"ಆಸ್ಟ್ರೇಲಿಯ" ಆವೃತ್ತಿಗಳ ಮಧ್ಯದ ಬದಲಾವಣೆಗಳು

Jump to navigation Jump to search
ಚು
Wikipedia python library
ಚು (Wikipedia python library)
ಈ ಖಂಡದಲ್ಲಿ ಬೇರೆಲ್ಲೂ ಇಲ್ಲದ ವಿಚಿತ್ರ ಪ್ರಾಣಿಗಳನ್ನು ಕಾಣಬಹುದು. ಕೆಲವು ಮನುಷ್ಯ ಹುಟ್ಟುವುದಕ್ಕೆ ಮುಂಚೆ ಇಲ್ಲಿ ಇದ್ದುವು.
ಸರೀಸೃಪಗಳು ಮತ್ತು ವಿಷಪೂರಿತ ಹಾವುಗಳು ಸಾಮಾನ್ಯವಾಗಿವೆ. ಪ್ಲಾಟಿಪಸ್ ಎನ್ನುವ ಸಸ್ತನಿ ಮೊಟ್ಟೆಗಳನ್ನಿಡುತ್ತದೆ ಮತ್ತು ಮರಿಗಳಿಗೆ ಮೊಲೆಯುಣಿಸುತ್ತದೆ. ಇದರ ಮೂತಿ ಬಾತಿನ ಕೊಕ್ಕಿನಂತಿದೆ. ಮೈತುಂಬ ತುಪ್ಪಳ ಚರ್ಮದ ಹೊದಿಕೆ ಇದೆ. ಮಾಸೂರ್ಯಪಿಯಲ್ ಎಂಬ ಇನ್ನೊಂದು ಸಸ್ತನಿ ಅರೆಬೆಳೆದ ಮರಿಗಳನ್ನು ಹಡೆದು ಅನಂತರ ಅವನ್ನು ತನ್ನ ಹೊಟ್ಟೆಯ ಹೊರ ಚೀಲದಲ್ಲಿಟ್ಟುಕೊಂಡು ಬೆಳೆಸುತ್ತದೆ. ಕಾಂಗರೂ, ಒಪ್ಪೋಸಂ ಇದೇ ರೀತಿಯ ಪ್ರಾಣಿಗಳು. ಕಾಂಗರೂ ಗಂಟೆಗೆ 32 ಕಿಮೀ ವೇಗದಲ್ಲಿ ಓಡುತ್ತದೆ. ಈಮೂ ಎಂಬುದು ಇಲ್ಲಿನ ಪಕ್ಷಿಗಳಲ್ಲೆಲ್ಲ ದೊಡ್ಡದಾದುದು. ಲೈರ್ ಎಂಬ ನವಿಲಿನಂತಿರುವ ಸೊಗಸಾದ ಪಕ್ಷಿ ಇತರ ಧ್ವನಿಗಳನ್ನು ಬಹಳ ಚೆನ್ನಾಗಿ ಅನುಕರಿಸುತ್ತದೆ. ಡಿಂಗೊ ಎಂಬ ಕಾಡು ನಾಯಿ ನೋಡಲು ತೋಳದಂತಿದೆ. ವಲ್ಲಬಿ, ನೊಣಗಳನ್ನು ತಿನ್ನುವ ಎಕಿಡ್ನ, ಮರ ಹತ್ತುವ ಸಣ್ಣ ಆಕಾರದ ಕರಡಿ ಕೋಆಲ-ಇತ್ಯಾದಿ ಪ್ರಾಣಿಗಳು ಆಸ್ಟ್ರೇಲಿಯದ ರಕ್ಷಿತ ಕಾಡುಗಳಲ್ಲಿ ವಾಸಿಸುತ್ತವೆ. ಗಿಣಿ, ಉಷ್ಟ್ರಪಕ್ಷಿ, ಕ್ಯಾಸ್ಸೋವರಿ ಮತ್ತು ಇತರ ಬಗೆಯ ಪಕ್ಷಿಗಳೂ ಇಲ್ಲಿವೆ.
