"ಸುಮಿತ್ರಾ" ಆವೃತ್ತಿಗಳ ಮಧ್ಯದ ಬದಲಾವಣೆಗಳು

Jump to navigation Jump to search
 
==ವೃತ್ತಿ ಜೀವನ==
೧೯೭೨ರಲ್ಲಿ ತೆರೆಗೆ ಬಂದ ಮಲಯಾಳಂ ಚಿತ್ರ '''ನಿರ್ತನಸಾಲ'''ದ ಮೂಲಕ ಚಿತ್ರರಂಗ ಪ್ರವೇಶಿಸಿದ ಸುಮಿತ್ರಾ ನಾಯಕಿಯಾಗಿ ಅಭಿನಯಿಸಿದ ಮೊದಲ ಚಿತ್ರ ಮಲಯಾಳಂನ '''ನಿರ್ಮಾಲ್ಯಂ'''(೧೯೭೩). ಪ್ರಖ್ಯಾತ ಸಾಹಿತಿ '''[[ಎಂ.ಟಿ.ವಾಸುದೇವನ್ ನಾಯರ್]]''' ಅವರು ತಮ್ಮ ಕಿರುಗಥೆಯನ್ನು ಆಧರಿಸಿ ನಿರ್ಮಿಸಿ ನಿರ್ದೇಶಿಸಿದ ಈ ಹೊಸ ಅಲೆಯ ಚಿತ್ರದಲ್ಲಿ ಸುಮಿತ್ರಾ ನೀಡಿದ ಉತ್ತಮ ನೈಜ ಅಭಿನಯ ಚಿತ್ರಪಂಡಿತರ ಗಮನ ಸೆಳೆಯಿತು. ಈ ಚಿತ್ರ ೧೯೭೩ನೇ ಸಾಲಿನ ಅತ್ತ್ಯುತ್ತಮ ಚಿತ್ರ ರಾಷ್ಟ್ರೀಯ ಪ್ರಶಸ್ತಿಗೆ ಭಾಜನವಾಗಿತ್ತು<ref name="B. VIJAYAKUMAR">{{cite web|title=ನಿರ್ಮಾಲ್ಯಂ-೧೯೭೩|url=http://www.thehindu.com/features/metroplus/nirmalyam-1973/article2482063.ece|publisher=ದಿ ಹಿಂದು}}</ref>. ಸುಮಿತ್ರಾ ಅಭಿನಯದ ಮೊದಲ ತಮಿಳು ಚಿತ್ರ '''ಅವಳುಂ ಪೆಣ್ ದಾನೆ'''(೧೯೭೪). ಕೆಟ್ಟ ಸನ್ನಿವೇಶಕ್ಕೆ ಸಿಲುಕಿ ವೇಶ್ಯೆಯಾಗುವ ಯುವತಿಯೊಬ್ಬಳು ಸಹೃದಯಿ ನಾಯಕನನ್ನು ವಿವಾಹವಾಗಿ ಪ್ರಜ್ಞಾಪೂರ್ವಕ ಜೀವನ ನಡೆಸಿದರೂ ಸಮಾಜದಲ್ಲಿನ ಕುತ್ಸಿತ ಮನೋಭಾವ ಜನರ ಕುಹಕದ ಮಾತುಗಳಿಗೆ ಬೇಸತ್ತು ಬಲಿಯಾಗುವ ದುರಂತ ಕಥಾನಕವಿದ್ದ ಈ ಚಿತ್ರದಲ್ಲಿ ವೇಶ್ಯೆಯಾಗಿ ಅವಿಸ್ಮರಣೀಯ ಅಭಿನಯ ನೀಡಿದ ಸುಮಿತ್ರಾ ತಮಿಳು ಚಿತ್ರರಂಗದಲ್ಲಿ ಬೇಡಿಕೆಯ ನಟಿಯಾದರು. '''[[ಶಿವಾಜಿ ಗಣೇಶನ್]]''' ನಾಯಕರಾಗಿ ಅಭಿನಯಿಸಿದ '''ಅಣ್ಣನ್ ಒರು ಕೋಯಿಲ್'''(೧೯೭೭) ಚಿತ್ರದಲ್ಲಿ ಅತ್ಯಾಚಾರಕ್ಕೊಳಗಾಗಿ ಆಘಾತದಿಂದ ತನ್ನ ಹಳೆಯ ನೆನಪುಗಳನ್ನು ಕಳೆದುಕೊಂಡ ಹುಡುಗಿಯಾಗಿ, '''[[ರಜನೀಕಾಂತ್]]''' ಮತ್ತು '''[[ಶಿವಕುಮಾರ್]]''' ಅವರೊಂದಿಗಿನ '''ಭುವನ ಒರು ಕೇಳ್ವಿಕುರಿ'''(೧೯೭೭) ಎಂಬ ಸಾಮಾಜಿಕ ಚಿತ್ರದಲ್ಲಿ ಲಂಪಟನೊಬ್ಬನಿಂದ ಅನ್ಯಾಯಕ್ಕೊಳಗಾಗಿ, ನಾಯಕನ ನೆರವಿನಿಂದ ಹೊಸ ಜೀವನ ಕಂಡುಕೊಳ್ಳುವ ಹುಡುಗಿಯಾಗಿ ಸುಮಿತ್ರಾ ಅವರ ಅಭಿನಯ ಅಮೋಘ. ಈ ಎರಡೂ ಚಿತ್ರಗಳು ಗಲ್ಲಾಪೆಟ್ಟಿಗೆಯಲ್ಲಿ ಭಾರಿ ಯಶಸ್ಸು ಗಳಿಸಿದವು. ಆ ನಂತರದಲ್ಲಿ '''ಇವಳ್ ಒರು ಸೀತೈ'''(೧೯೭೮), '''ವಟತುಕ್ಕುಳ್ ಚದುರಂ'''(೧೯೭೮), '''ಮಚ್ಚಾನೈ ಪಾರ್ತೆಂಗಳ'''(೧೯೭೮) ಮುಂತಾದ ಚಿತ್ರಗಳಲ್ಲಿ ಪ್ರಭಾವಶಾಲಿ ಪಾತ್ರಗಳನ್ನು ಶಕ್ತವಾಗಿ ನಿರ್ವಹಿಸಿದ ಸುಮಿತ್ರಾ '''[[ಕೆ.ಬಾಲಚಂದರ್]]''' ಅವರ '''[[ಕಮಲ್ ಹಾಸನ್]]''' ನಾಯಕರಾಗಿ ಅಭಿನಯಿಸಿದ '''ನಿಳಲ್ ನಿಜಮಾಗಿರದು'''(೧೯೭೮) ಚಿತ್ರದಲ್ಲಿ ಪುರುಷ ದ್ವೇಷಿ ಸ್ವಾಭಿಮಾನಿ ಯುವತಿಯಾಗಿ ಶ್ಲಾಘನೀಯ ಅಭಿನಯ ನೀಡಿದ್ದಾರೆ.
 
ಸುಮಿತ್ರಾ ದಕ್ಷಿಣ ಭಾರತದ ಪ್ರಖ್ಯಾತ ನಟರಾದ '''ಶಿವಾಜಿ ಗಣೇಶನ್''', '''ಪ್ರೇಮ್ ನಜೀರ್''', '''ಮಧು''', '''[[ರಜನೀಕಾಂತ್]]''', '''[[ಕಮಲ್ ಹಾಸನ್]]''', '''[[ವಿಷ್ಣುವರ್ಧನ್]]''', '''[[ರಾಜೇಶ್]]''', '''ಶಿವಕುಮಾರ್''', '''ವಿಜಯಕುಮಾರ್''', '''ಸುಕುಮಾರನ್''' ಮತ್ತು '''ಎಂ.ಜಿ.ಸೋಮನ್''' ಮುಂತಾದವರೊಂದಿಗೆ ನಟಿಸಿದ್ದಾರೆ.
೧,೩೬೭

edits

"https://kn.wikipedia.org/wiki/ವಿಶೇಷ:MobileDiff/717318" ಇಂದ ಪಡೆಯಲ್ಪಟ್ಟಿದೆ

ಸಂಚರಣೆ ಪಟ್ಟಿ