"ಆಸ್ಟ್ರೇಲಿಯ" ಆವೃತ್ತಿಗಳ ಮಧ್ಯದ ಬದಲಾವಣೆಗಳು

Jump to navigation Jump to search
ಚು
*ಮಧ್ಯದ ತಗ್ಗು ಬಯಲುಗಳು,
*ಪಶ್ಚಿಮದ ಪೀಠಭೂಮಿ.
*ಪೂರ್ವದ ಎತ್ತರ ಪ್ರದೇಶಗಳು ಖಂಡದ ಪೂರ್ವದಲ್ಲಿ ಉತ್ತರದ ಯಾರ್ಕ್ ಭೂಶಿರದಿಂದ ದಕ್ಷಿಣದಲ್ಲಿನ ಮರೆ ನದಿಯ ಉಗಮಸ್ಥಾನದವರೆಗೂ ಹರಡಿವೆ. ಪರ್ವತ ಭಾಗವೇ ಗ್ರೇಟ್ ಡಿವೈಡಿಂಗ್ ರೇಂಜ್ ಎಂಬುದು. ಇದರಲ್ಲಿ ಕೊಸಿಯುಸ್ಕೊ (2,234ಮೀ) ಅತ್ಯಂತ ಎತ್ತರದ ಶಿಖರ. ಭೂವಿಜ್ಞಾನದ ದೃಷ್ಟಿಯಿಂದ ಈ ಪರ್ವತಗಳು ಪ್ರಿ-ಕೇಂಬ್ರಿಯನ್ನಿಂದ ಕಾರ್ಬೋನಿಫೆರಸ್ ವರೆಗಿನ ಕಾಲದ ವಿವಿಧ ಶಿಲೆಗಳಿಂದ ಉಂಟಾಗಿವೆ; ಅವುಗಳ ಪಕ್ಕದಲ್ಲಿ ಈಚಿನ ಭೂನಿಕ್ಷೇಪಗಳಿವೆ. ಕಾರ್ಬೋನಿಫೆರಸ್ ಕಾಲದಲ್ಲಿ ಟಾಸ್ಮನ್ ಭೂಸ್ತರಾವನತಗಳು ಅಲ್ಪ ಪ್ರಮಾಣದಲ್ಲಿ ಪಕ್ಷೀಕೃತ ರೂಪವನ್ನು ಹೊಂದಿದುವು. ಅನಂತರ ನದಿಗಳಿಂದಾದ ಸವೆತದಿಂದ ಇಕ್ಕಟ್ಟಾದ ತೀರಪ್ರದೇಶ ಪರ್ವತಗಳ ತುಂಡುಭಾಗಗಳು ಸಮಮಟ್ಟವಾದುವು. ಮರೆ-ಡಾರ್ಲಿಂಗ್ ನದಿಗಳ ಉಪನದಿಗಳ ಉಗಮ ಗ್ರೇಟ್ ಡಿವೈಡಿಂಗ್ ರೇಂಜ್ನಲ್ಲಿ ಅವು ಪ್ರಧಾನ ನದಿಯನ್ನು ಸಮಕೋನದಲ್ಲಿ ಸೇರಿಕೊಳ್ಳುತ್ತವೆ. ಮರೆ ನದಿ ಮೆಲ್ಬರ್ನ್ ತಗ್ಗು ಬಯಲಿನ ಮುಖಾಂತರ ಹರಿದು, ಟಾಸ್ಮೇನಿಯ ಜಲಸಂಧಿಯನ್ನು ತಲಪುತ್ತದೆ. ಪೂರ್ವದ ತೀರಪ್ರದೇಶದ ಆಚೆ ದಕ್ಷಿಣೋತ್ತರವಾಗಿ ಹಬ್ಬಿದ ಹವಳದ್ವೀಪ ಸಮುದಾಯಗಳಿವೆ. ಇವನ್ನು ದಿ ಗ್ರೇಟ್ ಬ್ಯಾರಿಯರ್ ರೀಫ್ ಎಂದು ಕರೆಯುತ್ತಾರೆ. ಇವು ಸಮುದ್ರತೀರಕ್ಕೆ 16 ಕಿಮೀಗಳಿಂದ 241 ಕಿಮೀಗಳ ಸಮಾನಾಂತರದಲ್ಲಿ 2.011 ಕಿಮೀ ಉದ್ದ ಹರಡಿವೆ. ಆಸ್ಟ್ರೇಲಿಯಾದ ಸಾಹಿತ್ಯಿಕ ಪರಂಪರೆಗೆ ಸ್ಫೂರ್ತಿ ಈ ಹವಳದ ದಿಬ್ಬಗಳು. ಜಗತ್ತಿನ ನೈಸರ್ಗಿಕ ಅದ್ಭುತಗಳಲ್ಲಿ ಕ್ವೀನ್ಸ್‌ಲ್ಯಾಂಡ್‌ ಕರಾವಳಿಯ ಹವಳದ ದಿಬ್ಬಗಳೂ ಸೇರಿವೆ. ವಿಶ್ವದ ಅತ್ಯಂತ ದೊಡ್ಡ ಹವಳ ದಿಬ್ಬದ ವ್ಯವಸ್ಥೆ ಇದು. ಅತಿ ವೈವಿಧ್ಯಮಯ ಜೀವಸಂಕುಲಕ್ಕೆ ಆಶ್ರಯ ನೀಡಿರುವ ಪ್ರಮುಖ ಭೌಗೋಳಿಕ ವಲಯವಿದು. ಮಾತ್ರವಲ್ಲ, ದೇಶದ ಸಾಂಸ್ಕೃತಿಕ, ಆರ್ಥಿಕ ಮತ್ತು ಸಾಮಾಜಿಕ ರಚನೆಯ ಮೇಲೂ ದಟ್ಟ ಪ್ರಭಾವ ಬೀರಿರುವಂಥಹವು. ಆಸ್ಟ್ರೇಲಿಯಾದ ಪ್ರಮುಖ ಪ್ರೇಕ್ಷಣೀಯ ಸ್ಥಳವಾಗಿರುವ ‘ದಿ ಗ್ರೇಟ್‌ ಬ್ಯಾರಿಯರ್‌ ರೀಫ್‌’ಗೆ ಇರುವುದು ಬರೋಬ್ಬರಿ ಎರಡು ಕೋಟಿ ಐವತ್ತು ಲಕ್ಷ ವರ್ಷಗಳ ಬೃಹತ್‌ ಇತಿಹಾಸ. 1,400 ಮೈಲು ದೂರದ 3.44 ಲಕ್ಷ ಚದರ ಕಿಮೀ ವ್ಯಾಪ್ತಿಯ ಪ್ರದೇಶದವರೆಗೆ ಲೆಕ್ಕವಿಲ್ಲದಷ್ಟು ಅಚ್ಚರಿಗಳನ್ನು ಸಲಹಿಕೊಂಡು ವ್ಯಾಪಿಸಿರುವ ಈ ಹವಳದ ದಿಬ್ಬಗಳ ಸಾವು ಸಮೀಪಿಸುತ್ತಿದೆಯೇ ಎಂಬ ಸಂಶಯ ಮೂಡಿದೆ.<ref>[http://www.prajavani.net/news/article/2016/10/17/445381.html ‘ತೀವ್ರ ನಿಗಾ ಘಟಕ’ದಲ್ಲಿ ಅಮೂಲ್ಯ ಹವಳದ ದಿಬ್ಬಗಳು!]</ref>
 
*ಮಧ್ಯದ ತಗ್ಗು ಬಯಲುಗಳು ಉತ್ತರದ ಕಾರ್ಪೆಂಟೇರಿಯ ಕೊಲ್ಲಿಯಿಂದ ದಕ್ಷಿಣದ ತೀರದವರೆಗೂ ಹರಡಿವೆ. ಇವು ಸಾಮಾನ್ಯವಾಗಿ ತಗ್ಗಾಗಿವೆ. ಉತ್ತರದ ಬರ್ಕ್ಲಿ ಡೌನ್ಸ್ (610ಮೀ), ಗ್ರೇ ಮತ್ತು ಫ್ಲ್ಯಾಂಡರ್ ಬೆಟ್ಟ ಸಾಲುಗಳ ವಿನಾ ಉಳಿದ ತಗ್ಗು ಬಯಲು ವರ್ಮಿಯನ್ ಶಿಲಾಸ್ತರಗಳಿಂದ ಕೂಡಿದೆ. ಈ ರೀತಿಯ ವೈವಿಧ್ಯಪೂರ್ಣ ಸಂಚಯನಗಳು ಗ್ರೇಟ್ ಡಿವೈಡಿಂಗ್ ರೇಂಜ್ನ ಪೂರ್ವ ಪಾಶರ್ವದಲ್ಲಿರುವ ಮರಳುಶಿಲೆ, ಜೇಡಿಪದರಶಿಲೆ ಮತ್ತು ಕಲ್ಲಿದ್ದಲಿನ ಸ್ತರಗಳನ್ನು ನಿರ್ಮಿಸಿವೆ. ಭೂರಚನಾಶಾಸ್ತ್ರ ದೃಷ್ಟಿಯಿಂದ ಇಲ್ಲಿನ ಭೂರಚನೆ ಏಕ ರೀತಿಯ ತರಂಗಿತ ಭೂಲಕ್ಷಣಗಳನ್ನು ಹೊಂದಿದೆ.
