"ಆಸ್ಟ್ರೇಲಿಯ" ಆವೃತ್ತಿಗಳ ಮಧ್ಯದ ಬದಲಾವಣೆಗಳು

Jump to navigation Jump to search
ಚು (Wikipedia python library)
==ಪ್ರಾಣಿವರ್ಗ==
ಈ ಖಂಡದಲ್ಲಿ ಬೇರೆಲ್ಲೂ ಇಲ್ಲದ ವಿಚಿತ್ರ ಪ್ರಾಣಿಗಳನ್ನು ಕಾಣಬಹುದು. ಕೆಲವು ಮನುಷ್ಯ ಹುಟ್ಟುವುದಕ್ಕೆ ಮುಂಚೆ ಇಲ್ಲಿ ಇದ್ದುವು.
ಸರೀಸೃಪಗಳು ಮತ್ತು ವಿಷಪೂರಿತ ಹಾವುಗಳು ಸಾಮಾನ್ಯವಾಗಿವೆ. ಪ್ಲಾಟಿಪಸ್ ಎನ್ನುವ ಸಸ್ತನಿ ಮೊಟ್ಟೆಗಳನ್ನಿಡುತ್ತದೆ ಮತ್ತು ಮರಿಗಳಿಗೆ ಮೊಲೆಯುಣಿಸುತ್ತದೆ. ಇದರ ಮೂತಿ ಬಾತಿನ ಕೊಕ್ಕಿನಂತಿದೆ. ಮೈತುಂಬ ತುಪ್ಪಳ ಚರ್ಮದ ಹೊದಿಕೆ ಇದೆ. ಮಾಸೂರ್ಯಪಿಯಲ್ ಎಂಬ ಇನ್ನೊಂದು ಸಸ್ತನಿ ಅರೆಬೆಳೆದ ಮರಿಗಳನ್ನು ಹಡೆದು ಅನಂತರ ಅವನ್ನು ತನ್ನ ಹೊಟ್ಟೆಯ ಹೊರ ಚೀಲದಲ್ಲಿಟ್ಟುಕೊಂಡು ಬೆಳೆಸುತ್ತದೆ. ಕಾಂಗರೂ, ಒಪ್ಪೋಸಂ ಇದೇ ರೀತಿಯ ಪ್ರಾಣಿಗಳು. ಕಾಂಗರೂ ಗಂಟೆಗೆ 32 ಕಿಮೀ ವೇಗದಲ್ಲಿ ಓಡುತ್ತದೆ. ಈಮೂ ಎಂಬುದು ಇಲ್ಲಿನ ಪಕ್ಷಿಗಳಲ್ಲೆಲ್ಲ ದೊಡ್ಡದಾದುದು. ಲೈರ್ ಎಂಬ ನವಿಲಿನಂತಿರುವ ಸೊಗಸಾದ ಪಕ್ಷಿ ಇತರ ಧ್ವನಿಗಳನ್ನು ಬಹಳ ಚೆನ್ನಾಗಿ ಅನುಕರಿಸುತ್ತದೆ. ಡಿಂಗೊ ಎಂಬ ಕಾಡು ನಾಯಿ ನೋಡಲು ತೋಳದಂತಿದೆ. ವಲ್ಲಬಿ, ನೊಣಗಳನ್ನು ತಿನ್ನುವ ಎಕಿಡ್ನ, ಮರ ಹತ್ತುವ ಸಣ್ಣ ಆಕಾರದ ಕರಡಿ ಕೋಆಲ-ಇತ್ಯಾದಿ ಪ್ರಾಣಿಗಳು ಆಸ್ಟ್ರೇಲಿಯದ ರಕ್ಷಿತ ಕಾಡುಗಳಲ್ಲಿ ವಾಸಿಸುತ್ತವೆ. ಗಿಣಿಗಳುಗಿಣಿ, ಉಷ್ಟ್ರಪಕ್ಷಿ, ಕ್ಯಾಸ್ಸೋವರಿ ಮತ್ತು ಇತರ ಬಗೆಯ ಪಕ್ಷಿಗಳೂ ಇಲ್ಲಿವೆ.
 