 
==ವ್ಯವಸಾಯ==
ಆಸ್ಟ್ರೇಲಿಯದಲ್ಲಿ ವ್ಯವಸಾಯಯೋಗ್ಯವಾದ ಭೂಮಿ ಬಹಳ ಕಡಿಮೆ. ಒಟ್ಟು ಭೌಗೋಳಿಕ ಪ್ರದೇಶದಲ್ಲಿ ಶೇ.15 ಭಾಗ ಮಾತ್ರ ಕೃಷಿಗೆ ಯೋಗ್ಯ. ಸಮುದ್ರತೀರ ಮತ್ತು ನದಿ ಮೈದಾನಗಳಲ್ಲಿ ಮಾತ್ರ ವ್ಯವಸಾಯವಿದೆ. ಖಂಡದಲ್ಲಿ ಬಿಳಿಯ ಜನ ಹೆಚ್ಚಾಗಿ ಇರುವುದರಿಂದ ಸಮಶೀತೋಷ್ಣವಲಯದ ಬೆಳೆಗಳು ಹೆಚ್ಚಾಗಿ ಅಭಿವೃದ್ಧಿ ಹೊಂದಿವೆ. ಮುಖ್ಯಬೆಳೆ ಗೋದಿ, ಓಟ್ಸ್, ಕಬ್ಬು, ಬಾರ್ಲಿ, ಜೋಳ, ಆಲೂಗೆಡ್ಡೆ ಹಾಗೂ ಪ್ರಮುಖ ಹಣ್ಣುಗಳಾದ [[ದ್ರಾಕ್ಷಿ]],[[ಸೇಬು]], ಏಪ್ರಿಕಾಟ್, [[ಬಾಳೆ]], ಕಿತ್ತಳೆ, ಪೀಚ್, ಪೇರು ಮತ್ತು ಪ್ಲಮ್. ಬೆಟ್ಟಗುಡ್ಡಗಳ ಮೇಲೆ ಬಿದ್ದ ಮಳೆಯ ನೀರು ನೆಲದಲ್ಲಿ ಇಳಿದು ಭೂಮಿಯ ಪದರಗಳಲ್ಲಿ ಹರಿಯುತ್ತಿರುತ್ತದೆ. ಅಂಥ ಪ್ರದೇಶದಲ್ಲಿ ಬಾವಿಯನ್ನು ತೆಗೆದರೆ ನೀರು ಬುಗ್ಗೆಯಂತೆ ಚಿಮ್ಮುತ್ತದೆ. ಇದೇ [[ಆರ್ಟೀಸಿಯನ್ ಬಾವಿ]]. ಇವನ್ನು ಬೇರೆ ಬೇರೆ ಗುಂಪುಗಳಾಗಿ ವಿಭಾಗಿಸಿದ್ದಾರೆ. ಮಧ್ಯದ ತಗ್ಗುಬಯಲು ಗಳಲ್ಲಿರುವ ಗ್ರೇಟ್ ಆರ್ಟೀಸಿಯನ್ ಬಯಲು; ಮರೆ ಬಯಲು, ದಕ್ಷಿಣದಲ್ಲಿ ಯೂಕ್ಲ ಬಯಲು; ಪಶ್ಚಿಮದ ಪೀಠಭೂಮಿಯಲ್ಲಿ ಪರ್ತ್ ಬಯಲು, ವಾಯವ್ಯ ಬಯಲು, ಮರುಭೂಮಿ ಬಯಲುಗಳು-ಇವು ಮುಖ್ಯವಾದ ಆರ್ಟೀಸಿಯನ್ ಬಾವಿ ಗುಂಪುಗಳು. ಈ ಬಾವಿಗಳು ನೀರಿಲ್ಲದ ಪ್ರದೇಶಗಳನ್ನು ಫಲವತ್ತಾದ ಭೂಮಿಯನ್ನಾಗಿ ಮಾಡಿ, ದನಕರುಗಳಿಗೆ ಮತ್ತು ವ್ಯವಸಾಯಕ್ಕೆ ನೀರನ್ನು ಒದಗಿಸುತ್ತವೆ.
ಆಸ್ಟ್ರೇಲಿಯದ ಭೂ ಪರಿಶೋಧನೆ ಪ್ರಾರಂಭವಾದದ್ದು 1788 ರಲ್ಲಿ, ನ್ಯೂ ಸೌತ್ವೇಲ್ಸ್ ವಸಾಹತು ಸ್ಥಾಪನೆಯಾದ ಅನಂತರ, ಬೇರೆ ದೇಶಗಳಲ್ಲಿ ನಡೆದಂತೆ ಪರಿಶೋಧನೆ ಕೆಲಸ ಉತ್ತರ ಮತ್ತು ಪಶ್ಚಿಮ ತೀರಪ್ರಾಂತ್ಯಗಳಿಂದ ಪ್ರಾರಂಭವಾಗಿ ಪೂರ್ವದ ಮತ್ತು ದಕ್ಷಿಣದ ಪ್ರದೇಶಗಳಿಗೆ ಹರಡುವುದರ ಬದಲು ಆಗ್ನೇಯ ಭಾಗದಿಂದ ಪಶ್ಚಿಮ ಮತ್ತು ಉತ್ತರದ ಪ್ರಾಂತ್ಯಗಳಿಗೆ ಹರಡಿದ್ದು ಆಸ್ಟ್ರೇಲಿಯದ ವೈಶಿಷ್ಟ್ಯ. ಇದಕ್ಕೆ ಕಾರಣ, ಈ ಆಗ್ನೇಯ ಭಾಗ ಹಿತಕರ ವಾಯುಗುಣವನ್ನು ಹೊಂದಿರುವುದು ಮತ್ತು ಪಶ್ಚಿಮ ಭಾಗಗಳು ಹೆಚ್ಚಾಗಿ ಮರಳುಗಾಡು ಪ್ರದೇಶವಾಗಿರುವುದು. 1788ಕ್ಕೆ ಮುಂಚೆಯೇ ಚಿನ್ನ ದೊರಕಬಹುದೆಂಬ ಆಸೆಯಿಂದ ಅನೇಕ ಸಾಹಸಿಗರು ಬಂದು ಹೋಗಿದ್ದರು. ವ್ಯವಸ್ಥಿತವಾದ ವಸಾಹತು ಸ್ಥಾಪನೆ ಆದದ್ದು 1788ರಲ್ಲಿ ಆರ್ಥರ್ ಫಿಲಿಪ್ ಎಂಬ ಬ್ರಿಟಿಷ್ ಅಧಿಕಾರಿ 759 ಕೈದಿಗಳೊಡನೆ ಪೋರ್ಟ್ ಜಾಕ್ಸನ್ ಎಂಬಲ್ಲಿ ಬಂದಿಳಿದಾಗ, ಇವರು ವ್ಯವಸಾಯಯೋಗ್ಯವಾದ ಭೂಮಿಯನ್ನು ಹುಡುಕುತ್ತ ತಿರುಗಿದರು. ಪಶ್ಚಿಮಕ್ಕೆ ಬ್ಲೂಮೌಂಟನ್ ತಲಪಿ ತಪ್ಪಲಿನಲ್ಲಿ ನೆಲಸುನಾಡನ್ನು ನಿರ್ಮಿಸಿಕೊಂಡರು. ಅಲ್ಲಿಯ ತನಕ ರಸ್ತೆಯೂ ನಿರ್ಮಿತವಾಯಿತು. ಈ ಪರ್ವತವನ್ನು ದಾಟಿ ಪಶ್ಚಿಮಕ್ಕೆ ಹರಡಿದ್ದ ನದೀಬಯಲು ಪ್ರದೇಶವನ್ನು ಕಂಡುಹಿಡಿಯಲು ಸ್ವಲ್ಪ ಕಾಲ ಬೇಕಾಯಿತು. ಮುಂದೆ ಪಶ್ಚಿಮದ ತಪ್ಪಲಿನಲ್ಲೂ ವಸತಿಗಳು