ಇಲ್ಲಿನ ಜಲವಹನ ರೀತಿ ಕೇಂದ್ರಾಭಿಗಾಮಿ. ಐರ್ ಸರೋವರದ ಕಡೆಗೆ ಈ ಬಯಲುಗಳ ಎಲ್ಲ ನದಿಗಳೂ ಹರಿಯುತ್ತವೆ. ಗೇರ್ಡ್ನರ್ ಸರೋವರ ದಕ್ಷಿಣದಲ್ಲಿದ್ದು ಮರುಭೂಮಿ ಪ್ರಧಾನ ಪ್ರದೇಶದಲ್ಲಿ ಜೌಗು ಭಾಗಗಳನ್ನು ನಿರ್ಮಿಸಿದೆ.
ಈ ಭಾಗಗಳನ್ನು
*ಕಾರ್ಪೆಂಟೇರಿಯ ತಗ್ಗುಬಯಲುಗಳು ಎಂದು ಮೂರು ಭಾಗ ಮಾಡಬಹುದು.
ಮಧ್ಯ ಆಸ್ಟ್ರೇಲಿಯದಲ್ಲಿನ ಕಾರ್ಪೆಂಟೇರಿಯ ಕೊಲ್ಲಿಯಿಂದ ಆನ್ಸ್ಲೊ, ಪರ್ತ್ ಮತ್ತು ಆಲ್ಬೆನಿಗಳವರೆಗೆ ಹರಡಿರುವ ತಗ್ಗಿನ, ಇಕ್ಕಟ್ಟಾದ ತೀರಪ್ರದೇಶ ಪೂರ್ವಕ್ಕೆ ಪಶ್ಷಿಮ ಪೀಠಭೂಮಿ ಗ್ರೇಟ್ ಗಿಬ್ಸನ್ ಮತ್ತು ವಿಕ್ಟೋರಿಯ ಮರುಭೂಮಿಗಳನ್ನು ಹೊಂದಿದೆ. ಈ ಭೂಮಿ ಭಾರತ ಮತ್ತು ಆಫ್ರಿಕಗಳ ಪೀಠಭೂಮಿಗಳಷ್ಟೇ ಹಳೆಯದು. ಇದು ಮತ್ತು ಆಫ್ರಿಕದಲ್ಲಿನ ಸಹರಾ ಮರುಭೂಮಿ ಅವಳಿಜವಳಿಗಳಂತಿವೆ. ಕಾರ್ಬೋನಿಫೆರಸ್ ಯುಗಕ್ಕೆ ಹಿಂದೆ, ಆಸ್ಟ್ರೇಲಿಯದ ಭೂಭಾಗ ದಕ್ಷಿಣದ ಅಂಟಾರ್ಕ್ಟಿಕದ ಭೂಭಾಗದೊಂದಿಗೂ ವಾಯವ್ಯದಲ್ಲಿ [[ಭಾರತ]]ದ ದಖನ್ ಪೀಠಭೂಮಿಯೊಂದಿಗೂ ಭೂಸಂಪರ್ಕ ಹೊಂದಿತ್ತು. ಇಂಗಾಲಯುಗದ ಅಂತ್ಯಕಾಲದಲ್ಲಿ ಈ ಅಖಂಡಭೂಭಾಗ ಒಡೆದು ಬೇರ್ಪಟ್ಟಿತು. ಕೆಲವು ಭಾಗಗಳು ಸಮುದ್ರದಲ್ಲಿ ಮುಳುಗಿ ಈಗಿರುವಂತೆ ದ್ವೀಪಗಳು ನಿರ್ಮಿತವಾದುವು. ಮೊತ್ತಮೊದಲು ಆಸ್ಟ್ರೇಲಿಯ ಪ್ರತ್ಯೇಕ ದ್ವೀಪವಾಯಿತು. ಈ ಪ್ರತ್ಯೇಕತೆಯ ಪರಿಣಾಮವಾಗಿ ಆಸ್ಟ್ರೇಲಿಯದ ಪ್ರಾಣಿ ಮತ್ತು ಸಸ್ಯವರ್ಗಗಳು ತಮ್ಮವೇ ಆದ ವೈಶಿಷ್ಟ್ಯವನ್ನು ಹೊಂದಿವೆ. ತೃತೀಯ ಭೂಕಾಲಯುಗದಲ್ಲಿ ಆದ ಬದಲಾವಣೆಗಳನ್ನು ಯೂಕ್ಲ ಜಲಾನಯನ ಪ್ರದೇಶದಲ್ಲಿ ಕಾಣಬಹುದು. ಅಲ್ಲಿನ ನೆಲ ಸುಣ್ಣಶಿಲಾಮಯವಾಗಿರುವುದರಿಂದ ರಂಧ್ರವಾಗಿದೆ; ಮಳೆ ಬಿದ್ದ ಕೂಡಲೆ ನೀರನ್ನು ಹೀರಿಬಿಡುತ್ತದೆ. ತಗ್ಗುಪ್ರದೇಶಗಳಲ್ಲಿ ನೆಲದೊಳಗೆ ನೀರು ನಿಂತಿರುತ್ತದೆ. ಇಂಥ ಭೂಮ್ಯಂತರ್ಗತ ಜಲಪ್ರದೇಶಗಳನ್ನು ವಾಯವ್ಯದ ಮರುಭೂಮಿಯಲ್ಲೂ ದಕ್ಷಿಣದ ಯೂಕ್ಲ ತಗ್ಗುಭೂಭಾಗದಲ್ಲೂ ಕಾಣಬಹುದು.
 
==ಸ್ವಾಭಾವಿಕ ಸಸ್ಯವರ್ಗ==
ಆಸ್ಟ್ರೇಲಿಯದ ಶೇ. 1 ಭಾಗಕ್ಕಿಂತಲೂ ಕಡಿಮೆ ಪ್ರದೇಶದಲ್ಲಿ ಅದರಲ್ಲೂ ಮರುಭೂಮಿಯ ಅಂಚುಗಳಲ್ಲಿ ಎತ್ತರಕ್ಕೆ ಬೆಳೆಯುವ ಹುಲ್ಲುಗಾವಲುಗಳಿವೆ. ಈ ಹುಲ್ಲನ್ನು ಕಾಂಗರೂ ಹುಲ್ಲು ಎಂದು ಕರೆಯುತ್ತಾರೆ. ತೀರಪ್ರದೇಶಗಳಲ್ಲಿ ದಟ್ಟವಾದ ಕಾಡುಗಳಿವೆ. ಕ್ವೀನ್ಸ್ ಲೆಂಡ್ನ ಸದಾ ಹಸಿರಾಗಿರುವ ಮರಗಳು ಲಿಯಾನಾಸ್ ಮತ್ತು ಜರಿ ಮರಗಳನ್ನು ಒಳಗೊಂಡಿವೆ. ದಕ್ಷಿಣದ ಕಡೆಗೆ ಹೋದ ಹಾಗೆಲ್ಲ ಇವು ಸಮಶೀತೋಷ್ಣ ವಲಯದ ಕಾಡುಗಳಾಗಿ ಪರಿವರ್ತಿತವಾಗುತ್ತವೆ. ಈ ಕಾಡುಗಳಲ್ಲಿ ಮರಗಳ ಮಧ್ಯೆ ಬೆಳೆಯುವ ಕುರುಚಲು ಮುಂತಾದ ಸಸ್ಯಗಳಿಲ್ಲ.
೪೨,೬೭೧

edits

"https://kn.wikipedia.org/wiki/ವಿಶೇಷ:MobileDiff/719236" ಇಂದ ಪಡೆಯಲ್ಪಟ್ಟಿದೆ

ಸಂಚರಣೆ ಪಟ್ಟಿ