==ವ್ಯವಸಾಯ==
ಆಸ್ಟ್ರೇಲಿಯದಲ್ಲಿ ವ್ಯವಸಾಯಯೋಗ್ಯವಾದ ಭೂಮಿ ಬಹಳ ಕಡಿಮೆ. ಒಟ್ಟು ಭೌಗೋಳಿಕ ಪ್ರದೇಶದಲ್ಲಿ ಶೇ.15 ಭಾಗ ಮಾತ್ರ ಕೃಷಿಗೆ ಯೋಗ್ಯ. ಸಮುದ್ರತೀರ ಮತ್ತು ನದಿ ಮೈದಾನಗಳಲ್ಲಿ ಮಾತ್ರ ವ್ಯವಸಾಯವಿದೆ. ಖಂಡದಲ್ಲಿ ಬಿಳಿಯ ಜನ ಹೆಚ್ಚಾಗಿ ಇರುವುದರಿಂದ ಸಮಶೀತೋಷ್ಣವಲಯದ ಬೆಳೆಗಳು ಹೆಚ್ಚಾಗಿ ಅಭಿವೃದ್ಧಿ ಹೊಂದಿವೆ. ಮುಖ್ಯಬೆಳೆ ಗೋದಿ, ಓಟ್ಸ್, ಕಬ್ಬು, ಬಾರ್ಲಿ, ಜೋಳ, ಆಲೂಗೆಡ್ಡೆ ಹಾಗೂ ಪ್ರಮುಖ ಹಣ್ಣುಗಳಾದ [[ದ್ರಾಕ್ಷಿ]],[[ಸೇಬು]], ಏಪ್ರಿಕಾಟ್, [[ಬಾಳೆ]], ಕಿತ್ತಳೆ, ಪೀಚ್, ಪೇರು ಮತ್ತು ಪ್ಲಮ್. ಬೆಟ್ಟಗುಡ್ಡಗಳ ಮೇಲೆ ಬಿದ್ದ ಮಳೆಯ ನೀರು ನೆಲದಲ್ಲಿ ಇಳಿದು ಭೂಮಿಯ ಪದರಗಳಲ್ಲಿ ಹರಿಯುತ್ತಿರುತ್ತದೆ. ಅಂಥ ಪ್ರದೇಶದಲ್ಲಿ ಬಾವಿಯನ್ನು ತೆಗೆದರೆ ನೀರು ಬುಗ್ಗೆಯಂತೆ ಚಿಮ್ಮುತ್ತದೆ. ಇದೇ [[ಆರ್ಟೀಸಿಯನ್ ಬಾವಿ]]. ಇವನ್ನು ಬೇರೆ ಬೇರೆ ಗುಂಪುಗಳಾಗಿ ವಿಭಾಗಿಸಿದ್ದಾರೆ. ಮಧ್ಯದ ತಗ್ಗುಬಯಲು ಗಳಲ್ಲಿರುವ ಗ್ರೇಟ್ ಆರ್ಟೀಸಿಯನ್ ಬಯಲು; ಮರೆ ಬಯಲು, ದಕ್ಷಿಣದಲ್ಲಿ ಯೂಕ್ಲ ಬಯಲು; ಪಶ್ಚಿಮದ ಪೀಠಭೂಮಿಯಲ್ಲಿ ಪರ್ತ್ ಬಯಲು, ವಾಯವ್ಯ ಬಯಲು, ಮರುಭೂಮಿ ಬಯಲುಗಳು-ಇವು ಮುಖ್ಯವಾದ ಆರ್ಟೀಸಿಯನ್ ಬಾವಿ ಗುಂಪುಗಳು. ಈ ಬಾವಿಗಳು ನೀರಿಲ್ಲದ ಪ್ರದೇಶಗಳನ್ನು ಫಲವತ್ತಾದ ಭೂಮಿಯನ್ನಾಗಿ ಮಾಡಿ, ದನಕರುಗಳಿಗೆ ಮತ್ತು ವ್ಯವಸಾಯಕ್ಕೆ ನೀರನ್ನು ಒದಗಿಸುತ್ತವೆ.
ಅನಾಮಿಕ ಸದಸ್ಯ
"https://kn.wikipedia.org/wiki/ವಿಶೇಷ:MobileDiff/661604" ಇಂದ ಪಡೆಯಲ್ಪಟ್ಟಿದೆ

ಸಂಚರಣೆ ಪಟ್ಟಿ