"ಶಿಕಾರಿಪುರ ರಂಗನಾಥರಾವ್‌" ಆವೃತ್ತಿಗಳ ಮಧ್ಯದ ಬದಲಾವಣೆಗಳು

Jump to navigation Jump to search
ಚು
clean up, replaced: → (2), added orphan, deadend tags using AWB
ಚು (clean up, replaced: → (2), added orphan, deadend tags using AWB)
{{Dead end|date=ಡಿಸೆಂಬರ್ ೨೦೧೫}}
{{Orphan|date=ಡಿಸೆಂಬರ್ ೨೦೧೫}}
 
ಎಚ್. ಶೇಷಗಿರಿರಾವ್
 
 
 
 
ಹಸ್ತಪ್ರತಿ ಮತ್ತು ಶಾಸನಗಳು ಸಯಾಮಿ ಅವಳಿಗಳಂತೆ.ಮುಖ ಬೇರೆ ಬೇರೆಯಾದರೂ ಅವುಗಳು ಏಕ ದೇಹಿಗಳು.ಒಂದು ರೀತಿಯಲ್ಲಿ ಪೌರಾಣಿಕ ಪಕ್ಷಿ ಗಂಡ ಬೇರುಂಡದ ತರಹ.ಅವೆರಡಕ್ಕೂ ಸಾಮಾನ್ಯವಾಗಿರುವುದು ಲಿಪಿ ಮಾತ್ರ. ಭಾರತದ ಅತಿ ಪ್ರಾಚೀನ ಲಿಪಿ ಎಂದರೆ ಸಿಂಧೂ ಕಣಿವೆಯಲ್ಲಿನ ಪುರಾತನ ನಗರಗಳಾದ ಹರಪ್ಪಾ ಮತ್ತು ಮಹಂಜೆದಾರೋದಲ್ಲಿ ದೊರೆತ ಮುದ್ರೆಗಳ ಮೇಲಿರುವ ಬರಹ. ಅವುಗಳ ರಹಸ್ಯವನ್ನು ಬಯಲುಮಾಡಲು ಹಲವರು ಪ್ರಯತ್ನಿಸಿದ್ದಾರೆ. ಆದರೆ ಯಾವ ವಿವರಣೆಯೂ ಪೂರ್ಣವಾಗಿ ಒಪ್ಪಿತವಾಗಿಲ್ಲ. ಅವುಗಳಲ್ಲೆಲ್ಲ ಸಾಕಷ್ಟು ಮಟ್ಟಿಗೆ ಒಪ್ಪಿತವಾಗುವಂತೆ ಲಿಪಿಯ ನಿಗೂಢತೆಯನ್ನು ಬಿಡಿಸಿದವರು.ಡಾ. ಎಸ್‌.ಆರ್‌.ರಾವ್‌. ಜೊತೆಗೆ ಸಾಗರದತಳದಲ್ಲಿದ್ದ ಪೌರಾಣಿಕವೆನ್ನಲಾದ ಶ್ರೀಕೃಷ್ಣನ ದ್ವಾರಕೆಯ ಅವಶೇಷಗಳನ್ನು ಜಗತ್ತಿಗೆ ಪರಿಚಯಿಸಿದ ಸಂಶೋಧಕರು ಅವರು. ಇನ್ನು ಅನೇಕ ಪ್ರಮುಖ ಪ್ರಾಚೀನ ಪುರಾತತ್ವತಾಣಗಳು, ರಚನೆಗಳು,ಮತ್ತು ದೇಗುಲಗಳು ಬೆಳಕಿಗೆ ಬರಲು ಮತ್ತು ಅವುಗಳ ಸಂರಕ್ಷಣೆಗೆ ಕಾರಣರು.