ಸ್ಥಾಪಿತವಾದುವು. ಇನ್ನೂ ಪಶ್ಚಿಮಕ್ಕೆ ಜೌಗುಪ್ರದೇಶವಿರುವುದೆಂದು ಆಕ್ಸ್ಲಿ ಎಂಬಾತ ತಿಳಿಸಿದ ಮೇಲೆ, ತಮಗೆ ನೈರುತ್ಯಕ್ಕಿದ್ದ ಪ್ರಾಂತ್ಯದಲ್ಲಿ ಪರಿಶೋಧನೆ ನಡೆಸಿದರು. ಸ್ನೋಯಿ ಮೌಂಟನ್ಗಳವರೆಗೂ ಅವರ ಪರಿಶೋಧನೆ ಸಾಗಿತು. 1824ರಲ್ಲಿ ಮರೆನದಿಯನ್ನು ಗುರುತಿಸಿದರು. ದಕ್ಷಿಣ ತೀರದ ಪೋರ್ಟ್ ಫಿಲಿಪ್ಗೆ ಮಾರ್ಗವನ್ನು ಕಂಡುಹಿಡಿದರು. ಉತ್ತರದ ಬಯಲುಪ್ರದೇಶದ ಸಂಶೋಧನೆಯೂ ಸಾಗಿತ್ತು. 1827ರಲ್ಲಿ ಕನ್ನಿಂಗ್ಹ್ಯಾಂ ಎಂಬಾತ ಡಾರ್ಲಿಂಗ್ ನದಿಯ ವಿಶಾಲವಾದಬಯಲು ಮೇಡು ಪ್ರದೇಶವನ್ನು ಕಂಡುಹಿಡಿದ. ಹೀಗೆ ಆಸ್ಟ್ರೇಲಿಯದ ಆಗ್ನೇಯ ಭಾಗವೆಲ್ಲ ಪರಿಶೋಧಿಸಲ್ಪಟ್ಟಿತು, ಮೆಲ್ಬರ್ನ್ನಿಂದ ಬ್ರಿಸ್ಬೇನ್ವರೆಗು ಸಂಶೋಧಕರಿಗೆ ಈ ಕಾಲದಲ್ಲಿ ಪರಿಶೋಧನೆಯ ಹುಚ್ಚೇ ಹಿಡಿದಿತ್ತೆನ್ನ ಬಹುದು. ಮುಂದೆ ಖಂಡದ ಮಧ್ಯ ಮತ್ತು ಉತ್ತರದ ಪ್ರದೇಶಗಳು ಅವರ ಗಮನವನ್ನು ಸೆಳೆದುವು. ದಕ್ಷಿಣ ಮತ್ತು ಪಶ್ಚಿಮ ಆಸ್ಟ್ರೇಲಿಯಗಳಿಗೆ ಸಂಪರ್ಕವನ್ನುಂಟುಮಾಡುವ ಭೂಮಾರ್ಗವನ್ನು ಕಂಡುಹಿಡಿಯಲು ಹೊರಟ ಟಾರೆನ್ಸ್ ಎಂಬಾತ 2080 ಕಿಮೀ ದೂರ ನೀರೇ ಸಿಗದ ಮರಳುಗಾಡಿನಲ್ಲಿ ಅಲೆಯಬೇಕಾಯಿತು. ಲೀಚ್ಹಾರ್ಟ್ ಎಂಬಾತ ಉತ್ತರದಲ್ಲಿ ಕ್ವೀನ್ಸ್ ಲೆಂಡ್ನಿಂದ ಅರ್ನ್ಹೆಂಲ್ಯಾಂಡ್ವರೆಗೂ ಹೋಗಿ ಭೂಮಾರ್ಗವನ್ನು ಕಂಡುಹಿಡಿದಿದ್ದಲ್ಲದೆ ಕಾರ್ಪೆಂಟೇರಿಯ ಕೊಲ್ಲಿಗೆ ಹರಿಯುವ ನದಿಗಳನ್ನೂ ಗುರುತಿಸಿದ.
