೨೪೭
edits
(ಪುಟವನ್ನು ಸೃಷ್ಟಿಸಿದ್ದು) |
|||
{{About|ಗಣಿತದಲ್ಲಿ ವಸ್ತುಗಳನ್ನು ಆರಿಸಿಕೊಳ್ಳುವ ವಿಧಾನ}}
ಗಣಿತ ಕ್ಷೇತ್ರದಲ್ಲಿ "ಸಂಯೋಜನೆಗಳು" (ಕಾಂಬಿನೇಷನ್ಸ್) ಎನ್ನುವ ಪದವನ್ನು ಒಂದು ಸಂಗ್ರಹದಿಂದ ವಸ್ತುಗಳನ್ನು ಎಷ್ಟು ವಿಧಗಳಲ್ಲಿ ಆಯ್ಕೆ ಮಾಡಿಕೊಳ್ಳಬಹುದು ಎಂಬುದನ್ನು ಸೂಚಿಸಲು ಬಳಸುತ್ತಾರೆ. ಇದಕ್ಕೆ "ಸಂಚಯಗಳು" ಎಂದು ಕೂಡಾ ಕರೆಯಬಹುದು. ಉಹಾಹರಣೆಗೆ ಒಂದು ಸಂಗ್ರಹದಲ್ಲಿ ನಾಲ್ಕು ಹೂಗಳಿವೆ - ಮಲ್ಲಿಗೆ, ಸೇವಂತಿಗೆ, ಗುಲಾಬಿ ಮತ್ತು ಸಂಪಿಗೆ. ಇವುಗಳಲ್ಲಿ ಯಾವುದಾದರೂ ಎರಡು ಹೂಗಳನ್ನು ಆರಿಸಬೇಕು ಎಂದುಕೊಳ್ಳಿ. ಒಟ್ಟು ಆರು ಸಾಧ್ಯತೆಗಳಿವೆ ಎಂಬುದನ್ನು ನಾವು ನೋಡಬಹುದು. {ಮಲ್ಲಿಗೆ, ಸೇವಂತಿಗೆ}, {ಮಲ್ಲಿಗೆ, ಗುಲಾಬಿ}, {ಮಲ್ಲಿಗೆ, ಸಂಪಿಗೆ}, {ಸೇವಂತಿಗೆ, ಗುಲಾಬಿ}, {ಸೇವಂತಿಗೆ, ಸಂಪಿಗೆ}, {ಗುಲಾಬಿ, ಸಂಪಿಗೆ}. {ಮಲ್ಲಿಗೆ, ಸೇವಂತಿಗೆ} ಮತ್ತು {ಸೇವಂತಿಗೆ, ಮಲ್ಲಿಗೆ} ಇವುಗಳಲ್ಲಿ ಯಾವ ವ್ಯತ್ಯಾಸವೂ ಇಲ್ಲ ಎಂಬುದನ್ನೂ ಗಮನಿಸಿ.
|
edits