ಕಳೆದವಾರ ಕಾಲವಶರಾದ ಡಾ.ಎಸ್‌. ಆರ್‌. ರಾವ್‌ ಅವರು ಅಪ್ಪಟ ಕನ್ನಡಿಗರು. ಅವರ ಜನನ ಶಿವಮೊಗ್ಗ ಜಿಲ್ಲೆಯ ಶಿಕಾರಿಪುರದಲ್ಲಿ.ತಂದೆ ಹುಚ್ಚೂರಾಯರು ತಾಯಿ ಕಮಲಮ್ಮ. ಅವರು ಹುಟ್ಟಿದ್ದು ೧೯೨೨ರಲ್ಲಿ .ಅವರ ಪೂರ್ಣ ಹೆಸರು ಶಿಕಾರಿಪುರ ರಂಗನಾಥ ರಾವ್‌. ವಿದ್ವತ್‌ಲೋಕದಲ್ಲಿ ಎಸ್‌.ಆರ್‌.ರಾವ್‌ ಎಂದೇ ಚಿರಪರಿಚಿತರು. ಅವರದು ತುಂಬು ಕುಟುಂಬ ಏಳುಜನ ಮಕ್ಕಳಲ್ಲಿ ಇವರು ಆರನೆಯವರು. ತಂದೆ ಹಳ್ಳಿಯೊಂದರ ಶಾನುಭೋಗರು.ಬಾಲ್ಯದಲ್ಲಿ ಬಡತನವನ್ನೇ ಹಾಸಿಹೊದಿದ್ದರು.ಆದರೆ ತಾಯಿ, ತಂದೆಯರ ಶಿಸ್ತು ಮತ್ತು ಜ್ಞಾನದಾಹವೇ ಅವರು ಶಿಕ್ಷಣದಲ್ಲಿ ಮುಂದುವರಿಯಲು ಪ್ರೇರಣೆಯಾಯಿತು..ಇವರ ಪ್ರಾಥಮಿಕ ಶಿಕ್ಷಣ ಶಿವಮೊಗ್ಗದಲ್ಲಿ. ನಂತರದ ಮೈಸೂರಿನ ಮಹಾರಾಜಾ ಕಾಲೇಜಿನಲ್ಲಿ ಪದವಿ. ಆಗ ಅನಾಥಾಲಯದಲ್ಲಿ ಅವರ ವಾಸ. ಬೀದಿಯ ದೀಪದ ಕೆಳಗೆ ಓದು. ಮನೆ ಮನೆಯಲೆದು ಕಾಲೇಜು ಶುಲ್ಕ ಕಟ್ಟಿದರು. ಅದರಿಂದ ಅವರು ಹಠ ಹರಳುಗಟ್ಟಿತು. ಶ್ರದ್ಧೆಯಿಂದ ಅಭ್ಯಾಸ ಮಾಡಿದರು. . ಪರಿಣಾಮವಾಗಿ ಬಿ.ಎ. ಆನರ್ಸ್ ಪದವಿಯಲ್ಲಿ ಚಿನ್ನದ ಪದಕ ಪಡೆದ ಅತ್ಯುತ್ತಮ ವಿದ್ಯಾರ್ಥಿ ಎನಿಸಿದರು. ನಾಗಪುರ ವಿಶ್ವ ವಿದ್ಯಾಲಯದಿಂದ ಎಂ. ಎ ಪದವಿ ಪಡೆದರು ನಂತರ ಅವರದು ಹೋದ ಹಾದಿಯೇ ರಾಜ ವೀಧಿಯಾಯಿತು. ’ಚಿಂದಿಯಿಂದ ಚಿನಾಂಬರ’ ಎಂಬ ಮಾತಿಗೆ ಅವರೇ ಜ್ವಲಂತ ಉದಾಹರಣೆಯಾದರು.
೧೦,೦೩೯

edits

"https://kn.wikipedia.org/wiki/ವಿಶೇಷ:MobileDiff/638813" ಇಂದ ಪಡೆಯಲ್ಪಟ್ಟಿದೆ

ಸಂಚರಣೆ ಪಟ್ಟಿ