1859-70ರವರೆಗಿನ ಅವಧಿಯಲ್ಲಿ ಚಿನ್ನದ ನಿಕ್ಷೇಪಗಳು ಆಸ್ಟ್ರೇಲಿಯದಲ್ಲಿವೆಯೆಂದು ತಿಳಿದಮೇಲೆ, ಅನೇಕ ಪರಿಶೋಧಕರ ಗಮನ ಇವುಗಳ ಕಡೆ ತಿರುಗಿತು. 1853-56ರವರೆಗೆ ಯುರೋಪಿನಲ್ಲಿ ನಡೆದ [[ಕ್ರಿಮಿಯ ಯುದ್ಧ]]ವೂ ಅನೇಕರನ್ನು ಯುರೋಪಿಗೆ ಸೆಳೆಯಿತು. ಗಂಗಾನದಿಯಂಥ ದೊಡ್ಡ ನದಿಯೊಂದು ಆಸ್ಟ್ರೇಲಿಯದ ವಾಯವ್ಯ ಪ್ರಾಂತ್ಯದಲ್ಲಿದೆಯೆಂದು ಆಗ ಅನೇಕರ ಭಾವನೆಯಾಗಿತ್ತು. ಅದರ ಪರಿಶೋಧನೆಗಾಗಿ ಸರ್ಕಾರ ಅಪಾರ ಹಣ ವೆಚ್ಚಮಾಡಿತು. ಕೊನೆಗೆ ಆ ಪ್ರಾಂತ್ಯದಲ್ಲಿ ಅಂಥ ದೊಡ್ಡ ನದಿಯಿಲ್ಲವೆಂಬುದು ಖಚಿತವಾದರೂ ಅಲ್ಲಿ ಅತ್ಯಂತ ಉಪಯುಕ್ತವಾದ ಕಿಂಬರ್ಲಿ ಹುಲ್ಲುಗಾವಲುಗಳನ್ನು ಕಂಡುಹಿಡಿದಂತಾಯಿತು. 1861ರಲ್ಲಿ ಸ್ಟೂ ಆರ್ಟ್ ಎಂಬಾತ ಅತ್ಯಂತ ಪ್ರಯಾಸದಿಂದ ಅಡಿಲೇಡ್ನಿಂದ ಅರ್ನ್ಹೆಂಲ್ಯಾಂಡ್ಗೆ ಮಧ್ಯಭಾಗದ ಮೂಲಕ ಹೋಗುವ ಮಾರ್ಗವನ್ನು ಕಂಡುಹಿಡಿದ. 1871-1939ರ ಅವಧಿಯಲ್ಲಿ ಖಂಡದ ಪಶ್ಚಿಮ ಭಾಗದ ಮಧ್ಯದಲ್ಲಿರುವ ವಿಶಾಲ ಮರುಭೂಮಿಯ ಪರಿಶೋಧನೆ ನಡೆದು, ಅದರ ಮೂಲಕ ಟೆಲಿಗ್ರಾಫ್ ತಂತಿ ಮಾರ್ಗವನ್ನು ನಿರ್ಮಿಸಲನುಕೂಲವಾಯಿತು.
