. ಶಬ್ದಾಡಂಬರ ಮತ್ತು ನಿರರ್ಗಳ ಓಟ ಇದರ ಪ್ರಥಮ ಅಗತ್ಯವೆನ್ನಬಹುದು. ಅಲಂಕಾರಗಳು ಯಥೇಚ್ಛವಾಗಿರುತ್ತವೆ. ವಸ್ತು ಗಂಭೀರ ಹಾಗೂ ತಾತ್ತ್ವಿಕ ಚಿಂತನೆಯಿಂದ ಕೂಡಿರುತ್ತದೆ.

ಕಸೀದಾ ರೀತಿಗಳು

ಕಸೀದಾವನ್ನು ಈ ರೀತಿಯಾಗಿ ವಿಂಗಡಿಸಬಹುದು :

  • ತಂಹೀದ್ ಅಥವಾ ತಶ್ಬೀಬ್-ಪೂರ್ವರಾಗ ಅಥವಾ ಪ್ರಣಯದ ಭೂಮಿಕೆ.
  • ಗುರೀeóï ಅಥವಾ ತಬ್ಲೀಸ್- ವಿಷಯಾಂತರ .
  • ಮಧ್-ಪ್ರಶಂಸೆ.
  • ಮಕ್ಸದ್-ಉದ್ದೇಶ. ಇಲ್ಲಿ ಕವಿ ತನಗೆ ಬೇಕಾದುದನ್ನು ಬೇಡುತ್ತಾನೆ. ಪೀಠಿಕೆಯಿಂದ ಆರಂಭವಾಗುವುದು ತಂಹಿದಿಯಾ ಅದಿಲ್ಲದಿರುವುದೇ ಕಿತಾಬಿಯಾ ಅಥವಾ ಪ್ರತ್ಯಕ್ಷ.
  • ದುಆ-ಆಶೀರ್ವಾದ. ಶ್ಲೋಕದ ಪ್ರಥಮ ಮತ್ತು ದ್ವಿತೀಯ ಚರಣಾರ್ಧದಲ್ಲಿ ಪ್ರಾಸವಿರುತ್ತದೆ.

ಮೊದಲಿಗೆ ಕಸೀದಾ ಒಂದೇ ಅರಬ್ಬಿಯ ಸರ್ವಸಾಧಾರಣ ಕಾವ್ಯ ಪ್ರಕಾರವಾಗಿತ್ತು. ಪಾರಸೀಗಳು ಇದರ ಭೂಮಿಕೆಗಳನ್ನು ಗಜಲ್ ಇಲ್ಲವೆ ಭಾವಗೀತೆಗಳನ್ನಾಗಿ ಮಾರ್ಪಡಿಸಿದರು. ಇತರ ಭಾಗಗಳನ್ನು ಕಿಟಾ-ಖಂಡಗಳನ್ನಾಗಿ ಪರಿವರ್ತಿಸಿದರು. ಮತ್ನವಿ-ದ್ವಿಪದಿ, ರುಬಾಯಿ-ಚೌಪದಿ ಮತ್ತು ಇತರ ಛಂದೋಭೇದಗಳು ಪಾರಸಿಯಲ್ಲಿ ರೂಪುಗೊಂಡವು. ಇವೆಲ್ಲವನ್ನೂ ಉರ್ದು ಬಳಸಿಕೊಂಡಿತು.

ಭಾರತದಲ್ಲಿ ಕಸೀದಾ

ಕಸೀದಾಕ್ಕೆ ಮುಖ್ಯವಾಗಿ ರಾಜಾಸ್ಥಾನಗಳಲ್ಲಿ ಪ್ರೋತ್ಸಾಹ ಸಿಕ್ಕಿತು. ಅರಸರು ಉದಾರವಾಗಿ ಕಸೀದಾಕವಿಗಳನ್ನು ಪುರಸ್ಕರಿಸಿದರು. ಅನ್ವರಿ ಮತ್ತು ಜಹೀರ್ ಇ ಫಾರ್ಯಾಬಿ ಪಾರಸಿಯಲ್ಲಿ, ಸೌದಾ ಮತ್ತು eóËಕ್ ಉರ್ದುವಿನಲ್ಲಿ ವಿಖ್ಯಾತ ಕಸೀದಾ ಕವಿಗಳು. ರಾಜಾಶ್ರಯದ ಅಭಾವದಿಂದಾಗಿ ಕಸೀದಾ ಉರ್ದುವಿನಲ್ಲಿ ಅಷ್ಟಾಗಿ ಬೆಳೆಯಲಿಲ್ಲ.

ಉಲ್ಲೇಖಗಳು

"https://kn.wikipedia.org/w/index.php?title=ಕಸೀದಾ&oldid=720628" ಇಂದ ಪಡೆಯಲ್ಪಟ್ಟಿದೆ