ಟೆಂಪ್ಲೇಟು:ಈ ತಿಂಗಳ ವಿಕಿಪೀಡಿಯ ಸಂಪಾದಕ: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
No edit summary
( ಯಾವುದೇ ವ್ಯತ್ಯಾಸವಿಲ್ಲ )

೧೪:೧೫, ೯ ಜೂನ್ ೨೦೧೬ ನಂತೆ ಪರಿಷ್ಕರಣೆ

ಈ ತಿಂಗಳ ವಿಕಿಪೀಡಿಯನ್
ಹೊಳಲ್ಕೆರೆ ರಂಗರಾವ್ ಲಕ್ಷ್ಮೀವೆಂಕಟೇಷ್
ಹೊಳಲ್ಕೆರೆ ರಂಗರಾವ್ ಲಕ್ಷ್ಮೀವೆಂಕಟೇಷ್

ಹೊಳಲ್ಕೆರೆ ರಂಗರಾವ್ ಲಕ್ಷ್ಮೀವೆಂಕಟೇಷ್ ಅವರು ೨೦೦೫ ರಿಂದ ಇಂಟರ್ನೆಟ್‍ನಲ್ಲಿ Radhatanaya ಎಂಬ ಹೆಸರಿನಲ್ಲಿ ಬರೆಯಲು ಪ್ರಾರಂಭಿಸಿ ಹಾಗೆಯೇ ಮುಂದೆ, ವಿಕಿಪೀಡಿಯದಲ್ಲೂ ಸಹಿತ. ರಾಧಾತನಯ ಎಂಬ ಹೆಸರಿನಲ್ಲಿಯೇ ಸುಮಾರು ೭೬೫ ಲೇಖನಗಳನ್ನು ಬರೆದು ಪ್ರಕಟಿಸಿದ್ದಾರೆ. ಅದರಲ್ಲಿ ಮೊಟ್ಟ ಮೊದಲನೆಯದಾಗಿ ಬರೆದದ್ದು ಅವರ ತಾಯಿಯ ಬಗ್ಗೆ. ಅಂದರೆ, ರಾಧಮ್ಮನವರ ಬಗ್ಗೆ. ಈ ವರೆಗೆ ಇವರು ಸುಮಾರು ೧೭೪೪೧ ಗಳಷ್ಟು ಸಂಪಾದನೆ ಹಾಗೂ ೨೫೯ಎಂಬಿಗಳಷ್ಟು ವಿಷಯಗಳನ್ನು ಸೇರಿಸಿದ್ದಾರೆ.

ಅವರು ಇತ್ತೀಚೆಗೆ ಬರೆದ ಲೇಖನಗಳ ಪಟ್ಟಿ ಹೀಗಿದೆ ಸುಕನ್ಯಾಪ್ರಭಾಕರ್, ಪಾರ್ಸೀಗಳು, ಮುಂಬೈನ ಸುಪ್ರಸಿದ್ದ ಆಸ್ಪತ್ರೆಗಳು, ಪ್ರವಾಸ ತಾಣಗಳು, ಆಗಿನ ಪ್ರಮುಖವ್ಯಕ್ತಿಗಳು, ಶಂಕರಲಿಂಗ ಭಗವಾನರು, ಗುಬ್ಬಿ ಚಿದಂಬರ ಸ್ವಾಮಿಗಳು, ಮತ್ತು ಇತ್ಯಾದಿ. ಎಲ್ಲಾ ವರ್ಗದ ಕನ್ನಡದವರು, ಹಾಗೂ ಕನ್ನಡೇತರ ಭಾರತೀಯರ ಬಗ್ಗೆ ಅವರು ಬರೆದಿದ್ದಾರೆ. ಉದಾಹರಣೆಗೆ ಬಾಲಮುರುಳಿಕೃಷ್ಣ, ಪ್ರತಿಭಾಸಿಂಗ್ ಪಾಟೀಲ್, ಆರ್. ಕೆ. ಲಕ್ಷ್ಮಣ್, ಡಿವಿಜಿಯರ ಮಗ ಡಾ. ಸ್ವಾಮಿ, ರೆವರೆಂಡ್ ಕಿಟ್ಟೆಲ್, ಡಾ. ಹಿರಿಯಣ್ಣ, ಉಚ್ಚಂಗಿ ಚೆನ್ನಬಸಪ್ಪ, ಪ್ರೊ. ರಾಮಕೃಷ್ಣರಾಯ, ನೀಳಾದೇವಿ, ಎಚ್. ವೈ. ಶಾರದಾಪ್ರಸಾದ್, ಜೆ. ಆರ್. ಡಿ ಟಾಟ, ಟಾಟರವರ ಪರಿವಾರದವರು, ಇನ್ನೂ ಅನೇಕರು.

ಇವರು "ಡಿಪ್ಲೋಮಾ ಇನ್ ಟೆಕ್ಸ್‌ಟೈಲ್" ಪದವಿಯನ್ನು ಬೆಂಗಳೂರಿನ ಕೃಷ್ಣ ರಾಜೇಂದ್ರ ಟೆಕ್ನಿಕಲ್ ಇನ್ಸ್ಟಿಟ್ಯೂಟ್‍ನಿಂದ ೧೯೬೪ರಲ್ಲಿ ಪಡೆದರು. ನಂತರ ಮುಂಬಯಿಯಲ್ಲಿ "ಕಾಟನ್ ರಿಸರ್ಚ್ ಇನ್ಸ್ಟಿ‌ಟ್ಯುಟ್" ನಲ್ಲಿ ಕೆಲಸ ಆರಂಭಿಸಿ ೨೦೦೪ರಲ್ಲಿ ನಿವೃತ್ತಿ ಹೊಂದಿದರು. "ಸಂಪದ" ಎಂಬ ಕನ್ನಡ ತಾಣದಲ್ಲಿ ಇವರ ಹಲವು ಲೇಖನಗಳಿವೆ. "ಸುಲೇಖ"ದಲ್ಲಿ ಅವರದೇ ೭ ಬ್ಲಾಗ್‍ಗಳಿವೆ. ಫೇಸ್‍ಬುಕ್‍ನಲ್ಲಿ ಇವರು ಸಕ್ರಿಯರಾಗಿದ್ದಾರೆ. ಮೈಸೂರ್ ಅಸೋಸಿಯೇಷನ್ ಮುಂಬಯಿ, ಕರ್ನಾಟಕ ಸಂಘ, ಮುಂಬಯಿ, ಮುಂಬಯಿ ಕನ್ನಡ ಸಂಘಗಳ ಸದಸ್ಯರಾಗಿದ್ದಾರೆ. ಇವರು "MY Spin Lab " ಎಂಬ ಪುಸ್ತಕವನ್ನೂ ಪ್ರಕಟಿಸಿದ್ದಾರೆ.