 
==ವಸಾಹತುಗಳು==
1788ರಲ್ಲಿ ಕೆಲವು ಬ್ರಿಟಿಷ್ ಕೈದಿಗಳನ್ನು ಪೋರ್ಟ್ ಜಾಕ್ಸನ್ಗೆ (ಇಂದಿನ ಸಿಡ್ನಿ) ಕರೆತಂದು ಶಿಕ್ಷೆಯನ್ನನುಭವಿಸಲು ಬಿಟ್ಟಾಗಿನಿಂದ ವಸಾಹತುಗಳ ಸ್ಥಾಪನೆಯ ಕೆಲಸ ಪ್ರಾರಂಭವಾಯಿತೆನ್ನಬಹುದು. ಈ ಕೈದಿಗಳೊಂದಿಗೆ, ಅವರನ್ನು ನೋಡಿಕೊಳ್ಳಲು ಅನೇಕ ಬ್ರಿಟಿಷ್ ಅಧಿಕಾರಿಗಳೂ ಸಿಬ್ಬಂದಿಯವರೂ ಬಂದು ನಿಲ್ಲಬೇಕಾಯಿತು. ಕೈದಿಗಳನ್ನು ಮತ್ತೆ ಮತ್ತೆ ಇಲ್ಲಿಗೆ ತರತೊಡಗಿದ ಮೇಲೆ ಇಲ್ಲಿನ ಜನಸಂಖ್ಯೆ ಬೆಳೆಯುತ್ತ ಬಂತು. ಈ ಪದ್ಧತಿಯನ್ನು ನಿಲ್ಲಿಸಿದ್ದು 50 ವರ್ಷಗಳ ಮೇಲೆ. ಅಷ್ಟುಹೊತ್ತಿಗೆ 1,61,000 ಕೈದಿಗಳನ್ನು ತಂದಿದ್ದರು. ಅವರೊಂದಿಗೆ ಸ್ವತಂತ್ರ ನೆಲೆಸಿಗರೂ ಅಧಿಕಸಂಖ್ಯೆಯಲ್ಲಿ ಬಂದರು; ಇವರು ಜೀವನಾನುಕೂಲಗಳನ್ನು ಕಲ್ಪಿಸಿಕೊಳ್ಳುವುದಕ್ಕಾಗಿ ಮಾಡಿದ ಪ್ರಯತ್ನಗಳಿಂದ ದೇಶದ ಆರ್ಥಿಕ ಬೆಳೆವಣಿಗೆಗೆ ಅವಕಾಶವಾಯಿತು. ಖಂಡದ ನಾನಾ ಕಡೆ ಪುನಃ ಪರಿಶೋಧನೆ ನಡೆಯಿತು; ಜನ ಅನುಕೂಲಸ್ಥಳಗಳಲ್ಲಿ ನೆಲೆನಿಂತರು. 6 ವಸಾಹತುಗಳು ನಿರ್ಮಿತವಾದುವು; ನ್ಯೂ ಸೌತ್ವೇಲ್ಸ್ (1766), ವಾನ್ ಡೀಮನ್ಸ್ ಲ್ಯಾಂಡ್ (1825) (1835ರಿಂದ ಟಾಸ್ಮೇನಿಯ), ವೆಸ್ಟರ್ನ್ ಆಸ್ಟ್ರೇಲಿಯ (1829), ಸೌತ್ ಆಸ್ಟ್ರೇಲಿಯ (1834), ವಿಕ್ಟೋರಿಯ (1851), ಕ್ವೀನ್ಸ್ ಲೆಂಡ್ (1859) ಉತ್ತರ ಪ್ರಾಂತ್ಯ (1961). ಜನಸಂಖ್ಯೆ 1820ರಲ್ಲಿ 34,000 ಇದ್ದದ್ದು 1850ರಲ್ಲಿ 4,05,000ಕ್ಕೆ ಏರಿತು. ಈ ಪ್ರಾಂತ್ಯಗಳು ತಮ್ಮದೇ ಆದ ಪ್ರತಿನಿಧಿ ಸರಕಾರವನ್ನು ಹೊಂದಿ ಸ್ವತಂತ್ರವಾಗಿದ್ದುವು. 1991ರಲ್ಲಿ ಅವೆಲ್ಲ ಒಟ್ಟುಗೂಡಿ ಕಾಮನ್ವೆಲ್ತ್ ವ್ಯವಸ್ಥೆಯನ್ನು ನಿರ್ಮಿಸಿಕೊಂಡುವು.
19ನೆಯ ಶತಮಾನದ ಮಧ್ಯಭಾಗದಲ್ಲಿ ಬ್ರಿಟಿಷರು ಅಲ್ಲಿಯ ಚಿನ್ನದ ಗಣಿಗಳನ್ನು ಪತ್ತೆ ಹಚ್ಚಲು ತೊಡಗಿದಾಗ ಅನೇಕ ಸಾಹಸಮಯ ಕಥೆಗಳು ಸೃಷ್ಟಿಯಾದುವು. ಅನಂತರ ಸಾಹಿತ್ಯ ಒಂದು ನಿರ್ದಿಷ್ಟ ದಾರಿಯನ್ನು ಹಿಡಿದು ನಡೆಯಿತು. ಹೆಚ್ಚು ಹೆಚ್ಚು ಕಥೆ ಕಾದಂಬರಿಗಳು ಬರತೊಡಗಿದುವು. ಜೊತೆಜೊತೆಗೆ ವಿಜ್ಞಾನ, ತತ್ತ್ವಚರಿತ್ರೆ, ಅರ್ಥಶಾಸ್ತ್ರ ಮುಂತಾದವುಗಳ ಮೇಲೂ ಸಾಹಿತ್ಯ ನಿರ್ಮಾಣವಾಯಿತು. 1920ರಲ್ಲಿ ಸಿಡ್ನಿ ಲೇಖಕರ ಒಂದು ತಂಡವೇ ಸೃಷ್ಟಿಯಾಯಿತು. ಅವರ ದೃಷ್ಟಿ ಹಾಗೂ ಸಾಹಿತ್ಯಸೃಷ್ಟಿ ಸುಖಜೀವನದ ನಾನಾ ಮುಖಗಳನ್ನು ಚಿತ್ರಿಸುವುದೇ ಆಯಿತು. ಅನಂತರ ಸಾಕಷ್ಟು ನವ್ಯಸಾಹಿತ್ಯ ಸೃಷ್ಟಿಯಾಯಿತು. 1967ರಲ್ಲಿ ಆಸ್ಟ್ರೇಲಿಯದ ಪ್ರಾತಿನಿಧಿಕ ಸಣ್ಣ ಕಥೆಗಳ ಒಂದು ಬೃಹತ್ ಸಂಪುಟ ಪ್ರಕಟವಾಯಿತು.
1900ರಿಂದ ರಾಜಕೀಯದಲ್ಲಿನಂತೆಯೇ ಸಾಹಿತ್ಯಕ್ಷೇತ್ರದಲ್ಲೂ ಬುಲೆಟಿನ್ (ಸ್ಥಾಪನೆ 1880) ಎಂಬ ವಾರಪತ್ರಿಕೆ ಪ್ರಮುಖ ಪಾತ್ರ ವಹಿಸಿತು. ಅಂದಿನ ಕಥೆ ಮತ್ತು ಕವನಗಳ ಕ್ಷೇತ್ರ ವಿಸ್ತಾರವಾಗಲು ಸಹಕರಿಸಿತು. ಅಂದಿನ ಹಳ್ಳಿಗಾಡು ಜೀವನದ ನೈಜಸ್ವರೂಪವನ್ನು ತೋರುವ ಮತ್ತು ಜಾನಪದದಲ್ಲಿ ಬಳಕೆಯಲ್ಲಿದ್ದ ಅನೇಕ ಕಥೆಗಳು ಈ ಪತ್ರಿಕೆಯಲ್ಲಿ ಪ್ರಕಟವಾದುವು. ಆಸ್ಟ್ರೇಲಿಯದ ಅನೇಕ ಪ್ರಮುಖ ಕಾದಂಬರಿಗಳು ಧಾರಾವಾಹಿಯಾಗಿ ಈ ಪತ್ರಿಕೆಯ ಮೂಲಕ ಜನರ ಕೈ ಸೇರಿದವು. ಇಂದಿಗೂ ಈ ಪತ್ರಿಕೆ ಜನಜೀವನದಲ್ಲಿ ತನ್ನದೇ ಆದ ಪ್ರಭಾವವನ್ನು ಹೊಂದಿದೆ.
 
[[ವರ್ಗ:ಒಷ್ಯಾನಿಯದ ದೇಶಗಳು]]
೫,೧೫೦

edits

"https://kn.wikipedia.org/wiki/ವಿಶೇಷ:MobileDiff/715229" ಇಂದ ಪಡೆಯಲ್ಪಟ್ಟಿದೆ

ಸಂಚರಣೆ ಪಟ್ಟಿ